ಸದಸ್ಯ:Harish kulabail/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಲೆ

ಶ್ರೀ ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲೆ ಮೀಯಪದವು

೧೯೬೫ರಲ್ಲಿ ಎಂ.ರಾಮಕೃಷ್ಣರ ರಾಯರ ಪ್ರಯತ್ನದಿಂದ ಊರ ವಿದ್ಯಾಭಿಮಾನಿಗಳು ಒಟ್ಟು ಸೇರಿ ತೊಟ್ಟೆತ್ತೋಡಿ ನಾರಾಯಣ ಭಟ್ಟ ಹಾಗೂ ಅವರ ಪುತ್ರ ಟಿ. ಎನ್. ಕೇಶವ ಭಟ್ಟರ ಮುಂದಾಳುತನದಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಕಾಂತಪ್ಪ ಚೌಟ ಹಾಗೂ ನಾರಾಯಣ ಚೌಟರು ಸಂಘಕ್ಕೆ ಸ್ಥಳ ದಾನ ಮಾಡಿದರು. ಸರಕಾರದಿಂದ ಶಾಲೆಯ ಮಂಜೂರಾತಿಯನ್ನು ಪಡೆಯಲು ನ್ಯಾಯವಾದಿಗಳಾದ ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಉಜಿರೆ ಈಶ್ವರ ಭಟ್ಟರು ಸಹಕರಿಸಿದರು. ಇವರೆಲ್ಲರ ಪ್ರಯತ್ನದಿಂದ ಸಂಘವು ೧೯೬೬ರಲ್ಲಿ ಪ್ರೌಢ ಶಾಲೆಯನ್ನು ಪ್ರಾರಂಭಿಸಲು ಮಂಜೂರಾತಿಯನ್ನು ಪಡೆಯಿತು. ೧೯೭೫ರಲ್ಲಿ ತೊಟ್ಟೆತ್ತೋಡಿ ನಾರಾಯಣ ಭಟ್ಟರು ನಿಧನರಾದುದರಿಂದ, ೧೯೭೫ರಿಂದ ೧೯೭೯ರವರೆಗೆ ಪೈವಳಿಕೆ ಡಾ. ಶಂಭಟ್ಟರು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ೧೯೭೯ರಿಂದ ಪ್ರೇಮಾ. ಕೆ. ಭಟ್ ಇವರ ಸಂಚಾಲಕತ್ವದಲ್ಲಿ ಶಾಲೆ ಮುನ್ನಡೆಯುತ್ತಿದೆ.೨೦೧೦ರಲ್ಲಿ ಹಿರಿಯ ಮಾಧ್ಯಮಿಕ ಶಾಲೆಯಾಗಿ ಭಡ್ತಿ ಹೊಂದಿತು.

ಹೆಚ್ಚಿನ ಮಾಹಿತಿ[ಬದಲಾಯಿಸಿ]

  1. ರಾಜ್ಯ : ಕೇರಳ
  2. ಜಿಲ್ಲೆ : ಕಾಸರಗೋಡು
  3. ತಾಲೂಕು: ಮಂಜೇಶ್ವರ
  4. ಪಂಚಾಯತು: ಮೀಂಜ
  5. ಊರು : ಮೀಯಪದವು

ಉಲ್ಲೇಖ[ಬದಲಾಯಿಸಿ]

[೧]

  1. ಸ್ವರ್ಣಪದ- ಸ್ಮರಣ ಸಂಚಿಕೆ- ೨೦೧೬