ಸದಸ್ಯ:Henita angel/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಣನೆ[ಬದಲಾಯಿಸಿ]

ಕಕ್ಕೆ ಮರವು ೫ ರಿಂದ ೮ ಮೀ.ಉದ್ದ ಬೆಳೆಯುತ್ತದೆ.ಇದರ ಕಾಂಡವು ನುಣುಪು ಮತ್ತು ನೇರವಾಗಿರುವುದು.ಹಾಗೂ ಕವಲುಗಳು ಸುತ್ತ ಹರಡಿರುವುವು.ಈ ಮರದ ತೊಗಟೆ ತಿಳಿ ಹಸಿರು ಬಣ್ಣದಲ್ಲಿ ಇರುತ್ತದೆ.ಬಲಿತ ಮರದಲ್ಲಿ ನಸು ಕಂದು ಬಣ್ಣವಿರುವುದು.ಇದರ ಎಲೆಗಳೆಲ್ಲ ಸಂಪೂರ್ಣವಾಗಿ ಉದುರಿ ಮೈ ತುಂಬಾ ಹೂಗಳು ಬಿಡುವುವು.ಮತ್ತು ಹೂ ಮಾಲೆಯಂತೆ ಶೋಭಿಸುತ್ತದೆ.ಹಾಗೂ ಹಳದಿ ಮಡಿಯುಟ್ಟು ಅಪ್ಸರೆಯಂತೆ ಇರುತ್ತದೆ.ಇದರ ಎಲೆಗಳು ಎದುರು ಬದಿರಾಗಿರುವುವು.ವಿಷೇಶವಾಗಿ ಕಕ್ಕೆ ಮರದ ಎಲೆಗಳು ನೇರಳೆ ಮರದ ಎಲೆಗಳನ್ನು ಹೋಲುತ್ತದೆ.ಈ ಮರ ಕಾಯಿಯನ್ನು ಉದ್ದವಾಗಿ ಬಿಡುತ್ತದೆ.ಕಾಯಿಯ ಒಳಗಡೆ ಮಾಸು ಕೆಂಪು ಅಥವಾ ಕಪ್ಪು ಬಣ್ಣದ ಬೀಜಗಳಿರುತ್ತದೆ.ಈ ಬೀಜಗಳು ತೀರ ಸಣ್ಣದಾದ ತೊಟ್ಟುಗಳಿಂದ ಕಾಯಿಗೆ ಅಂಟಿಕೊಂಡಿರುವುವು.ಕಕ್ಕೆ ಮರವು ಫ಼ೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಹೂ ಕಾಯಿಯನ್ನು ಬಿಡುತ್ತದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಬಹುಮೂತ್ರ ಮತ್ತು ಬಾಯಾರಿಕೆ ನಿವಾರಣೆಗೆ[ಬದಲಾಯಿಸಿ]

ಮೊದಲಿಗೆ ಕಕ್ಕೆ ಗಿಡದ ಎಲೆ,ತಿರುಳು,ಕಾಯಿ,ಹೂವು ಹಾಗೂ ಬೇರು ಸಮತೂಕ ತಂದು ನೆರಳಿನಲ್ಲಿ ಒಣಗಿಸಿ ನಯವಾಗಿ ಚೂರ್ಣಿಸಬೇಕು.೨ ಗ್ರಾಂ ಈ ಚೂರ್ಣಕ್ಕೆ ೨ ಗ್ರಾಂ ನೆಲ್ಲಿ ಚೆಟ್ಟಿನ ಚೂರ್ಣ,೨ ೧/೨ ಗ್ರಾಂ ಅರಿಶಿನ ಚೂರ್ಣವನ್ನು ಸೇರಿಸಿ ಚೂರ್ಣವನ್ನು ಮಾಡಬೇಕು.೨ ಗ್ರಾಂ ಈ ಚೂರ್ಣವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕದಡಿ ಕುಡಿಯಬೇಕು.ಹೀಗೆ ೫ ರಿಂದ ೭ ದಿವಸ ಕುಡಿದರೆ ಉತ್ತಮ.

ವಿರೇಚಕವಾಗಿ (ಭೇದಿಗೆ ಔಷಧಿ) ಮತ್ತು ಕೆಮ್ಮಿನ ಪರಿಹಾರಕ್ಕೆ[ಬದಲಾಯಿಸಿ]

ಸುಮಾರು ೫ ಗ್ರಾಂ ಕಕ್ಕೆ ಗಿಡದ ಅಂಟನ್ನು ತಂದು ಎರಡು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕುಬೇಕು.ಬೆಳಿಗ್ಗೆ ಈ ಅಂಟನ್ನು ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ,ಇದಕ್ಕೆ ೫ ಗ್ರಾಂ ಕೆಂಪು ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸಬೇಕು.ಇದರಿಂದ ಒಂದೆರಡು ಬಾರಿ ಸುಖ ಭೇದಿ ಆಗಿ,ಅಜೀರ್ಣ,ಹೊಟ್ಟೆಯುಬ್ಬರ,ಮಲಬದ್ಧತೆ ಪರಿಹಾರವಾಗುವುದು.

