ಸದಸ್ಯ:TCsshetty/ನನ್ನ ಪ್ರಯೋಗಪುಟ6

Coordinates: 12°52′26″N 74°50′42″E / 12.873864°N 74.844988°E / 12.873864; 74.844988
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಲೋಸಿಯಸ್ ವಸ್ತು ಸಂಗ್ರಹಾಲಯ
ಸಂತ ಅಲೋಸಿಯಸ್ ವಸ್ತು ಸಂಗ್ರಹಾಲಯ
Lua error in ಮಾಡ್ಯೂಲ್:Location_map at line 425: No value was provided for longitude.
ಸ್ಥಾಪಿಸಲಾದದ್ದು1913
ಸ್ಥಳಮಂಗಳೂರು, ಕರ್ನಾಟಕ,  ಭಾರತ
ಕಕ್ಷೆಗಳು12°52′26″N 74°50′42″E / 12.873864°N 74.844988°E / 12.873864; 74.844988
ವರ್ಗMuseum

ಸಂತ ಅಲೋಸಿಯಸ್ ವಸ್ತು ಸಂಗ್ರಹಾಲಯ

ಚರಿತ್ರೆ[ಬದಲಾಯಿಸಿ]

ಮೊಯಿಚಿನೆ ಗ್ಯಾಲರಿಯ ನೋಟ

ಪ್ರಸ್ತುತ ಮಂಗಳೂರು ಹೃದಯ ಭಾಗದಲ್ಲಿರುವ ಕೇಂದ್ರಗ್ರಂಥಾಲಯದಿಂದ ಸುಮಾರು ೧೦೦ ಮೀಟರ್ ದೂರದಲ್ಲಿದೆ. ಇದು ವಿಶ್ವಪ್ರಸಿದ್ದ ಸಂತ ಅಲೋಶಿಯಸ್ ಚಾಪೆಲ್ ನ ಸಮೀಪದಲ್ಲಿದೆ. ಇದನ್ನು ಅಲೋಸಿಯಮ್ ಎಂದು ಕರೆಯುತಾರೆ. ೧೯೧೩ರಲ್ಲಿ ಇಟೆಲಿಯ ಜೆಸುಯಿಟ್ ಸಂತ ಚಿಯಾಪಿ ಎನ್ನುವವರು ಸಂಗ್ರಹಿಸಿ ತಂದ ಕೆಲವು ಪರಿಕರಗಳನ್ನು ಜೋಡಿಸಿ ವಸ್ತುಸಂಗ್ರಹಾಲಯವನ್ನು ಸ್ತಾಪಿಸಲಾಯಿತು. ಈಗ ಶತಮಾನ ದಾಟಿದ ವಸ್ತು ಸಂಗ್ರಹಾಲಯಕ್ಕೆ ಈಗ ಹೊಸ ರೂಪುರೇಖೆಯನ್ನು ಕೊಟ್ಟು ಮೇಲ್ದರ್ಜೆಗೆ ಏರಿಸ ಲಾಗಿದೆ.[೧]

ಅಮೂಲ್ಯ ಕಲಾಕೃತಿಗಳು[ಬದಲಾಯಿಸಿ]

ಪ್ರಸ್ತುತ ವಸ್ತುಸಂಗ್ರಹಾಲಯದಲ್ಲಿ ಒಂದು ಪ್ರಮುಖ ಸಭಾಂಗಣ ಮತ್ತು ಅದಕ್ಕೆ ಹೊಂದಿಕೊಂಡು ೫ ಗೋಡೆಗಳಿವೆ.

ಹಳೆ ಕಾಲದ ಟೈಪ್ ರೈಟರ್ ಗಳು

ಇಲ್ಲಿ ವಿವಿಧ ದೇಶಗಳಿಂದ ಸಂಗ್ರಹಿಸಿದ ಅಮೂಲ್ಯ ವಸ್ತುಗಳಿವೆ. ಶಿಲಾಯುಗದ ಆಯುಧಗಳು, ಬರ್ಲಿನ್ ಗೋಡೆಯ ತುಂಡುಗಳು[೨], ಕಂಚು ಮತ್ತು ಹಿತ್ತಾಳೆ ಯ ವಸ್ತುಗಳು, ಬೇರೆ ಬೇರೆ ರೀತಿಯ ದೀಪಗಳು,ಶಂಖ ಗಳು, ವಿವಿಧ ರೀತಿಯ ಚಿಪ್ಪುಗಳು, ಪಳೆಯುಳಿಕೆಗಳು, ಪಿಂಗಾಣಿ ಪಾತ್ರೆಗಳು, ನೋಟುಗಳು ಇತ್ಯಾದಿಗಳು.

