ವಿಷಯಕ್ಕೆ ಹೋಗು

ಸದಸ್ಯ:Jibi baby/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಣ್ಣು ನಿರ್ಮಾಣದ ಅಂಶಗಳು

[ಬದಲಾಯಿಸಿ]

ಮಣ್ಣು ನಿರ್ಮಾಣ ಅಥವಾ ಪೆಡೊಜೆನೆಸಿಸ್ ಎನ್ನುವುದು, ಮೂಲ ಬಂಡೆಗಳ ಮೇಲೆ ಉಂಟಾಗುವ,ಭೌತಿಕ , ರಾಸಾಯನಿಕ, ಜೈವಿಕ ಮತ್ತು ಮಾನವಸಂಬಂಧ ಕ್ರಿಯೆಗಳಿಂದಾದ ಪರಿಣಾಮ. ಮಣ್ಣು ನಿರ್ಮಾಣವು ವಿವಿಧ ಪದರಗಳ ರಚನೆ ಅಥವಾ ಮಣ್ಣಿನ ಪಾರ್ಶ್ವ ರೂಪ ಹೊರಹೊಮ್ಮುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ಕ್ರಿಯೆಯು ಮಣ್ಣಿನ ಸಂಯುಕ್ತಗಳ ಸೇರುವಿಕೆ, ತಿಳಿಗೊಳಿಸುವಿಕೆ, ಬದಲಾವಣೆ ಹಾಗು ಸ್ಥಳಾಂತರ ಗೊಳ್ಳುವಿಕೆಯನ್ನು ಒಳಗೊಂಡಿರುತ್ತದೆ. ಮೂಲ ಬಂಡೆಗಳಿಂದ ಉದುರಿದ ಖನಿಜಗಳು ರೂಪಾಂತರಗೊಳ್ಳುತ್ತವೆ, ಇದರಿಂದ ರೂಪಾಂತರಗೊಂಡ ಖನಿಜಗಳು ಹಾಗು ನಿಧಾನಗತಿಯಲ್ಲಿ ನೀರಿನಲ್ಲಿ ಕರಗುವ ಇತರೆ ಸಮುಕ್ತಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೀರಿನಿಂದಲೋ ಅಥವಾ ಪ್ರಾಣಿಗಳ ಕ್ರಿಯೆಯಿಂದಲೋ ಸ್ಥಳಾಂತರಗೊಳ್ಳುತ್ತವೆ. ಮಣ್ಣಿನಲ್ಲಿ ಉಂಟಾಗುವ ಈ ಬದಲಾವಣೆ ಹಾಗು ಕಣಗಳ ಸ್ಥಳಾಂತರಗೊಳ್ಳುವಿಕೆಯು ಮಣ್ಣಿನ ನಿರ್ದಿಷ್ಟ ಪಾರ್ಶ್ವ ರೂಪಕ್ಕೆ ನಾಂದಿಯಾಗುತ್ತದೆ. ಮೂಲ ಬಂಡೆಯಿಂದ ಉದುರಿದ ವಸ್ತುವೇ ಮಣ್ಣು ರಚನೆಯ ಮೂಲ ಸಾಮಗ್ರಿ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಉಷ್ಣಪ್ರದೆಶದಲ್ಲಿ ಬಂಡೆಯ ಮೇಲೆ ಲಾವಾರಸವು ಹರಿದು ಹೋಗಿ ನಂತರ ಎಡೆಬಿಡದೆ ಭಾರೀ ಮಳೆಯಾಗುವುದು. ಈ ಹವಾಗುಣದಲ್ಲಿ ತಂಪಾದ ಖನಿಜಯುಕ್ತ ಲಾವಾದ ಮೇಲೆ ಸಾವಯವ ಅಂಶಗಳು ಕಡಿಮೆ ಇದ್ದರೂ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ. ಪೋಷಕಾಂಶಯುಕ್ತ ನೀರು ಇರುವ ಕಲ್ಲು ರಂದ್ರಗಳಲ್ಲಿ, ಉದಾಹರಣೆಗೆ ನೀರಿನಲ್ಲಿ ಕರಗಿರುವ ಖನಿಜಗಳು ಮತ್ತು ಪಕ್ಷಿಗಳ ಮಲದಿಂದಾದ ಗೊಬ್ಬರಸಸ್ಯಗಳು ಹುಲುಸಾಗಿ ಬೆಳೆಯುತ್ತವೆ. ಬೆಳೆಯುತ್ತಿರುವ ಸಸ್ಯಗಳ ಬೇರಿನಲ್ಲಿ ಶಿಲೀಂದ್ರ ಅಣಬೆಗಳು, ಇರುತ್ತವೆ, ಇವು ಲಾವರಸದ ಕಣಗಳನ್ನು ಸಡಿಲಗೊಲಿಸುತ್ತವೆ, ಇದರಿಂದ ಸಾವಯವ ಪದಾರ್ಥಗಳು ಬೇಗ ಕೂಡಿಕೊಳ್ಳುತ್ತವೆ. ಈ ಪ್ರಕ್ರಿಯೆಗೂ ಮುನ್ನ ಲಾವರಸದ ಕಣಗಳಿಂದ ಬೆಳೆಯುವ ಸಸ್ಯಗಳಿಂದ, ಲಾವಾರಸದ ಕಣಗಳನ್ನು ಮಣ್ಣು ಎಂದೇ ಸೂಚಿಸಬಹುದು. ಈ ರೀತಿಯಾಗಿ ಮಣ್ಣಿನ ’ಜೀವನ’ ವೃತ್ತಾಂತವು ಮುಂದುವರಿಯಲು ಬದಲಾವಣೆಗೊಳ್ಳುವ ಹಾಗು ಒಂದಕ್ಕೊಂದು ಹೊಂದಿಕೊಂಡಿರುವ ಐದು ಪ್ರಮುಖ ಅಂಶಗಳು ಕಾರಣವಾಗುತ್ತವೆ ಅವುಗಳೆಂದರೆ, ಮೂಲವಸ್ತುಗಳು, ಸ್ಥಳೀಯ ಹವಾಗುಣ, ಮೇಲ್ಮೈ ಲಕ್ಷಣ, ಜೈವಿಕ ಸಾಮರ್ಥ್ಯ ಮತ್ತು ಸಮಯದ ಒಂದು ಭಾಗ.

