ಸದಸ್ಯ:Keshava64

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ಬೆಂಗಳೂರಿನ ಕಬ್ಬನ್ ಪಾರ್ಕ್ ನ ಬಳಿ ವಿಧಾನ ಸೌಧ ಇದೆ .ಇದು ತುಂಬಾ ವಿಶಾಲವಾಗಿ ಹಾಗು ಸುಂದರವಾಗಿದೆ .
ವಿಧಾನ ಸೌಧ


ನನ್ನ ಹೆಸರು ಕೇಶವ. ಎಸ್ . ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಇರುವ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ೩೦ ನೇ ತಾರೀಖು ಜುಲೈ ೨೦೦೦ ದಂದು ನನ್ನ ಜನನವಾಯಿತು . ನನ್ನ ತಂದೆ ಶ್ರೀಯುತ ಸರವಣ , ತಾಯಿ ಶ್ರೀಮತಿ ಪ್ರಿಯ . ನನ್ನ ತಂಗಿಯ ಹೆಸರು ಸುಕನ್ಯ. ಎಸ್ . ಅವಳು ಲೋಯೋಲೋ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದಾಳೆ. ನನ್ನ ತಂದೆ ರೇಷ್ಮೆ ಸೀರೆ ನೇಕಾರರು , ತಾಯಿ ಗೃಹಿಣಿ.

ವಿದ್ಯಾಭ್ಯಾಸ[ಬದಲಾಯಿಸಿ]

ಭಾರತದ ಕ್ಷಿಪಣಿ ಮಾನವ .ಭಾರತಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು .
ಏ ಪಿ ಜೆ  ಅಬ್ದುಲ್ ಕಲಾಂ


ನಾನು ಬೆಂಗಳೂರಿನ ಎಸ್ ಜಿ ಪಾಳ್ಯದಲ್ಲಿರುವ ಕ್ರಿಸ್ತ ವಿದ್ಯಾಲಯ ಎಂಬ ಕನ್ನಡ ಮಾದ್ಯಮ ಶಾಲೆಯಲ್ಲಿ ಎಲ್ ಕೆ ಜಿ ಯಿಂದ ೧೦ ನೆ ತರಗತಿಯವರೆಗೂ ನನ್ನ ವಿದ್ಯಾಭ್ಯಾಸವನ್ನು ಮಾಡಿದೆ. ಶಾಲೆಯಲ್ಲಿ ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುದ್ದರು. ನಾನು ಅದರಲ್ಲಿ ಬಾಗವಹಿಸುತಿದ್ದೆ . ಅದರಲ್ಲಿ ಕೆಲವನ್ನು ಗೆದ್ದಿದ್ದೇನೆ , ಕೆಲವು ಕಾರ್ಯಕ್ರಮಗಳಲ್ಲಿ ಸೋಲುತಿದ್ದೆ . ಶಾಲೆಯಲ್ಲಿ ಶಾಟ್ ಪುಟ್, ಡಿಸ್ಕಸ್ ಥ್ರೋ, ರನ್ನಿಂಗ್ ರೇಸ್ ಪಂದ್ಯಗಳನ್ನು ನಡೆಸುತ್ತಿದ್ದರು , ಪ್ರತಿ ವರ್ಷ ನಾನು ಅದರಲ್ಲಿ ಭಾಗವಹಿಸುತ್ತಿದ್ದೆ ಹಾಗೂ ಹಲವು ಬಾರಿ ನಾನು ಪ್ರಥಮ ಬಹುಮಾನವನ್ನು ಗಳಿಸಿದ್ದೇನೆ. ಶಾಲೆಯಿಂದ ಪ್ರವಾಸಕ್ಕೆ ಹೋಗಿದ್ದೆವು .ಪ್ರವಾಸವು ನನಗೆ ಹಾಗೂ ನನ್ನ ಸ್ನೇಹಿತರಿಗೆ ತುಂಬಾ ಸಂತೋಷವನ್ನು ನೀಡಿತು. ಶಾಲೆಯಲ್ಲಿ ನನ್ನ ಶಿಕ್ಷಕರು ನನಗೆ ತುಂಬಾ ಸಹಾಯವನ್ನು ಮಾಡಿದರು . ಅವರೆಲ್ಲರ ಸಹಾಯದಿಂದ ನಾನು ಪರೀಕ್ಷೆಯಲ್ಲಿ ೬೨೫ ಅಂಕಕ್ಕೆ ೫೧೫ ಅಂಕಗಳನ್ನು ಗಳಿಸಿ ಉತ್ತೀರ್ಣನಾದೆ.ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಶಾಲೆಯಿಂದ ಕ್ರೈಸ್ಟ್ ಅಕಾಡೆಮಿ ಶಾಲೆಗೆ ಕರೆದುಕೊಂಡು ಹೋಗಿದ್ದರು .ಅಲ್ಲಿ ಏ ಪಿ ಜೆ ಅಬ್ದುಲ್ ಕಲಾಂ ಅವರು ಮುಖ್ಯ ಅತಿಥಿಗಳಾಗಿದ್ದರು .ಅವರನ್ನು ನೋಡುವ ಭಾಗ್ಯ ನನಗೆ ದೊರಕಿತು .ಅವರು ನನಗೆ ಆದರ್ಶ ವ್ಯಕ್ತಿ ,ಅವರ ಜೀವನ ಚರಿತ್ರೆ ಪುಸ್ತಕ  'ವಿಂಗ್ಸ್ ಆಫ್ ಫೈರ್ ' ಪುಸ್ತಕವನ್ನು ಓದಿದ್ದೇನೆ .