ಗಂಟಲು ಬೇನೆ (Diphtheria) ನಿವಾರಣೆಗೆ[ಬದಲಾಯಿಸಿ]

(ಒಳಗಡೆ ಗಂಟಲು ಊದಿಕೊಂಡಿರುವುದು ಮತ್ತು ನುಂಗಲು ಕಷ್ಟವಾಗಿರುವುದು) ಮೊದಲಿಗೆ ೧೦ ಗ್ರಾಂ ಅಂಟನ್ನು ಒಂದು ಲೋಟ ನೀರಿಗೆ ಹಾಕಿ,ಕಷಾಯ ಮಾಡಿ ತಣ್ಣಗಾದ ಮೇಲೆ ಅದರಿಂದ ಬಾಯನ್ನು ಮುಕ್ಕಳಿಸಬೇಕು.ಹೀಗೆ ಪ್ರತೀ ದಿನ ೩ ರಿಂದ ೪ ಬಾರಿ ಮಾಡಬೇಕು.

ಕೆಮ್ಮಿನ ನಿವಾರಣೆಗೆ[ಬದಲಾಯಿಸಿ]

ಮೊದಲಿಗೆ ಕಕ್ಕೆ ಕಾಯಿಗಳನ್ನು ಚೆನ್ನಾಗಿ ಒಣಗಿಸಬೇಕು.ನಂತರ ಅದನ್ನು ಸುಟ್ಟು ಬೂದಿ ಮಾಡಬೇಕು.ಕೊನೆಗೆ ಕಾಲು ಟೀ ಚಮಚ ಈ ಬೂದಿಯೊಂದಿಗೆ ಒಂದು ಚಿಟಿಕೆಯಷ್ಟು ಅಡಿಗೆ ಉಪ್ಪಿನ ಪುಡಿ ಮತ್ತು ಒಂದು ಟೀ ಚಮಚ ಜೇನನ್ನು ಕಲಸಿ ನೆಕ್ಕಬೇಕು. ಹೀಗೆ ದಿವಸ ೨ ರಿಂದ ೩ ಬಾರಿ ಮಾಡಿದರೆ ಉತ್ತಮ.

ಮಲಬದ್ಧತೆ ನಿವಾರಣೆಗೆ[ಬದಲಾಯಿಸಿ]

ಮೊದಲಿಹೆ ೫ ಗ್ರಾಂ ನಷ್ಟು ಕಕ್ಕೆ ಕಾಯಿಯ ಒಳಗಡೆಯ ತಿರುಳನ್ನು ರಾತ್ರಿ ಶುದ್ಧವಾದ ಒಂದು ಬಟ್ಟಲು ನೀರಿನಲ್ಲಿ ನೆನೆ ಹಾಕಬೇಕು.ಈ ನೀರನ್ನು ಬೆಳಿಗ್ಗೆ ಶೋಧಿಸಬೇಕು.ನಂತರ ಶೋಧಿಸಿದ ಈ ನೀರಿಗೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಬೇಕು.ಸೇವಿಸಿದ ಬಳಿಕ ಒಂದೆರಡು ಬಾರಿ ಭೇದಿ ಆಗಿ ಪರಿಸ್ಥಿತಿ ಸುಧಾರಿಸುತ್ತದೆ. ಹೀಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸೇವಿಸಬೇಕು.

ಕುಷ್ಟ ರೋಗ ನಿವಾರಣೆಗೆ[ಬದಲಾಯಿಸಿ]

ಮೊದಲಿಗೆ ಕಕ್ಕೆಯ ಅಂಟು,ಆಡುಸೋಡ ಹಾಗೂ ಆಮ್ರತಬಳ್ಳಿ ಸಮತೂಕ ಸೇರಿಸಿ ಚೆನ್ನಾಗಿ ಜಜ್ಜಿ ಕಷಾಯವನ್ನು ಮಾಡಬೇಕು.ಕಾಲು ಬಟ್ಟಲು ಈ ಕಷಾಯಕ್ಕೆ ಒಂದು ಟೀ ಚಮಚದಷ್ಟು ಹರಳೆಣ್ಣೆಯನ್ನು ಸೇರಿಸಿ ಸೇವಿಸಬೇಕು.ಹೀಗೆ ಕೆಲವು ವಾರದವರೆಗೆ ಈ ಚಿಕಿತ್ಸೆಯನ್ನು ಮುಂದುವರಿಸಿದರೆ ಉತ್ತಮ.

ಕೊರಳು ಬಾವಿನ ನಿವಾರಣೆಗೆ[ಬದಲಾಯಿಸಿ]

ಅಕ್ಕಿ ಕಚ್ಚಿನಲ್ಲಿ ಬಲಿತವಾದ ಈ ಕಕ್ಕೆ ಗಿಡದ ಬೇರನ್ನ್ನು ತೇದು ಕೊರಳ ಬಾವಿಗೆ ಮಂದವಾಗಿ ಲೇಪಿಸಬೇಕು. ಸೂಚನೆ:ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಬಾರದು.ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಾಂತಿ ಭೇದಿ ಆಗುವ ಸಂಭವವಿದೆ.ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಸೋನಾಮುಖಿ ಅಥವಾ ಅಳಲೆಕಾಯಿಯ ನಯವಾದ ಚೂರ್ಣದೊಂದಿಗೆ ಬಿಸಿ ನೀರಿನಲ್ಲಿ ಸೇವಿಸಬೇಕು.