ಸದಸ್ಯ:Kavya suvarna/ನನ್ನ ಪ್ರಯೋಗಪುಟ
ಮಣಿಪುರಿ ಮಹಿಳೆಯರ ಉಡುಗೆ- ತೊಡುಗೆಗಳು
ಮಣಿಪುರಿ ರಾಜ್ಯವನ್ನು ಏಕಸಮುದಾಯವೆಂದು ಹೇಳಲು ಸಾಧ್ಯವಿಲ್ಲ.ಅ ಅಲ್ಲಿ ವೈವಿಧ್ಯಮಯ ಸಂಸ್ಕøತಿಯೊಂದಿಗೆ ವಿವಿಧ ನಂಬಿಕೆಗಳನ್ನು ನಂಬಿರುವ ಹಲವಾರು ಗುಂಪುಗಳಿವೆ. ಈ ಎಲ್ಲಾ ಅಂಶಗಳು ಅವರ ಉಡುಗೆ ತೊಡುಗೆಯ ಮೇಲೂ ಪರಿಣಾಮ ಬೀಳುತ್ತದೆ. ಆದ್ದರಿಂದ ಅವರ ಉಡುಗೆಗಳ ಬಗ್ಗೆ ಚರ್ಚಿಸುವಾಗ ಅಲ್ಲಿರುವ ಗುಂಪುಗಳ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ಇಲ್ಲಿ ಮಿಥೆಸ್ ಮತ್ತು ಲೂಯಿಸ್ ಎಂಬೆರಡು ಗುಂಪುಗಳನ್ನು ಪ್ರಮುಖವಾದವುಗಳು.
ಮಿಥೆಸ್ ಮಹಿಳಾ ಉಡುಪುಗಳು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಬೇಸಿಗೆಗಾಲದ ಇವರ ಉಡುಪುಗಳು ದೇಹದ ಕೆಳಭಾಗವನ್ನು ಹೊರತುಪಡಿಸಿ ಮುಕ್ತವಾಗಿರುತ್ತದೆ. ಅಲ್ಲಿ ಕೆಲವು ಇಂಚುಗಳಷ್ಟು ಅಂಚುಗಳ ಮೂಲಕ ಅದನ್ನು ಒಟ್ಟಿಗೆ ಜೋಡಿಸಲಾಗುತ್ತದೆ. ಇದು ದೇಹದ ಸುತ್ತಲೂ ಸುತ್ತಿ ತೋಳುಗಳ ಅಡಿಯನ್ನು ದಾಟಿ ಎದೆ ಭಾಗವನ್ನು ಮುಚ್ಚಿರುತ್ತದೆ. ಆದರೆ ಉದ್ದಳತೆಯಲ್ಲಿ ಈ ಉಡುಗೆ ನೆಲ ಮುಟ್ಟಿರುತ್ತದೆ ಮತ್ತು ನಡೆದಾಡಲು ತುಸು ಕಷ್ಟವೆನಿಸುತ್ತದೆ. ಅಲ್ಲದೇ ಸುರುಳಿಯಾಕಾರವಾಗಿದ ಮ್ಕಾಲಿನವರೆಗೆ ಸುತ್ತಿರುತ್ತದೆ. ಮತ್ತು ಅದನ್ನು ಸೊಂಟದ ಭಾಗಕ್ಕೆ ಸಿಕ್ಕಿಸಿಕೊಳ್ಳಲಾಗುತ್ತದೆ. ಈ ರೀತಿಯ ಉಡುಗೆಯನ್ನು “ಫನೆಕ್” ಎಂದು ಕರೆಯಲಾಗುತ್ತದೆ. ಇದು ದೇಹಕ್ಕೆ ಒಂದೂವರೆ ಭಾಗದಷ್ಟು ಸುತ್ತಿಕೊಳ್ಳುವಷ್ಟು ಅಗಲವಿರುತ್ತದೆ. ಇಷ್ಟು ಅಗಲವಿರುವುದರಿಂದ ಕಾಲುಗಳಿಗೆ ನಡೆಯಲು ಸ್ಥಳಾವಕಾಶವನ್ನು