ಸದಸ್ಯ:JOVITA153/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಣ್ಯ ರಕ್ಷಣೆ[ಬದಲಾಯಿಸಿ]

ದಟ್ಟವಾದ ಗಿಡ ಮರಗಳು ಪ್ರಾಣಿ ಪಕ್ಷಿಗಳು ಗಿರಿಝರಿಗಳು ಹೂವು ಹಣ್ಣುಗಳಿಂದ ಕೂಡಿರುವ ಪ್ರ ಪಂಚವೇ ಅರಣ್ಯ. ಅರಣ್ಯಗಳು ದೇಶದ ಹಾಗೂ ಜೀವಕೋಟಿಯ ಸಂಪತ್ತು ಮಾನವ ಜಗತ್ತಿನ ಉನ್ನತಿಗೆ ಪ್ರಾಣಿಜಗತ್ತಿನ ವಿಫಲತೆಗೆ ಅರಣ್ಯಗಳೇ ಕಾರಣ. ಅರಣ್ಯಗಳು ಸಂಪನ್ಮೂಲಗಳ ಆಗರವಾಗಿದೆ. ಕೈಗಾರಿಕೆಗೆ ಬೇಕಾಗುವ ಕಚ್ಚಾ ಪದಾರ್ಥಗಳ ಭಂಡಾರವಾಗಿದೆ. ಭೂಗ್ರಹದ ಶ್ವಾಸಕೋಶಗಳಂತಿರುವ ಇವು ವೈವಿಧ್ಯಮಯ ಜೀವಿಗಳ ವಿಕಾಸಕ್ಕೆ ಮೂಲ ಕೇಂದ್ರಗಳಾಗಿವೆ. ಜೀವಿಗಳ ಅಸ್ತಿತ್ವಕ್ಕೆ ಬೇಕಾದ ವಿಶಿಶ್ಟ ಪರಿಸರ ನಿರ್ಮಾಣ ಮಾಡುವುದರಲ್ಲಿ ಅರಣ್ಯ ಕೊಡುಗೆ ಅಪಾರ.ನಮಗೆ ಅತ್ಯಂತ ಉಪಕಾರಿಯಾಗುವ ಅರಣ್ಯಗಳನ್ನು ಮಾನವ ಕೃಷಿಗಾಗಿ, ಕೈಗಾರಿಕೆ, ಆಣೆಕಟ್ಟುಗಳ ನಿರ್ಮಾಣ, ಗಣಿಕೆಲಸ.ತೂಟಗಾರಿಕೆ, ಮರಮುಟ್ಟುಗಳ ಅಗತ್ಯ, ಕಳ್ಳ ಸಾಗಾಣಿಕೆ ಮತ್ತು ಹಣದಾಸೆಗಾಗಿ ಲೂಟಿಮಾಡುತಿದ್ದಾನೆ. ಇದರಿಂದಾಗಿ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಅರಣ್ಯಗಳು ನಾಶವಾಗಿದೆ. ಅರಣ್ಯಗಳು ಹೀಗೆ ನಾಶವಾಗುತ್ತಾ ಹೋದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಮಣ್ಣಿನ ಸವಕಳಿ ಹೆಚ್ಚಾಗುತ್ತದೆ ಆಹಾರ ಸರಪಳಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ ಹವಮಾನದಲ್ಲಿ ಏರುಪೇರು ಉಂಟಾಗುತ್ತದೆ ಭೂಮಿಯ ಉಷ್ಣಾಂಶ ಹೆಚ್ಚಾಗುತ್ತದೆ ಬೆಳೆಬೆಳೆಯಲು ಮಣ್ಣೂ ಇಲ್ಲ ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂತಹ ಪರಿಸ್ಥಿತಿ ಬರುವ ಮುನ್ನವೆ ಎಚ್ಚೆತ್ತುಕೊಂಡು ಅರಣ್ಯ ರಕ್ಷಣೆಗೆತೊಡಗುವುದು ಎಂದಿಗಿಂತಲೂ ಇಂದು ಅತೀ ಮಹತ್ವವಾಗಿದೆ. ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಸರಕಾರದೊಂದಿಗೆ ಸಹಕರಿಸಬೇಕು ಅರಣ್ಯ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು. ಅರಣ್ಯ ಲೂಟಿಮಾಡುವವರ ವಿರುದ್ಧ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಕಟ್ಟು ನಿಟ್ಟಾಗಿ ವ್ಯಾಪಕವಾಗಿ ಕಡ್ಡಯವಾಗಿ ಹಮ್ಮಿಕೊಳ್ಳಬೇಕು. ಮನೆ,ಶಾಲೆ,ಕಾರ್ಖಾನೆಗಳ ಸುತ್ತಮುತ್ತಾ ಮರಗಿಡಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಬೇಕು. ಕೃಷಿಭೂಮಿಯ ಅಂಚಿನಲ್ಲಿ ಸುತ್ತಮುತ್ತಲಿನ ಖಾಲಿಜಾಗಗಳಲ್ಲಿ ಮರಗಿಡಗಳನ್ನು ಬೆಳೆಸಬೇಕು. ನಾವು ಅರಣ್ಯಗಳನ್ನು ರಕ್ಷಿಸಿದರೆ ನಮನ್ನು ಅರಣ್ಯ ರಕ್ಷಿಸುತ್ತದೆ. ಅರಣ್ಯ ರಕ್ಷಣೆ ಮಹತ್ವವೆಂದರೆ ಅರಣ್ಯದಿಂದ ಮಳೆ,ಮಳೆಯಿಂದಬೆಳೆ,ಬೆಳೆಯಿಂದ ನಮಗೆಲ್ಲ ಆಹಾರ ಸಿಗುತ್ತದೆ ಆದ್ದರಿಂದ ಅರಣ್ಯ ರಕ್ಷಣೆ ನಮ್ಮೆಲ್ಲರ ಹೋಣೆಯಾಗಬೇಕು.