ಸದಸ್ಯ:Gopalpurushothama/ನನ್ನ ಪ್ರಯೋಗಪುಟ3
ಸುಂದರಂ ನಟರಾಜನ್
ಸುಂದರಂ ನಟರಾಜನ್ ಭಾರತದ ನೇತ್ರಶಾಸ್ತ್ರಜ್ಞರಲ್ಲಿ (ಆಫ್ ದಮಾಲಜಿಸ್ಟ್ಓರೆ ಅಕ್ಷರಗಳು) ಒಬ್ಬರು. ಅವರು ೨೦೦೨ರಲ್ಲಿ ಮುಂಬೈನ ಧಾರಾವಿ ಎಂಬ ಸ್ಲಮ್ ನಲ್ಲಿ ಉಚಿತ ಕ್ಲಿನಿಕ್ ಅನ್ನು ಆರಂಭಿಸಿದರು. ಮತ್ತು ೮೦೦೦ ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಚಿಕಿತ್ಸೆ ನೀಡಲು ಮುಂಬೈನ ಇತರೆ ಉಪನಗರಗಳಾದ ಮನ್ಖುರ್ದ್ ಮತ್ತು ಗೋವಂಡಿಯಲ್ಲಿ ಉಚಿತ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡಿದರು. ಹಾಗೆಯೇ ಅವರು ೨೦೧೬ರಲ್ಲಿ ಕಾಶ್ಮೀರದಲ್ಲಿ ಪೆಲೆಟ್ ಗನ್ ಗುಂಡಿನ ವಿಕ್ಟಮ್ಸ್ ಗೆ ಶಿಬಿರದಲ್ಲಿ ಆಪರೇಷನ್ ಹಾಗೂ ಚಿಕಿತ್ಸೆಯನ್ನು ನೀಡಿದರು.
ಡಾ. ಸುಂದರಂ ನಟರಾಜನ್
ಜನನ - ೪, ಸೆಪ್ಟೆಂಬರ್ ೧೯೫೭. ಮದುರೈ, ತಮಿಳುನಾಡು.
ಆಲ್ಮಾಮ್ಯಾಟರ್ - ಮದ್ರಾಸ್ ಮೆಡಿಕಲ್ ಕಾಲೇಜು , ಶಂಕರ ನೇತ್ರಾಲಯ.
ಉದ್ಯೋಗ - ನೇತ್ರಶಾಸ್ತ್ರಜ್ಞರು
ಪ್ರಶಸ್ತಿಗಳು - ಪದ್ಮಶ್ರೀ
ಜಾಲತಾಣ - www.adityajyoteyehospital.org(http://www.adityajyoteyehospital.org)
ಸುಂದರಂ ನಟರಾಜನ್ ಅವರು ೨೦೧೩ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು ೨೦೧೯ರ ಜನವರಿಯಲ್ಲಿ ಮುಂಬೈನ ವಡಾಲಾದಲ್ಲಿರುವ ಆದಿತ್ಯ ಜ್ಯೋತ್ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದರು.
ಶಿಕ್ಷಣ
[ಬದಲಾಯಿಸಿ]ನಟರಾಜನ್ ೧೯೮೦ರಲ್ಲಿ ಚೆನ್ನೈನ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ೧೯೮೪ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ನೇತ್ರವಿಜ್ಞಾನದಲ್ಲಿ(ಡಿಒ) ತಮ್ಮ ಡಿಪ್ಲಮಾವನ್ನು ಪೂರ್ಣಗೊಳಿಸಿದರು. ೧೯೮೫ರಲ್ಲಿ ಶಂಕರ ನೇತ್ರಾಲಯದಲ್ಲಿ ರೆಟಿನಾ ಮತ್ತು ವಿಟ್ರೀಯಸ್ ಸರ್ಜರಿ(ಎಫ್ಆರ್ ವಿಎಸ್)ನಲ್ಲಿ ಫೆಲೋಶಿಪ್ ಪಡೆದರು.
ಹಾಗೆಯೇ ಅವರು ೨೦೧೨ರಲ್ಲಿ ಆಲ್ ಇಂಡಿಯಾ ಕಾಲೇಜಿಂ ಆಫ್ ಆಫ್ ದಮಾಲಜಿ(ಎಫ್ಎಐಸಿಒ)ನಲ್ಲಿ ಫೆಲೋ, ೨೦೧೮ರಲ್ಲಿ ಗ್ಲಾಸ್ಗೋದಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್(ಎಫ್ಆರ್ ಸಿಎಸ್) ಫೆಲೋಶಿಪ್ ಅನ್ನು ಮತ್ತು ೨೦೧೯ರಲ್ಲಿ ಯುರೋಪಿಯನ್ ಲ್ಯಾಟಿನ್ ಅಮೇರಿಕನ್ ಸೊಸೈಟಿ ಆಫ್ ಆಫ್ ದಮಾಲಜಿಯ(ಎಫ್ಇಎಲ್ಎಎಸ್) ಫೆಲೋ ಅನ್ನು ಪೂರ್ಣಗೊಳಿಸಿದರು.
ಪ್ರಶಸ್ತಿಗಳು ಮತ್ತು ದಾಖಲೆಗಳು
[ಬದಲಾಯಿಸಿ]ನಟರಾಜನ್ ಅವರು ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ೨೦೧೩ರಲ್ಲಿ ಭಾರತದ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿ ಅವರಿಂದ ಪಡೆದುಕೊಂಡರು.
ಅವರು ಮಧುಮೇಹ ಕಣ್ಣಿನ ತಪಾಸಣೆಯಲ್ಲಿ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದ್ದಾರೆ. ಮುಂಬೈನ ಧಾರಾವಿಯಲ್ಲಿ ೬೪೯ ಮಧುಮೇಹ ರೋಗಿಗಳನ್ನು ಪರೀಕ್ಷಿಸುವಾಗ ೮ ಗಂಟೆಗಳಲ್ಲಿ ಅತಿ ಹೆಚ್ಚು ಮಧುಮೇಹ ಕಣ್ಣಿನ ತಪಾಸಣೆ ಮಾಡಿದ್ದರು. ಆದ ಕಾರಣ ಗಿನ್ನಿಸ್ ದಾಖಲೆಯನ್ನು ಸಾಧಿಸಿದ್ದಾರೆ.
ರೆಟಿನಾ ಹಾಲ್ ಆಫ್ ಫೇಮನ್ ನ "ಕ್ಯಾರೆಕ್ಟರ್ ಇಂಡಕ್ಟೀ" ಆಗಿದ್ದಾರೆ. ೨೦೧೭ರಲ್ಲಿ ಪಟ್ಟಿಮಾಡಲಾದ ಇಬ್ಬರು ಭಾರತೀಯರಲ್ಲಿ ಇವರು ಒಬ್ಬರಾಗಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡೂವರಡ ದಿನಗಳಲ್ಲಿ ನಲವತ್ತೇಳು ವಿಟ್ರೊರೆಟಿನಲ್ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇವರ ಸೇವೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಗೌರವಾನ್ವಿತ ರಾಜ್ಯ ಪ್ರಶಸ್ತಿಯನ್ನು ನೀಡಿ ಗಾರವಿಸಲಾಗಿದೆ.
ಪ್ರಸ್ತುತ ಶೈಕ್ಷಣಿಕ ಸ್ಥಾನಗಳು
[ಬದಲಾಯಿಸಿ]- ಅಧ್ಯಕ್ಷರು - ಸಂಘಟಿತ ಮೆಡಿಸಿನ್ ಅಕಾಡೆಮಿಕ್ ಗಿಲ್ಡ್ (ಒಎಮ್ಎಜಿ)
- ಮ್ಯಾನೇಜಿಂಗ್ ಟ್ರಸ್ಟಿ - ಆದಿತ್ಯ ಜ್ಯೋ ತ್ ಫೌಂ ಡೇಶನ್ ಫಾರ್ ಟ್ವಿಂಕ್ಲಿಂಗ್ ಲಿಟಲ್ ಐಸ್ [10]
- ಮ್ಯಾನೇಜಿಂಗ್ ಟ್ರಸ್ಟಿ - ಆದಿತ್ಯ ಜ್ಯೋ ತ್ ರಿಸರ್ಚ್ ಫೌಂ ಡೇಶನ್
- ಕಾರ್ಯದರ್ಶಿ - ಆದಿತ್ಯ ಜ್ಯೋ ತ್ ನೇತ್ರ ಸಂಶೋಧನಾ ಸಂಸ್ಥೆ