ಒದಗಿಸುತ್ತದೆ. ಈ ಫನೆಕ್ ವಸ್ತ್ರವನ್ನು ಹತ್ತಿ ಮತ್ತು ರೇಷ್ಮೆಯಿಂದ ತಯಾರಿಸಲಾಗುತ್ತದೆ. ಇದರ ವಿನ್ಯಾಸವು ವಿವಿಧ ಬಣ್ಣಗಳ ಗೆರೆಯನ್ನು ಒಳಗೊಂಡು ನಡುವೆ ಇಂತಿಷ್ಟೇ ಪ್ರಮಾಣದ ಅಂತರವನ್ನು ಹೊಂದಿರುತ್ತದೆ. ಇದು ಯಾವುದೇ ಬಣ್ಣವನ್ನು ಒಳಗೊಂಡಿರಬಹುದು. ಆದರೆ ಮಣಿಪುರಿ ಮಹಿಳೆಯರು ಹೆಚ್ಚಾಗಿ ಕೆಂಪು ಬಣ್ಣದ, ಹಸಿರು ಗೆರೆಯಿರುವ ಧಿರಿಸು ಧರಿಸುತ್ತಾರೆ. ಅಲ್ಲದೇ ಒಂದು ಬಣ್ಣಕ್ಕೆ ಸರಿಯಾಗಿ ಹೊಂದಿಕೆಯಾಗುವ ಇನ್ನೊಂದು ಬಣ್ಣವನ್ನು ಆಯ್ದುಕೊಳ್ಳುತ್ತಾರೆ. ಉದಾಹರಣೆಗೆ ನೀಲಿ ಬಣ್ಣಕ್ಕೆ ಕಪ್ಪು ಬಿಳುಪು ಗೆರೆ, ಹಳದಿ ಮತ್ತು ಕಂದು ಮುಂತಾದವುಗಳು. ಉಡುಪಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ದಪ್ಪನೆಯ ಗೆರೆಯಿರುತ್ತದೆ ಮತ್ತು ಈ ಭಾಗದಲ್ಲಿ ಜ್ಯಾಮಿತಿಯ ಆಕೃತಿಗಳು ಅಥವಾ ಮಾದರಿಗಳು ವಿವಿಧ ಬಣ್ಣಗಳಲ್ಲಿ ರೇಷ್ಮೆ ಬಟ್ಟೆಯಿಂದ ಕೈಯಲ್ಲೇ ಹೊಲಿಯಲಾಗುತ್ತದೆ. ಈ ಫನೆಕ್‍ನ ಮೇಲೆ ಬಿಳಿ ಹಾಳೆ ಧರಿಸಲಾಗುತ್ತದೆ ಮತ್ತು ಇದನ್ನು “ಇನ್-ನಾ-ಫಿ” ಎಂದು ಕರೆಯಲಾಗುತ್ತದೆ. ಅವರ ಸ್ಥಳೀಯ ಸಂಸ್ಕತಿಯಂತೆ ಅದನ್ನು ಉಡಲಾಗುತ್ತದೆ. ಚಳಿಗಾಲದ ಸಮಯದಲ್ಲಿ ಉದ್ದನೆಯ ತೋಳುಗಳನ್ನು ಹೊಂದಿರುವ ಸಣ್ಣ ಜಾಕೆಟ್ ಧರಿಸಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ವೆಲ್ವೇಟ್ ಅಥವಾ ಸ್ಯಾಟಿನ್ ಕಪ್ಪು, ನೀಲಿ ಅಥವಾ ಹಸಿರು ಅಥವಾ ಇನ್ಯಾವುದೇ ಇಷ್ಟದ ಬಣ್ಣಗಳು ಬಳಕೆಯಾಗಲ್ಪಡುತ್ತದೆ. ಈ ಫನೆಕ್ ಉಡುಗೆ ಭಾರವಿರುತ್ತದೆ ಮತ್ತು ದೇಹದ ಆಕಾರ ಹಾಳಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಮಣಿಪುರಿ ಮಹಿಳೆಯರಿಗೆ ಬಂಗಾರ ಬಣ್ಣದ ಎಂಬ್ರಾಯ್ಡರಿ ಇರುವ ‘ಚದ್ದಾಸ್’ ವಸ್ತ್ರವನ್ನು ಧರಿಸಲು ಅಲ್ಲಿ ಅನುಮತಿಯಿಲ್ಲ. ಆದರೆ ಸಪ್ಟೆಂಬರ್‍ನಲ್ಲಿ ನಡೆಯುವ ಅವರ ‘ಲಯ ಹರೋಬಾ’ ದಂತಹ ಧಾರ್ಮಿಕ ಉತ್ಸವಗಳಲ್ಲಿ ಕಾನೂನುಗಳು ಸ್ವಲ್ಪ ಸಡಿಲಿಸುವ ಸಂದರ್ಭಗಳಾಗಿವೆ. ಮಹಿಳೆಯರು ತಮ್ಮಿಷ್ಟದ ಉಡುಪುಗಳನ್ನು ಯಾವ ಅಡಚಣೆಯಿಲ್ಲದೇ ಧರಿಸಬಹುದಾಗಿದೆ. ಅಲ್ಲದೇ ಧಾರ್ಮಿಕ ನೃತ್ಯಗಳಲ್ಲಿ ಭಾಗವಹಿಸಲು ಆಯ್ಕೆಯಾದವರು ಸುಂದರವಾದ ಆಧುನಿಕ ವೇಷಭೂಷಣವನ್ನು ಧರಿಸಲು ಅನುಮತಿ ಪಡೆದಿರುತ್ತಾರೆ. ಅವರ ಶಿರಸ್ತ್ರಾಣ ಕಪ್ಪುಬಟ್ಟೆ ಅಥವಾ ವೆಲ್ವೆಟ್‍ನಿಂದ ತಯಾರಿಸಿದ ಕ್ಯಾಪ್ ಆಗಿರುತ್ತದೆ. ಅದರ ತುದಿಯಲ್ಲಿ ಸಣ್ಣದಾಗಿ ಹರಳನ್ನು ಜೋಡಿಸಿರುತ್ತಾರೆ. ಕೆಲವೊಮ್ಮೆ ಕ್ಯಾಪ್ ಮೇಲೆ ಬಿಳಿ ಮುತ್ತು, ಮಣಿಗಳನ್ನು ಅಲಂಕಾರಕ್ಕಾಗಿ ಬಳಸುತ್ತಾರೆ. ಅವರ ಜ್ಯಾಕೆಟ್ ದೇಹಕ್ಕೆ ಬಿಗಿಯಾಗಿರುತ್ತದೆ. ಅದು ಕೂಡ ಕಪ್ಪು ಬಟ್ಟೆ ಅಥವಾ ವೆಲ್ವೆಟ್ ಆಗಿರಬಹುದು. ತೋಳಗಳ ಮೇಲೆ ಎರಡು ಇಂಚುಗಳಷ್ಟು ಬಂಗಾರ ಬಣ್ಣದ ಲೇಪನವಿರುತ್ತದೆ. ಮತ್ತು ಇದು ಮೊಣಕೈಯವರೆಗೆ ಮಾತ್ರ ಇರುತ್ತದೆ. ಪೆಟ್ಟಿಕೋಟನ್ನು ರೇಷ್ಮೆಯಿಂದ ಮಾಡಲಾಗುತ್ತದೆ ಇದು ಹಸಿರು ಅಥವಾ ಗಾಢ ಕೆಂಪಿನಿಂದ ಕೂಡಿರಬಹುದು. ಅದರ ಕೆಳಭಾಗದಲ್ಲಿ ಹದಿನೆಂಟು ಇಂಚಿನಿಂದ ಎರಡು ಅಡಿ ಆಳದಷ್ಟು ಸಿಕ್ವಿನ್ ಅಲಂಕಾರವಿರುತ್ತದೆ. ಭುಜದ ಮೇಲೆ ಮತ್ತು ಸೊಂಟದ ಸುತ್ತಲೂ ಅಲಂಕಾರಿಕ ಆಭರಣವನ್ನು ಜೋಡಿಸಲಾಗಿರುತ್ತದೆ. ರೇಷ್ಮೆ ಸ್ಕರ್ಟ್ ಮೇಲೆ ಅವರು ಕೈಯಲ್ಲೇ ದಾರದ ಮೂಲಕ ನೇಯ್ದ ಬಿಳಿ ಬಣ್ಣದ ಮಸೂರದ ಮೇಲಂಗಿಯನ್ನು ಧರಿಸುತ್ತಾರೆ.
