ಸದಸ್ಯ:Kiranmala/ನನ್ನ ಪ್ರಯೋಗಪುಟ/01

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಯುಪಂಚರ್‌ ಚಿಕಿತ್ಸೆ[ಬದಲಾಯಿಸಿ]

ಅಕ್ಯಪಂಚರ್‌ಚಿಕಿತ್ಸೆಯು ಸಂಪೂರ್ಣವಾಗಿ ನಿರೌಷಧಚಿಕಿತ್ಸಾ ಪದ್ಧತಿಯಾಗಿದ್ದು, ಪ್ರಕೃತಿಚಿಕಿತ್ಸೆಯ ಭಾಗವಾಗಿದೆ. ಈ ಚಿಕಿತ್ಸೆಯುಯಾವುದೇರೀತಿಯ ಪಾರ್ಶ್ವಅಥವಾಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಇದು ಪ್ರಾಚೀನ ವೈದ್ಯಕೀಯ ಪದ್ಧತಿಯಒಂದು ಭಾಗ. ಅಕ್ಯುಪಂಚರ್‌ಎನ್ನುವ ಈ ಪದವು ಲ್ಯಾಟಿನ್ನ ಭಾಷೆಯಿಂದ ಬಂದ ಪದ. ಅಕ್ಯುಎಂದರೆ ಮತು ಪಂಕ್ಚರ್‌ಎಂದರೆಚುಚ್ಚುವುದು. ಮಧು ಮೇಹಕ್ಕೆ ಅಕ್ಯುಪಂಕ್ಚರ್‌ಚಿಕಿತ್ಸೆಯನ್ನು ನೀಡುತ್ತಿರುವುದುಇಂದು ನೆನ್ನೆಯ ಪದ್ಧತಿಯಲ್ಲ ಸರಿಸುಮಾರು ಸಾವಿರ ವರ್ಷಗಳ ಹಿಂದೆಯೇ ಮಧುಮೇಹದ ಬಿಂದುಗಳನ್ನು ಗುರುತಿಸಿ ಚಿಕಿತ್ಸೆಯನ್ನು ನೀಡುವ ಪದ್ಧತಿರೂಢಿಯಲ್ಲಿದೆ. ಇದರಅರಿವುಜನಸಾಮಾನ್ಯರಲ್ಲಿಕಡಿಮೆಯಿದ್ದಿದ್ದರಿಂದಇಂದು ಮಧುಮೇಹವು ಈ ಮಟ್ಟಿಗೆ ಬೆಳೆಯಲು ಕಾರಣವಾಗಿದೆ. ಈ ಚಿಕಿತ್ಸೆಯಲ್ಲಿ ತೆಳುವಾದ ಶುದ್ಧ ಸೂಜಿಗಳನ್ನು ಗುರುತಿಸಿ ಅವುಗಳಿಗೆ ನಿರ್ದಿಷ್ಟ ಬಿಂದುಗಳನ್ನು ಗುರುತಿಸಿ ಅವುಗಳಿಗೆ ಚುಚ್ಚಿ ಪ್ರಚೋದಿಸುವುದುದರಿಂದ ಮೆರಿಡಿಯನ್‌ಗಳ ಮೂಲಕ ‘ಛೀ’ ಶಕ್ತಿಯು ಪ್ರವಹಿಸಿ ಮಧುಮೇಹಕ್ಕೆರಾಮಬಾಣವಾಗಿಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬ ಮನುಷ್ಯನದೇಹದಲ್ಲಿಯೂಜನ್ಮತಃ ಬಂದಿರುವಂತಹ ‘ಛೀ’ ಎನ್ನುವ ವಿಶೇಷ ಶಕ್ತಿಯು ಪ್ರವಹಿಸುತ್ತಿರುತ್ತದೆ. ಹೇಗೆ ನಗರಗಳಲ್ಲಿ ನರಗಳ ಇಂಪಲ್ಸ್ ಪ್ರವಹಿಸುತ್ತವೆಯೋಅದೇರೀತಿಯಲ್ಲಿ ‘ಮೆರಿಡಿಯನ್’ಗಳೆಂಬ ನಾಳಗಳಲ್ಲಿ ಈ ‘ಛೀ’ ಶಕ್ತಿಯುದೇಹದಲ್ಲೆಲ್ಲಾ ಪ್ರವಹಿಸುತ್ತದೆ. ಮೆರಿಡಿಯನ್‌ಗಳೆಂದರೆ ಈ ‘ಛೀ’ ಪ್ರವಹಿಸುವ ದಾರಿಗಳು. ಅವುಗಳ ಮುಖ್ಯಕಾರ್ಯವೆಂದರೆದೇಹದಎಲ್ಲಾ ಭಾಗಗಳಿಗೂ ಸಮಾನರೀತಿಯಲ್ಲಿ ಈ ಶಕ್ತಿಯನ್ನು ಪ್ರವಹಿಸುವುದು. ಅಂದರೆದೇಹದ ಮೇಲ್ಭಾಗಕ್ಕೂ ಮತ್ತು ಒಳಬಾಗಕ್ಕೂ ಈ ಶಕ್ತಿಯನ್ನು ಪ್ರಸರಿಸುವುದರೊಂದಿಗೆ ಹೊಂದಾಣಿಕೆಯನ್ನುಉಂಟು ಮಾಡಿದೇಹದ ಸಮತೋಲನವನ್ನುಕಾಪಾಡುತ್ತದೆ. ಈವರೆಗೆದೇಹದಲ್ಲಿ ಸಾವಿರ ಸಂಖ್ಯೆಯಲ್ಲಿ ಬಿಂದುಗಳು ಹಾಗೂ ಇಪ್ಪತ್ತಕ್ಕೂಅಧಿಕ ಮೆರಿಡಿಯನ್‌ಗಳನ್ನು ಕಂಡುಹಿಡಿಯಲಾಗಿದೆ. ಮಧುಮೇಹವೊಂದಕ್ಕೇ ಹತ್ತರಿಂದ ಹನ್ನೆರಡು ಬಿಂದುಗಳನ್ನು ಆರಿಸಿಕೊಂಡು ಚಿಕಿತ್ಸಯನ್ನು ನೀಡಲಾಗುವುದು .ಇವಲ್ಲದೆ, ಮೆರಿಡಿಯನ್‌ಗೆ ಒಳಪಡದ ಅಣೇಕರೋಗ ನಿವಾರಕ ಬಿಂದುಗಳನ್ನು ಕೂಡಚಿಕಿತ್ಸಗಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಫಿಲಿಫಾರ್ಮ್ ಸೂಜಿಯನ್ನು ಮಧುಮೇಹಚಿಕಿತ್ಸಗೆ ಬಳಸಲಾಗುತ್ತದೆ. ಈ ಸೂಜಿಯು ೦.೫ ಇಂಚಿನಿಂದಎಂಟುಇಂಚಿನವರೆಗೂ ಸಿಗುತ್ತದೆ ಮತ್ತುಇದರ ಸುತ್ತಳತೆಯು ೨೬ರಿಂದ೩೨ ಗೇಜ್‌ನಷ್ಟಿರುತ್ತದೆ. ಒಂದರಿಂದ ಒಂದೂವರೆ ಇಂಚು ಮತ್ತು ೩೦ ಗೇಜ್ ಹೊಂದಿರುವ ಸೂಜಿಯನ್ನು ಹೆಚ್ಚಾಗಿ ಮಧುಮೇಹ ಕಾಯಿಲೆ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರಜೊತೆಯಲ್ಲಿದೇಹದ ಕೆಲವು ಭಾಗಗಳಿಗೆ ಮತ್ತುಚುಚ್ಚಬೇಕಾದ ಆಳಕ್ಕೆ ಅನುಗುಣವಾಗಿ ಸೂಜಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಆಯಾ ರೋಗಗಳಿಗೆ ತಕ್ಕಂತೆ ಅವಕ್ಕೆ ಸಂಬಂಧಪಟ್ಟಆಯಾಮ, ಅಂಗಗಳ ಬಿಂದುಗಳನ್ನು ಸೂಕ್ತ ರೀತಿಯಲ್ಲಿ ಆರಿಸಿ ಚಿಕಿತ್ಸಯನ್ನು ನೀಡಲಾಗುತ್ತದೆ. ಇದೇ ಬಿಂದುಗಳಿಗೆ ಸೂಕ್ತ ರೀತಿಯಲ್ಲಿ ಆರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದು. ಇದೇ ಬಿಂದುಗಳಿಗೆ ಎಲೆಕ್ಟ್ರಿಕ್ ಸ್ಟಮ್ಯುಲೇಷಣ್‌ಕೂಡ ನೀಡಲಾಗುವುದು. ಈ ಆಯ್ದ ಬಿಂದುಗಳನ್ನು ಹೆಚ್ಚಿನದಾಗಿ ಪ್ರಚೋದಿಸಲು ಸೂಜಿಯನ್ನ ಹಾಕಿದ ನಂತರ ಎಲೆಕ್ಟ್ರಿಕ್ ವೈರನ್ ಬಳಸಿ ನಿಗದಿತ ಪ್ರಮಾಣದಲ್ಲಿ ಸ್ಟಮ್ಯುಲೇಷನ್ ನೀಡಿಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಚಿಕಿತ್ಸೆಯು ಸಂಪೂರ್ಣವಾಗಿ ವೈದ್ಯರ ಸಮ್ಮುಖದಲ್ಲಿಯೇ ಹಾಗೂ ಪರಿಣತ ವೈದ್ಯರೇ ನೀಡಬೇಕಾಗಿರುತ್ತದೆ. ಈ ಅಕ್ಯಪಂಕ್ಚರ್‌ ಚಿಕಿತ್ಸೆಯು ಕೇವಲ ಮಧುಮೇಹಕ್ಕೆ ಮಾತ್ರವಲ್ಲದೆ, ವಿಶ್ವಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಚಿಕಿತ್ಸಾ ಪದ್ಧತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಪಂಚದಾದ್ಯಂತ ಇದು ನೋವು ಹಾಗೂ ಅನೇಕ ಕಾಯಿಲೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹಕ್ಕೆ ಬಳಸುವ ಅಕ್ಯುಪಂಕ್ಚರ್ ಬಿಂದುಗಳು ಮಧುಮೇಹದ ಲಕ್ಷಣಗಳನ್ನು ಸರಿಪಡಿಸುವಲ್ಲಿ ಹೆಚ್ಚನದಾಗಿ ಸಂಶೋಧನೆಗಳಿಂದ ದೃಢ ಪಟ್ಟಿರುವ ಅಕ್ಯುಂಪಕ್ಚರ್ ಬಿಂದು ಸಿವಿ-೧೨ ಮಧುಮೇಹ ನಿವಾರಣೆಗೆ ಹೆಚ್ಚಿನ ಪರಿಣತ ಪ್ರಕೃತಿಚಿಕಿತ್ಸಾ ವೈದ್ಯರುಗಳು ಆಯ್ದುಕೊಳ್ಳುವ ಮತು ಸಂಶೋಧನೆಗಳಿಂದ ದೃಢಪಟ್ಟಿರುವ ನಿರ್ದಿಷ್ಟ ಮತ್ತುಆಯ್ದ ಬಿಂದುಗಳೆಂದರೆ. ಎಸ್.ಪಿ-೬, ಎಸ್.ಟಿ-೩೬, ಗಳನ್ನು ಮಾತ್ರ ಉಪಯೋಗಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಬಿಂದುಗಳು ಪ್ರಯೋಗಾತ್ಮಕವಾಗಿಯೂಕೂಡರುಜುಗೊಂಡಿವೆ ಮತ್ತು ವ್ಯಕ್ತಿಯ ಮೂಲಕಾರಣದನ್ವಯ ಬಿಂದುಗಳನ್ನು ಆಯ್ದಚಿಕಿತ್ಸೆಯನ್ನು ನೀಡಲಾಗುತ್ತದೆ.