ಸದಸ್ಯ:Kavan.cariappa.0560/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಲನಚಿತ್ರದ ಪಾತ್ರಗಳು[ಬದಲಾಯಿಸಿ]

ಅಂಜದ ಗಂಡು ಚಿತ್ರದಲ್ಲಿ ಪಾತ್ರಧಾರಿಗಳಾಗಿ ವಿ.ರವಿಚಂದ್ರನ್ , ಖುಷ್ಬು , ತೂಗುದೀಪ ಶ್ರೀನಿವಾಸ್ , ದೊಡ್ಡಣ್ಣ , ಮುಖ್ಯ ಮಂತ್ರಿ ಚಂದ್ರು , ದೇವರಾಜ್ , ಉಮಾ ಶ್ರೀ , ಶ್ರೀನಿವಾಸ್ ಮೂರ್ತಿ , ಅರವಿಂದ್ , ಮಾಸ್ಟರ್ ಮಂಜುನಾಥ , ಬೇಬಿ ಇಂದ್ರ ಅಭಿನಯಿಸಿದ್ದಾರೆ.ರವಿಚಂದ್ರನ್ ಈ ಚಿತ್ರದಲ್ಲಿ ಶ್ರೀ ಮಂತ ವ್ಯಾಪಾರಿಯ ಮಗನಾಗಿದ್ದು . ಯಾವಾಗಲೂ ಹಣವನ್ನು ಅನೇಕ ರೀತಿಗಳಲ್ಲಿ ದುಂದುವೆಚ್ಚ ಮಾಡುತ್ತಿರುತ್ತಾನೆ . ತಂದೆಯ ಹಣವನ್ನು ಜವಾಬ್ದಾರಿಯಿಲ್ಲದೆ ಖರ್ಚು ಮಾಡುತ್ತಿರುತ್ತಾನೆ. ಆದರೆ ಚಿತ್ರದಲ್ಲಿ ನಾಯಕನಟನಿಗೆ ಬಡವರ ಬಗ್ಗೆ ಕಾಳಜಿಯಿರುತ್ತದೆ . ಯಾವಾಗ ಒಬ್ಬಾತ ಎಳನೀರಿನ ವ್ಯಾಪಾರಿಗೆ ಎಳನೀರು ಕುಡಿದ ಹಣವನ್ನು ಕೊಡಲು ನಿರಾಕರಿಸುತ್ತಾನೋ ಆತನ ಕಾರಿನ ಕಿಡಕಿಗಳನ್ನು ಒಡೆದುಹಾಕುತ್ತಾನೆ.ಅದೇ ರೀತಿಯಲ್ಲಿ ಕ್ಲಬ್ಬಿನಲ್ಲಿ ಪುಂಡುಪೋಕರಿಗಳ ಗುಂಪು , ಕ್ಲಬ್ಬಿನ ಮಾಣಿಯ ಜತೆ ದುರ್ ವ್ಯವಹಾರವನ್ನು ನಡೆಸಿದಾಗ, ಅವರನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ . ಹೀಗೆ ಹೊಡೆಯಬೇಕಾದರೆ "ನಾಯಕನಟರು" ಎಲ್ಲಾ ಪೀಸ್ ಪೀಸ್ ಎಂದು ಹೇಳುತ್ತಲೇ ಇರುತ್ತಾರೆ.ಮಗನ ಇಂತಹ ವ್ಯವಹಾರ ನಡವಳಿಕೆಯಿಂದ ಸ್ರೀ ಮಂತ ತಂದೆಯು ಸಿಟ್ಟಾಗುತ್ತಾನೆ. ಮಗನಿಗೆ ಬುದ್ದಿಯನ್ನು ಕಲಿಸಲು , ಮಗನನ್ನು ತಂದೆಯು ತಾವರೆಕೆರೆ ಎಂಬ ಹಳ್ಳಿಯಲ್ಲಿರುವ ತನ್ನ ಬಾಲ್ಯ ಸ್ನೇಹಿತ ರುದ್ರಪ್ಪನ ಮನೆಗೆ ಒಂದು ಪತ್ರದೊಂದಿಗೆ ಕಳುಹಿಸುತ್ತಾನೆ. thumb|ರವಿಚಂದ್ರನ್


ಕತೆ[ಬದಲಾಯಿಸಿ]

