ವಿಷಯಕ್ಕೆ ಹೋಗು

ಸದಸ್ಯ:Harshithaguddu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಟರ್ಪ್ರಿಟರ್ (ಗಣಕ)

[ಬದಲಾಯಿಸಿ]

ಗಣಕ ವಿಜ್ಞಾನದಲ್ಲಿ, ಇಂಟರ್ಪ್ರಿಟರ್ ಒಂದು ಗಣಕ ಪ್ರೋಗ್ರಾಂಯಾಗಿದ್ದು,ಪ್ರೋಗ್ರಾಂ ಅಥವಾ ಸ್ಕ್ರಿಪ್ಟಿಂಗ್ ಭಾಷೆಯಲ್ಲಿ ಬರೆದ ಸೂಚನೆಗಳನ್ನು ಯಂತ್ರ ಭಾಷೆ ಪ್ರೋಗ್ರಾಂಗೆ ಬದಲಾಯಿಸದ್ದೆ ಕಾರ್ಯಗತಗೊಳಿಸುತ್ತದೆ.ಇಂಟರ್ಪ್ರಿಟರ್ ಸಾಮಾನ್ಯವಾಗಿ ಪ್ರೋಗ್ರಾಂಮನ್ನು ನಡಸುವುದಕ್ಕೆ ಕೆಳಗಿನ ತಂತ್ರಗಳಲ್ಲಿ ಒಂದನ್ನು ಬಳಸುತ್ತದೆ: ೧. ಸೊರ್ಸ್ ಕೋಡ್ ಅನ್ನು ಪಾರ್ಸ್ ಮಾಡಿ ಮತ್ತು ನೇರವಾಗಿ ಅದರ ನಡವಳಿಕೆಯನ್ನು ನಿರ್ವಹಿಸಿ; ೨. ಸೊರ್ಸ್ ಕೋಡ್ ಅನ್ನು ಕೆಲವು ಪರಿಣಾಮಕಾರಿ ಮಧ್ಯಂತರ ಪ್ರಾತಿನಿಧ್ಯಕ್ಕೆ ಅನುವಾದಿಸಿ ಮತ್ತು ತಕ್ಷಣ ಇದನ್ನು ಕಾರ್ಯಗತಗೊಳಿಸಿ; ೩. ಇಂಟರ್ಪ್ರಿಟರ್ ಸಿಸ್ಟಮ್ನಯಿನ್ನ ಭಾಗವಾಗಿರುವ ಕಂಪೈಲರ್ ಶೇಖರಿಸಿದ ಪ್ರೆಕಂಪೈಲ್ಡ್ ಕೋಡ್ ಅನ್ನು ಕಾರ್ಯಗತಗೊಳಿಸಿ. ಲಿಸ್ಪ್ ಪ್ರೋಗ್ರಾಮಿಂಗ್ ಭಾಷೆ ಮತ್ತು ಡಾರ್ಟ್ಮೌತ್ ಬೇಸಿಕ್ನಯನ್ನ ಆರಂಭಿಕ ಆವೃತ್ತಿಗಳು ಮೋದಲನೆಯ ಮಾದರಿಯ ಒಂದು ಒಳ್ಳೆಯ ಉದಾಹರಣೆಯಾಗಿದೆ. ಪರ್ಲ್, ಪೈಥಾನ್, ಮಟ್ಲಾಬ್, ಮತ್ತು ರೂಬಿಯು ಎರಡನೇಯ ಮಾದರಿಗೆ ಮತ್ತು ಯುಸಿಎಸ್ಡಿ ಪ್ಯಾಸ್ಕಲ್ ಮೂರನೇಯ ಮಾದರಿಯ ಒಳ್ಳೆಯ ಉದಾಹರಣೆಯಾಗಿದೆ. ಮುಂಚಿತವಾಗಿಯೆ ಸೊರ್ಸ್ ಪ್ರೋಗ್ರಾಂಮನ್ನು ಕಂಪೈಲ್ ಮಾಡಿ ಯಂತ್ರ ವಿಮುಕ್ತ ಕೋಡ್ ಯಾಗಿ ಶೇಖರಿಸಿ ನಂತರ ರನ್-ಟೈಮ್ನಲ್ಲಿ ಲಿಂಕ್ ಮಾಡಿ ಮತ್ತು ಇಂಟರ್ಪ್ರಿಟರ್ ಮತ್ತು/ಅಥವಾ ಕಂಪೈಲರ್ನಿಂದ ಕಾರ್ಯಗತಗೊಳಿಸಲಾಗುತ್ತದೆ.ಸ್ಮಾಲ್ಟಾಲ್ಕ್, ಮತ್ತು ಬೇಸಿಕ್ ಮತ್ತು ಜಾವಾದ ಸಮಕಾಲೀನ ಆವೃತ್ತಿಗಳು ಎರಡನೇ ಮತ್ತು ಮೂರನೇಯ ಮಾದರಿಯ ಸಂಯೋಜನೆಗೆ ಉದಾಹರಣೆಯಾಗಿದೆ.ಅಲ್ಗೊಲ್, ಪೋರ್ಟ್ರೇನ್, ಕಾಬಾ ಮತ್ತು ಸಿ/ಸಿ++ ಅಂತಹ ಗಣಕ ಭಾಷೆಗಳಿಗೆ ವಿವಿಧ ರೀತಿಯ ಇಂಟರ್ಪ್ರಿಟರ್ಗಳನ್ನು ರಚಿಸಲಾಗಿದೆ.