ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:JOVITA153/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರದಕ್ಷಿಣೆಯ ಪಿಡುಗು

[ಬದಲಾಯಿಸಿ]

ಭಾರತವು ಹಳ್ಳಿಗಳ ನಾಡು ಮೂಢ ನಂಬಿಕೆಗಳ ಆಗರ ಆದ್ದರಿಂದ ಕನ್ಯಾದಾನ ಮಾದಬೇಕಾದರೆ ವರನಿಗೆ ಹಣನೀಡಿದರೆ ಹೆಚ್ಚಿನ ಪುಣ್ಯ ಬರುತ್ತದೆ ಎಂದು ನಂಬಿ ಹಣನೀಡುವ ಪದ್ಧತಿ ಜಾರಿಗೆ ತಂದರು ಇದೇ ನೀಡುವಹಣ ಅಥವಾ ವರದಕ್ಷಿಣೆ ಇಷ್ಟೇ ಎಂಬ ನಿಯಮ ಇಲ್ಲ ವರನ ಅಂತಸ್ತಿಗನುಗುಣವಾಗಿ ವರದಕ್ಷಿಣೆ ಹೆಚ್ಚಾಗುತ್ತಾ ಸಾಗುತ್ತಿದೆ. ಒಂದೇ ವರ್ಗಕ್ಕೆ ವರದಕ್ಷಿಣೆ ಸೀಮಿತವಾಗಿಲ್ಲ ಬರುಬರುತ್ತಾ ಎಲ್ಲಾವರ್ಗಗಳಿಗೂ ವರದಕ್ಷಿಣೆಯ ಹಾವಳಿ ಹಾಬ್ಬತೊಡಗಿತು. ಮೊದಲು ಶ್ರೀಮಂತ ವರ್ಗಕ್ಕೆ ಸೀಮಿತವಾಗಿದ್ದ ವರದಕ್ಷಿಣೆ ಶ್ರೀಮಂತರನ್ನೇ ಹಿಂಡತೊಡಗಿದೆ. ಜಮೀನುದಾರರು ವೈಭವದಿಂದ ಮದುಎ ಆಚರಿಸುವ ಹೆಚ್ಚಿನ ವರದಕ್ಷಿಣೆ ನೀಡುತ್ತಿದ್ದರು. ಆದರೆ ಕಾಯ್ದೆಗೆ ಅನುಗುಣವಾಗಿ ಅವರ ಜಮೀನೆಲ್ಲ ಸರಕಾರದ ಪಾಲಾದಾಗ ಅವರಿಗೆ ವೈಭವದ ಮದುವೆ ಮಾಡುವ ವರದಕ್ಷಿಣೆ ನೀಡುವ ಚೈತನ್ಯವಿಲ್ಲದಾಯಿತು. ಇದರಿಂದ ಬೆಳೆದ ಹೆಣ್ಣುಮಕ್ಕಳು ಮನೆಯಲ್ಲಿ ಕೂರುವಂತೆ ಆಗಿದೆ. ವ್ಯಾಪಾರಸ್ಥರು ರಾಜಕಾರಣಿಗಳು ತಮ್ಮ ಕಪ್ಪು ಹಣದ ಉಪಯೋಗ ಮದುವೆಯಲ್ಲಿ ಮಾಡುತ್ತಾರೆ. ಪ್ರೇಮವಿವಾಹ ಅಂತರ್ಜಾತಿ ವಿವಾಹಗಳು ಆಗುತ್ತವೆ. ಇದರಿಂದ ವರದಕ್ಷಿಣೆ ನೀಡುವುದರಿಂದ ಪ್ರಾಮಾಣಿಕ ಕೆಳವರ್ಗದ ಜನರಿಗೆ ವರದಕ್ಷಿಣೆ ಭೂತವಾಗಿ ಕಾಡುತ್ತಿದೆ. ಸಾಲ ಮಾಡಿ ಮದುವೆ ಮಾಡಿ ನಿರ್ಗತಿಕರಾಗಿದ್ದಾರೆ. ಹೆಣ್ಣು ಮಕ್ಕಳಿಗೆ ತಡವಾಗಿ ಮದುವೆಯಾಗಲು ವರದಕ್ಷಿಣೆಯೇ ಕಾರಣ ವರದಕ್ಷಿಣೆ ನೀಡದಿದ್ದರೆ ಕನ್ಯೆಗಳ ಪ್ರಾಣಹರಣವಾಗುತ್ತದೆ. ಬೆಳೆದ ಹೆಣ್ಣುಗಳು ವರದಕ್ಷಿಣೆಯ ಕಾರಣಕ್ಕಾಗಿ ತಮ್ಮ ಮದುವೆಯ ಬಗ್ಗೆ ಮಾನಸಿಕವಾಗಿ ಹಿಂಸೆಪಡುತ್ತಾರೆ ಪ್ರೆಮವಿವಾಹ ಅಂತರ್ ಜಾತೀವಿವಾಹಗಳು ಆಗುತ್ತವೆ. ಇದರಿಂದ ಸಮಾಜದ ದುರ್ಗತಿಯಾಗುವುದು. ಸಮಾಜದ ಪರಿಸ್ಥಿತಿ ಇದರಿಂದ ಹದಗೆಡುತ್ತದೆ. ಜನರು ದುರ್ಮಾರ್ಗಿಗಳಾಗಲು ವರದಕ್ಷಿಣೆ ಪಿಡುಗು ಕಾರಣೀಭೂತವಾಗಿದೆ.. ತರುಣ ಜನಾಂಗದವರೆಲ್ಲಾ ಮದುವೆಯಾಗುವ ವರದಕ್ಷಿಣೆ ತೆಗೆದುಕೊಂಡು ತಮ್ಮನ್ನು ಮಾರಿಕೊಳ್ಳುವುದನ್ನು ತೊರೆದಾಗಲೇ ಈ ಹಾವಳಿ ತಪ್ಪುವುದು. ಸರಕಾರ ಹೆಣ್ಣುಮಕ್ಕಳ ಜೀವನ ಉಳಿಸಲು ನೆರವಾದರೆ ವರದಕ್ಷಿಣೆ ಪಿಡುಗು ನಿಲ್ಲುವುದು.