ಸದಸ್ಯ:HemanthPradeep828/ನನ್ನ ಪ್ರಯೋಗಪುಟ
ಡಾ . ಎಚ್ .ಕೆ .ರಂಗನಾಥ್ | |
---|---|
Born | ೮ ಆಗಸ್ಟ್ ೧೯೨೪ ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ, India [೧] |
Died | ೨೬ ಮಾರ್ಚ್ ೨೦೦೩ (ವಯಸ್ಸು ೭೯) [೨] ಬೆಂಗಳೂರು, ಕರ್ನಾಟಕ, ಭಾರತ |
Education | ಎಂ.ಎ (ಇತಿಹಾಸ ಮತ್ತು ಸಂಸ್ಕ್ರುತಿ) ೧೯೪೫, ಪಿ.ಎಚ್.ಡಿ (ರಂಗ ಕಲೆ) ೧೯೫೪ [೧] |
ಪರಿಚಯ
[ಬದಲಾಯಿಸಿ]ಡಾ . ಎಚ್ .ಕೆ .ರಂಗನಾಥ್ ( ಎಚ್. ಕೆ .ಆರ್ ಎಂದೂ ಪ್ರಸಿದ್ಧರು ) ಅವರು ಹೆಸರಾಂತ ಸಾಹಿತಿ, [೩] ವಿದ್ಯಾತಜ್ಞ , ನಟ, ನಿರ್ದೇಶಕ, ನಾಟಕಕಾರ , ನಾಟಕ ಮತ್ತು ರಂಗ ನಿರ್ದೇಶಕ ,ಮಾಧ್ಯಮ ತಜ್ನ್ಯ [೪] ಮತ್ತು ಯುನೆಸ್ಕೊ ಗೆ ಸಾಂಪ್ರದಾಯಿಕ ಮಾಧ್ಯಮ ಮತ್ತು ಗ್ರಾಮೀಣ ಉದ್ಧಾರ ಸಮಿತಿಗೆ ಸಲಹಾಕಾರ ಆಗಿದ್ದವರು . [೫] [೬] [೭]
ಶೈಕ್ಷಣಿಕ ಮತ್ತು ಮಾಧ್ಯಮ
[ಬದಲಾಯಿಸಿ]ಇವರ ೧೯೬೦ ರಲ್ಲಿ ಪ್ರಕಟವಾದ ಕರ್ನಾಟಕದ ರಂಗಭೂಮಿ ಎಂಬ ಇವರ ಪಿಎಚ್ ಡಿ ಮಹಾಪ್ರಬಂಧವು ಇಂದಿಗೂ ಆ ವಿಷಯದ ಮೇಲೆ ಬರೆದಿರುವಂತಾ ಒಂದು ಅತ್ಯಂತ ಅಮೂಲ್ಯವಾದ ಆಕರ ಗ್ರಂಥವಾಗಿದೆ. [೮] [೯][೧೦] [೧೧]
ಇವರು ಧಾರವಾಡ ಮತ್ತು ಬೆಂಗಳೂರು ಆಕಾಶವಾಣಿ ನಿಲಯದ ನಾಟಕ ನಿರ್ದೇಶಕರಾಗಿ (೧೯೪೯-೬೯) ಇಪ್ಪತ್ತು ವರುಷ ಮತ್ತು (೧೯೬೮ -೭೮) ಭಾರತ ಸರಕಾರದ ಮಾಧ್ಯಮ ಮತ್ತು ಪ್ರಸಾರ ಮಂತ್ರಾಲಯದ ದಕ್ಷಿಣಭಾರತದ ಹಾಡು ಮತ್ತು ನಾಟಕ ವಿಭಾಗದ ಪ್ರಾಂತೀಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು ಹಾಗೂ ಏಷಿಯಾ ಮತ್ತು ಆಫ್ರಿಕಾ ಖಂಡಗಳಿಗೆ ಭಾರತೀಯ ರಂಗ ಮತ್ತು ಸಂಗೀತ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಲು ಯುನೆಸ್ಕೊ ಇವರನ್ನು ಆಯ್ಕೆ ಮಾಡಿ ಫೆಲೋಶಿಪ್ ನೀಡಿತು .ಇವರು ಯುನೆಸ್ಕೋಗಾಗಿ ಬರೆದಿರುವಂಥಾ ಅಭಿವೃದ್ಧಿ ಸಂವಹನದಲ್ಲಿ ಕರ್ನಾಟಕದ ರಂಗಭೂಮಿ ಎಂಬ ವಿಷಯದ ಮಹಾಪ್ರಬಂಧವು ಫ್ರೆಂಚ್ , ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಗೊಂಡಿದೆ.[೫] ಅವರ ಈ ಅಧಿಕಾರಾವಧಿಯಲ್ಲಿ ಅವರು ಜಾನಪದ ಮತ್ತು ಸಾಂಪ್ರದಾಯಿಕ ಕಲಾ ಪ್ರಾಕಾರಗಳ ಪಾತ್ರದ ಗುರುತಿಸುವಿಕೆ ಮತ್ತು ವಿಶ್ಲೇಷಣೆಯ ಕಾರ್ಯವನ್ನು ಕೈಗೊಂಡಿದ್ದರು .[೧೨]