“ಫೈಚರೆಂಗ್” ಇದು ಇನ್ನೊಂದು ಬಗೆಯ ಉನ್ನತ ದರ್ಜೆಯ ಮಹಿಳೆಯರು ಧರಿಸುವ ಟೋಪಿ. ಇದನ್ನು ಮೊದಲ ಬಾರಿಗೆ ಕ್ರಿ.ಪೂ 1746 ರ ಅವಧಿಯಲ್ಲಿ ರಾಜ ಪಾಮೆಯೆಬಾ ಅಥವಾ ಗರೀಬ್ ನವಾಝ್ ಅವರ ಹೆಂಡತಿ ರಾಣಿ ‘ಚೋಟೆ ನಾಗಾಸ್’ ಗ್ರಾಮಸ್ಥರು ಆಯೋಜಿಸಿದ್ದ ನೃತ್ಯಕೂಟದಲ್ಲಿ ಧರಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಲೂಯಿಸ್ ಮತ್ತು ಮಿಥೇಸ್ ಧರಿಸುವ ಉಡುಪಿನಲ್ಲಿ ವ್ಯತ್ಯಾಸವಿಲ್ಲ. ಎರಡೂ ಪಂಗಡದ ಮಹಿಳೆಯರು ಒಂದೇ ತೆರನಾದ ಧಿರಿಸನ್ನು ಧರಿಸುತ್ತಾರೆ. ‘ಪೋಗ್ವೆನ್ಸ್’ ಅಥವಾ ಮುಸ್ಲಿಮರ ಬಗೆಗೂ ಈ ಹೇಳಿಕೆಗಳು ನಿಜ. ಪೊಗನ್ ಹೆಂಗಸರು ಫ್ಯಾನ್ಕ್ಸ್ ಧರಿಸುತ್ತಾರೆ. ಇದನ್ನು ಅವರು ತಮ್ಮ ಎದೆಯ ಬಲಭಾಗದ ಮೂಲಕ ಸುತ್ತಿಕೊಳ್ಳುತ್ತಾರೆ. ಮಿಥೇಸ್ ಮಹಿಳೆಯರು ಈ ಉಡುಪನ್ನು ತಮ್ಮ ಎದೆಯ ಎಡಭಾಗದ ಮೂಲಕ ಸುತ್ತಿಕೊಳ್ಳುತ್ತಾರೆ. ಪೊಗನ್ ಮಹಿಳೆಯರು ಬಳಸುವ ಬಣ್ಣಕ್ಕೂ ಮಿಥೆಸ್ ಮಹಿಳೆಯರು ಬಳಸುವ ಬಣ್ಣಕ್ಕೂ ವ್ಯತ್ಯಾಸವಿದೆ. ಉದಾಹರಣೆಗೆ ಮಿಥೆಸ್ ಬಳಸುವ ಹಸಿರು ಬಣ್ಣ ಗಾಢವಾಗಿದ್ದರೆ, ಪೋಗನ್ ಹಸಿರು ಛಾಯೆಗಿಂತ ಕಡಿಮೆ ಹೊಳೆಯುವ ಬಣ್ಣವನ್ನು ಆಯ್ದುಕೊಳ್ಳುತ್ತಾರೆ.
ಮಿಥೆಸ್ ಮತ್ತು ಲೂಯಿ ಮಹಿಳೆಯರು ಧರಿಸುವ ವಿಶಿಷ್ಟವಾದ ಫ್ಯಾನೆಕ್ ಉಡುಗೆ ‘ಮೊಯಿರಾಂಗ್ ಪೀ’ ಹಬ್ಬದ ಸಂದರ್ಭದಲ್ಲಿ ಹುಟ್ಟಿಕೊಂಡಿತು. ಅದರ ವಿಶೇಷ ಬಣ್ಣದ ಸಂಯೋಜನೆ ಮತ್ತು ವಿನ್ಯಾಸಕ್ಕಾಗಿ ಇದು ಹೆಸರುವಾಸಿಯಾಗಿದೆ. ಈ ತೊಡುಗೆಯನ್ನು ವಿನ್ಯಾಸಿ ಮೊದಲ ಬಾರಿಗೆ ಬಳಕೆಯಾದ ವಿಚಾರದ ಬಗ್ಗೆ ‘ಖಂಬಾ-ತೊಯಿಬಾಯಿ’ ದಂತಕಥೆಯ ಮೂಲಕ ತಿಳಿಯಬಹುದಾಗಿದೆ.
