ಸದಸ್ಯ:Gayana Mandekolu/ನನ್ನ ಪ್ರಯೋಗಪುಟ
ಸುಳ್ಯ ತಾಲೂಕು ಪಕ್ಕದಲ್ಲಿರುವ ಗ್ರಾಮ ಜಾಲ್ಸೂರು. ನದಿಯ ತಟದಲ್ಲಿರುವ ಗ್ರಾಮ. ಜಾಲ್ಸೂರಿನಿಂದ ಸೋಣಂಗೇರಿ- ಗೋಂಟಡ್ಕ ಕಾಸರಗೋಡು ರಸ್ತೆಯಲ್ಲಿ ಗಡಿಯವರೆಗೆ ಪಯಸ್ವಿನಿ ನದಿ ದಡದವರೆಗೆ ಜಾಲ್ಸೂರು ಆವರಿಸಿಕೊಂಡಿದೆ. ಅನೇಕ ಕೈಗಾರಿಕೆ ಹಾಗೂ ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.
ಧಾರ್ಮಿಕ ಕೇಂದ್ರಗಳು
[ಬದಲಾಯಿಸಿ]ಅಡ್ಕಾರು ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕುಕ್ಕುಂದೂರು. ಶ್ರೀ ರಾಘವೆಂದ್ರ ಭಜನಾ ಮಂದಿರ ಅಡ್ಕಾರು, ಮಾರಿಯಮ್ಮಗುಡಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನಂಗಾರು, ಕಿನ್ನಿಮಾಣಿ-ಪೂಮಾಣಿ ದೇವಸ್ಥಾನ ಮಾಪಲಡ್ಕ, ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಸೋಣಂಗೇರಿ, ಜುಮ್ಮಾ ಮಸೀದಿ ಜಾಲ್ಸೂರು ಮಾಪಲಡ್ಕ , ದರ್ಗಾ ಶರೀಫ್ ಪಂಜಿಕಲ್ಲು, [೧]
ಸಂಸ್ಥೆಗಳು
[ಬದಲಾಯಿಸಿ]ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರೌಢಶಾಲೆ . ಹೈಸ್ಕೂಲ್ ಶಿಕ್ಷಣದವರೆಗೆ ಜಾಲ್ಸೂರಿನಲ್ಲಿ ಅವಕಾಶವಿದೆ ,ಹೆಚ್ಚಿನ ವ್ಯಾಸಂಗಕ್ಕಾಗಿ 'ಸುಳ್ಯವನ್ನು ಅವಲಂಬಿಸಿದ್ದಾರೆ .[೨]
ಕೃಷಿ
[ಬದಲಾಯಿಸಿ]ಅಡಿಕೆ, ರಬ್ಬರ್, ಕರಿಮೆಣಸು, ಬಾಳೆ ,ತೆಂಗು,ಮೊದಲಾದ ಕೃಷಿ ಇದೆ.
ಜನಸಂಖ್ಯೆ
[ಬದಲಾಯಿಸಿ]ಜಾಲ್ಸೂರಿನ ಒಟ್ಟು ಜನಸಂಖ್ಯೆ ೬೩೭೦.ಅದರಲ್ಲಿ ಗಂಡಸರ ಸಂಖ್ಯೆ ೩೧೮೫ ಹಾಗೂ ಹೆಂಗಸರ ಸಂಖ್ಯೆ೩೧೮೫ ಇದೆ. [೩]
ವಿಸ್ತೀರ್ಣ
[ಬದಲಾಯಿಸಿ]೧೪೫೨ ಹೆಕ್ಟೇರ್.[೪]
ನಾಗರಿಕ ಸೌಲಭ್ಯಗಳು
[ಬದಲಾಯಿಸಿ]ಗ್ರಾಮ ಪಂಚಾಯತ್ ಕಛೇರಿ, ಅಂಚೆ ಕಛೇರಿ,ಸಿಂಡಿಕೇಟ್ ಬ್ಯಾಂಕ್, ಸೊಸೈಟಿ, ಅರಣ್ಯಗೇಟು,ಪೆಟ್ರೋಲ್ ಬಂಕ್ ಗಳು