ಸದಸ್ಯ:Indira Holkar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು:

  ಪ್ರತಿಯೊಬ್ಬ ವ್ಯಕ್ತಿಗೂ ತನ್ನ ತನಗೆ ಜನ್ಮ ಕೊಟ್ಟ ತಾಯಿಯ ಬಗ್ಗೆ ಗೌರವ, ಅಭಿಮಾನ,ಪ್ರೀತಿ ಇದ್ದೇ ಇರುತ್ತದೆ.ಅದೇ ರೀತಿಯಾಗಿ ತನಗೆ ಆಸರೆ ನೀಡಿದ ನಾಡಿನ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿರಬೇಕು. ತಾನು ಎಲ್ಲೇ ಇದ್ದರೂ, ಹೇಗ ಇದ್ದರೂ ತನ್ನ ನಾಡು-ನುಡಿಯನ್ನು ಮರೆಯಬಾರದು. ಪ್ರಸ್ತುತ ಸಂದರ್ಭದಲ್ಲಿ ನಾಡು ನುಡಿಯ ಕುರಿತು ಒಬ್ಬರೂ ಇನ್ನೊಬ್ಬರನ್ನು ಹಿಂಸಿಸುವ, ದ್ವೇಷಿಸುವ ಘಟನೆಗಳನ್ನು ಕಾಣುತ್ತೇವೆ. ಇಂತವುಗಳನ್ನು ನಿಲ್ಲಿಸಿ ನಿಮಗೆ ಆಶ್ರಯ ನೀಡಿ ಪೋಷಿಸಿದ ನಾಡು ನುಡಿಯನ್ನು ಪ್ರೀತಿಸಿ ಬೇರೆ ನಾಡು ನುಡಿಯನ್ನು ಗೌರಿಸುವುದು ಉತ್ತಮ ಪ್ರಜೆಯ ಲಕ್ಷಣವಾಗಿದೆ.