ಸದಸ್ಯ:Harshitha2210562
ನಮಸ್ಕಾರ ಗುರುಗಳೇ.
ನನ್ನ ಜೀವನದ ಪರಿಚಯ
ನನ್ನ ಹಾಗೂ ನನ್ನ ಕುಟುಂಬದ ಪರಿಚಯ:ನನ್ನ ಹೆಸರು ಹರ್ಷಿತ. ಎನ್. ನಾನು ಹುಟ್ಟಿ ಬೆಳೆದಿದು ಬೆಂಗಳೂರುನಲ್ಲಿ.ನಾನು ೨೫/೦೫/೨೦೦೪ ರಲ್ಲಿ ಜನಿಸಿದೆ.ನನಗೆ ಈಗ ೧೮ ವಷ೯. ನಮ್ಮದು ಸಣ್ಣ ಕುಟುಂಬ.ನಮ್ಮ ಕುಟುಂಬದಲ್ಲಿ ೪ ಜನರು ಇದ್ದೀವಿ.ನಾನು,ನನ್ನ ತಂದೆ,ನನ್ನ ತಾಯಿ ಹಾಗು ನನ್ನ ತಮ್ಮ . ನನ್ನ ತಂದೆಯ ಹೆಸರು ನಂದಕುಮಾರ್. ಟಿ. ಅವರು ವೃತ್ತಿಯಲ್ಲಿ ನೇಕಾರರು.ನನ್ನ ತಾಯಿಯ ಹೆಸರು ಕವಿತಾ. ಎಸ್ . ಡಿ. ನನ್ನ ಮುದ್ದಿನ ತಮ್ಮನ ಹೆಸರು ರಾಹುಲ್. ಈ.ಏನ್. ಅವನು ಪ್ರಥಮ ಪಿ.ಯು.ಸಿ ಓದುತ್ತಿದ್ದಾನೆ.ನಾನು ಬಹಳ ಸಮಯ ಪ್ರಜ್ಞೆ ಮತ್ತು ದೃಢ ನಿಶ್ಚಯದ ವಿದ್ಯಾರ್ಥಿನಿ. ಹಾಗು ನಾನು ಪ್ರಾಮಾಣಿಕ ವಿದ್ಯಾರ್ಥಿನಿ.ನನ್ನ ಶಿಕ್ಷಕರು ನನ್ನ ಕೆಲಸವನ್ನು ಮೆಚ್ಚುತ್ತಿದ್ದರೂ ಮತ್ತು ಪ್ರತಿದಿನ ಉತ್ತಮವಾಗಿರಲು ನನ್ನನ್ನು ಪ್ರೇರಿಸುತ್ತಿದ್ದರು. ಬಾಲ್ಯದಿಂದಲೂ ನನಗೆ ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ.ನನಗೆ ನನ್ನ ತಂದೆ ಹೇಳಿಕೊಟ್ಟ ಗುಣಗಳೇ ನನ್ನ ಜೀವನದಲ್ಲಿ ದಾರಿದೀಪವಾಗಿದೆ. ಅವರ ಸರಳತೆ ಹಾಗೂ ಕಷ್ಟಪಡುವ ನೀತಿ ಬಹಳ ಆದರ್ಶವಾಗಿದೆ. ನನ್ನ ತಾಯಿ ಪ್ರತಿ ಹೆಜ್ಜೆಯಲ್ಲಿಯು ನನಗೆ ಕಂಬವಾಗಿದ್ದರೆ .ನನಗೆ ನನ್ನ ತಾಯಿಯು ಸಹೋದರಿಯಾಗಿ, ಸ್ನೇಹಿತೆಯಾಗಿ ಪಾತ್ರವಹಿಸಿದ್ದಾರೆ. ನನ್ನ ತಮ್ಮ, ನನ್ನ ಜೀವನದಲ್ಲಿ ಸಹೋದರನ ಜೊತೆಗೆ ಗೆಳೆಯನಂತೆ ನನ್ನ ಬೆನ್ನೆಲುಬುವಾಗಿ ನಿಂತಿದ್ದಾನೆ. ನಾನು ಭಾರತ ದೇಶದ ಉತ್ತಮ ಪ್ರಜೆಯಾಗಲು ಇಷ್ಟಪಡುತ್ತೇನೆ.
