ಸದಸ್ಯ:Ishwaragouda Patil/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷೆ ಮನುಕುಲದ ಸೇತುಬಂಧ. ಭಾಷೆಯ ಮೂಲಕ ಮಾನವ ತನ್ನ ಸಂವಹನ ಕಾರ್ಯ ಈಡೇರಿಸಿಕೊಳ್ಳುತ್ತಾನೆ. ದೈನಂದಿನ ಬದುಕಿನಲ್ಲಿ ಇತರರೊಂದಿಗೆ ವ್ಯವಹರಿಸಲು ಒಂದು ಭಾಷೆ ಅತ್ಯಗತ್ಯ. ಹೀಗಿರುವಾಗ ಪ್ರತಿ ನೂರು ಕಿಲೋ ಮೀಟರ್ ಭೌಗೋಳಿಕ ಅಂತರದಲ್ಲಿ ಭಾಷಾ ಶೈಲಿ ಬದಲಾಗುತ್ತದೆ. ಭೌಗೋಳಿಕ ಅಂತರ ಹೆಚ್ಚಿದಂತೆಲ್ಲ ಭಾಷೆಯೂ ಬದಲಾಗುತ್ತದೆ.[೧] ರಾಜ್ಯಗಳ ಗಡಿಗಳನ್ನು ದಾಟಿದಂತೆಲ್ಲ ವೈವಿಧ್ಯಮಯ ಭಾಷೆ ಮತ್ತು ಭಾಷಾ ಶೈಲಿಗಳನ್ನು ಕಾಣಬಹುದು.

ಕೆಲವೊಮ್ಮೆ ಕಾರ್ಯನಿಮಿತ್ತ ಹೊರ ರಾಜ್ಯಕ್ಕೆ ಅಥವಾ ಹೊರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಭಾಷೆ ನಮಗೆ ತಿಳಿದಿರದಿದ್ದರೆ, ಅಂತಹ ಸಮಯದಲ್ಲಿ ಜೊತೆಗೊಬ್ಬ ಅನುವಾದಕರಿದ್ದರೆ ಅನುಕೂಲ. ಏಕೆಂದರೆ, ತಿಳಿಯದಿರುವ ಭಾಷೆಯೊಂದು ಸಂಪೂರ್ಣ ಅಸ್ತಿತ್ವದಲ್ಲಿರುವ ಪ್ರದೇಶದಲ್ಲಿ ಸಹಜ ಸಂವಹನ ಮುಖಾಂತರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಬರಬಹುದು.

ಮಾನವನ ಸಾಮಾಜಿಕ ಬದುಕಿನಲ್ಲಿರುವ ಪ್ರತಿ ಭಾಷೆಗೂ[೨] ತನ್ನದೇ ಆದ ಮಹತ್ವ ಹಾಗೂ ವಿದ್ವತ್ತಿದೆ. ಹೀಗಾಗಿ, ಕೆಲವೇ ಕೆಲವು ನುಡಿಗಳಲ್ಲಿ ಅಥವಾ ಶಬ್ಧಗಳಲ್ಲಿ ಪ್ರತಿಯೊಬ್ಬರು ತಮ್ಮ ಮನಸಿನ ಮಾತುಗಳನ್ನು, ಭಾವನೆಗಳನ್ನು ಇತರೊಂದಿಗೆ ಹಂಚಿಕೊಳ್ಳಬಹುದು. ಇದರಿಂದಾಗಿಯೇ ಸಾಮಾಜಿಕ, ಆರ್ಥಿಕ ಮುನ್ನಡೆ ಉಂಟಾಗುತ್ತದೆ. ನಾಗರಿಕ ಸಮಾಜಕ್ಕೆ ಒಳಿತಾಗುತ್ತದೆ. ಭಾಷೆಗಳು, ಲಿಪಿಗಳು ಅಸ್ತಿತ್ವದಲ್ಲಿ ಇರುವುದರಿಂದಾಗಿ ಪ್ರಸ್ತುತ ವಿಶ್ವದಾದ್ಯಂತ ಸಾಕಷ್ಟು ಬೆಳವಣಿಗೆಗಳನ್ನು ಕಾಣಬಹುದಾಗಿದೆ.

  • ಬೆಳವಣಿಗೆ ಕಂಡ ಕ್ಷೇತ್ರಗಳು
    • ಶಿಕ್ಷಣ
    • ವಿಜ್ಞಾನ
    • ಔಷಧಿ
    • ಸಾಹಿತ್ಯ
  • ಬೆಳವಣಿಗೆಯ ಲಾಭಗಳು
    1. ಅಂತರರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿ
    2. ಅಂತರರಾಜ್ಯ ವ್ಯಾಪಾರ ವಹಿವಾಟು ಹೆಚ್ಚಳ
    3. ಆರ್ಥಿಕ ಬೆಳವಣಿಗೆ

ಬೆಳವಣಿಗೆಯ ರೂಪ[ಬದಲಾಯಿಸಿ]

ವಾಣಿಜ್ಯ ವಹಿವಾಟುಗಳಿಗಾಗಿ ವಾಹನ ಸಂಚಾರ ಹೆಚ್ಚಳ

ವಿನ್ಯಾಸ[ಬದಲಾಯಿಸಿ]

  • ನಗರ
  • ವಿದ್ಯುತ್
  1. https://timesofindia.indiatimes.com/city/bengaluru/at-107-max-languages-spoken-in-bengaluru/articleshow/85914744.cms
  2. . No. Web. Times of India. Times of India https://timesofindia.indiatimes.com/city/bengaluru/at-107-max-languages-spoken-in-bengaluru/articleshow/85914744.cms. {{cite news}}: Missing or empty |title= (help)