ಯಕ್ಷಗಾನ ಮತ್ತು ಬೊಂಬೆಯಾಟದಂತಹಾ ಭಾರತೀಯ ಸಾಂಪ್ರದಾಯಿಕ ಕಲಾ ಪ್ರಾಕಾರಗಳನ್ನು ಜನಪ್ರಿಯಗೊಳಿಸುವಲ್ಲಿ ಇವರು ಪಟ್ಟ ಪ್ರಯತ್ನ ಗಮನಾರ್ಹವಾಗಿದೆ .[೧೩] ಇವರು ಮಕ್ಕಳ ಯಕ್ಷಗಾನ ತಂಡವನ್ನು ಯು.ಎಸ.ಏ ಗೆ ಮತ್ತು ಗ್ರೇಟ್ ಬ್ರಿಟನ್ ದೇಶಗಳಿಗೆ ಕರೆದೊಯ್ದ ಅಗ್ರಗಣ್ಯರಾಗಿದ್ದಾರೆ. ಭಾರತ , ಅಮೇರಿಕ , ಯುರೋಪ್ ಮತ್ತು ಜಪಾನ್ ಮುಂತಾದ ಕಡೆಗಳಲ್ಲಿನ ಅಂತಾರಾಷ್ಟ್ರೀಯ ಬೊಂಬೆಯಾಟ ಉತ್ಸವಗಳಲ್ಲಿ ನಡೆದ ಮಂಡನೆಗಳು ಇವರ ನೇತೃತ್ವದಲ್ಲಿ ನಡೆದಿದೆ.
ಡಾ.ಎಚ್.ಕೆ.ರಂಗನಾಥ್ ಇವರನ್ನು ಬೆಂಗಳೂರು ವಿಶ್ವವಿದ್ಯಾಲಯವು ತನ್ನ ನೃತ್ಯ,ನಾಟಕ ಮತ್ತು ಸಂಗೀತ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಲು ಆಹ್ವಾನಿಸಿತು ಹಾಗೂ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಲಕ್ಕು ವರ್ಷ ದುಡಿದರು (೧೯೭೬-೮೦) [೧೪] . ಇವರು ಅನಂತರ ಭಾರತೀಯ ವಿದ್ಯಾ ಭವನದ ( ೧೯೮೩ -೮೫ ) ಗೌರವ ಪ್ರಾಧ್ಯಾಪಕರಾಗಿ ಮತ್ತು (೧೯೮೩-೯೫) ನಿರ್ದೇಶಕರಾಗಿಯೂ ತಮ್ಮ ಸೇವೆಯನ್ನ ಸಲ್ಲಿಸಿದ್ದರು. ಭಾರತೀಯ ವಿದ್ಯಾ ಭವನದಲ್ಲಿನ ಗಾಂಧೀ ಕೇಂದ್ರ ದ ವಿಜ್ಞಾನ ಮತ್ತು ಮಾನವೀಯ ಮೌಲ್ಯ ವಿಭಾಗದ ಗೌರವ ನಿರ್ದೇಶಕರಾಗಿಯೂ (೧೯೯೫-೨೦೦೩) [೧೪], ಭಾರತೀಯ ಕೇಂದ್ರ ಸರಕಾರದ ಆಕಾಶವಾಣಿ ಮತ್ತು ದೂರದರ್ಶನ ವಿಭಾಗಕ್ಕೆ ಗೌರವ ನಿರ್ದೇಶಕರಾಗಿಯೂ (೧೯೯೨-೯೫) ತಮ್ಮ ಅಮೂಲ್ಯ ಸೇವೆಯನ್ನ ಸಲ್ಲಿಸಿದ್ದರು [೧] . ಗಾಂಧಿಕೇಂದ್ರ ದಲ್ಲಿಯ ತನ್ನ ಅಧಿಕಾರಾವಧಿಯಲ್ಲಿ ಇವರ ಪ್ರಕಟಣೆಯ " ಆ ಬುಕ್ ಪ್ಯಾಕ್ ಫ಼ಾರ್ ದಿ ಯಂಗ್ " ಎಂಬ ಗ್ರಂಥವು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಯನ್ನು ಬಿಂಬಿಸುವಲ್ಲಿ ಮಹತ್ತರವಾದುದಾಗಿದೆ .
ಪ್ರಕಟಣೆಗಳು
[ಬದಲಾಯಿಸಿ]ಡಾ. ಎಚ್ .ಕೆ.ರಂಗನಾಥ್ ಅವರು ಯಕ್ಷಗಾನ , ಕಥಾಕೀರ್ತನ ಮತ್ತು ಕನ್ನಡ ನಾಟಕರಂಗ ಮುಂತಾದುವುಗಳ ವಿವರವಾದ ಲಿಖಿತ ಅಧ್ಯನಗಳ ಜೊತೆಗೆ ಹಲವಾರು ನಾಟಕಗಳನ್ನು ರಂಗಮಂಚಕ್ಕಾಗಿ ಮತ್ತು ಆಕಾಶವಾಣಿಗಾಗಿ ಬರೆದಿದ್ದರು. ಅವರ ಬರಹಗಳ ೨೧ ಪ್ರಕಟಣೆಗಳು [೧] [೧೫] [೯] ಇಂತಿವೆ :
ಸಿಲ್ವರ್ ಜುಬಿಲಿ ವೊಲ್ಯೂಮ್ ಆಫ್ ದಿ ಸೆಂಟ್ರಲ್ ಸಂಗೀತ ನಾಟಕ ಅಕಾಡೆಮಿ (೧೯೮೧) [೧೫] [೧೬],
ಫೋಕ್ ಮೀಡಿಯಾ ಅಂಡ್ ಕಮ್ಯೂನಿಕಷನ್ (೧೯೮೦)
ಯೂಸಿಂಗ್ ಫೋಕ್ ಎಂಟರ್ಟೈನ್ಮೆಂಟ್ ಫ಼ಾರ್ ಡೆವಲಪ್ಮೆಂಟ್ (೧೯೮೦)
ಲೈವ್ ಮೀಡಿಯಾ ಫ಼ಾರ್ ಡೆವಲಪ್ಮೆಂಟ್ ಕಮ್ಯುನಿಕೇಷನ್ (೨೯೯೯)[೭]
[ಆತ್ಮಚರಿತ್ರೆ] ನೆನೆದವರು ಮನದಲ್ಲಿ (೧೯೯೬)
ನೆನಪಿನ ನಂದನ (೧೯೯೯)
[ಹಾಸ್ಯ] ವೈದ್ಯನಲ್ಲದ ಡಾಕ್ಟರ್ (೧೯೬೦)
ಕಾಪಿಟಲ್ ಪನಿಷಮೆಂಟ್ (೧೯೮೧)
ಇವರೆಲ್ಲಾ ನಮ್ಮವರೇ (೧೯೯೯)
ಜೇನ ಹನಿ (೨೦೦೦)
[ನಾಟಕ] ವಿಷಕನ್ಯ (೧೯೬೦)
ಜಾಗೃತ ಭಾರತ (೧೯೮೧)
[ಅನುವಾದ] ಚೆಲುವ ಕನ್ನಡನಾಡು (೧೯೮೭)
ಗುರುತಿಸುವಿಕೆ ಮತ್ತು ಪ್ರಶಸ್ತಿಗಳು
[ಬದಲಾಯಿಸಿ]ಪ್ರಸರಣ, ದೂರದರ್ಶನ, ರಂಗಸ್ಥಳ, ನಾಟಕರಂಗ ತರಬೇತಿ, ಮತ್ತು ಸಾಂಪ್ರದಾಯಿಕ ಪ್ರದರ್ಶನ ಕಲೆಯಲ್ಲಿನ ಇವರ ಅತ್ಯಮೂಲ್ಯವಾದ ಶೋಧನಾ ಕಾರ್ಯಕ್ಕಾಗಿ ಇವರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೧) [೧೭] , ಅವರ 'ಜಾಗೃತ ಭಾರತ ' ರಂಗ ನಾಟಕ ಕ್ಕಾಗಿ ಮೋತಿಲಾಲ್ ಶತಮಾನ ಪ್ರಶಸ್ತಿ , ರಾಜ್ಯ ನಾಟಕ ಅಕಾಡೆಮಿಯಿಂದ ಫೆಲೋಶಿಪ್ , ಅವರ " ನೆನೆದವರು ಮನದಲ್ಲಿ " ಪುಸ್ತಕಕ್ಕಾಗಿ ೧೯೯೬ ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಪುಸ್ತಕ ವಾರ್ಷಿಕ ಪ್ರಶಸ್ತಿ , ಕುವೆಂಪು ಪ್ರಶಸ್ತಿ , ೧೯೯೮ ರಲ್ಲಿನ ರಾಜ್ಯ ಆಕಾಶವಾಣಿ ಕೊಡಮಾಡಿದ ಹತ್ತು ಅತ್ಯುತ್ತಮ ಮಾಧ್ಯಮ ವ್ಯಕ್ತಿ ಪ್ರಶಸ್ತಿಯಲ್ಲಿ ಇವರು ಒಬ್ಬರು.
ಟಿಪ್ಪಣಿಗಳು ಮತ್ತು ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ M.V.V. Murthy & Rajaram B.V. (2003) (eds) Ranganatha Saraswatha (p.106-07) Bangalore, Karnataka:Kalagangothri
- ↑ ZeeNews. (2003, March 26) Theatre Veteran Ranganath is dead. https://zeenews.india.com/home/theatre-veteran-ranganath-is-dead_88229.html Retrieved from https://zeenews.india.com on 6th July 2020