- ಅಧ್ಯಕ್ಷರು - ಅಖಿಲ ಭಾರತ ನೇತ್ರವಿಜ್ಞಾನ ಸೊಸೈಟಿ (ಎಐಒಎಸ್) ರಾಷ್ಟ್ರವ್ಯಾಪಿ ಡಿಆರ್ ಸ್ಕ್ರೀ ನಿಂಗ್ ಕಾರ್ಯಪಡೆ
- ಅಂತರರಾಷ್ಟ್ರೀ ಯ ಸಮಿತಿಯ ಅಧ್ಯಕ್ಷರು - ಅಖಿಲ ಭಾರತ ನೇತ್ರಶಾಸ್ತ್ರದ ಸೊಸೈಟಿ [11]
- ಪ್ರಧಾನ ಕಾರ್ಯದರ್ಶಿ - ಗ್ಲೋ ಬಲ್ ಐ ಜೆನೆಟಿಕ್ಸ್ ಕನ್ಸೋ ರ್ಟಿಯಂ (ಜಿಇಜಿಸಿ)
- ತಕ್ಷಣದ ಹಿಂದಿನ ಅಧ್ಯಕ್ಷರು - ಇಂಟರ್ನ್ಯಾಷನಲ್ ಆಕ್ಯುಲರ್ ಟ್ರಾಮಾ ಸೊಸೈಟಿ
- ತಕ್ಷಣದ ಹಿಂದಿನ ಅಧ್ಯಕ್ಷರು - ಓಕ್ಯುಲರ್ ಟ್ರಾಮಾ ಸೊಸೈಟಿ ಆಫ್ ಇಂಡಿಯಾ (ಒಟಿಎಸ್ಐ)
- ಎಐಒಎಸ್ ಐಸಿಒ ಸಾಮಾನ್ಯ ಸಭೆಯ ಪ್ರತಿನಿಧಿ
- ಪ್ರಸ್ತುತ ಶೈಕ್ಷಣಿಕ ಸ್ಥಾನಗಳು
- ಐಸಿಒ ಬೋರ್ಡ್ ಆಫ್ ಟ್ರಸ್ಟೀ ಸ್ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನೇತ್ರವಿಜ್ಞಾನ
- ಅಧ್ಯಕ್ಷರು - ಏಷ್ಯಾ ಪೆಸಿಫಿಕ್ ಆಪ್ತಾಲ್ಮಿಕ್ ಟ್ರಾಮಾ ಸೊಸೈಟಿ (ಎಪಿಒಟಿಎಸ್) [12]
- ಸದಸ್ಯ - ಯುರೆಟಿನಾ ಅಂತರಾಷ್ಟ್ರೀ ಯ ಸಲಹಾ ಮಂಡಳಿ
- ಸನ್ಮಾನ್ಯ ಅಧ್ಯಕ್ಷರು- ಶಂಕರ ನೇತ್ರಾಲಯ ಹಳೆ ವಿದ್ಯಾರ್ಥಿಗಳ ಸಂಘ
- ಪ್ರಾದೇಶಿಕ ವ್ಯವಸ್ಥಾಪಕ ಸಂಪಾದಕ - ಐ ವರ್ಲ್ಡ್ ಏಷ್ಯಾ ಪೆಸಿಫಿಕ್, ಭಾರತೀಯ ಆವೃತ್ತಿ
- ಗೌರವ ನಿರ್ದೇಶಕರು - ಭಾರತೀಯ ಕಣ್ಣಿನ ಗಾಯದ ನೋಂದಣಿ
- ಸದಸ್ಯ - ಕೌನ್ಸಿಲ್ ಆಫ್ ಏಷ್ಯಾ ಪೆಸಿಫಿಕ್ ಇಂಟ್ರಾಕ್ಯುಲರ್ ಇಂಪ್ಲಾಂಟ್ ಅಸೋಸಿಯೇಷನ್, ಸಿಂಗಾಪುರ
- ಕಾರ್ಯಕಾರಿ ಸಮಿತಿಯ ಸದಸ್ಯ - ಇಂಟರ್ನ್ಯಾಷನಲ್ ಸೊಸೈಟಿ ಆಫ್ ಆಕ್ಯುಲರ್ ಟ್ರಾಮಾ
- ಸನ್ಮಾನ್ಯ ಕಾರ್ಯದರ್ಶಿ, ಹಳೆ ವಿದ್ಯಾರ್ಥಿಗಳ ಸಂಘ- ಶಂಕರ ನೇತ್ರಾಲಯ
- ಉಪಾಧ್ಯಕ್ಷ - ಇಂಡೋ-ಜಪಾನೀಸ್ ಆಪ್ತಾಲ್ಮಿಕ್ ಫೌಂ ಡೇಶನ್
- ಪೋಷಕ - ನ್ಯಾಷನಲ್ ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಬ್ಲೈಂ ಡ್ನೆಸ್, ಮುಂಬೈ ಶಾಖೆ