ಮೂಲ ವಸ್ತು

[ಬದಲಾಯಿಸಿ]

ಯಾವ ವಸ್ತುವಿನಿಂದ ಮಣ್ಣು ಮಾರ್ಪಾಡುಗೊಳ್ಳುತ್ತದೋ ಅದೇ ಮೂಲ ವಸ್ತು.

ಇದು ಪ್ರಥಮವಾಗಿ ಮೂಲ ಬಂಡೆಯಿಂದ ಉದುರುವಿಕೆ, ದ್ವಿತೀಯವಾಗಿ ಬೇರೆ ಸ್ಥಳಗಳಿಂದ ಕಣಗಳ ಸಾಗಾಣಿಕೆ, ಉದಾಹರಣೆಗೆ ಮೆಕ್ಕಲು ಮಣ್ಣು ಮತ್ತು ನೆರೆಮಣ್ಣು;ಮಣ್ಣು ಈಗಾಗಲೇ ಇದ್ದು, ಯಾವುದೂ ಕಾರಣಗಳಿಂದ ರೂಪಾಂತರ ಗೊಂಡಿರುವುದು, ಎಂದರೆ - ಹಳೆಯ ಮಣ್ಣು ಬದಲಾವಣೆಗೊಳ್ಳುವಿಕೆ, ಸಾವಯಾಂಶಗಳನ್ನೊಳಗೊಂಡ -ಭೂಮಿಯಲ್ಲಿ ಕೊಳೆತ ಸಸ್ಯ ಮೂಲ ಇಂಧನ ಅಥವಾ ಅಲ್ಪಿನ್ ಮರದ ಎಲೆಗಳು ಕೊಳೆತು ಮಣ್ಣಿಗೆ ಸೇರಿರುವ ಗೊಬ್ಬರ; ಮತ್ತು ಮಾನವನಿಂದ ರೂಪುಗೊಂಡ ಪದಾರ್ಥಗಳಾದಂತಹನೆಲತುಂಬುವಿಕೆಅಥವಾ ಗಣಿತ್ಯಾಜ್ಯಗಳು. ಕೆಲವು ಮಣ್ಣುಗಳು ನೇರವಾಗಿ ಶಿಲೆಯ ಒಡೆಯುವಿಕೆಯಿಂದ ರೂಪುಗೊಳ್ಳುತ್ತವೆ. ಈ ರೀತಿಯ ಮಣ್ಣಿಗೆ "ಉಳಿದಿರುವ ಮಣ್ಣು" ಎನ್ನುವರು. ಇದರಲ್ಲಿರುವ ರಾಸಾಯನಿಕ ಹಾಗೂ ಮೂಲ ಬಂಡೆಯೂ ಒಂದೇ ಆಗಿರುತ್ತದೆ. ಬಹಳ ರೀತಿಯ ಮಣ್ಣು ಗಾಳಿಯಲ್ಲಿ, ನೀರಿನ ಮೂಲಕ ಅಥವಾ ಗುರುತ್ವಾಕರ್ಷಣೆಗಳಿಂದ ಪರಸ್ಥಳ ಗಳಿಂದ ಆಮದಾಗಿರುತ್ತದೆ . ಕೆಲವು ಸಾರಿ ಈ ರೀತಿಯ ಚಲನೆಯು ಅನೇಕ ಮೈಲುಗಳದ್ದಾಗಿರುತ್ತದೆ ಅಥವಾ ಕೆಲವೇ ಅಡಿಗಳು. ಗಾಳಿಗೆ ತೂರುವ ಮಣ್ಣಿನ ಕಣಗಳನ್ನುಹಳದಿ ಮೆಕ್ಕಲು ಮಣ್ಣು ಎನ್ನುವರು, ಇದು ಸಾಮಾನ್ಯವಾಗಿ ಉತ್ತರ ಅಮೆರಿಕಾದ ಮದ್ಯ ಪಶ್ಚಿಮ ಭಾಗಗಳಲ್ಲಿ ಹಾಗು ಮದ್ಯಏಷಿಯಾಗಳಲ್ಲಿ ಕಾಣಬಹುದು. ಹಿಮಶಿಲೆಗಳ ಕಣಗಳನ್ನು ಈಗಲೂ ಉತ್ತರ ಹಾಗು ದಕ್ಷಿಣ ಅಕ್ಷಾಂಶಗಳ ಮಣ್ಣಿನಲ್ಲಿ ಕಾಣಬಹುದು. ದೊಡ್ಡ ಬಂಡೆಗಳ, ಬೆಟ್ಟಗಳ ಹತ್ತಿರದಲ್ಲಿ ಈ ರೀತಿಯ ಹಿಮಶಿಲೆಗಳ ಜಾರುವಿಕೆಯನ್ನು ಕಾಣಬಹುದು. ಹಿಮಶಿಲೆಗಳು ಒಡೆದು ಸಣ್ಣ ಕಣಗಲಾಗುವುದು.ಈ ಕಣಗಳು ಬೇರೆ ಬೇರೆ ಅಳತೆಯ ಮಣ್ಣಾಗುವುದು. ಹಿಮಶಿಲೆಗಳು ಕರಗಿ ನೀರಾಗಿ ಹರಿದಾಗ, ನೀರಿನಲ್ಲಿರುವ ಕಣಗಳು ಎಲ್ಲೆಡೆಯೂ ಪಸರಿಸುವುದು. ಭೂಮಿಯ ಆಳ ಪದರುಗಳಲ್ಲಿ ಸಿಗುವ ಮಣ್ಣಿನ ಕಣಗಳಲ್ಲಿ, ಅವು ನೀರಿನಿಂದ ಅಥವಾ ಗಾಳಿ ಯಿಂದ ಶೇಖರಣೆಯಾದಾಗಿನಿಂದ ಯಾವುದೇ ಬದಲಾವಣೆಯನ್ನು ತೋರುವುದಿಲ್ಲ.