- ↑ Potpourri, Kamat's. "Kamat's Potpourri".
{{cite web}}
: CS1 maint: url-status (link) - ↑ M.K.Sridhar (2004) Dr. H.K.Ranganath, A Media Specialist Par Excellence, Vikaasa- A commemorative book. World Kannada Congress , Florida (p314-317)
- ↑ ೫.೦ ೫.೧ Ranganath,H.K. (1980). Using folk entertainments to promote National Development. France: United Nations Educational Scientific and Cultural Organization. ISBN 92-3-101773-X
- ↑ Bangalore University. From : https://eng.bangaloreuniversity.ac.in/science/communication/
- ↑ ೭.೦ ೭.೧ Ranganath,H.K. ( 2000). Live Media for Development Communication, Regional Resources Centre for Folk Performing Arts. Udupi: M.G.M. College
- ↑ Ranganath,H.K (1960), The Karnataka Theatre, Dharwad:Karnataka University
- ↑ ೯.೦ ೯.೧ https://catalog.hathitrust.org/Record/000289671
- ↑ M.L.Varadapande: (1983) Religion and Theatre (p38.), Abhinav Publications. New Delhi
- ↑ Marirao M.G. (2018) Varadacharya’s Method of Conducting Rehearsals. V.Akshara (eds) Kannada Theatre History 1850-1950: A Sourcebook. (p.58) Manipal, Karnataka: Manipal Universal Press. ISBN: 978-93-82460-84-8
- ↑ Chandrasekhar, H.N. (2015, February 18) All the World’s a stage. Bengaluru: Metrolife, Deccan Herald.
- ↑ Venkatasubbaiah, G. (2003) Sadguni Vishwasi. M. V. Venkateshmurthy (ed) Nenapige Saavilla (p.70) Bangalore, Karnataka: V.C.Sampada
- ↑ ೧೪.೦ ೧೪.೧ https://www.bvbgandhicentre.org/officebearers
- ↑ ೧೫.೦ ೧೫.೧ https://catalog.princeton.edu/catalog/8555408
- ↑ Ranganath,H.K. (1981) Sangeet Natak:Silver Jubilee Volume, New Delhi: S.N.Akademi
- ↑ https://karnataka.gov.in/page/Awards/State%20Awards/Rajyotsava+Awards/en