ಸದಸ್ಯ:Kasimgmohammedatgl/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗಾಲದ ನ್ಯಾನೊಟ್ಯೂಬ್‌‌ ಗಳು  

ಇಂಗಾಲದ ನ್ಯಾನೊಟ್ಯೂಬ್‌‌ ಗಳು  ಇಂಗಾಲದ ಭಿನ್ನರೂಪವಾಗಿವೆ. ಅವು ಉರುಳೆಯಾಕಾರದ ಅತಿಸೂಕ್ಷ್ಮ ರಚನೆಯನ್ನು (ನ್ಯಾನೊಸ್ಟ್ರಕ್ಚರ್‌) ಹೊಂದಿವೆ. ಉದ್ದ ಮತ್ತು ವ್ಯಾಸವನ್ನು 28,000,000:1ರ ನಿಷ್ಪತ್ತಿಯಲ್ಲಿರಿಸಿಕೊಂಡು ಈ ನ್ಯಾನೊಟ್ಯೂಬ್‌‌ಗಳನ್ನು ರಚಿಸಲಾಗಿವೆ. ಹಾಗಾಗಿ, ಇದು ಯಾವುದೇ ವಸ್ತುವಿಗಿಂತಲೂ ಗಮನಾರ್ಹವಾಗಿ ದೊಡ್ಡದಾಗಿದೆ. ಈ ಉರುಳೆಯಾಕಾರದ ಇಂಗಾಲ ಅಣುಗಳು ಹೊಸ ತೆರನಾದ ಗುಣಲಕ್ಷಣಗಳನ್ನು ಹೊಂದಿವೆ. ಇದರಿಂದಾಗಿ, ಅತಿಸೂಕ್ಷ್ಮತಂತ್ರಜ್ಞಾನ (ನ್ಯಾನೊಟೆಕ್ನಾಲಜಿ), ವಿದ್ಯುನ್ಮಾನ (ಇಲೆಕ್ಟ್ರಾನಿಕ್ಸ್‌), ದೃಗ್ವಿಜ್ಞಾನ (ಆಪ್ಟಿಕ್ಸ್‌) ಮಾತ್ರವೇ ಅಲ್ಲದೇ, ವಸ್ತು ವಿಜ್ಞಾನ (ಮೆಟೀರಿಯಲ್ಸ್‌ ಸೈನ್ಸ್‌) ಹಾಗೂ ವಾಸ್ತುಶಿಲ್ಪೀಯ ಕ್ಷೇತ್ರಗಳ ಇತರ ಅನ್ವಯಿಕೆಗಳಲ್ಲಿಯೂ ಇವು ಉಪಯುಕ್ತವಾಗಿವೆ. ಅವು ಅಸಾಮಾನ್ಯ ದೃಢತೆ ಹಾಗೂ ಅನನ್ಯ ವಿದ್ಯುತ್‌ ಲಕ್ಷಣಗಳನ್ನು ಹೊಂದಿವೆ. ಅವು ಸಮರ್ಥ ಉಷ್ಣವಾಹಕಗಳೂ ಹೌದು. ಆದರೂ, ರಾಸಾಯನಿಕ ಕ್ರಿಯೆಗೆ ಅಥವಾ ರಾಸಾಯನಿಕ ಸಂಸ್ಕರಣೆಗೆ ಪ್ರತಿಯಾಗಿರುವ ಅವುಗಳ ಗುಣಲಕ್ಷಣದ ಬದಲಾವಣೆಗಳ ನಿಯಂತ್ರಿಸುವಿಕೆ ಮತ್ತು ಅವುಗಳ ಸಂಭಾವ್ಯ ವಿಷತ್ವದ ಕಾರಣದಿಂದಾಗಿ, ಅವುಗಳ ಅಂತಿಮ ಬಳಕೆಯು ಸೀಮಿತವಾಗಿರಬಹುದು. ನ್ಯಾನೊಟ್ಯೂಬ್‌‌ಗಳು