ನನ್ನ ಬಾಲ್ಯ ಹಾಗೂ ಶಾಲಾ ದಿನಗಳು:ನೆನಪುಗಳು ನಮ್ಮ ಜೀವನದುದ್ದಕ್ಕೂ ನಾವು ಪಾಲಿಸಬಹುದಾದ ಅತ್ಯಂತ ನಿರ್ಣಾಯಕ ವಿಷಯಗಳಲ್ಲಿ ಒಂದಾಗಿದೆ. ನಮ್ಮ ಎಲ್ಲಾ ಜ್ಞಾನ ಮತ್ತು ಹಿಂದಿನ ಅನುಭವಗಳು ಅಲ್ಲಿ ಸಂಗ್ರಹವಾಗಿರುವುದರಿಂದ ಅವು ನಮ್ಮ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಬಾಲ್ಯದ ನೆನಪುಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ್ದಾಗಿದೆ.ನಾನು ನಮ್ಮ ಮನೆಯ ಮೊದಲ ಮಗು ವಾಗಿದ್ದರಿಂದ ನಾನು ಎಂದರೆ ಎಲ್ಲರಿಗೂ ಬಹಳ ಅಚ್ಚು ಮೆಚ್ಚು. ಎಲ್ಲರೂ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ನಾನು ಚಿಕ್ಕ ಮಗುವಾಗಿದ್ದಾಗ ಯಾವಾಗಲೂ ನಗುತ್ತಿದ್ದ ಕಾರಣ ನನ್ನನ್ನು ಹರ್ಷಿತ ಎಂದು ಹೆಸರು ಇಟ್ಟರು. (ಹರ್ಷಿತ ಎಂದರೆ ಯಾವಾಗಲೂ ಖುಷಿಯಾಗಿ ಇರುವ ಹುಡುಗಿ ಎಂದು ಅರ್ಥ.) ನಾನು ಎರಡು ವರ್ಷ ವಾಗಿದ್ದಾಗಲೇ ನನ್ನ ತಮ್ಮ ಹುಟ್ಟಿದರಿಂದ ನಾನು ಅವನ ಜೊತೆ ಆಟವಾಡ್ಡುತ್ತ ಬೇಳದೆ. ನನ್ನ ತಂದೆ ತಾಯಿಗಳು ನನಗೆ ಬಾಲ್ಯದಿಂದಲೇ ಒಳ್ಳೆಯ ಬುದ್ದಿ ಹಾಗೂ ಸಂಸ್ಕಾರವನ್ನು ಕಲ್ಲಿಸಿದಾರೆ ನಾನು ಶಾಲೆಗೆ ಸೇರಿದಾಗ ನನಗೆ ಮೂರುವರೆ ವರುಷ. ನಾನು ಶಾರದಾವಾಣಿ ವಿದ್ಯಾ ಸಂಸ್ಥೆಯಲ್ಲಿ ಪ್ರಿ ಕೆಜಿ ಓದಿದ್ದೆ.ನಾನು ಪ್ರೀ ಕೆ ಜಿ ಮುಗಿಸಿದ ನಂತರ ನನ್ನ ತಂದೆ ತಾಯಿಗಳು ಕ್ರೈಸ್ಟ್ ಸ್ಕೂಲ್ ಸೇರಿಸಿದರು. ಎಲ್. ಕೆ .ಜಿ ಯಿಂದ ಹತ್ತನೇ ತರಗತಿಯ ವರೆಗೂ ಅಲ್ಲಿ ಓದಿದ್ದೆ.ನನ್ನ ಶಾಲಾ ದಿನಗಳನ್ನು ನೆನೆಸಿಕೊಂಡರೆ ಬಹಳ ಸಂತೋಷವಾಗುತ್ತದೆ . ನಾನು ಶಾಲಾ ದಿನಗಳಲ್ಲಿ ಸ್ನೇಹಿತರೊಡನೆ ಶಿಕ್ಷಕರೊಡನೆ ಬಹಳ ಸಮಯವನ್ನು ಕಳೆಯುತ್ತಿದ್ದೇನು.