ಸದಸ್ಯ:Kavya sri.k/sandbox

ವಿಕಿಪೀಡಿಯ ಇಂದ
Jump to navigation Jump to search

ಐರಾವತಿ ಕಾರ್ವೆ:ಭಾರತೀಯ ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು , ಶಿಕ್ಷಣ ತಜ್ಞರು, ಬರಹಗಾರರು ಆಗಿದ್ದರು.ಇವರು ಮಹರಾಷ್ಟ್ರದಲ್ಲಿ ೧೫,ಡಿಸೆಂಬರ್ ೧೯೦೫ರಲ್ಲಿ ಜನಿಸಿದರು.

ಆರಂಭಿಕ ಜೀವನ ಮತ್ತು ವಿಧ್ಯಾಭ್ಯಾಸ: ಕಾರ್ವೆ ಅವರು ೧೯೦೫ರಲ್ಲಿ ಚಿಟ್ಟ ಪವನ್ ಬ್ರಾಹ್ಮಣ, ಶ್ರೀಮಂತ ಕುಟುಂಬದಲ್ಲಿ ಜನಿಸಿದರು.ಅವರ ತಂದೆ ಗಣೇಶ್ ಹರಿ ಕರ್ಮಾಕರವರು ಬರ್ಮಾ ಹತ್ತಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ತಂದೆ ಕಾರ್ವೆಯವರ ಮೂಲ ಹೆಸರನ್ನು ಇರ್ರವ್ವಡ್ಡಿ ನದಿಯ ಹೆಸರಿಂದ ರೂಪಿಸಿದರು.ಇವರು ತಮ್ಮ ವಿಧ್ಯಾಭ್ಯಾಸವನ್ನು ಪೂನೆಯ ಹುಸುರ್ಪಗ ಊರಿನ "ಹುಡಿಗಿಯರ ಬೋರ್ಡಿಂಗ್ ಶಾಲೆಯಯಲ್ಲಿ" ನಲ್ಲಿ ನಡೆಸಿದರು.ಅದ ನಂತರ ೧೯೨೬ರಲ್ಲಿ ಫರ್ಗ್ಯೂಸನ್ ಕಾಲೇಜನಿಂದ ತತ್ವಶಾಸ್ತ್ರ ಪದವಿಯನ್ನು ಪಡೆದರು. ಅದೇ ಕಾಲೇಜಿನಲ್ಲಿ ರಸಾಯನಶಾಸ್ತ್ರವನ್ನು ಭೋದಿಸುತ್ತಿದ್ದ ದಿನಕರ ಧೋಂಡೊ ಕರ್ವೆ ಯವರ ಪರಿಚಯವಾಗಿ ಅವರನ್ನೇ ವಿವಾಹವಾದರು. ದಿನಕರ ಧೋಂಡೊ ಕರ್ವೆಯವರು ಸಾಮಾಜಿಕವಾಗಿ ಭಿನ್ನವಾದ ಬ್ರಾಹ್ಮಣ ಕಟುಂಬದವರಗಿದ್ದು ಕಾರ್ವೆಯವರ ತಂದೆಯ ಒಪ್ಪಿಗೆಯಿಲ್ಲದೆ ಅವರನ್ನು ಪ್ರೇಮ ವಿವಾಹವಾಡಿದರು. ನಂತರ ೧೯೨೮ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ದಕ್ಷಿಣ ಫೆಲೋಶಿಪ್ ಪಡೆದುಕೊಂಡು 'ಜಿ.ಎಸ್ ಘೂರಿಯೆ'ಯವರ ನೆರವಿನಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.ಅವರು ಚಿಟ್ಟ ಪವನ್ ಬ್ರಾಹ್ಮಣಯೆಂಬುವ ವಿಶಯದ ಮೇಲೆಯೇ ತಮ್ಮ ಅಧ್ಯಯನವನ್ನು ಮುಗಿಸಿದರು.

ವೃತ್ತಿ:

೧೯೩೧ರಿಂದ ೧೯೩೬ವರೆಗೂ ಇವರು ಪೂನೆಯ ಸ್.ನ್.ಡೀ.ಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಿರ್ವಾಹಕರಾಗಿದ್ದರು.೧೯೩೯ರಿಂದ ಕೊನೆಯವರೆಗೂ ಇವರು ಪೂಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಓದುಗಾರರಾಗಿ ಕಾರ್ಯ ನಿರ್ವಹಿಸಿದರು.