ಆ ಪತ್ರವು ನಾಯಕನಟನು ಸ್ರೀ ಮಂತನ ಮಗನಿಂದು ಬಹಿರಂಗ ಪಡಿಸುವುದಿಲ್ಲ ಅದರ ಬದಲಾಗಿ ಹುಡುಗನಿಗೆ ಒಂದು ಕೆಲಸದ ಅಗತ್ಯವಿದ್ದು ಒಂದು ವರ್ಷದ್ ಕಾಲ ಆತನಿಗೆ ತಮ್ಮ ಮಾರ್ಗದರ್ಶನದ, ದೈನಂದಿನ ಮನೆಗೆಲಸವನ್ನು ಹೇಳಿಕೊಡಬೇಕು ಎಂದು ತಿಳಿಸುತ್ತದೆ. ರುದ್ರಪ್ಪನವರು ಅದಕ್ಕೂ ಮುಂಚೆ ಸೈನ್ಯದಲ್ಲಿದ್ದರು.ಚಿತ್ರದ ಖಳನಟರಾಗಿ ದೊಡ್ಡಣ್ಣ ಮತ್ತು ಮುಖ್ಯಮಂತ್ರಿ ಚಂದ್ರು ಅಬಿನಯಿಸಿದ್ದು, ಯಾವಾಗಲೂ ಬಡವರ ಜಮೀನನ್ನು ಪಡೆಯಲು ಪ್ರಯತ್ನಿಸುತ್ತಾರೆಚಿತ್ರದ ನಾಯಕಿ ಖುಷ್ಬು ಮುಖ್ಯಮಂತ್ರಿ ಚಂದ್ರುವಿನ ಮಗಳಾಗಿದ್ದು ಶ್ರೀ ಮಂತಿಕೆಯ ಮದದಿಂದ ದುರಹಂಕಾರಿಯಾಗಿರುತ್ತಾಳೆ.ಇಂತಹ ಜನರೊಂದಿಗೆ ನಾಯಕನಟನು ಯಾವ ರೀತಿಯಲ್ಲಿ ವ್ಯವಹರಿಸುತ್ತಾನೆ , ಅದೆ ರೀತಿಯಲ್ಲಿ ಯಾವ ರೀತಿ ಎಲ್ಲರ ಹೃದಯವನ್ನು ಪ್ರೀತಿಯನ್ನು ಗೆಲ್ಲುತ್ತಾನೆ ಎಂಬುದು ಚಿತ್ರದ ಕಥೆಯಲ್ಲಿದೆ.ಅಂಜದ ಗಂಡು ಭಾರತೀಯ ಕನ್ನಡ ಸಿನಿಮಾವಾಗಿದ್ದು ೧೯೮೮ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಾಯಕ ನಟ ನಾಯಕನಟಿಯರಾಗಿ ರವಿಚಂದ್ರನ್ ಮತ್ತು ಖುಷ್ಬು ಅಭಿನಯಿಸಿದ್ದಾರೆ ಈ ಚಿತ್ರದ ನಿರ್ದೇಶಕರು ರೇಂಉಕಾ ಶರ್ಮಾ.ಈ ಚಿತ್ರದ ಮೂಲವು ತಮಿಳಿನ ತಂಬಿಕ್ಕು ಎಮ್ತ ಒರು ಆಗಿದ್ದು . ಆ ಚಿತ್ರದಲ್ಲಿ ರಜನಿ ಕಾಂತ್ ಮತ್ತು ಮಾಧವಿ ಅಭಿನಯಿಸಿದ್ದಾರೆ.[೧]

ಸಂಗೀತ ನಿರ್ದೇಶನ[ಬದಲಾಯಿಸಿ]

ಈ ಚಿತ್ರಕ್ಕೆ ಆ ಕಾಲದ ಅತ್ಯುತ್ತಮ ಸಂಗೀತ ನಿರ್ದೇಶಕ ಹಂಸಲೇಖ ಅವರು ನೆನಪಿನಲ್ಲಿ ಉಳಿಯುವಂತಹ ಅತ್ಯುತ್ತಮ ಸಂಗೀತವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಸಂಗೀತವನ್ನು ಹಂಸಲೇಖ ಅವರು ನಿರ್ದೇಶಿಸಿದ್ದಾರೆ. ಗೀತೆಗಳಿಗೆ ಸಾಹಿತ್ಯವನ್ನು ಅವರು ಬರೆದಿದ್ದಾರೆ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ . ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡನ್ನು ಆರ್ ಎನ್ ಜಯಗೋಪಾಲ್ ಬರೆದಿದ್ದು ಎಸ್ ಪಿ ಬಾಲಸುಬ್ರಮಣ್ಯಂ ಮಂಜುಳಾ ಗುರುರಾಜ್ ಹಾಡಿದ್ದಾರೆ. "ಏಕೇ ಹೀಗಾಯ್ತು" ಹಾಡನ್ನು ಆರ್.ಎನ್. ಜಯಗೋಪಾಲ್ ಬರೆದಿದ್ದಾರೆ. ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಬಿ.ಆರ್.ಎನ್.ಛಾಯ ಹಾಡಿದ್ದಾರೆ.ಆಕಾರದಲ್ಲಿ ಗುಲಾಬಿ ರಂಗಿದೆ ಹಾಡನ್ನು ವಿ.ಮನೋಹರ್ ಬರೆದ್ದಿದ್ದು . ಲತಾ ಹಂಸಲೆಖ ಹಾಡಿದ್ದಾರೆ . ಮೂರು ಕಾಸಿನ ಕುದುರೆ ಹಾಡನ್ನು ಹಂಸಲೇಖ ಬರೆದಿದ್ದು ರಮೇಶ್ ಹಾಡಿದ್ದಾರೆ .ಡುಮ್ ಡುಮ್ ಡೋಲ್ ಹಾಡನ್ನು ಹಂಸಲೇಖ ಅವರು ಬರೆದಿದ್ದು . ಎಸ್.ಪಿ.ಬಿ ಮತ್ತು ಛಾಯ ಹಾಡಿದ್ದಾರೆ . ಮೊದಲ ಬಾರಿ ಹಾಡನ್ನು ಆರ್.ಎನ್.ಜಯಗೋಪಾಲ್ ಬರೆದಿದ್ದು ಎಸ್.ಪಿ.ಬಿ ಮತ್ತು ಮಂಜುಳ ಗುರುರಾಜ್ ಹಾಡಿದ್ದಾರೆ.ನೀಲಿ ಬಾನಲಿ ಹಾಡನ್ನು ಆರ್.ಎನ್.ಜಯಗೋಪಾಲ್ ಬರೆದಿದ್ದು ಬಿ.ಆರ್.ಛಾಯ ಹಾಡಿದ್ದಾರೆ.[೨]

ಹಂಸಲೇಖ


<ಉಲ್ಲೇಖನಗಳು>

  1. http://www.kannadaprabha.com/cinema/news/after-28-years-kannada-cinema-anjada-gandu-relese-again/285965.html
  2. http://www.filmibeat.com/kannada/movies/anjada-gandu-1988.html