ನನ್ನ ಶಿಕ್ಷಕರು ನನ್ನ ಕೆಲಸವನ್ನು ಮೆಚ್ಚುತ್ತಿದ್ದರೂ ಮತ್ತು ಪ್ರತಿದಿನ ಉತ್ತಮವಾಗಿರಲು ನನ್ನನ್ನು ಪ್ರೇರಿಸುತ್ತಿದ್ದರು. ನನ್ನ ಶಾಲೆ ಯಲ್ಲಿ ನನಗೆ ಉತ್ತಮ ಸಂಸ್ಕಾರವನ್ನು ನೀಡಿದ್ದರು. ನನ್ನ ಮೊದಲನೆಯ ತರಗತಿಯ ಶಿಕ್ಷಕರ ಹೆಸರು ಶಿಜ್ಜಾ . ಅವರು ಎಂದರೆ ನನಗೆ ಬಹಳ ಅಚ್ಚುಮೆಚ್ಚು. ನಾನು ಚೆನ್ನಾಗಿ ಓದುತ್ತಾ ಹೀಗೆ ನನ್ನ ತರಗತಿಗಳನ್ನು ಮುಗಿಸುತ್ತಾ ಇದ್ದೆ. ನನಗೆ ಎಂಟನೇ ತರಗತಿಯಲ್ಲಿ ಪರಿಚಯವಾದ ಶಿಕ್ಷಕರು ವಿದ್ಯಾರಾಣಿ. ಅವರು ನನ್ನ ಜೀವನದಲ್ಲಿ ಬಹಳ ವಿಶಿಷ್ಟ ಪಾತ್ರವನ್ನು ವಹಿಸಿದ್ದಾರೆ ಅವರ ಮಾತು ನನ್ನ ಜೀವನಕ್ಕೆ ದಾರಿ ದೀಪವಾಗಿದೆ .ಅವರು ಯಾವಾಗಲೂ ನನ್ನ ಬೆನ್ನೆಲಬುವಾಗಿ ನಿಲ್ಲುತ್ತಿದ್ದರು. ಅವರು ನನಗೆ ಬಹಳಷ್ಟು ಪ್ರೇರಣೆ ನೀಡಿದ್ದಾರೆ .ಅವರು ಎಂದರೆ ನನಗೆ ಇವತ್ತಿಗೂ ಬಹಳ ಅಚ್ಚುಮೆಚ್ಚು. ನನ್ನ ಶಾಲಾ ದಿನಗಳಲ್ಲಿ ನನಗೆ ಬಹಳ ಅಚ್ಚು ಮೆಚ್ಚಿನ ದಿನಗಳೆಂದರೆ ನಾವು ಪ್ರವಾಸಕ್ಕೆ ಹೋಗಿದ್ದು. ನನ್ನ ಶಾಲಾ ಪ್ರವಾಸದಲ್ಲಿ ನಾನು ಭೇಟಿ ನೀಡಿದ ಮೊದಲನೆಯ ಸ್ಥಳ ವಂಡರ್ ಲಾ . ಅಲ್ಲಿ ನಾನು ನನ್ನ ಗೆಳತಿಯರು ಬಹಳ ಮಜಾ ಮಾಡಿದ್ದೇವು. ನನ್ನ ಸ್ನೇಹಿತರೊಡನೆ ಆಟವಾಡಿದ ಕುಣಿದಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಶಾಲೆಯು ಆಯೋಜಿಸುತ್ತಿದ್ದ ಫೆಸ್ಟ್ ಗಳಲ್ಲಿ ನಾನು ಹಾಗೂ ನನ್ನ ಸ್ನೇಹಿತರು ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ಪ್ರತಿ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ನಾನು ನೃತ್ಯದಲ್ಲಿ ಭಾಗವಹಿಸುತ್ತಿದ್ದನು. ಹೀಗೆ ನನ್ನ ಶಾಲಾ ದಿನಗಳು ಸಂತೋಷವಾಗಿ ಇದ್ದವು.
ನನ್ನ ಇಷ್ಟದ ಕ್ರೀಡೆ: ನನಗೆ ಕೇರಂ, ಚೆಸ್ ,ವಾಲಿಬಾಲ್, ಕುಂಟೆ ಬೆಲೆ, ಕಣ್ಣ ಮುಚ್ಚಾಲೆ ಕ್ರೀಡೆಗಳೆಂದರೆ ಬಹಳ ಇಷ್ಟ. ಅದರಲ್ಲಿಯೂ ಮುಖ್ಯವಾಗಿ ಬ್ಯಾಡ್ಮಿಂಟನ್ ಹಾಗೂ ಕಬಡ್ಡಿ ಎಂದರೆ ಬಹಳ ಇಷ್ಟ. ನನ್ನ ಶಾಲಾ ದಿನಗಳಲ್ಲಿ ನನಗೆ ರನ್ನಿಂಗ್ ರೇಸ್ ,ಲಾಂಗ್ ಜಂಪ್, ಶಾರ್ಟ್ ಪುಟ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಿ ಪುರಸ್ಕಾರವನ್ನು ಪಡೆದಿದ್ದೇನೆ.
ನನ್ನ ಕಾಲೇಜಿನ ದಿನಗಳು: ನಾನು ಪದವಿ ಪೂರ್ವ ಶಿಕ್ಷಣವನ್ನು ಕಾರ್ಮೆಲ್ ಕಾನ್ವೆಂಟ್ ಪಿಯು ಕಾಲೇಜು ಓದಿದ್ದೇನೆ. ಕಾಲೇಜಿನಲ್ಲಿ ನನಗೆ ಬೇರೆ ಪರಪಂಚ ಪರಿಚಯವಾಗಿತ್ತು. ಶಾಲೆಯಿಂದ ಕಾಲೇಜ್ ವ್ಯತ್ಯಾಸ ತಿಳಿಹಿತು.ನಾನು ಈಗ ಕ್ರೈಸ್ ಯೂನಿವರ್ಸಿಟಿಯಲ್ಲಿ ಬಿಕಾಂ ಪದವಿ ಓದುತ್ತಿದ್ದೇನೆ. ಕ್ರೈಸ್ ಯುನಿವರ್ಸಿಟಿ ಸೇರಬೇಕೆಂದು ಚಿಕ್ಕ ವಯಸ್ಸಿನಿಂದಲೂ ಬಹಳ ಆಸೆ ಇತ್ತು. ಕಾಲೇಜಿನಲ್ಲಿ ನನಗೆ ಹಲವಾರು ಸ್ನೇಹಿತರು ಪರಿಚಯವಾದರೂ. ನನಗೆ ಅವರು ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರು ಎಂದು ತಿಳಿಯಿತು. ನಾನು ಅವರ ರಾಜ್ಯಗಳ ವೈಶಿಷ್ಟ್ಯತೆ ಹಾಗೂ ತಮ್ಮ ಆಚರಣೆಯ ಬಗ್ಗೆ ಕೇಳಿ ತಿಳಿಯುತ್ತಿದ್ದೆ. ಹೀಗೆ ನಾನು ನೃತ್ಯಕ್ಕೆ ಸೇರಿ ಮತ್ತಷ್ಟು ಜನರು ಸ್ನೇಹಿತರಾದರು. ನಾನು ಎಸ್ ಡಬ್ಲ್ಯೂ ಓ, ಡ್ರೀಮ್ಸ್ ಮತ್ತಿತರ ಕಾರ್ಯಕ್ರಮಕ್ಕೆ ಸೇರಿದ್ದೀನಿ. ನನಗೆ ಈ ಎಲ್ಲ ಕಾರ್ಯಕ್ರಮಗಳಿಗೆ ಸೇರಿದ್ದರಿಂದ ನನಗೆ ಹೇಗೆ ಗುಂಪಿನಲ್ಲಿ ಕೆಲಸ ಮಾಡಬೇಕು, ಒಗ್ಗಟ್ಟಿನ ಬಗ್ಗೆ ತಿಳಿಯಿತು, ಇನ್ನು ಹಲವಾರು ಅನುಭವಗಳು ಆದವು.
ನನ್ನ ಇಷ್ಟಗಳು:.ನನಗೆ ಇಷ್ಟವಾದ ಬಣ್ಣ ನೀಲಿ. ನನಗೆ ಬಹಳ ಇಷ್ಟವಾದ ಆಹಾರ ಮಸಾಲ ದೋಸೆ. ನನಗೆ ಬಹಳ ಇಷ್ಟವಾದ ನಾಯಕ ನಟ ಡಾಕ್ಟರ್ ಪುನೀತ್ ರಾಜಕುಮಾರ್. ನನಗೆ ಬಹಳ ಇಷ್ಟವಾದ ನಾಯಕನಟಿ ರಾಧಿಕಾ ಪಂಡಿತ್. ನನಗೆ ಬಹಳ ಇಷ್ಟವಾದ ಸ್ಥಳ ಚಿಕ್ಕಮಂಗಳೂರು. ನನಗೆ ಪ್ರವಾಸಕ್ಕೆ ಹೋಗುವುದು ಬಹಳ ಇಷ್ಟ.