ನಂದಿನಿ ಸುಂದರ್ ರವರ ಪ್ರಕಾರ ಕಾರ್ವೆಯವರು ಭಾರತದಲ್ಲಿಯೇ ಮೊದಲ ಸ್ತ್ರೀ ಮಾನವಶಾಸ್ತ್ರಜ್ಞರು ಹಾಗೂ ಇವರು ಮಾನವಶಾಸ್ತ್ರ, ಆಂಥ್ರೋಪೊಮೆಟ್ರಿ , ಸೀರಮ್ ಶಾಸ್ತ್ರ ,ಪ್ರಾಗ್ಜೀವ ಮತ್ತು ಇಂಡಾಲಜಿಯಲ್ಲಿ ವಿಶೇಷವಾದ ಅಭಿರುಚಿಗಳನ್ನು ಹೊಂದಿದರು.ಅದಲ್ಲದೇ ಅವರು ಜನಪದ ಗೇತೆಗಳನ್ನು ಸಂಗ್ರಹಿಸುತ್ತಿದ್ದರು ಹಾಗೂ ಇವರು ವಿಶೆಷವಾಗಿ ವಿಸರಣವಾದಿಯಾಗಿ , ಚಿಂತನೆಯ ಬೌದ್ಧಿಕ ಶಾಲೆಗಳ ಸ್ಫೂರ್ತಿ ಕಲ್ಪನೆಯಾಗಿದ್ದಾರೆ. ಈ ಪ್ರಭಾವಗಳು ಶಾಸ್ತ್ರೀಯ ಇಂಡಾಲಜಿ , ಜನಾಂಗಶಾಸ್ತ್ರ ಮುಂತಾದವನ್ನು ಒಳಗೊಂಡಿವೆ, ಅದರ ಜೊತೆಗೆ ಕ್ಷೇತ್ರ ಕಾರ್ಯದಲ್ಲಿ ಸಹಜ ಆಸಕ್ತಿಗೊಂಡಿದರು.ಸುಂದರವರ  ಟಿಪ್ಪಣಿಯ ಪ್ರಕಾರ " ಸುಮಾರು ೧೯೬೮ರಿಂದ ಸಾಮಾಜಿಕ ಮ್ಯಾಪಿಂಗ್ ಹಾಗು "ಆಂಥ್ರೋಪೊಮೆಟ್ರಿ(ಮಾನವ ಮಾಪನ) ಆಧಾರದ ಮೇಲೆ ಉಪಜಾತಿಯ ' ಮಾಹಿತಿಯದ ಮೇಲೆ ಇವರು ದೃಢವಾಗಿ ನಂಬಿದರು ,ನಂತರ ಕಾಲದಲ್ಲಿ ಇದು ತಾಯಿಯ ಆನುವಂಶಿಕ (ರಕ್ತದ ಗುಂಪು ಬಣ್ಣಗಳ ದೃಷ್ಟಿಯನ್ನು , ಕೈ ಕ್ಲಾಸ್ಪಿಂಗ್ , ಮತ್ತು ಹೈಪರ್ಟ್ರಿಕೋಸಿಸ್ ) ಎಂದು ಹೆಸರಿಸಲಾಗಿತ್ತು. ಇವರು ಪೂನೆಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿದರು.

ಕಾರ್ವೆಯವರು ಪುಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.೧೯೪೭ರಲ್ಲಿ ಹೊಸ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಮಾನವಶಾಸ್ತ್ರ ವಿಭಾಗದ ಪರವಾಗಿ ಅಧ್ಯಕ್ಷತೆಯನ್ನು ವಹಿಸಿದರು.ಅದನ್ನು ಮರಾಠಿ ಹಾಗು ಆಂಗ್ಲದಲ್ಲಿ ಅನುವಾದಿಸಿದರು.

 ಸುಂದರ್ ರವರ ದೃಷ್ಟಿಯಲ್ಲಿ ಕಾರ್ವೆಯವರು ಮಹಾರಾಷ್ಟ್ರದಲ್ಲಿ ಪ್ರಸಿದ್ಧತೆಯನ್ನು ಹೊಂದಿದ್ದರೂ ಸಹ ತಮ್ಮ ವಿವಿಧ ವಿಭಾಗಳಲ್ಲಿ ಶಾಶ್ವತ ಪರಿಣಾಮವನ್ನು ಕಾಣಲು ಸಾಧ್ಯವಾಗಲಿಲ್ಲ.