ಪ್ರಥಮಗಳು[ಬದಲಾಯಿಸಿ]

ಇದು ಹಲವು ಪ್ರಥಮಗಳ ಸಂಗಮವಾಗಿದೆ. ಮಂಗಳೂರಿನ ಪ್ರಥಮ ಕಾರು[೩], ಪ್ರಥಮ ಡೀಸಲ್ ಜನರೇಟರ್ ಸೆಟ್, ಗ್ರಾಮೊಫೊನ್ ಗಳು, ಕಂಪ್ಯೂಟರ್ಗಳು, ರೇಡಿಯೊ ಸೆಟ್ ಗಳು, ಟಿ.ವಿ.ಸೆಟ್ ಗಳು, ಹಳೆಯ ವಾರ್ತಾಪತ್ರಿಕೆಗಳು, ಫೊಟೊಗಳು, ಕೈ ಬರಹದ ಪ್ರತಿಗಳೂ ಲಭ್ಯವಿದೆ.

ತಾಳೆ ಗರಿ ಗ್ರಂಥಗಳು
ಮಂಗಳೂರಿನ ಮೊದಲ ಕಾರು
ತಿಮಿಂಗಿಲದ ತಲೆಯ ಭಾಗದ ಅವಶೇಷ

ತಾಳೆಗರಿಯಲ್ಲಿ ಬರೆದ ಗ್ರಂಥಗಳು ಅಪೂರ್ವವಾದವುಗಳು. ಪೂಜಾ ಸಾಮಾಗ್ರಿಗಳು, ವಿವಿಧ ರೀತಿಯ ತಂತಿ ವಾದ್ಯಗಳು, ಚರ್ಮವಾದ್ಯಗಳು ಕೂಡಾ ಕಾಣಸಿಗುತ್ತವೆ.

ಸಾಂಸ್ಕೃತಿಕ ಸಂಕೇತಗಳು[ಬದಲಾಯಿಸಿ]

ಪ್ರಾದೇಶಿಕ ಜನರ ಜೀವನವನ್ನು ಪ್ರತಿನಿಧಿಸುವ ಮನೆ ಸಾಮಾಗ್ರಿಗಳು, ಬಹಳ ಹಿಂದಿನ ವ್ಯವಸಾಯದ ಪರಿಕರಗಳು, ಜನರ ಉಡುಪುಗಳನ್ನು ಪ್ರತಿನಿಧಿಸುವ ಕಲಾಕೃತಿಗಳಿವೆ. ಎಲ್ಲಾ ಕಲಾಕೃತಿಗಳ ಮೇಲೆ ಕನ್ನಡ ಮತ್ತು ಇಂಗ್ಲಿಶ್ ಬಾಷೆಯಲ್ಲಿ ಮಾಹಿತಿ ಬರೆಯಲಾಗಿದೆ. [೪]. ಅಂಚೆ ಚೀಟಿಗಳ ಬ್ರಹತ್ ಸಂಗ್ರಹವಿದೆ[೫]. ಮೊಯಿಚಿನಿ ಗ್ಯಾಲರಿಯಲ್ಲಿ ಸಂತ ಅಲೋಶಿಯಸ್ ಚಾಪೆಲ್ ನಲ್ಲಿ ಚಿತ್ರ ಬಿಡಿಸಿದ ಸಂತ ಮೊಯಿಚಿನಿಯವರ ಕಲಾಕೃತಿಗಳಿವೆ.

  1. https://timesofindia.indiatimes.com/city/mangaluru/Renovated-Aloyseum-opens-today/articleshow/19138503.cms
  2. https://www.thehindu.com/news/cities/Mangalore/aloyseum-brings-alive-story-of-world-war-i-hero/article5709080.ece
  3. https://www.thehindubusinessline.com/news/variety/See-at-Aloyseum-Mangalore%E2%80%99s-first-car-generator/article20594166.ece
  4. https://www.staloysius.edu.in/our-pride/museum
  5. https://www.daijiworld.com/news/newsDisplay?newsID=958891