ನನ್ನ ಹವ್ಯಾಸಗಳು:ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಹವ್ಯಾಸಗಳನ್ನು ಹೊಂದಿರುತ್ತಾನೆ ಮತ್ತು ವಿಭಿನ್ನ ಕೆಲಸಗಳನ್ನು ಮಾಡುವುದು ಅವರಿಗೆ ಸಂತೋಷವನ್ನು ನೀಡುತ್ತದೆ. ನನಗೆ ಸಂತೋಷ ನೀಡುವ ಹವ್ಯಾಸ ಎಂದರೆ ನೃತ್ಯ ಮಾಡುವುದು ,ಚಿತ್ರ ಬಿಡಿಸುವುದು, ಮೆಹೆಂದಿ ಹಾಕುವುದು ,ಮನೆ ಕೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡುವುದು , ಮಕ್ಕಳೊಂದಿಗೆ ಆಟ ಆಡುವುದು ,ನನ್ನ ತಮ್ಮನ ಜೊತೆಯಲ್ಲಿ ಸಮಯ ಕಳೆಯುವುದು ನನಗೆ ತುಂಬಾ ಇಷ್ಟ. ನಾನು ವಿವಿಧ ಚಲನಚಿತ್ರಗಳನ್ನು ವೀಕ್ಷಿಸಲು, ವಿವಿಧ ಭಾಷೆಗಳನ್ನು ಕಲಿಯಲು ಸಹ ತುಂಬಾ ಇಷ್ಟಪಡುತ್ತೇನೆ.ನನಗೆ ನೃತ್ಯ ಇಷ್ಟವಾದ ಕಾರಣ ನಾನು ಬೆಲ್ಲಿ ಡಾನ್ಸ್, ಹಿಪ್ ಹಾಪ್, ಭರತನಾಟ್ಯಂ ಮತ್ತಿತರ ನೃತ್ಯವನ್ನು ಕಲಿಯುತ್ತಿದ್ದೇನೆ.
ನನಗೆ ಇಷ್ಟವಾದ ಭಾಷೆ: ನನ್ನ ಮಾತೃ ಭಾಷೆ ಮರಾಠಿ. ಆದರೂ ನನಗೆ ಬಹಳ ಇಷ್ಟವಾದ ಭಾಷೆ ಕನ್ನಡ. ಕನ್ನಡ ನಾಡಲ್ಲಿ ಹುಟ್ಟಿದ ನಾನು ಕನ್ನಡ ತಾಯಿಗೆ ಗೌರವದಿಂದ ಪೂಜಿಸುತ್ತೇನೆ. ಶಾಲಾ ದಿನಗಳಲ್ಲಿ ನಾನು ಹೊಸ ಹೊಸ ಕನ್ನಡ ಹಾಗೂ ಹಿಂದೆ ಕವಿತೆಗಳನ್ನು ಬರೆಯುತ್ತಿದ್ದೆ. ಇನ್ನು ಮುಂದೆಯೂ ಸಹ ನಾನು ಅನೇಕ ಕವಿತೆಗಳನ್ನು ಬರೆಯಬೇಕು ಎಂದುಕೊಂಡಿದ್ದೇನೆ.
ನನ್ನ ಪ್ರವಾಸದ ಅನುಭವಗಳು: ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇಂತಹ ಯಾತ್ರೆಗಳು ನಮ್ಮಲ್ಲಿ ಜ್ಞಾನದ ದೀವಿಗೆಯನ್ನು ಉದ್ದೀಪನಗೊಳಿಸುವ ಶಕ್ತಿಯನ್ನು ತನ್ನಲ್ಲಿ ಹೋದ ಗಿಸಿಕೊಂಡಿದೆ. ಆರೋಗ್ಯದಲ್ಲೂ ಚೇತರಿಕೆ ತಂದುಕೊಟ್ಟು, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯೂ ಹೌದು.ನಾನು ಹೇಳಿದ ಹಾಗೆ ನನಗೆ ಪ್ರವಾಸಕ್ಕೆ ಹೋಗುವುದು ಬಹಳ ಇಷ್ಟ. ಅದರಲ್ಲಿಯೂ ಟ್ರೆಕ್ಕಿಂಗ್ ಮತ್ತು ತೀರ್ಥಕ್ಷೇತ್ರಗಳಿಗೆ ಹೋಗುವುದು ಬಹಳ ಇಷ್ಟ. ನನಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಸ್ಥಳಗಳ ವೈಶಿಷ್ಟ್ಯತೆ ವೈಶಿಷ್ಟ್ಯತೆ ತಿಳಿದುಕೊಳ್ಳಲು ಬಹಳ ಕುತೂಹಲ. ನಾನು ಇದುವರೆಗೆ ನಂಜನಗೂಡು, ಮೈಸೂರು ,ಮಹಾರಾಷ್ಟ್ರದ ಪಂಡರಾಪುರ ,ತಿರುಪತಿ, ಮಂಗಳೂರು, ಧರ್ಮಸ್ಥಳ ಹಾಗೂ ತುಮಕೂರು ಪ್ರವಾಸಕ್ಕೆ ಹೋಗಿದ್ದೆನೆ .