ಸದಸ್ಯ:Divya131097/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಕ್‍ ಇನ್‍ ಇಂಡಿಯಾ[ಬದಲಾಯಿಸಿ]

[೧] [೨] [೩] [೪][೫] [೬]

ಚಿತ್ರ:Narendramodipic.jpg
ನರೇಂದ್ರ ಮೋದಿ

ಮೇಕ್‍ ಇನ್‍ ಇಂಡಿಯಾ (ಇಂಗ್ಲಿಷ್‍:Make in India) ಎಂಬ ಯೋಜನೆ ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಲು ರಾಷ್ಟ್ರೀಯ ಹಾಗೂ ಬಹು-ರಾಷ್ಟ್ರೀಯ ಕಂಪನಿಗಳನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆ. ಈ ಯೋಜನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2014 ರ ಸೆಪ್ಟೆಂಬರ್ 25 ರಂದು ಪ್ರಾರಂಭಿಸಿದರು. ಈ ಯೋಜನೆಯು ಭಾರತದ ಪ್ರಜೆಗಳಿಗೆ ಹಾಗೂ ಕಾರ್ಪರೆಟ್‍ ನಾಯಕರಿಗೆ ಮತ್ತು ವಿಶ್ವದಾದಂತ್ಯದ ಹೂಡಿಕೆದಾರರಿಗೆ ಆಮಂತ್ರಣದ ಕರೆಯಾಗಿತ್ತು.

ಉದ್ದೇಶಗಳು[ಬದಲಾಯಿಸಿ]

ಭಾರತದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು, ನಾವಿನ್ಯತೆಯನ್ನು ಹೆಚ್ಚಿಸಲು, ಕೌಶಲ್ಯ ಅಭಿವೃದ್ಧಿಯನ್ನು ಆಧರಿಸಲು, ಬೌಧಿಕ ಆಸ್ತಿಯನ್ನು ರಕ್ಷಿಸಲು ಹಾಗೂ ಉತ್ಪಾದನೆಗೆ ಅನುಕೂಲವಾಗುವಂತೆ ಮೂಲಸೌಕರ್ಯಗಳನ್ನು ನಿರ್ಮಿಸಲು ಮೇಕ್‍ ಇನ್ ಇಂಡಿಯಾ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಪ್ರಾಥಮಿಕ ಗುರಿ ಜಾಗತಿಕ (ಭಾರತೀಯ ಮತ್ತು ವಿದೇಶೀಯ) ಹೂಡಿಕೆಗಳನ್ನು ಹಾಗೂ ತಾಂತ್ರಿಕ ಜ್ಞಾನವನ್ನು ಆಕರ್ಷಿಸುವುದು ಮತ್ತು ಭಾರತದ ಉತ್ಪಾದನಾ ವಲಯವನ್ನು ವಿಸ್ತರಿಸುವುದರ ಜೊತೆಗೆ, ಭಾರತೀಯ ಆರ್ಥಿಕತೆಯ 25 ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವುದು ಮತ್ತು ಕೌಶಲ್ಯ ಅಭಿವೃದ್ಧಿಯನ್ನೂ ಕೂಡ ಈ ಯೋಜನೆ ಗುರಿಯಾಗಿ ಹೊಂದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯಗಳು ವಾಣಿಜ್ಯ ಅಭಿವೃದ್ಧಿಯನ್ನು ಆಧರಿಸಲು ತೆಗೆದುಕೊಳ್ಳುವ ಕ್ರಮಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.

ಮೇಕ್‍ ಇನ್ ಇಂಡಿಯಾ ಯೋಜನೆಯ ಉದ್ಘಾಟನೆ

ಯೋಜನೆಯ ವ್ಯಾಪ್ತಿ[ಬದಲಾಯಿಸಿ]

ಭಾರತದಲ್ಲಿ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ನಾವೀನ್ಯತೆಯನ್ನು ಹೆಚ್ಚಿಸುವುದು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯ ನಿರ್ಮಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಈ ಕಾರಣಕ್ಕಾಗಿ ಭಾರತದ ಆರ್ಥಿಕತೆಯ ಕೆಳಗಿನ ಇಪ್ಪತ್ತೈದು ಕ್ಷೇತ್ರಗಳ ಮೇಲೆ ಈ ಯೋಜನೆ ಗಮನ ನೀಡುತ್ತಿದೆ.

  • ವಾಹನ ಉದ್ಯಮ
  • ವಾಹನ ಭಾಗಗಳು
  • ವಾಯುಯಾನ ಉದ್ಯಮ
  • ಜೈವಿಕ ತಂತ್ರಜ್ಞಾನ
  • ರಾಸಾಯನಿಕಗಳು
  • ನಿರ್ಮಾಣ ಉದ್ಯಮ
  • ರಕ್ಷಣಾ ತಯಾರಿಕಾ ಉದ್ಯಮ
  • ವಿದ್ಯುತ್ ಯಂತ್ರಗಳು
  • ವಿದ್ಯುನ್ಮಾನ ವ್ಯವಸ್ಥೆಗಳು
  • ಆಹಾರ ಸಂಸ್ಕರಣಾ ಉದ್ಯಮ
  • ಮಾಹಿತಿ-ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ
  • ಚರ್ಮದ ಉತ್ಪನ್ನ
  • ಮಾಧ್ಯಮ ಮತ್ತು ಮನರಂಜನಾ ಉದ್ಯಮ
  • ಗಣಿಗಾರಿಕೆ ಉದ್ಯಮ
  • ತೈಲ ಮತ್ತು ಅನಿಲ ಉದ್ಯಮ
  • ಔಷಧೀಯ ಉದ್ಯಮ
  • ಬಂದರುಗಳು ಮತ್ತು ಹಡಗುಗಳು
  • ರೈಲ್ವೆ ಇಲಾಖೆ
  • ನವೀಕರಿಸಬಹುದಾದ ಶಕ್ತಿ
  • ರಸ್ತೆಗಳು ಮತ್ತು ಹೆದ್ದಾರಿಗಳು
  • ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರ
  • ಜವಳಿ ಮತ್ತು ಉಡುಪುಗಳು
  • ಉಷ್ಣ ಶಕ್ತಿ
  • ಪ್ರವಾಸೋದ್ಯಮ
  • ಆರೋಗ್ಯ ಮತ್ತು ಕ್ಷೇಮ

ಆರ್ಥಿಕ ನೀತಿ ಬದಲಾವಣೆಗಳು[ಬದಲಾಯಿಸಿ]