ಮಣಿಪುರದ ಬಿಷ್ಣುಪ್ರಿಯಾಗಳು ಮೂಲತಃ ಇಂಡೋ-ಆರ್ಯನ್‍ನಿಂದ ಬಂದವರು. ಬಹುತೇಕ ಅವರ ಉಡುಗೆ ತೊಡುಗೆಗಳಲ್ಲೂ ಮಿಥೇಸ್ ಪ್ರಭಾವವನ್ನು ಕಾಣಬಹುದು. ಈ ಪ್ರಭಾವವು ಬಿಷ್ಣುಪ್ರಿಯ ಮಹಿಳೆಯರಿಗೆ ತಮ್ಮದೇ ಆದ ವಿಶಿಷ್ಟ ಉಡುಪನ್ನು ಸೃಷ್ಟಿಸಿತು. ಈ ಶತಮಾನದ ಮೊದಲ ಭಾಗದಲ್ಲಿ ಅವಿವಾಹಿತ ಹೆಂಗಸರು ಎರಡು ತುಂಡು ಉಡುಗೆಗಳನ್ನು ಧರಿಸುತ್ತಿದ್ದರು. ಇದು ಸೊಂಟವನ್ನು ಮತ್ತು ಎದೆಯ ಭಾಗವನ್ನು ಮುಚ್ಚಿಕೊಳ್ಳಲು ಬಳಕೆಯಾಗುತ್ತಿತ್ತು. ವಿವಾಹಿತ ಮಹಿಳೆಯರು ಅದೇ ರೀತಿ ಉಡುಗೆ ತೊಡುತ್ತಿದ್ದು, ಗಾತ್ರದಲ್ಲಿ ದೊಡ್ಡದಾಗಿತ್ತು. ಆದರೆ ಈ ಶತಮಾನದ ಮೊದಲ ತ್ರೈಮಾಸಿಕದಲ್ಲಿ ಅವಿವಾಹಿತ ಮಹಿಳೆ ಎದೆ ಭಾಗಕ್ಕೆ ಬಳಸುತ್ತಿದ್ದ ತುಂಡು ಉಡುಗೆ ಕುಪ್ಪಸವಾಗಿ ಬದಲಾಯಿತು. ಮತ್ತು ವಿವಾಹಿತ ಮಹಿಳೆಯರೂ ಸಹ ಕುಪ್ಪಸ ಬಳಸಲು ಆರಂಭಿಸಿದರು. ಈ ಸಮಯದಲ್ಲಿ ‘ಖೆರ್ಮಸಿ’ ಕುಪ್ಪಸ ಅಥವಾ ಚುಕ್ಕಿಯ ಗೆರೆಗಳಿರುವ ವೆಲ್ವೆಟ್ ಕುಪ್ಪಸ ಬಳಸಲಾಗುತ್ತಿತ್ತು. ನಂತರ ‘ಕ್ಯಾವಡಿ’ ಬಹಳ ಪ್ರಸಿದ್ಧವಾಯಿತು. ಮುಂದಿನ ಹಂತದಲ್ಲಿ ಅವಿವಾಹಿತರು ‘ಚದ್ದಾರ್’ ಗಳನ್ನು ಬಳಸಲು ಆರಂಭಿಸಿದರು. ಇದರಲ್ಲಿ ಎರಡು ಬಗೆ ‘ಅನಾಲುರಿ’ ಮತ್ತು ‘ಲಾನಾ’. ಇಲ್ಲಿರುವ ಇನ್ನೊಂದು ಬಗೆಯ ಅದ್ದೂರಿ ಉಡುಗೆಯೆಂದರೆ ‘ತೆಲಪತಿ’ ಅಥವಾ ‘ಕ್ಯಾಕ್ಸಬಿ’. ಇದರ ಉದ್ದಕ್ಕನುಗುಣವಾಗಿ ಗೆರೆಗಳಿರುತ್ತದೆ ಮತ್ತು ಉದ್ದದ ಎರಡೂ ಕಡೆಗಳಲ್ಲಿ ಕಸೂತಿ ಕೆಲಸ ಮಾಡಲಾಗಿದೆ.
ಮಣಿಪುರದ ಬುಡಕಟ್ಟು ಜನರು ವಿವಿಧ ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಇವರಲ್ಲಿ ಬಳಸಲಾಗುವ ವಿನ್ಯಾಸಗಳು ಒಂದು ಬುಡಕಟ್ಟು ಮಹಿಳೆಯಿಂದ ಇನ್ನೊಂದು ಬುಡಕಟ್ಟು ಮಹಿಳೆಗೆ ವ್ಯತ್ಯಾಸವಿರುತ್ತದೆ ಅಲ್ಲದೇ ಒಂದೇ ಬುಡಕಟ್ಟು ಮಹಿಳೆಯರ ಒಳಗೂ ವ್ಯತ್ಯಾಸಗಳನ್ನು ಕಾಣಬಹುದು. ಆದುದರಿಂದ ಇವರ ಉಡುಗೆಯ ವಿನ್ಯಾಸದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲು ಸಾಧ್ಯವಿಲ್ಲ.