ಫುಲ್ಲೆರೀನ್‌‌‌ ರಚನೆಯ ಗುಂಪಿಗೆ ಸೇರಿವೆ. ಗೋಲಾಕಾರದ ಬಕಿಬಾಲ್‌ಗಳು ಸಹ ಇದೇ ಗುಂಪಿಗೆ ಸೇರಿವೆ. ನ್ಯಾನೊಟ್ಯೂಬ್‌‌ನ ತುದಿಗಳನ್ನು ಬಕಿಬಾಲ್‌ನ ಅರ್ಧಗೋಲಾಕಾರದ ಒಂದು ರಚನೆಯೊಂದಿಗೆ ಮುಚ್ಚಬಹುದಾಗಿದೆ. ಈ ನಾಳಗಳು ತಮ್ಮ ಗಾತ್ರ ಲಕ್ಷಣಗಳಿಂದ ಈ ಹೆಸರು ಪಡೆದಿವೆ; ಏಕೆಂದರೆ ನ್ಯಾನೊಟ್ಯೂಬ್‌‌‌ನ ವ್ಯಾಸವು ಕೆಲವು ನ್ಯಾನೊಮೀಟರ್‌ಗಳಷ್ಟಿವೆ (ಮಾನವ ಕೂದಲಿನ ಸುಮಾರು 1/50,000ರಷ್ಟು ಅಗಲ). 2008ರ ಅಧ್ಯಯನಗಳ ಪ್ರಕಾರ ನ್ಯಾನೊಟ್ಯೂಬ್‌‌ಗಳು ಹಲವು ಮಿಲಿಮೀಟರ್‌ಗಳಷ್ಟು ಉದ್ದವಿರಬಹುದು. ನ್ಯಾನೊಟ್ಯೂಬ್‌‌ಗಳನ್ನು ಒಂದೇ ಗೋಡೆಯುಳ್ಳ ನ್ಯಾನೊಟ್ಯೂಬ್‌‌ಗಳು ಮತ್ತು ಹಲವು ಗೋಡೆಗಳುಳ್ಳ ನ್ಯಾನೊಟ್ಯೂಬ್‌ಗಳು ಗಳು ಎಂದು ವರ್ಗೀಕರಿಸಲಾಗಿದೆ. ಆನ್ವಯಿಕ ಕ್ವಾಂಟಮ್‌ ರಸಾಯನ ವಿಜ್ಞಾನ, ಅದರಲ್ಲೂ ವಿಶಿಷ್ಟವಾಗಿ ಕಕ್ಷಕ ಸಂಕರೀಕರಣದ (ಆರ್ಬಿಟಲ್‌ ಹೈಬ್ರಿಡೈಸೆಷನ್‌) ಮೂಲಕ ನ್ಯಾನೊಟ್ಯೂಬ್‌‌ ಒಂದರ ಬಂಧಕ ಲಕ್ಷಣವನ್ನು ವಿವರಿಸಲಾಗಿದೆ. ಗ್ರ್ಯಾಫೈಟ್‌ನಂತೆಯೇ ಇರುವ ನ್ಯಾನೊಟ್ಯೂಬ್‌‌ಗಳ ರಾಸಾಯನಿಕ ಬಂಧನವು ಇಡಿಯಾಗಿ  ಬಂಧಗಳನ್ನು ಹೊಂದಿದೆ. ವಜ್ರಗಳಲ್ಲಿನ  ಬಂಧಗಳಿಗಿಂತಲೂ ದೃಢವಾಗಿರುವ ನ್ಯಾನೊಟ್ಯೂಬ್‌‌ ಬಂಧಕ ರಚನೆಯು, ಅಣುಗಳಿಗೆ ತಮ್ಮ ಅಪೂರ್ವ ಶಕ್ತಿ ನೀಡುತ್ತದೆ. ವ್ಯಾನ್‌ ಡರ್‌ ವಾಲ್ಸ್‌ ಬಲಗಳಿಂದ ಕಟ್ಟಲ್ಪಟ್ಟಿರುವ "ಹಗ್ಗಗಳಂತೆ" ನ್ಯಾನೊಟ್ಯೂಬ್‌‌ಗಳು ಸ್ವಾಭಾವಿಕವಾಗಿ ತಮಗೆತಾವೇ ಜೋಡಿಸಿಕೊಳ್ಳುತ್ತವೆ.