ಈ ಯೋಜನೆಯ ಒಂದು ಭಾಗವಾಗಿ ಭಾರತ ಸರ್ಕಾರವು ಆರ್ಥಿಕ ನೀತಿಗಳಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತಂದಿತು. ವಿದೇಶಿ ಹೂಡಿಕೆಯ(FDI) ಒಲಹರಿವನ್ನು ನಿಷೇಧಿಸಲಾದ ಅಥವಾ ಅದರ ಮೇಲೆ ಅನೇಕ ನಿರ್ಬಂಧಗಳಿದ್ದ ಹಲವು ಕ್ಷೇತ್ರಗಳಲ್ಲಿ ಈ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆಗಸ್ಟ್ 2014 ರಲ್ಲಿ ಭಾರತದ ಕ್ಯಾಬಿನೆಟ್, ರಕ್ಷಣಾ ಕ್ಷೇತ್ರದಲ್ಲಿ ಶೆ.49 ರವರೆಗೂ ಮತ್ತು ರೈಲ್ವೆ ಮೂಲಸೌಕರ್ಯದಲ್ಲಿ ಶೇ.100 ರಷ್ಟು ಎಫ್‍.ಡಿ.ಐ ಯನ್ನು ಅನುಮತಿಸಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು, ಸಣ್ಣ ಶಸ್ತ್ರಾಸ್ತ್ರ ಮತ್ತು ಸಾಮಗ್ರಿಗಳ ತಯಾರಿಕೆಯಲ್ಲಿ ಎಫ್‍.ಡಿ.ಐ ಯನ್ನು ಹೀಗೆ ಅನುಮತಿಸುವುದರ ಜೊತೆಗೆ, ಸರ್ಕಾರದ 'ಅತ್ಯಾಧುನಿಕ ತಂತ್ರಜ್ಞಾನದ' ನಿಯಮವನ್ನು ಸರ್ಕಾರ ವಜಾಮಾಡಿದೆ. ಇದು ಭಾರತದ ರಕ್ಷಣಾ ಉಪಕರಣಗಳ ಆಮದನ್ನು ಕಡಿಮೆ ಮಾಡುವ ಭರವಸೆಯಿಂದ ಮಾಡಲ್ಪಟ್ಟಿದೆ. ಭಾರತದಲ್ಲಿ ತಯಾರಿಸಿದ ಅಥವಾ ಉತ್ಪಾದಿಸಲಾದ ಆಹಾರ ಉತ್ಪನ್ನಗಳು, ವಾಣಿಜ್ಯ ಹಾಗೂ ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್‍.ಡಿ.ಐ ಒಳಹರಿವಿಗೆ ಅನುಮತಿ ನೀಡಲಾಗಿದೆ. ವಾಯುಯಾನ ಉದ್ಯಮದಲ್ಲಿ ಮತ್ತು ಬ್ರೌನ್ಫೀಲ್ಡ್ ವಿಮಾನ ನಿಲ್ದಾಣಗಳಲ್ಲಿ ಶೇ. 100 ಎಫ್‍.ಡಿ.ಐ ಒಳಹರಿವನ್ನು ಅನುಮತಿಸಲಾಗಿದೆ. ಟೆಲಿಪೋರ್ಟ್ಗಳು, ಡಿ.ಟಿ.ಎಚ್ ಸೇವೆಗಳು ಮತ್ತು ಮೊಬೈಲ್ ಟಿವಿ ಮುಂತಾದ ಪ್ರಸಾರದ ಸಾರಿಗೆ ಸೇವೆಗಳಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100 ಎಫ್‍.ಡಿ.ಐ ಗೆ ಸರ್ಕಾರ ಅನುಮತಿ ನೀಡಿದೆ.

ಮೇಕ್ ಇನ್ ಇಂಡಿಯಾ ವಾರ[ಬದಲಾಯಿಸಿ]

ಮೇಕ್ ಇನ್ ಇಂಡಿಯಾ ವಾರದಲ್ಲಿ ಪ್ರದರ್ಶನಕ್ಕಾಗಿದ್ದ ಮಾದರಿ

2016 ರ ಫೆಬ್ರುವರಿ 13 ರಿಂದ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಎಂ.ಎಂ.ಆರ್.ಡಿ.ಎ ಮೈದಾನದಲ್ಲಿ "ಮೇಕ್ ಇನ್ ಇಂಡಿಯಾ ವೀಕ್" ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಒಂದು ಪೂರ್ಣ ವಾರ ನಡೆದ ಈ ಬಹು-ಕ್ಷೇತ್ರದ ಕಾರ್ಯಕ್ರಮದಲ್ಲಿ 2500 ಹೆಚ್ಚು ಅಂತರರಾಷ್ಟ್ರೀಯ ಮತ್ತು 8000 ಹೆಚ್ಚು ದೇಶೀಯ ಕಂಪನಿಗಳು ಹಾಗೂ 68 ದೇಶಗಳಿಂದ ಸರ್ಕಾರಿ ನಿಯೋಗಗಳು ಮತ್ತು 72 ದೇಶಗಳಿಂದ ವ್ಯಾಪಾರ ತಂಡಗಳು ಭಾಗವಹಿಸಿದ್ದವು. ಬಹುತೇಕವಾಗಿ ಬಿಜೆಪಿ ಆಳ್ವಿಕೆ ಮಾಡುವ 17 ಭಾರತೀಯ ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಎಕ್ಸ್ಪೋ ನಡೆಸಿದವು. ಡಿ.ಐ.ಪಿ.ಪಿ ಕಾರ್ಯದರ್ಶಿ ಅಮಿತಾಭ್ ಕಾಂತ್‍, ಈ ಕಾರ್ಯಕ್ರಮವು 15.2 ಲಕ್ಷ ಕೋಟಿ ರೂಪಾಯಿ (ಯುಎಸ್ $ 240 ಬಿಲಿಯನ್) ಮೌಲ್ಯದ ಹೂಡಿಕೆ ಬದ್ಧತೆಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿದರು.

ಪರಿಣಾಮಗಳು[ಬದಲಾಯಿಸಿ]

ಮೇಕ್ ಇನ್ ಇಂಡಿಯಾ ಯೋಜನೆ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ಪಡೆದಿದೆ ಹಾಗೂ ಭಾರತದ ಆರ್ಥಿಕತೆಯನ್ನು ಒಳ್ಳೆಯ ರೀತಿಯಲ್ಲಿ ಪ್ರಭಾವಿಸಿದೆ. 'ಈಸ್ ಆಫ್ ಡೂಯಿಂಗ್ ಬಿಸ್‌ನೆಸ್' ಅನ್ನು ಉತ್ತಮಗೊಳಿಸಲು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದ್ದರಿಂದ ವ್ಯಾಪಾರ ಪರಿಸರದಲ್ಲಿ ಉತ್ತಮ ಸುಧಾರಣೆ ಕಂಡುಬಂದವು. ಈ ಯೋಜನೆಯ ಕಾರಣದಿಂದಾಗಿ ಅನೇಕ ವಿದೇಶಿಯ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಲು ಒಪ್ಪಂದ ಮಾಡಿದ್ದಾರೆ.

  • ಫೋರ್ಡ್ ಮೋಟರ್ ಕಂಪನಿ ತನ್ನ ಚೆನ್ನೈ ಉತ್ಪಾದನಾ ಕೇಂದ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (R&D) 4000 ರಿಂದ 5000 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಒಪ್ಪಿಕೊಂಡಿತು.
  • ಚೀನೀ ಮೊಬೈಲ್ ಹ್ಯಾಂಡ್ಸೆಟ್ ತಯಾರಕ 'ಫಿಕೊಮ್', ಭಾರತದ ಮಾರುಕಟ್ಟೆಗೆ ಮುಂದಿನ 3 ವರ್ಷಗಳಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಒಪ್ಪಿಕೊಂಡಿತು.
  • ಜೂನ್‌ 2015ರಲ್ಲಿ, ತನ್ನ ಐಷಾರಾಮಿ ಕಾರುಗಳ ಭಾಗಗಳನ್ನು ಭಾರತದಲ್ಲಿಯೆ ತಯಾರಿಸಲು ಮರ್ಸಿಡಿಸ್-ಬೆನ್ಜ್ ನಿರ್ಧರಿಸಿತು.
  • ಫೆಬ್ರವರಿ 2015 ರಲ್ಲಿ, ಬೆಂಗಳೂರಿನಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಆವರಣವನ್ನು ಸ್ಥಾಪಿಸಲು 'ಹುವಾವೇ' 170 ಮಿಲಿಯನ್ ಡಾಲರ್ ಹೂಡಿಕೆ ಮಾಡಿತು.
  • 2015 ರ ಆಗಸ್ಟ್ 18 ರಂದು 'ಲೆನೊವೊ', ಮೋಟೋರೋಲಾ ಸ್ಮಾರ್ಟ್ಫೋನ್ಗಳನ್ನು ಚೆನ್ನೈನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ತಯಾರಿಸಲು ಪ್ರಾರಂಭಿಸಿದೆ ಎಂದು ಘೋಷಿಸಿತು.
  • ಡಿಸೆಂಬರ್ 2015 ರಲ್ಲಿ, ಫೋನ್ ತಯಾರಕರು 'ವಿವೋ ಮೊಬೈಲ್ ಇಂಡಿಯಾ', ಗ್ರೇಟರ್ ನೋಯ್ಡಾದ ಒಂದು ಉತ್ಪಾದನಾ ಕೇಂದ್ರದಲ್ಲಿ ಸ್ಮಾರ್ಟ್ಫೋನ್ಗಳನ್ನು ತಯಾರಿಸಲು ಪ್ರಾರಂಭಿಸಿತು.
  • ಆಪಲ್ ಐಫೋನ್‌ಗಳನ್ನು ತಯಾರಿಸುವ 'ಫಾಕ್ಸ್ಕಾನ್', 2020ರೊಳಗೆ ಭಾರತದಲ್ಲಿ 10-12 ಕಾರ್ಖಾನೆಗಳು ಮತ್ತು ಡೇಟಾ ಕೇಂದ್ರಗಳು ಒಳಗೊಂಡಿರುವಂತಹ ಉತ್ಪಾದನಾ ಕೇಂದ್ರಗಳನ್ನು ಸೃಷ್ಟಿಸಲಾಗುತ್ತದೆ ಎಂದು ಘೋಷಿಸಿತು.

ಡಿಸೆಂಬರ್‌ 2014 ರಲ್ಲಿ ಬಿಡುಗಡೆಯಾದ ಒಂದು ಅಧಿಕೃತ ಪ್ರಕಟಣೆಯ ಪ್ರಕಾರ, ಸಾಮಾಜಿಕ ಮಾದ್ಯಮದಲ್ಲಿ 2.1 ಶತಕೋಟಿಗೂ ಹೆಚ್ಚಿನ ಜಾಗತಿಕ ಅನಿಸಿಕೆಗಳನ್ನು ಹೊಂದಿದ್ದು ಮತ್ತು ಫೇಸ್‌ಬುಕ್‌ ಪುಟದಲ್ಲಿ 3 ದಶಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳೊಂದಿಗೆ, ಜಗತ್ತಿನ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಸರ್ಕಾರಿ ಯೋಜನೆಯಾಗಿ ಹೆಸರುಗೊಂಡಿತು. ವಿಶ್ವ ಬ್ಯಾಂಕಿನ 2017ರ ಉದ್ಯಮ ವರದಿಯ ಅನುಸಾರ 'ಈಸ್‌ ಆಫ್ ಡೂಯಿಂಗ್ ಬಿಸ್ನಸ್ ರಾಂಕಿಂಗ್‌'ನ ಅನುಸಾರ 190 ದೇಶಗಳಲ್ಲಿ ಭಾರತವು 100 ನೇ ಸ್ಥಾನದಲ್ಲಿದೆ. 2016 ರಲ್ಲಿ ಭಾರತವು 130 ನೇ ಸ್ಥಾನದಲ್ಲಿದ್ದ ಸ್ಥಾನದಲ್ಲಿತ್ತು. ಆದರೆ ಮೇಕ್‌ ಇನ್‌ ಇಂಡಿಯಾ ಮತ್ತು ಭಾರತ ಸರ್ಕಾರ ಜಾರಿಗೆ ತಂದ ಬೇರೆ ಹಲವಾರು ಯೋಜನೆಗಳಿಂದ 30 ಸ್ಥಾನಗಳು ಮೇಲೇರಿದೆ.

ಉಲ್ಲೇಖಗಳು

  1. https://www.entrepreneur.com/article/275057
  2. https://www.india.gov.in/website-make-india-programme
  3. https://timesofindia.indiatimes.com/business/india-business/Indias-recent-policy-changes-could-ease-constraints-on-overeign-credit-profile-Moodys-says/articleshow/44981906.cms
  4. https://economictimes.indiatimes.com/news/economy/policy/government-notifies-changes-in-fdi-policy/articleshow/52902925.cms
  5. https://en.wikipedia.org/wiki/Make_in_India
  6. http://www.makeinindia.com/home