ಝೆಮಸ್ ಮತ್ತು ಲಿಯಾಂಗ್ಮೆಯಿ ಹುಡುಗಿಯರು ಬಣ್ಣ ಮತ್ತು ವಿನ್ಯಾಸದ ಸಾಧಾರಣ ಬದಲಾವಣೆಯೊಂದಿಗೆ ಒಂದೇ ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಝೆಮ್ ಮಹಿಳೆಯರು ಅನ್ರ್ಮಾಂಗ್ ಎಂದು ಕರೆಯಲ್ಪಡುವ ಬಟ್ಟೆಯ ತುಂಡು ಧರಿಸುತ್ತಾರೆ. ಇದು ದೇಹದ ಮೇಲಿನ ಭಾಗವನ್ನು ಸಂಪೂರ್ಣವಾಗಿ ಆವರಿಸುತ್ತದೆ. ಇದರ ಜೊತೆಗೆ ಪೆನಿಂಗಮ್ ಎಂದು ಕರೆಯಲ್ಪಡುವ ಒಂದು ವಿಧದ ಶಾಲು ಭುಜದಿಂದ ಕೆಳಗೆ ತೂಗುಹಾಕಲಾಗುತ್ತದೆ.
ಹಳೆಯ ಕುಕಿ ಗುಂಪು ನಾಗಾಸ್ ಅಥವಾ ಮಿಜೋಸ್‍ನ ಹೊಸ ಕುಕಿಗಳನ್ನು ಹೊರತುಪಡಿಸಿ ತಮ್ಮ ಉಡುಪುಗಳಿಗೆ ವಿವಿಧ ವಿನ್ಯಾಸಗಳನ್ನು ಅಳವಡಿಸಿದ್ದಾರೆ. ಇದರಲ್ಲೂ ಮೇಲುಗೈ ಸಾಧಿಸಿರುವುದು ಅನಲ್ಸ್ ಬುಡಕಟ್ಟು ಜನಾಂಗದ ಮಹಿಳೆಯರು. ಈ ಅನಲ್ ಮಹಿಳೆಯರು ಸಣ್ಣ ಸ್ಕರ್ಟ್ ಧರಿಸಿರುತ್ತಾರೆ. ಇದಕ್ಕೆ ‘ಹರ್ಸುನ್ನೋ’ ಎನ್ನಲಾಗುತ್ತದೆ. ಇದರ ಜೊತೆಗೆ ಉದ್ದದ ಶಾಲು ಎದೆಯ ಭಾಗದಿಂದ ಮೊಣಕಾಲಿನವರೆಗೆ ಇರುತ್ತದೆ. ಇದನ್ನು ‘ಲಂಗ್ವಿನ್’ ಎನ್ನಲಾಗುತ್ತದೆ. ಇದರ ಜೊತೆಗೆ ಧರಿಸುವ ಕುಪ್ಪಸಕ್ಕೆ ‘ಲಂಗಮ್’ ಎನ್ನಲಾಗುತ್ತದೆ.
ಹೊಸ ಕುಕಿ ಗುಂಪಿನ ಉಡುಗೆ ವಿಸ್ತಾರವಾಗಿದೆ. ಈ ಗುಂಪಿನ ಎಲ್ಲಾ ಬುಡಕಟ್ಟು ಜನಾಂಗದವರಲ್ಲಿ ಚಿಕ್ಕ ಬದಲಾವಣೆಯೊಂದಿಗೆ ಉಡುಪಿನ ವಿನ್ಯಾಸವು ಬಹುತೇಕ ಒಂದೇ ತೆರನಾಗಿದೆ. ಥಡೂ ಬುಡಕಟ್ಟು ಬಹುಶಃ ಮಣಿಪುರದ ಪ್ರಧಾನ ಬುಡಕಟ್ಟಾಗಿದೆ. ನಂತರ ಗ್ಯಾಂಗ್ವೆ, ಪೈಟ್, ಪೊಯಿ, ಲುಶಿ ಹಾಗೂ ಇತರೆ ಮಿಜೋ ಬುಡಕಟ್ಟುಗಳಾದ ಹಮರ್, ರಲ್ವೆ ಮುಂತಾದವು ಅಲ್ಲಿವೆ. ತಡೋ ಮಹಿಳೆಯರು ತಮ್ಮ ಸೊಂಟದ ಸುತ್ತಲೂ ಸುತ್ತುವ, ತೊಡೆಯ ಅರ್ಧ ಭಾಗ ಮುಚ್ಚುವಂತೆ ಬಟ್ಟೆ ಧರಿಸುತ್ತಾರೆ.