ಕಾಲೇಜಿನ ದಿನಗಳು[ಬದಲಾಯಿಸಿ]

ನನ್ನ ಶಾಲೆಯಲ್ಲಿ ಹಿಂದಿ ಶಿಕ್ಷಕಿ ಒಬ್ಬರು ನನಗೆ ಓದುವುದರಲ್ಲಿ ತುಂಬಾ ಸಹಾಯ ಮಾಡುತಿದ್ದರು ಹಾಗೂ ಅವರ ಸಲಹೆಯಂತೆ ನಾನು ಪಿ ಯು ವಿದ್ಯಾಭ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಂದುವರೆಸಿದೆ. ನಾನು ಕನ್ನಡ ಮಾದ್ಯಮದಲ್ಲಿ ಓದಿದ್ದರಿಂದ ೧ ನೆ ಪಿ ಯು ಸಿ ಯಲ್ಲಿ ಸ್ವಲ್ಪ ಕಷ್ಟವಾಯಿತು. ಇದರಿಂದ ಕಾಲೇಜಿನಲ್ಲಿ ನನಗೆ ಯಾವುದೇ ಕಾರ್ಯಕ್ರಮದಲ್ಲಿ ಬಾಗವಹಿಸಲು ಸಾಧ್ಯವಾಗಲಿಲ್ಲ . ನಂತರ ನನಗೆ ಇಲ್ಲಿ ಒಳ್ಳೆಯ ಗೆಳೆಯರು ಹಾಗೂ ಶಿಕ್ಷಕರು ದೊರಕಿದರು. ಇವರೆಲ್ಲರ ಸಹಾಯದಿಂದ ನಾನು ಚೆನ್ನಾಗಿ ಓದಲು ಆರಂಭಿಸಿದೆ. ರಜಾ ದಿನಗಳಲ್ಲಿ ಸ್ನೇಹಿತರೆಲ್ಲರೂ ಸೇರಿ ತುಂಬಾ ಸ್ಥಳಗಳಿಗೆ ಪ್ರವಾಸಕ್ಕೆ ಹೋದೆವು. ನನ್ನ ಸ್ನೇಹಿತರು ಹಾಗೂ ಶಿಕ್ಷಕರ ಸಹಾಯವನ್ನು ಪಡೆದು ಶ್ರಮ ಪಟ್ಟು ಓದಿ ೨ ನೆ ಪಿ ಯು ಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೪೪ ಅಂಕಗಳನ್ನು ಗಳಿಸಿ ಡಿಸ್ಟಿಂ ಗ್ಶನ್ ನಲ್ಲಿ ಉತ್ತೀರ್ಣನಾದೆ.

