ಸದಸ್ಯ:Kiran shettigar/sandbox

ವಿಕಿಪೀಡಿಯ ಇಂದ
Jump to navigation Jump to search
      ಸಾಂಸ್ಕತಿಕ ಚಟುವಟಿಕೆಗಳು
    ಸಂಗೀತ, ನಾಟ್ಯ,ನಾಟಕ,ಚಿತ್ರಕಲೆ ಮುಂತಾದ ಕಲಾಪ್ರಕಾರಗಳನ್ನು ಪ್ರದಶಿಸುವುದನನ್ನೇ ಸಾಂಸ್ಕತಿಕ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ.ಈ ಮಾಧ್ಯಮಗಳು ಚೆನ್ನಾಗಿ ಮೈಗೂಡಿಸಿ ಕೊಂಡಷ್ಟೊ ಮನುಷ್ಯ ಸಮಾಜದ ಇತರ ಜೀವಿಗಳೊಂಡಿಗೆ ಚನ್ನಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳಬಲ್ಲ.ಹಾಗಾಗಿ ಈ ಕಲಾಮಾಧ್ಯಮಗಳು ನಮಗೆ ಬೇಕು.ಸಂಸ್ಕತದ ಸುಭಾಷಿತವೊಂದು ಹೇಳುವಂತೆ ಗೀತ ನಾಟ್ ಮುಂತಾದವುಗಳಲ್ಲಿ ಆಸಕ್ತಿ ಹೊಂದಿರದ ಜನರು ಕೊಂಬು,ಬಾಲಗಳಿಲ್ಲದ ಪ್ರಾಣಿಗಳಿಗಿಂತ ಕಡೆ.ಆದ್ದರಿಂದ ಮನುಷ್ಯ ನಾಗರೀಕನಾಗಿ ಬದುಕಬೇಕದರೆ ಈ ಸಂಸ್ಕತಿಕ ಚಟುವಟಟಿಕೆಗಳಲ್ಲಿ ಯಾವುದಾದರೂ ಒಂದೆರಡರಲಿಯಾರೂ ಆಸಕ್ತಿಯನ್ನು ಹೊಂದಿರಬೇಕಾದ್ದು ಅತಿ ಮುಖ್ಯ.
      ಸಾಂಸ್ಕತಿಕ ಚಟುವಟಿಕಗಳಲ್ಲಿ ಪಾಲ್ಗೋಳ್ಳುವುದರಿಂದ ನಮ್ಮ ದೇಹ-ಮನಸ್ಸುಗಳು ಉಲ್ಲಸಿತವಾಗುತ್ತದೆ.ನಿತ್ಯಜೀವನದ ಕಷ್ಟಕೋಟಲೆಗಳನ್ನು ಮರೆಸಿ ಮನಸ್ಸಿಗೆ ಶಾಂತಿಯನ್ನು ತರುತ್ತದೆ.ಸಾಂಪ್ರದಾಯಿಕವಾದ ಶಿಕ್ಷಣದಲ್ಲಿ ಸಫಲರಾಗದ ಎಷ್ಟೋ ಮಂದಿ ಜನರು ಈ ಕಲಾಪ್ರಕಾರಗಳನ್ನು ಮೊದಲಿಗೆ ಹವ್ಯಾಸವಾಗಿ ಹೊಂದಿ ನಂತರ ತಮ್ಮ ಜೀವನೊಪಾಯದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ.ಹಾಗಾಗಿ ಇದು ಬದುಕಿನ ದಾರಿಯೂ ಆಗಬಲ್ಲದು.ಎಷ್ಟೊ ಬಗೆಯ ರೋಗರುಜಿನಗಳನ್ನು ಸಂಗೀತದಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಸಂಶೋಧನೆಗಳು ತೋರಿಸಿ ಕೊಟ್ಟಿವೆ.
    ಜೀವನವೆಂದರೆ ಕೇವಲ ಹೊಟ್ಟೆ-ಬಟ್ಟೆಗಳಿಗಾಗಿ ಹೊಡೆದಾಟ ಯುಧ್ಧರಂಗವಲ್ಲ.ಅದರಲಿ ಚೆಲುವು-ಒಲವುಗಳ ಪಾತ್ರ ದೊಡ್ಡದು.ಭಾರತದೀಶದಲ್ಲಿ ಎಷ್ಟೋ ಜನರು ತಮ್ಮ ಹೊಟ್ಟೆಪಾಡಿಗಾಗಿ ಕಷ್ಟಪಡುತ್ತಿದ್ದರೂ ಅವರು ಅಭಿವ್ಷದ್ಧಿ ಹೊಂದಿದ ದೇಶಗಳ ಶ್ರೀಮಂತ ಜನಗಳಿಗಿಂತ ಹೆಚ್ಚು ನಮ್ಮದಿಯಿಂದ ಬಾಳುತ್ತದ್ದಾರೆ.ಇದಕ್ಕೆ ಕಾರಣವೆಂದರೆ ಭಜನೆ,ಪೂಜ,ಧಾನ್ಯಗಳಂತಹ ಧಮಿಕ ಹಾಗೂ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಆಗಿದೆ.ಹಾಗಾಗಿ ನಮ್ಮದಿಯ ಬದುಕಾಗಿ ಇಂತಹ ಕೆಲವಾದರೂ ಅಭ್ಯಸಗಳನ್ನು ರೂಢಿಸಿ ಕೊಳ್ಳುವುದು ಒಳ್ಳೆಯದು.