ಮಣಿಪುರದ ಮೊದಲ ಪ್ರಮುಖ ಬುಡಕಟ್ಟು ಜನಾಂಗದವರು ನಾಗಾ ಗುಂಪು. ನಾಗಾ ಗುಂಪನ್ನು ಹೊರತುಪಡಿಸಿ ಮಾವೋ, ಮಾರಮ್, ಕ್ವೊಯಿರೆಂಗ್, ಟ್ಯಾಂಗುಲ್ ಮುಂತಾದ ಬುಡಕಟ್ಟು ಗುಂಪು ಅಲ್ಲಿದೆ. ಮಾವೋ ಹುಡುಗಿಯರು ಎರಡು ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಅವುಗಳಲ್ಲಿ ಒಂದು ಸರಳ ಚೌಕವನ್ನು ಒಳಗೊಂಡು ಗಾಢ ನೀಲಿ ಅಥವಾ ಕೆಂಪು ಅಂಚನ್ನು ಒಳಗೊಂಡ ಉಡುಪಾಗಿರುತ್ತದೆ. ಇವರು ಬಳಸುವ ಅನೆಕ ಉಡುಪುಗಳನ್ನು ಸಣ್ಣ ಜ್ಯಾಮಿತಿಯ ಮಾದರಿಗಳೊಂದಿಗೆ ಕಾಣಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದು ನೇಯ್ಗೆಯ ಸಹಿ ಅಥವಾ ವ್ಯಾಪಾರ ಚಿಹ್ನೆ ಅಥವಾ ಅದೃಷ್ಟದ ಮಾರ್ಕ್ ಆಗಿರಬಹುದು. ಮಾವೋ ಬುಡಕಟ್ಟು ಜನಾಂಗವು ಇತರ ಬುಡಕಟ್ಟು ಜನಾಂಗಗಳಂತೆಯೇ ತಮ್ಮದೇ ಆದ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿರುವ ಶಾಲ್ ಅನ್ನು ಬಳಸಿಕೊಳ್ಳುತ್ತಾರೆ. ಇದನ್ನು ಮಾವೋ ಶಾಲ್ ಎಂದು ಸುಲಭವಾಗಿ ಗುರುತಿಸಬಹುದು. ಇದರಲ್ಲಿ ಹಂಗಾಮಿ ವಿನ್ಯಾಸಗಳ ಪ್ರಭಾವವೂ ಗೋಚರಿಸುತ್ತದೆ. ಹೆಚ್ಚಾಗಿ ಕೆಂಪು, ಕಪ್ಪು, ಕೇಸರಿ, ಹಸಿರು ಬಣ್ಣವನ್ನು ಉಪಯೋಗಿಸಲಾಗುತ್ತದೆ. ವಿನ್ಯಾಸ ಮತ್ತು ಬಣ್ಣಗಳ ಬದಲಾವಣೆ ಹೊರತುಪಡಿಸಿ ಮಾರಮ್ ಮಹಿಳೆಯರ ಉಡುಗೆ ಕೂಡ ಮಾವೋಸ್‍ನಂತೆಯೆ ಇರುತ್ತದೆ. ಕೊಯಿರೆಂಗ್ ಬುಡಕಟ್ಟು ಮಹಿಳೆಯರು ಹಲವಾರು ರೀತಿಯ ಪೆಟಿಕೋಟ್‍ಗಳನ್ನು ಧರಿಸುತ್ತಾರೆ. ಇವೆಲ್ಲವೂ ತಮ್ಮ ಕಾಳಜಿಯಂತೆ ಮನೆಯಲ್ಲೇ ಮಾಡಲ್ಪಡುತ್ತವೆ. ಅವರು ಬಳಸುವ ಸಾಮಾನ್ಯ ಬಣ್ಣವೆಂದರೆ ಬಿಳಿ.
ರಂಗಮಿ ಮಹಿಳೆಯರು ದಪ್ಪ ವಿನ್ಯಾಸದ ಹತ್ತಿ ಬಟ್ಟೆಯೊಂದನ್ನು ಧರಿಸುತ್ತಾರೆ. ಇದು ಮಿಥೆಸ್ ಫನೆಕ್‍ನಂತೆಯೇ ಇರುತ್ತಿದ್ದು, ಮೊಣಕಾಲುಗಳ ಕೆಳಗೆ ಸ್ವಲ್ಪವೇ ತಲುಪುತ್ತದೆ. ಇದರಲ್ಲಿ ನೀಲಿ ಮತ್ತು ಕೆಂಪು ಬಣ್ಣದ ಗೆರೆಗಳು ಸಾಮಾನ್ಯವಾಗಿರುತ್ತದೆ. ಭುಜದ ಮೇಲೆ ತುಂಡು ಬಟ್ಟೆಯ ಸ್ಕಾರ್ಫ್ ಧರಿಸಲಾಗುತ್ತದೆ. ಸಾಮಾನ್ಯವಾಗಿ ಇದು ನೀಲಿ ಬಣ್ಣದ್ದಾಗಿರುತ್ತದೆ, ಅಂಚು ವಿವಿಧ ಬಣ್ಣಗಳಲ್ಲಿ ಇರಬಹುದು. ಉತ್ಸವದ ದಿನಗಳಲ್ಲಿ ಅಥವಾ ಹಬ್ಬದ ಸಂದರ್ಭಗಳಲ್ಲಿ ಸಾಮಾನ್ಯ ಸರಳ ಫ್ಯಾಷನ್‍ಗಳು ವಿಸ್ತಾರವಾದ ವೇಷಭೂಷಣಗಳಿಂದ ಕಾಣಸಿಗುತ್ತವೆ. ಹುಡುಗಿಯರು ಸಾಮಾನ್ಯವಾಗಿ ನೀಲಿ ಬಟ್ಟೆಯಿಂದ ಮಾಡಿದ ಸಣ್ಣ ಕ್ಯಾಪ್‍ಗಳನ್ನು ಧರಿಸುತ್ತಾರೆ. ಪೆಟಿಕೋಟ್‍ಗಳು ಕೆಲವೊಮ್ಮೆ ಕೆಂಪು, ಕಪ್ಪು ಮತ್ತು ಬಿಳಿ ಪಟ್ಟೆಗಳನ್ನು ಹೊಂದಿರುತ್ತದೆ, ಸಣ್ಣ ಜ್ಯಾಮಿತಿಯ ಮಾದರಿಯಲ್ಲಿರುತ್ತದೆ.
ಸುಧಾರಿತ ಸಂವಹನದ ಕಾರಣದಿಂದ ಮಿಥೆಸ್ ಮಹಿಳೆಯರ ಸಾಂಪ್ರಾದಾಯಿಕ ಉಡುಪು ಫನೆಕ್‍ನಲ್ಲಿ ಕೊಂಚ ಬದಲಾವಣೆಯಾಗಿದೆ. ಮೊದಲ ಬದಲಾವಣೆ ಎಂಬಂತೆ ಅಸ್ಸಾಂನ ಮಹಿಳೆಯರು ಧರಿಸುವ ಮೆಖಲಾ ಶೈಲಿಯಲ್ಲಿ ಈ ಫೆನೆಕ್ ಧರಿಸಲಾಗುತ್ತದೆ. ಮಿಥೆಸ್ ಮಹಿಳೆಯರು ಧರಿಸುವ ಸಾಂಪ್ರಾದಾಯಿಕ ಉಡುಗೆ ಫನೆಕ್‍ನಲ್ಲಿ ಕುಪ್ಪಸ, ಹಾಫ್ ಸಾರಿ, ಚದ್ದಾರ್‍ನ್ನು ಒಳಗೊಂಡಿರುತ್ತದೆ. ಫನೆಕ್ ಸಂಪ್ರದಾಯ ಈಗಲೂ ಉಳಿದುಕೊಂಡಿದೆ ಮತ್ತು ಅಸ್ಸಾಂ, ವೆಸ್ಟ್ ಬೆಂಗಾಲ್‍ನ ಪ್ರಭಾವವೂ ಅಲ್ಲಿ ಕಂಡುಬರುತ್ತದೆ. ಇಲ್ಲಿ ಆದ ಇನ್ನೊಂದು ಬದಲಾವಣೆ ಎಂದರೆ ಇನ್ನೊಂದು ರಾಜ್ಯದಿಂದ ಸೀರೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದು. ಹಿಂದೆ ತಮ್ಮ ಕೈಯಲ್ಲೇ ವಿನ್ಯಾಸಗಳು ರೂಪುಗೊಳ್ಳುತ್ತಿದ್ದವು.
hಣಣಠಿs://booಞs.googಟe.ಛಿom/booಞs/ಚಿbouಣ/ತಿomeಟಿ_oಜಿ_ಒಚಿಟಿiಠಿuಡಿ.hಣmಟ|?iಜ=Iಠಿಗಿಘಿಠಿಜಿಂ6631ಅ