ನನಗೆ ಭಾರತದ ರಾಜ್ಯಗಳನ್ನು ಸುತ್ತಿದ ನಂತರ ವಿದೇಶವನ್ನು ಸುತ್ತಲೂ ಕೂಡ ಆಸೆ ಇದೆ. ನನಗೆ ಇತ್ತೀಚಿಗೆ ಬಹಳ ಇಷ್ಟವಾದ ಪ್ರವಾಸದ ಸ್ಥಳ ಎಂದರೆ ಹಿಮದ ವೇಣುಗೋಪಾಲ. ಅಲ್ಲಿ ಪ್ರಕೃತಿಯ ಸೌಂದರ್ಯ ನನ್ನ ಮನಸ್ಸನ್ನು ಸೆಳೆಯಿತು. ಅಲ್ಲಿನ ವಾತಾವರಣ ನನಗೆ ಬಹಳ ಸಂತೋಷ ತಂದು ಕೊಟ್ಟಿತು.
ನನ್ನ ಜೀವನದ ಗುರಿ:ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತವೆ. ಅದಕ್ಕೆ ಸಮಾಧಾನವೇ ಔಷಧಿ.ನಿಜ ಹೇಳಬೇಕೆಂದರೆ, ನನ್ನ ಜೀವನದ ಮುಖ್ಯ ಗುರಿ ನಿಜವಾದ, ಪ್ರಾಮಾಣಿಕ ಮತ್ತು ನಿಷ್ಠಾವಂತ ಮನುಷ್ಯನಾಗುವುದು, ಏಕೆಂದರೆ ಈ ಕ್ಷೇತ್ರದಲ್ಲಿ ಸ್ಪರ್ಧೆಯು ತುಂಬಾ ಕಡಿಮೆಯಾಗಿದೆ.
ನನ್ನ ಜೀವನದಲ್ಲಿ ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಯನ್ನು ಮಾಡದಿರುವುದು ನನ್ನ ಮೊದಲ ಗುರಿಯಾಗಿದೆ.
ನನ್ನ ದೇಶವು ನಮ್ಮ ನಾಗರಿಕರಿಗಾಗಿ ನಮ್ಮ ಕಲ್ಯಾಣಕ್ಕಾಗಿ ಮಾಡಿದ ಎಲ್ಲಾ ನಿಯಮಗಳು ಮತ್ತು ನಿರ್ಬಂಧನೆಗಳನ್ನು ಅನುಸರಿಸಲು ಅಥವಾ ಪಾಲಿಸಲು ನಾನು ಯಾವಾಗಲೂ ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.
ಜೀವನದಲ್ಲಿ ನನ್ನ ದೊಡ್ಡ ಗುರಿ ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು.ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಗುರಿ ಇರುತ್ತದೆ. ನನಗೆ ಯು.ಪಿ.ಎ.ಸ್ಸಿ ಪಾಸ್ ಮಾಡಿ ಐ.ಎ.ಎಸ್ ಆಗುವ ಗುರಿಯಿದೆ. ಎಷ್ಟೇ ಕಷ್ಟವಾದರೂ ಪರಿಶ್ರಮದಿಂದ ಗುರಿ ಸಾಧಿಸಲು ಪ್ರಯತ್ನಿಸುತ್ತೇನೆ. ನನ್ನ ಜೀವನದ ಇನ್ನೊಂದು ಮುಖ್ಯವಾದ ಗುರಿ ಎಂದರೆ ನನ್ನ ತಂದೆ ತಾಯಿ ಹಾಗೂ ನನ್ನ ತಮ್ಮನನ್ನು ಸಂತೋಷದಿಂದ ನೋಡಿಕೊಳ್ಳುವುದು. ನಾನು ಐಎಎಸ್ ಅಧಿಕಾರಿ ಆದ ನಂತರ ಓದುವ ಬಡಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಇಷ್ಟಪಡುತ್ತೇನೆ. ನಾನು ದೇಶದ ಒಳ್ಳೆಯ ಪ್ರಜೆಯಾಗಿರಲು ಇಷ್ಟಪಡುತ್ತೇನೆ