ಸದಸ್ಯ:Gowtham k shetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                      ರಿಜರ್ವ್ ಬ್ಯಾಂಕ್

ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ ೧೯೩೭ರಲ್ಲಿ ಮುಂಬೈಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ರಘುರಾಮ್ ರಾಜನ್ ಬ್ಯಾಂಕ್‌ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ರಿಜರ್ವ್ ಬ್ಯಾಂಕನ್ನು ೧೯೩೪ರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ಯನ್ವಯ ಒಂದು ಖಾಸಗಿ ಷೇರುದಾರರ ಬ್ಯಾಂಕ್ ಆಗಿ ೧೯೩೫ ರ ಏಪ್ರಿಲ್ ೧ ರಂದು ಸ್ಥಾಪಿಸಲಾಯಿತು.[೩] ಸ್ವಾತಂತ್ಯ ನಂತರ ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ್ ಒಂದರ ಅವಶ್ಯಕತೆ ಬಿತ್ತಾದ್ದರಿಂದ ಸರ್ಕಾರ ರಿಜರ್ವ್ ಬ್ಯಾಂಕನ್ನು ೧೯೪೭ ರ ಜನವರಿ ೧ ರಂದು ರಾಷ್ಟ್ರೀಕರಿಸಿ ಕೇಂದ್ರ ಬ್ಯಾಂಕನ್ನಾಗಿ ಪರಿವರ್ತಿಸಿತು. ಈ ಬ್ಯಾಂಕು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದ್ದು ಎಲ್ಲಾ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳ ನೇರ ನಿಯಂತ್ರಣ ಸಾಧಿಸುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ. ರಿಜರ್ವ್ ಬ್ಯಾಂಕು ರೂ. ೫ ಕೋಟಿ ಪಾವತಿಯಾದ ಬಂಡಾವಾಳ ಹೋಂದಿದೆ. ಈ ಬಂಡವಾಳವನ್ನು ಪೂರ್ತಿ ಪಾವತಿಯಾದ ರೂ. ೧೦೦ ರ ಮುಖಬೆಲೆಯ ೫ ಲಕ್ಷ ಷೇರುಗಳನ್ನಾಗಿ ವಿಭಜಿಸಲಾಗಿದೆ. ಎಲ್ಲಾ ಷೇರುಗಳನ್ನು ಕೇಂದ್ರ ಸರ್ಕಾರವೇ ಹೊಂದಿದೆ. ರಿಜರ್ವ್ ಬ್ಯಾಂಕಿನ ಆಡಳಿತ ಮತ್ತು ಮೇಲ್ವಿಚಾರಣೆಯು ೨೦ ಸದಸ್ಯರನ್ನೊಳಗೊಂಡ ಕೇಂದ್ರ ನಿರ್ದೇಶಕರ ಮಂಡಳಿಗೆ ಒಳಪಟ್ಟಿದೆ. ಈ ೨೦ ನಿರ್ದೇಶಕರುಗಳಲ್ಲಿ ಒಬ್ಬ ಗೌರ್ನರ್, ನಾಲ್ವರು ಉಪ ಗೌರ್ನರ್ಗ್ ಗಳು, ಹಣಕಾಸು ಇಲಾಖೆಯ ಒಬ್ಬ ನಿರ್ದೇಶಕ, ವಿವಿಧ ಪ್ರಮುಖ ಕ್ಷೇತ್ರ ಗಳಿಂದ ಆಯ್ದು ಸರ್ಕಾರ ನಾಮಕರಣ ಮಾಡಿದ ಹತ್ತು ಮಂದಿ ನಿರ್ದೇಶಕರು ಹಾಗೂ ಕೋಲ್ಕತ್ತ, ಮುಂಬೈ, ಚೆನ್ನೈ ಮತ್ತು ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಳಿಗಳ ನಾಲ್ಕು ಪ್ರತಿನಿಧಿಗಳಿರುತ್ತಾರೆ. ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ ೧೯೩೭ರಲ್ಲಿ ಮುಂಬೈಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ರಘುರಾಮ್ ರಾಜನ್ ಬ್ಯಾಂಕ್‌ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ.