ವಿಷಯಕ್ಕೆ ಹೋಗು

ಸದಸ್ಯ:Divya370/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಸತ್ಯ ಹರಿಶ್ಚಂದ್ರ

ಪರಿಚಯ

[ಬದಲಾಯಿಸಿ]
    ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ದಿ ಪಡೆದನು.ಒಂದಾನೊಂದು ಕಾಲದಲ್ಲಿ ಹರಿಶ್ಚಂದ್ರನೆಂಬ ರಾಜನು ಆಯೋಧ್ಯ ಎಂಬ ರಾಜ್ಯವನು ಚಾಣಕ್ಷ್ಯತನದಿಂದ ರಾಜ್ಯವನು ಆಳುತ್ತಿದನು ಮತ್ತು ಅವನು ಸತ್ಯವನು ಬಿಟ್ಟು ಬೇರೆ ಸುಳ್ಳನು ಹೇಳುತ್ತಿರಲಿಲ್ಲ.   ಯಾವಾಗಲು ಸಂತೋಷದಿಂದ ರಾಜ್ಯಭಾರ ಮಾಡುತ್ತಿದ. ಆ ಸಮಯದಲ್ಲಿ ದೇವರುಗಳು ಅವನಿಗೂಂದು ಸತ್ವಪರೀಕ್ಷೆಯನು ಕೊಡಲು ನಿರ್ಧಾರಿಸಿದರು. ಅದಕ್ಕಾಗಿ ವಿಶ್ವಾಮಿತ್ರನೆಂಬ ಮುನಿಯಿಂದ ಸಹಾಯ ಪಡೆದರು.

ಮರ್ಕಂಡಯ್ಯ ಪುರಾಣ

[ಬದಲಾಯಿಸಿ]
    ಹರಿಶ್ಚಂದ್ರ ಒಬ್ಬ ಅಖ್ಯಾನ ಭಾರತದ ರಾಜ .  ಅವನ ಪ್ರಖ್ಯಾತ  ಕಥೆ ಮರ್ಕಂಡಯ್ಯ ಪುರಾಣದಲ್ಲಿ ಪ್ರಕಟಿಸಲಾಗಿದೆ.  ಈ ಪುರಾಣದಲ್ಲಿ ವಿಶ್ವಾಮಿತ್ರನಿಗೆ ಕೊಟ್ಟ ಪ್ರಮಾವನ್ನು ಪೂರೈಸಲು ಹರಿಶ್ಚಂದ್ರನು ತನ್ನ ರಾಜ್ಯ ಹಾಗು ಹೆಂಡತಿ ಮಗನನ್ನು ಮಾರಿ ಗುಲಾಮನಾಗಿ ಇರಲು ಒಪ್ಪುತ್ತಾನೆ.
     ಒಂದು ದಿನ ಹರಿಶ್ಚಂದ್ರ ಬೇಟೆಯಾಡಲು ಕಾಡಿಗೆ ಹೋಗಿದ್ದ. ಅ ಸಮಯದಲ್ಲಿ ಮಹಿಳೆಯ ಅಳುವಿನ ಶಬ್ದವು ಕೇಳಿಸಿತ್ತು ಅವನು ಅದೆ ಶಬ್ದವನು ಹಿಂಬಾಲಿಸಿ ಹುಡುಕಿಕೂಂಡು ಹೋದಾಗ ಅಲ್ಲಿ  ಪ್ರಸಿದ್ಧ ಮುನಿಗಳದ ವಿಶ್ವಾಮಿತ್ರನ ಆಶ್ರಮ ಸೇರಿದ...ಆ ಸಮಯದಲ್ಲಿ ವಿಶ್ವಾಮಿತ್ರನ ತಪಸ್ಸಿಗೆ ಭಂಗವಾಯಿತು ಅದರಿಂದ ವಿಶ್ವಮಿತ್ರ ಕೋಪಗೊಂಡ ತಕ್ಷಣ ಹರಿಶ್ಚಂದ್ರ ಅವನನ್ನು ಸಮಾಧನ ಪಡಿಸಲು ತನ್ನ ರಾಜ್ಯವನು ಬಿಟ್ಟುಕೊಡಲು ಸತ್ಯ ಮಾಡಿದ. ಆದರೆ ರಾಜ್ಯದ ಜೋತೆಗೆ ದಕ್ಷಿಣೆ ನೀಡುವಂತೆ ಕೇಳಿದ, ಅದಕೆ  ಹರಿಶ್ಚಂದ್ರ ಒಪ್ಪಿದ. ಆದರೆ ಎಲ್ಲಾ ಕಳೆದು ಕೊಂಡಿರುವ ಕಾರಣ ಅವನ ಹತ್ತಿರ ದಕ್ಷಿಣೆ ನೀಡುವುದಕ್ಕೆ ಏನು ಇರುವುದಿಲ್ಲ.[]
    ಕೊಟ್ಟ ಮಾತನ್ನು ಉಳಿಸಿಕೊಳುವುದಕ್ಕಾಗಿ ಅವನು ರಾಜ್ಯವನ್ನು ಬಿಟ್ಟು ತನ್ನ ಹೆಂಡತಿ ಶೈವ್ಯ ಹಾಗೂ ಮಗ ರೋಹಿತಶ್ವನೊಂದಿಗೆ ಕಾಶಿಗೆ ಹೂರಟರು ಅಲ್ಲಿ ದುಡಿಯುವುದಕ್ಕೆ ಯಾವುದೆ ಕೆಲಸ ಸಿಗಲಿಲ್ಲ ಆದರೆ ಅವನು ಮಾತು ಕೊಟ್ಟ ಒಂದು ತಿಂಗಳ ಅವಧಿ ಮುಗಿಯುತ್ತ ಬರುತ್ತಿತು. ಆಗ ತನ್ನ ಹೆಂಡತಿಯನ್ನು ಹಣಕ್ಕಾಗಿ ಮಾರಿದನು. ಶೈವ್ಯ ಹೋಗುವುದನ್ನು ಕಂಡು, ರೋಹಿತಶ್ವ ಗಳಗಳನೆ ಅಳುತ್ತಿದ್ದನು ಇದನ್ನು ಕಂಡ ಹರಿಶ್ಚಂದ್ರ ಇವನನ್ನು ಖರೀದಿ ಮಾಡಿಬಿಡಿ ಎಂದು ವಿನಂತಿಸಿದ, ಹೆಂಡತಿಯನ್ನು ಮಾರಿದ ಹಣವನ್ನು  ದಕ್ಷಿಣೆಯಾಗಿ  ಕೊಡಲು  ಸಾಲುವುದಿಲ್ಲ ಆದ್ದರಿಂದ  ತನ್ನನ್ನು ತಾನು ಗುಲಾಮನಾಗಿ ಚಂಡಾಲನ (ಸ್ಮಶಾನ ಕಾಯುವವನು) ಹತ್ತಿರ ಮಾರಿಕೂಂಡ ಈ ಹಣದಿಂದ ವಿಶ್ವಮಿತ್ರನಿಗೆ ಮಾತುಕೊಟ್ಟಂತೆ ದಕ್ಷಿಣೆ ಹಣವನ್ನು ಕೊಟ್ಟು ಸ್ಮಶಾನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದನು.
    ಶ್ವೆವ್ಯ ಬ್ರಾಹ್ಮಣನ ಮನೆಯಲ್ಲಿ ಕೆಲಸದವಳಾಗಿ ಕೆಲಸ ಮಾಡುತ್ತಿದಳು. ಈ ಸಮಯದಲ್ಲಿ ತನ್ನ ಮಗ ಹೂವುನ್ನು ತರಲು ಹೋಗಿರುವಾಗ ಹಾವೊಂದು ಅವನ ಕಾಲನ್ನು ಕಚ್ಚಿ ಬಿಡುತ್ತದೆ. ಆಗ ಅವನು ಸತ್ತು ಹೋಗುತ್ತಾನೆ. ತನ್ನ ಮಗನ ಶವವನು ತೆಗೆದುಕೊಂಡು ಸ್ಮಶಾನಕ್ಕೆ ಹೋಗುತ್ತಾಳೆ .ಅಲ್ಲಿ ಸ್ಮಶಾನ ಕಾಯುತ್ತಿರುವ ಹರಿಶ್ಚಂದ್ರ ತನ್ನ ಒಬ್ಬನೆ ಒಬ್ಬ ಮಗನನ್ನು ಕಳೆದುಕೊಂಡ ದೃಶ್ಯವನ್ನು ಕಂಡು ದುಖಃ ಪಡುತ್ತಾನೆ . ಶವವನ್ನು ಸುಡುವುದಕ್ಕೆ ಶ್ವೆವ್ಯ ಹತ್ತಿರ ಹಣ ಇರುವುದಿಲ್ಲ, ಆದರೆ ಹರಿಶ್ಚಂದ್ರ ತನ್ನ ಕರ್ತವ್ಯ ಬಿಡದಂತೆ ಇಲ್ಲಿ ಹಣ ಇಲ್ಲದೆ ಶವಸಂಸ್ಕಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆಗ ಅವಳು ತನ್ನ ಹತ್ತಿರ ಇರುವ ತಾಳಿಯನ್ನು ಕೊಡಲು ಮುಂದಾಗುತ್ತಾಳೆ. ಈ ಸಂದರ್ಭದಲ್ಲಿ ಬ್ರಹ್ಮ ದೇವರು ಪ್ರತ್ಯಕ್ಷವಾಗಿ ನಿನ್ನ ನಿಷ್ಠೆ ಸತ್ಯವನ್ನು ಒಪಿದೆ ಎಂದು ರೋಹಿತಶ್ವನನ್ನು(ಮಗ) ಬದುಕಿಸುತ್ತಾನೆ.  ಹರಿಶ್ಚಂದ್ರನು ತನ್ನ ಸತ್ಯ ಪ್ರಾಮಾಣಿಕತೆಗೆ ತನ್ನ ಪ್ರಾಣವನು ಬಿಡಲು ಸಹ ಸಿದ್ದನಾಗಿದ್ದ ಎಂದು ಪುರಾಣವಿದೆ.
    ಹರಿಶ್ಚಂದ್ರ ಒಳ್ಳೆ ಗುಣಗಳನ್ನು ಮೆಚ್ಚಿ ಅವನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ.  ಅವನ ಸ್ವರ್ಗಾರೋಹಣದ ನಂತರ ಹರಿಶ್ಚಂದ್ರನ ರಾಜ್ಯದ ಮುನಿಗಳಾದ ವಶಿಷ್ಠನು ತನ್ನ ೧೨ ವರ್ಷಗಳ ತಪಸ್ಸನ್ನು ಮುಗಿಸಿದ.  ವಶಿಷ್ಠನಿಗೆ ಹರಿಶ್ಚಂದ್ರನಿಗೆ ಉಂಟಾದ ಸ್ಥಿತಿ-ಗತಿಗಳು ಗೊತ್ತಾಗುತ್ತದೆ.ಆಗ ಅವನು ವಿಶ್ವಾಮಿತ್ರನೊಂದಿಗೆ ಜಗಳವಾಡುತ್ತಾನೆ.ಆ ಸಂದರ್ಭದಲ್ಲಿ ಬ್ರಹ್ಮನು ಬಂದು ಅವರಿಬ್ಬರನ್ನು ಸಮಾಧಾನಪಡಿಸುತ್ತಾನೆ.ಅಲ್ಲದೇ ಈ ಎಲ್ಲ ತೊಂದರೆಗಳನ್ನು ಕೊಟ್ಟಿದ್ದು ಹರಿಶ್ಚಂದ್ರನ ಪ್ರಾಮಾಣಿಕತೆ ಹಾಗು ಸತ್ಯತೆಯನ್ನು ಪರೀಕ್ಷಿಸುವ ಸಲುವಾಗಿ ಎಂದು ವಶಿಷ್ಠನಲ್ಲಿ ನಂಬಿಕೆ ಇಡುತ್ತಾನೆ ಹಾಗು ಅವನನ್ನು ಸ್ವರ್ಗಕ್ಕೆ ಕಳುಹಿಸಲು ಸಹಾಯ ಮಾಡಿದ. 

ವಿಶೇಷ

[ಬದಲಾಯಿಸಿ]
    ಹರಿಶ್ಚಂದ್ರನ ಪ್ರಾಮಾಣಿಕತೆ ಹಾಗು ಸತ್ಯತೆಯ ಸದ್ಗುಣಗಳು ನಮ್ಮ ರಾಷ್ಟ್ರ ಪಿತಾಮಹರಾದ ಮಹಾತ್ಮ ಗಾಂಧೀಜಿಯವರನ್ನು ಪ್ರೇರಣೆಗೊಳಿಸಿದೆ.

ಹರಿಶ್ಚಂದ್ರ ಘಾಟ್

[ಬದಲಾಯಿಸಿ]

thumb|ಹರಿಶ್ಚಂದ್ರ ಘಟ್

ಹರಿಶ್ಚಂದ್ರ ಘಾಟ್ ವಾರನಾಸಿಯಲ್ಲಿ ನೆಲೆಗೊಂಡಿದೆ.  ಅಲ್ಲಿ ಪುರಾಣಕಾಲದ ರಾಜನಾದ ಹರಿಶ್ಚಂದ್ರನು ಸ್ಮಶಾನ ಕಾಯುವನನಾಗಿ ಕೆಲಸ ಮಾಡುತ್ತಿದ್ದ.  ಆದುದರಿಂದ ಈ ಸ್ಮಶಾನಕ್ಕೆ ಹರಿಶ್ಚಂದ್ರ ಘಾಟ್ ಎಂದು ಹೆಸರು ಬಂದಿದೆ.  ದೂರದ ಸ್ಥಳದಿಂದ ಜನರು ಇಲ್ಲಿಗೆ ಬಂದು ತಮ್ಮ ಬಂಧು-ಮಿತ್ರರ ಶವದಹನಕ್ರಿಯೆ ಮಾಡುತ್ತಾರೆ.  ಹಿಂದು ಪುರಾಣದ ಪ್ರಕಾರ ಈ ಸ್ಥಳದಲ್ಲಿ  ಶವದಹನಕ್ರಿಯೆಯಾದವರು ಮೋಕ್ಷವನ್ನು ಪಡೆಯುತ್ತಾರೆ.[]

ಚಲನಚಿತ್ರ

[ಬದಲಾಯಿಸಿ]
    ೧೨ನೇ ಶತಮಾನದ ಕವಿ ರಾಘವಂಕನ ಹರಿಶ್ಚಂದ್ರನ ಕಾವ್ಯ ಬಹಳ ಪ್ರಸಿದ್ಧಿಯೊಂದಿಗೆ ಮೆಚ್ಚುಗೆಯ ಮಹಾಕಾವ್ಯವಾಗಿತ್ತು.  ಹರಿಶ್ಚಂದ್ರ ಭಾರತದ ಅನೇಕ ಚಿತ್ರಗಳಲ್ಲಿ ವಿಷಯವಾಗಿತ್ತು.  ೧೯೧೩ ರಲ್ಲಿ, ರಾಜ ಹರಿಶ್ಚಂದ್ರನೆಂಬ ಚಲನಚಿತ್ರವನ್ನು ದುಂದಿರಾಜ್ ಗೋವಿಂದ ಫಾಲ್ಕೆಯವರು ನಿರ್ದೇಶಿಸಿದರು .  ೧೯೬೫ ರಲ್ಲಿ ಕನ್ನಡ ಚಲನಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ಹುಣಸೂರು ಕೃಷ್ಣಮೂರ್ತಿಯವರು "ಸತ್ಯ ಹರಿಶ್ಚಂದ್ರ"ವೆಂಬ ಚಿತ್ರವನ್ನು ನಿರ್ದೇಶಿಸಿದರು.  ಈ ಚಿತ್ರದಲ್ಲಿ ಮುಖ್ಯ ಪಾತ್ರವಾಗಿ ಡಾ.ರಾಜಕುಮಾರ್ ಅವರು ಸತ್ಯ ಹರಿಶ್ಚಂದ್ರನಾಗಿ ನಟಿಸಿದ್ದಾರೆ ಹಾಗೂ ಈ ಚಿತ್ರ ಬಿಡುಗಡೆಯಾದ ದಿನದಿಂದ ಒಳ್ಳೆಯ ಜನಮನ್ನಣೆ ಗಳಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಮೂಡಿಬಂದಿತು. ನಂತರ ಈ ಚಿತ್ರಕ್ಕೆ ರಾಷ್ಟ್ರ ಬೆಳ್ಳಿ ಪ್ರಶಸ್ತಿ ದೊರಕಿತು.

ಉಲ್ಲೇಖ

[ಬದಲಾಯಿಸಿ]
  1. http://www.kidsgen.com/fables_and_fairytales/indian_mythology_stories/satyavadi_harishchandra.htm
  2. http://www.varanasicity.com/harishchandra-ghat.html