ಕ್ರೈಸ್ಟ್ ವಿಶ್ವವಿದ್ಯಾಲಯ

ಈಗ ಮುಂದಿನ ವಿದ್ಯಾಭ್ಯಾಸವನ್ನು ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ೧ ನೆ ವರ್ಷ ಬಿ. ಕಾಂ ನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಇಲ್ಲಿ ಶ್ರಮ ಪಟ್ಟು ಚೆನ್ನಾಗಿ ಓದಿ , ಈ ಸಮಾಜದಲ್ಲಿ ಒಳ್ಳೆಯ ಸ್ಥಾನ ಗಳಿಸಿ ನನ್ನ ಗುರಿಯನ್ನು ಮುಟ್ಟುತ್ತೇನೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು ಟಿ ವಿ ನೋಡುವುದು , ಹಾಡು ಕೇಳುವುದು , ಪ್ರವಾಸಕ್ಕೆ ಹೋಗುವುದು, ಬಾಸ್ಕೆಟ್ ಬಾಲ್,ಕ್ರಿಕೆಟ್ ಆಡುವುದು , ಆಟ ಆಡುವುದು ಮತ್ತು ಕಥೆ ಪುಸ್ತಕಗಳನ್ನು ಓದುವುದು.

ಪ್ರವಾಸಗಳು[ಬದಲಾಯಿಸಿ]

ಇದು ತುಂಬ ಸುಂದರವಾದ ಸ್ಥಳ .ಸಿನಿಮಾ ಶೂಟಿಂಗ್ ಗಳನ್ನೂ ನಾವು ಇಲ್ಲಿ ನೋಡ ಬಹುದು
ರಾಮೋಜಿ ಫಿಲಂ ಸಿಟಿ
ಗೋಲ್ಕೊಂಡ ಕೋಟೆಯು ತುಂಬ ಸುಂದರವಾಗಿದೆ
ಗೋಲ್ಕೊಂಡ  ಕೋಟೆ ,ಹೈದರಾಬಾದ್

೧೦ ನೆ ತರಗತಿಯಲ್ಲಿ ಶಾಲೆಯಿಂದ ಹೈದ್ರಾಬಾದ್ ಗೆ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದರು. ಅಲ್ಲಿ ರಾಮೋಜಿ ಫಿಲಂ ಸಿಟಿ , ಗೋಲ್ಕೊಂಡ ಇನ್ನೂ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದೆವು .ಪ್ರವಾಸವು ನನಗೆ ಹಾಗೂ ನನ್ನ ಸ್ನೇಹಿತರಿಗೆ ತುಂಬಾ ಸಂತೋಷವನ್ನು ನೀಡಿತು.ಪಿ ಯು ಸಿ ಯಲ್ಲಿ ಇದ್ದಾಗ ನಾನು ನನ್ನ ಸ್ನೇಹಿತರು ತುಮಕೂರಿನಲ್ಲಿರುವ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದೆವು .ಆ ಸ್ಥಳವು ತುಂಬಾ ಸುಂದರವಾಗಿತ್ತು .ಎರೆಡನೆ ಪಿ ಯು ಸಿ ಯ ನಂತರ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಹೋಗಿದ್ದೆವು .ಅಲ್ಲಿ ತುಂಬಾ ಸ್ಥಳಗಳಲಿಗೆ ಭೇಟಿ ನೀಡಿದೆವು .