ಸದಸ್ಯ:Gshguru/ಪವಮಾನ ಮಂತ್ರ

ವಿಕಿಪೀಡಿಯ ಇಂದ
Jump to navigation Jump to search

ಪವಮಾನ ಮಂತ್ರ (ಪವಮಾನ ಎಂದರೆ "ಶುದ್ಧೀಕರಿಸಿದ", ಐತಿಹಾಸಿಕವಾಗಿ ಸೋಮಕ್ಕಿರುವ ಇನ್ನೊಂದು ಹೆಸರು), ಇದನ್ನು ಪವಮಾನ ಅಭ್ಯಾರೋಹ (ಅಭ್ಯಾರೋಹ, ಅಥವಾ "ಆರೋಹಣ", "ಪ್ರಾರ್ಥನೆ" ಯ ಉಪನಿಷತ್ ತಾಂತ್ರಿಕ ಪದ)[೧] ಮಂತ್ರವು ಬೃಹದಾರಣ್ಯಕ ಉಪನಿಷತ್(1.3.28.) ನಲ್ಲಿ ಪರಿಚಯಿಸಲ್ಪಟ್ಟಿತು.[೨] ಈ ಮಂತ್ರವು ಮೂಲತಃ ಪ್ರಾರ್ಥನೆಯ ಮೊದಲನೆಯ ಹಂತದಲ್ಲಿ ಅಂದರೆ, ಪ್ರಾರ್ಥನೆಯ ಪ್ರಾಯೋಜಕರ ಪರಿಚಯಾತ್ಮಕ ಪ್ರಶಂಸೆಯ ಸಮಯದಲ್ಲಿ ಉಚ್ಚರಿಸುತ್ತಿದ್ದರು.[೩]

ಪಠ್ಯ ಮತ್ತು ಅನುವಾದ[ಬದಲಾಯಿಸಿ]

ಮಂತ್ರ (ಸಂಸ್ಕೃತದಲ್ಲಿ ):

ಅಸತೋಮ ಸದ್ಗಮಯ,
ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಮ್ ಗಮಯ

ಕನ್ನಡ ಅನುವಾದ:

ಅಸತ್ಯದಿಂದ ಸತ್ಯದೆಡೆಗೆ,
ಕತ್ತಲೆಯಿಂದ ಬೆಳಕಿನಡೆಗೆ,
ಸಾವಿನಿಂದ ಮುಕ್ತಿಯೆಡೆಗೆ,

(ನನ್ನನ್ನು ಕರೆದುಕೊಂಡು ಹೋಗು)

ಸಂಸ್ಕೃತ ಪದಗಳ ಅರ್ಥ[ಬದಲಾಯಿಸಿ]

"ಅಮೃತಮ್" ಅನ್ನು ಮುಕ್ತಿಯಂತೆಯೂ ಹಾಗೂ "ಮೃತ್ಯು"ವನ್ನು ಸಾವಿಗಾಗಿಯೂ ಉಪಯೋಗಿಸಿದ್ದಾರೆ. ಮೃತ್ಯೋರ್ ಅಂದರೆ "ಸಾವಿನಿಂದ" ಎಂಬ ಅರ್ಥವಿದೆ. ಸತ್ ಎಂದರೆ ಸತ್ಯ.

ಉಲ್ಲೇಖಗಳು[ಬದಲಾಯಿಸಿ]