ಸದಸ್ಯ:Kiranmala/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಡೆಮಡೆಸ್ನಾನ[ಬದಲಾಯಿಸಿ]

ಕರ್ನಾಟಕರಾಜ್ಯದ ಮುಜುರಾಯಿ ಇಲಾಖೆಗೊಳಪಟ್ಟ ಅತ್ಯಂತ ಶ್ರೀಮಂತ ದೇವಸ್ಥಾನವೆಂದು ಪ್ರಸಿದ್ದಿಪಡೆದಿರುವುದು ಕುಕ್ಕೇ ಶ್ರೀ ಸುಬ್ರಹ್ಮಣ್ಯದೇವಸ್ಥಾನ. ದೇಶದ ವಿವಿಧ ಭಾಗಗಳಿಂದ ಯಾತ್ರಿಕರು ಭೇಟಿ ನೀಡುತ್ತಿರುವ ಈ ದೇವಸ್ಥಾನದಲ್ಲಿ ನಡೆಸುವ ವಿಶಿಷ್ಟ ಸೇವೆ ಮಡೆ ಮಡೆಸ್ನಾನ. ಕುಕ್ಕೆ ಸುಬ್ರಹ್ಮಣ್ಯಕ್ಷೇತ್ರವು ಸಮುದ್ರ ಮಟ್ಟದಿಂದ ೫೬೨೬ ಅಡಿ ಎತ್ತರದಲ್ಲಿದ್ದು, ಶೇಷ ಪರ್ವತ ಹಾಗೂ ಕುಮಾರ ಪರ್ವತದತಪ್ಪಲಿನಲ್ಲಿಕುಮಾರಧಾರ ನದಿಯದಡದಲ್ಲಿದೆ. ಸ್ಕಂದ ಪುರಾಣದಲ್ಲಿ ಈ ಕ್ಷೇತ್ರದ ವರ್ಣನೆಯಿದೆ. ಕುಮಾರಸ್ಕಂದನುತಾರಾಕಾಸುರನನ್ನು ಸಂಹರಿಸಿ. ತನ್ನ ಶಕ್ತಾö್ಯಯುಧವನ್ನು ಈ ನದಿಯಲ್ಲಿ ತೊಳೆದುದರಿಂದ ನದಿಗೆ ಕುಮಾರಧಾರ ಎಂಬ ಹೆಸರು ಬಂತೆAದೂ, ಅದೊಂದು ಪುಣ್ಯತೀರ್ಥವಾಯಿತೆಂದು ವಿವರಣೆಯಿದೆ. ಭರತಖಂಡದ ೧೦೮ ಶೈವ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯವುಒಂದು. ಸುಬ್ರಹ್ಮಣ್ಯಎನ್ನುವುದು ಈ ಕ್ಷೇತ್ರದ ಪ್ರಾಚೀನ ಹೆಸರಲ್ಲ. ಪ್ರಾಚೀನ ಗ್ರಂಥಗಳು ಶಾಸನಗಳಲ್ಲಿ ‘ಕುಕ್ಕೆ’ ಕುಕ್ಕೆಪುರ, ಕುಕ್ಕೆಪಟ್ಟಣಎನ್ನುವ ಹೆಸರಿದೆ. ಸುಬ್ರಹ್ಮಣ್ಯಎನ್ನವ ಹೆಸರು ೨೦ನೇ ಶತಮಾನದಆದಿಯಲ್ಲಿ ಹುಟ್ಟಿಕೊಂಡಿತೆAದು ದಾಖಲೆಗಳಿಂದ ತಿಳಿದು ಬರುತ್ತದೆ. ಪ್ರಚೀನ ಮತ್ತುಅರ್ವಾಚೀನಎರಡು ಹೆಸರುಗಳನ್ನು ಕೂಡಿಸಿ ಕುಕ್ಕೆ ಸುಬ್ರಹ್ಮಣ್ಯಎಂದುಕರೆಯುವುದೂಇದೆ. ಕುಕ್ಕೆ ಕ್ಷೇತ್ರವು ಪ್ರಾಚೀನಕಾಲದಲ್ಲಿಒಂದುದೊಡ್ಡ ಪಟ್ಟಣವಾಗಿತ್ತು. ವಿಜಯನಗರಅರಸರಕಾಲದಲ್ಲಿ ವೈಭವದಿಂದ ಮೆರೆಯುತ್ತಿತ್ತು. ನಂತರ ಪಾಳೇಗಾರರ ಆಳ್ವಕೆಗೆ ಒಳಪಟ್ಟಿತ್ತು. ಬಂಗರಸರಕಾಲದಲ್ಲಿ ಶ್ರೀ ಕ್ಷೇತ್ರದ ಆಡಳಿತವು ಅಲ್ಲಿಯ ಶಿವ ಸ್ಥಾನಿಕ ಬ್ರಾಹ್ಮಣರ ಕೈಗೆ ಬಂದು, ಬಲ್ಲಾಳರ ಕಾಲದಲ್ಲಿಜೀರ್ಣೋದ್ಧಾರ ಪಡೆಯಿತು. ಸ್ಕಂದನಆರಾಧನೆ, ನಾಗಾರಾಧನೆಯೊಂದಿಗೆ ಬೆರೆತುಕೊಂಡಿರುವುದು ಈ ಕ್ಷೇತ್ರದ ವಿಶೇಷ. ಹಿಂದೆಗೊAಡಾರಣ್ಯದಿAದ ಸುತ್ತುವರೆದಿದ್ದ ಈ ಕ್ಷೇತ್ರಕ್ಕೆ ಈಗ ದೇಶದ ನಾನಾ ಭಾಗಗಳಿಂದ ಜಾತಿ, ಧರ್ಮಗಳ ಬೇಧವಿಲ್ಲದೆ ಯಾತ್ರಿಗಳು ಯಾತ್ರಿಗಳು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ಶ್ರೀ ಕ್ಷೇತ್ರದಲ್ಲಿಭಕ್ತಾಧಿಗಳು ನಡೆಸುವಒಂದು ವಿಶಿಷ್ಟವಾದ ಸೇವೆ ಎಂದರೆ ಮಡೆಮಡೆಸ್ನಾನ. ಇದು ಮಡೆಸ್ನಾನದಒಂದು ವಿಧ. ಮಡೆಸ್ನಾನದಲ್ಲಿ ಬೀದಿ ಮಡೆಸ್ನಾನ ಮೂಲೆಮಡೆಸ್ನಾನ, ಅಂಗಣ ಮಡೆಸ್ನಾನ ಮತ್ತು ಮಡೆಮಡೆಸ್ನಾನಗಳೆಂಬ ವಿಧಗಳಿವೆ. ಬೀದಿ ಮಡೆಸ್ನಾನ ಮತ್ತು ಮಡೆಮಡೆಸ್ನಾನ ಶ್ರೀ ದೇವರಜಾತ್ರ ಮಹೋತ್ಸವ ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ. ಮಡೆಮಡೆಸ್ನಾನಎಂದರೆ ದೇವಳದ ಹೊರಾಂಗಣದಲ್ಲಿ ಬ್ರಾಹ್ಮಣರಅನ್ನ ಸಂತರ್ಪಣೆಯಎಲೆಯ ಮೇಲೆ ಭಕ್ತಾಧಿಗಳು ಉರುಳುಸೇವೆ ಮಾಡುವುದು. ಇದೊಂದು ಸ್ವಯಂಪ್ರೇರಿತ ರಶೀದಿ ರಹಿತ ಸೇವೆ ಭಕ್ತಾಧಿಗಳು ಸ್ವಯಂಇಚ್ಚೆಯಿAದ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಹರಕೆ ಮಾಡಿಕೊಂಡು ಸೇವೆ ಸಲ್ಲಿಸುವುದು ಸಂಪ್ರದಾಯ ಬದ್ದವಾಗಿ ಪಡೆದುಕೊಂಡು ಬಂದ ಪದ್ಧತಿ. ನಾಗಸ್ವರೂಪ ಶ್ರೀ ಸುಬ್ರಹ್ಮಣ್ಯದೇವರಿಗೆ ಮಡೆಮಡೆಸ್ನಾನಅತೀಪ್ರಿಯವಾದ ಸೇವೆ. ಮತು ಭಕ್ತರ ಇಷ್ಟಾರ್ಥಗಳಿಗೆ ಶ್ರೀಘ್ರ ಫಲದಾಯಕ ಎಂಬ ನಂಬಿಕೆಯಿAದ ಭಕ್ತರು ಈ ಮಡೆಮಡೆಸ್ನಾನ ಸೇವೆಯನ್ನು ನಡೆಸುತ್ತಾರೆ. ಇದು ಭಕ್ತಾಧಿಗಳು ಸ್ವಿಚ್ಚೆಯಿಂದ ಮಾಡುವ ಸೇವೆ ಈ ಸೇವೆಯಿಂದಅವರಿಗೆ ಒಳ್ಳೆಯಾದಾಗಿದೆ. ಸುಬ್ರಹ್ಮಣ್ಯ ಶ್ರೀ ಅನಂತ ನಲ್ಲೂರಾಯರಅಭಿಪ್ರಾಯದಂತೆ “ಇದುಯಾವೂದೋಒಂದುಕಾಲದಲ್ಲಿ ಬೆಳೆದು ಬಂತುದೇವರಧಾರ್ಮಿಕ ವಿಶ್ವಾಸ ಮತ್ತು ನಂಬಿಕೆಯ ಮೇಲೆ ಇದುಅವಲಂಬಿತವಾಗಿದೆ” ಜನರಿಗೆ ಕಷ್ಟ ಬಂದಾಗಇAತಹ ಹರಕೆ ಹೇಳಿಕೊಳ್ಳುತ್ತಾರೆ ಹರಕೆ ಸಲ್ಲಿಸುತ್ತಾರೆ ೨೦೧೧ರ ಚಂಪಾಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಡೆಮಡೆಸ್ನಾನವನ್ನು ಸರಕಾರ ನಿಷೇಧಿಸಿತ್ತು. ನಂತರಇದು ಹೈಕೋರ್ಟ್ ಮೆಟ್ಟಿಲೇರಿತು. ನಂತರಎಡೆಸ್ನಾನ ಬಂತುಓರ್ವ ಭಕ್ತಾರ ಸೇವಾ ಆಪೇಕ್ಷೆಯಂತೆಇದು ಸುಪ್ರೀಂಕೋರ್ಟ್ನ ಮೆಟ್ಟಿಲನ್ನುಏರಿದೆ. ಹೀಗೆ ಪರ ವಿರೋಧಗಳ ನಡುವೆಇದೆ. ಮಡೆಸ್ನಾನ, ಮಡೆಮಡೆಸ್ನಾನಅಥವಾದೇವರಿಗೆ ನೆರವೇರಿಸುವಯಾವುದೇ ಸೇವೆ ಭಕ್ತಾಧಿಗಳ ನಂಬಿಕೆಯ ಮೇಲೆ ನಿಂತಿದೆ.ಸ