ಸದಸ್ಯ:Keerthan Naik/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಳಿನೆಲೆ ಗೋಪಾಲಕೃಷ್ಣ ದೇವಾಲಯ[ಬದಲಾಯಿಸಿ]

ಬಿಳಿನೆಲೆ ಗೋಪಾಲಕೃಷ್ಣ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿದೆ. ಈ ಕ್ಷೇತ್ರವು ಉಪ್ಪಿನಂಗಡಿಯಿಂದ ಸುಮಾರು 25ಮೈಲು ದೂರದಲ್ಲಿ ಇದೆ ಇಲ್ಲಿ ಗೋಪಾಲಕೃಷ್ಣದೇವರನ್ನು ಆರಾಧಿಸುತ್ತರೆ.[೧]

ಐತಿಹಾಸ[ಬದಲಾಯಿಸಿ]

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಓರ್ವ ಮಹಾ ತಪಸ್ವಿಗಳು ಶಿಷ್ಯ ಸುದಾಯದೊಂದಿಗೆ ಸಂಚರಿಸುತ್ತ ,ಬಿಳಿನೆಲೆಗೆ ಬಂದರು. ಬಂದವರು ಇಲ್ಲಿಯ ರಮಣೀಯ ಸೊಬಗಿಗೂ,ಪ್ರಶಾಂತ ವಾತಾವರಣಕ್ಕೂ ರಮಣೀಯ ನೋಟಕ್ಕೂ,ಮಾರುಹೋಗಿ ತಪವನ್ನು ಗೈಯಲು ಇದೆ ಯೋಗ್ಯ ಸ್ಥಳವೆನ್ದು ಆಶ್ರಯವನ್ನು ಕಟ್ಟಿಕೊಂಡು ಇಲ್ಲಿಯೇ ನೆಲೆ ನಿಂತರು.ನಂತರ ಮಹಾತಪ್ವಿಗಳು ಗುರುಕುಲವೊಂದ್ನು ಕೂಡ ಪ್ರಾರಂಭಿಸಿದರು.ತಪಸ್ವಿಗಳಿಂದಜ್ಯೋತಿರ್ಲಿಂಗವನ್ನು ಪಡೆದ ಶಿಷ್ಯ ವರ್ಗದು ಪರಂಪರೆಯಾಗಿ ಹಲವು ಕಾಲ ಆರಾಧಿಸಿಕೊಂಡುಬಂದರು.ಊರಿನ ಬ್ರಾಹ್ಮಣ ವರ್ಗದವರು ಹಾಗು ಇತರರನ್ನು ಒಟ್ಟುಗೂಡಿಸಿ ಇದೆ ಸ್ಥಳದಲ್ಲಿ ದೇವಾಲಯವನ್ನು ಕಟ್ಟಿಸಿದರು ಎಂಬ ನಂಬಿಕೆ ಇದೆ.[೨]

ಕುದುರೆಕಟ್ಟೆ ಮತ್ತು ಹೋರಿಕಟ್ಟೆ[ಬದಲಾಯಿಸಿ]

ಬಿಳಿನೆಲೆಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ಎರಡೂ ಬದಿಯಲ್ಲಿ ಎರಡು ಕಟ್ಟೆಗಳನ್ನು ಕಾಣಬಹುದು.ಈ ಕಟ್ಟೆಯನ್ನು ಒಂದು ಹೋರಿ ಕಟ್ಟೆ ಮತ್ತು ಇನ್ನೊಂದು ಕುದುರೆಕಟ್ಟೆ ಎಂದು ಕರೆಯುತ್ತಾರೆ.ಇದು ಪಶುಪಾಲನೆಯ ಕುರುಹುಹಾಗಿದೆ .

ವಿಶೇಷತೆ[ಬದಲಾಯಿಸಿ]

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ " ಗೋ ದುರಿತ ನಿವಾರಣೆ"ಗೆ ಪ್ರಸಿದ್ದಿಯನ್ನು ಪಡೆದಿದೆ. ಜಾನುವಾರುಗಳು ಕಾಣೆಯಾದರೆ ,ಕಾಡುಮೃಗಗಳು ಹಾವಳಿ ಹೆಚ್ಚಾದರೆ ಬೆಳೆಹಾನಿಗೊಂಡರೆ ಊರ ಹಾಗು ಪರ ಊರವರು ಇಲ್ಲಿ ಹರಕೆ ಹೇಳುತ್ತಾರೆ. ಗೋಹತ್ಯೆ ದೋಷ ನಿವಾರಣೆ ,ಶಿಶು ಹತ್ಯಾದೋಷ ಪರಿಹಾರ,ವೈವಾಹಿಕ ಸಂಬಂಧ ದೋಷ ನಿವಾರಣೆ,ಸಂತಾನ ಪ್ರಾಪ್ತಿ ,ಕುಟುಂಬ ಕಲಹ ದೋಷ ನಿವಾರಣೆಯು ಇಲ್ಲಿ ನೆರವೇರುತ್ತದೆ. ಸಂತಾನ ಪ್ರಾಪ್ತಿಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನವು ಪ್ರಸಿದ್ದಿಯನ್ನು ಪಡೆದಿದೆ. ಶ್ರೀಕ್ಷೇತ್ರದಲ್ಲಿ ಸಂತಾನ ಗೋಪಾಲಕೃಷ್ಣ ವೃತ ಆಚರಣೆಯನ್ನು ಮಾಡಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. www.google.com/search?q=bilinele+gopalakrishna+temple&oq=bilinele&aqs=chrome.1.69i57j0l3.5211j0j4&client=ms-android-motorola-rev2&sourceid=chrome-mobile&ie=UTF-8#trex=m_t:lcl_akp,rc_f:nav,rc_ludocids:662418136754640297,rc_q:Shri%2520Gopalakrishna%2520Temple%252C%2520Bilinele,ru_q:Shri%2520Gopalakrishna%2520Temple%252C
  2. http://www.onefivenine.com/india/Places/checkin/sri-gopalakrishna-temple-bilinele