ಸದಸ್ಯ:HEMANTH MUNDODI/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಗೋರಿ[ಬದಲಾಯಿಸಿ]

ಲಗೋರಿ ನಮ್ಮ ಪ್ರಾಚೀನ ಕ್ರೀಡೆಗಳಲ್ಲಿ ಒಂದಾಗಿದ್ದು ಹಳ್ಳಿಗಳಲ್ಲಿ ಹಾಗೂ ಜಾನಪದರಲ್ಲಿ ತನ್ನದೇ ಮಹತ್ವವನ್ನು ಪಡೆದಿದೆ. ನಾವು ಇದನ್ನು ಒಂದು ಜಾನಪದ ಕ್ರೀಡೆಯೆಂದು ಪರಿಗಣಿಸಬಹುದು ಜಾನಪದ ಕ್ರೀಡೆ ಲಗೋರಿಯನ್ನು ವೀಕ್ಷಿಸಿದರೆ ಇದು ಬಾಲ್ಯದಲ್ಲಿ ಬಾಲಕ ಬಾಲಕಿಯರು ಮನೆಯ ಪ್ರಾಂಗಣದಲ್ಲಿ ಒಟ್ಟಾಗಿ ಆಡುವ ಆಟವಾಗಿದ್ದರೂ ಯುವಕರು ಊರ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಆಡುವ ಕ್ರೀಡೆಯನ್ನಬಹುದು ಹಿಂದೆ ಕೃಷೀಗೆ ಮುಖ್ಯವಾದ ಗೋ ಪಾಲನೆಯನ್ನು ನಿ‌ರ್ವಹಿಸುತ್ತಿದ್ದ ಹತ್ತಾರು ಮನೆಗಳ ಬೆಳದ ಬಾಲ ಗೋಪಾಲರು ಮುಂಜಾನೆಯಿಂದ ಸಂಜೆಯವರೆಗೆ ಊರ ಬಯಲಿನಲ್ಲಿ ಕಟ್ಟಿ ತಂದ ಬುತ್ತಿಯಂಡು ಒಂದೆಡೆ ದನಗಾಯುವ ಜತೆಗೆ ಆಡುತ್ತಿದ್ದ ಹಲ ಬಗೆಯ ಜನಪದ ಕ್ರೀಡೆಗಳಲ್ಲಿ ಲಗೋರಿ ಒಂದಾಗಿದೆ. ಲಗೋರಿಯನ್ನುವ ಶಬ್ದ (ಲಗ್ಗೆ+ಗೋರಿ) ಎನ್ನುವ ಶಬ್ದದಿಂದ ಬಂದಿರಬಹುದು ಲಗ್ಗೆ ಎಂದರೆ ಚೆಂಡು ಎಸೆಯಲು ಇಟ್ಟಿರುವ ಗುರಿ ಹಲಗೆ ಎಂದಾಗಿದೆ. ಗೋರಿ ಎಂದರೆ ಹಲಗೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟಾಗ ಗೋರಿ ಮಾದರಿಯಲ್ಲಿ ನಿಲ್ಲುತ್ತದೆ. ಇದು ತೀರಾ ಗ್ರಾವೀಣ ಪ್ರದೇಶದಲ್ಲಿ ಕಂಡು ಬರುವ ಕಾರಣ ಗ್ರಾಮೀಣ ಶಬ್ದದಲ್ಲಿ ಮುಂದೆ ಲಗೋರಿ ಎಂದು ಹಸರಿಸಬಹುದು. ಲಗೋರಿಯಲ್ಲಿ ನೆಡೆಯುವ ಕ್ರೀಯೆಗಳನ್ನು ನೋಡಿದಾಗ ಗೋರಿಯನ್ನು ಕಟ್ಟುವ ಮತ್ತು ಕೆಡೆಯುದನ್ನು ಮುಖ್ಯವಾಗಿ ಕಾಣುತ್ತೇವೆ. ಚಪ್ಪಡಿ ಕಲ್ಲಿನ ಚೂರಗಳನ್ನು ಮರದ ತೋಟ್ಟೆಗಳೇ ಆದಿಯೂಗಿ ಲಘು ಸಾಥನಗಳನ್ನು ಒಂದರ ಮೇಲೊಂದನ್ನು ಸೇರಿಸಿ ಕಟ್ಟುವುದೇ ಕೋಟೆಯಪ್ರತಿಕಾವೇನಬಹುದು. ಲಗ್ಗೆಯಿಟ್ಟು ಅದನ್ನು ಕೆಡೆಯುವ ಮತ್ತೆ ಕಟ್ಟಲು ಇತ್ತಂಡಗಳ ಸಾಹಸ ಸ್ಪರ್ಧೆಯಲ್ಲಿ ನೇಡೆಯುತ್ತದೆ.

ನಿಯಮಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]