ಸದಸ್ಯ:Dharani raju/sandbox4
ವಾಣಿಜ್ಯ ಬ್ಯಾಂಕುಗಳ ಕಾರ್ಯಗಳು
[ಬದಲಾಯಿಸಿ][೧]ವಾಣಿಜ್ಯ ಬ್ಯಾಂಕುಗಳು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ.ಅವುಗಳು ಲಾಭಕ್ಕಾಗಿ ದುಡಿಯುವ ಹಣಕಾಸಿನ ಸಂಸ್ಥೆಗಳಾಗಿದ್ದು ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಿ ವಾಣಿಜ್ಯ ವ್ಯವಹಾರಗಳಿಗೆ ಸಾಲವನ್ನು ಕೊಡುವ ಕಾರ್ಯದಲ್ಲಿ ನಿರತವಾಗಿರುತ್ತವೆ.ಆದುದರಿಂದ ಅವುಗಳನ್ನು ವಾಣಿಜ್ಯ ಬ್ಯಾಂಕುಗಳು ಎಂದು ಕರೆಯಲಾಗಿದೆ.ಆಧುನಿಕ ಯುಗದಲ್ಲಿ ವಾಣಿಜ್ಯ ಬ್ಯಾಂಕುಗಳು ತಮ್ಮ ಸಾಂಪ್ರದಾಯಿಕ ಕಾರ್ಯಗಳ ಜೊತೆಗೆ ಇನ್ನೂ ಅನೇಕ ಕಾರ್ಯ ಚ್ಟುವಟಿಕೆಗಳಲ್ಲಿ ತೊಡಗಿವೆ.ಇಅದರಿಂದಾಗಿ ಅವುಗಳ ಕಾರ್ಯಕ್ಷೇತ್ರಗಳ ವ್ಯಾಪ್ತಿ ವಿಸ್ತಾರಗೊಂಡಿದೆ.ವಾಣಿಜ್ಯ ಬ್ಯಾಂಕುಗಳ ನಿರ್ವಹಿಸುವ ಕಾರ್ಯಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಅವುಗಳೆಂದರೆ,೧.ಪ್ರಾಥಮಿಕ ಕಾರ್ಯಗಳು ಮತ್ತು,೨.ಸಹಾಯಕ ಅಥವಾ ಮಾಧ್ಯಮಿಕ ಕಾರ್ಯಗಳು.ಪ್ರಾಥಮಿಕ ಕಾರ್ಯಗಳ ವಿವರಣೆ ಮುಂದಿನಂತಿದೆ.
ಪ್ರಾಥಮಿಕ ಕಾರ್ಯಗಳು
[ಬದಲಾಯಿಸಿ]ವಾಣಿಜ್ಯ ಬ್ಯಾಂಕುಗಳು ಪ್ರಮುಖವಾಗಿ ಎರಡು ಪ್ರಾಥಮಿಕ ಕರ್ಯಗಳನ್ನು ನಿರ್ವಹಿಸುತ್ತವೆ.ಈ ಕಾರ್ಯಗಳು ಅವುಗಳ ಮೂಲ ಅಥವಾ ಪ್ರಧಾನ ಕರ್ಯಗಳಾಗಿರುತ್ತವೆ.ಅವುಗಳ ವಿವರ ಮುಂದಿನಂತಿದೆ.(೧)ಠೇವಣಿಗಳನ್ನು ಸ್ವೀಕರಿಸುವುದು,(೨)ಸಾಲಗಳನ್ನು ನೀಡುವುದು
ಠೇವಣಿಗಳನ್ನು ಸ್ವೀಕರಿಸುವುದು
[ಬದಲಾಯಿಸಿ]ಠೇವಣಿಗ್ಳನ್ನು ಸ್ವೀಕರಿಸುವುದು ವಾಣಿಜ್ಯ ಬ್ಯಾಂಕುಗಳ ಪ್ರಧಾನ ಕಾರ್ಯವಾಗಿದೆ.ಯಾರ ಬಳಿ ತಮ್ಮ ಅಗತ್ಯಕ್ಕಿಂತಲೂ ಅಧಿಕ ಹಣವಿರುತ್ತದೆಯೋ ಅಂತಹವರಿಂದ ವಾಣಿಜ್ಯ ಬ್ಯಾಂಕುಗಳು ಹಣವನ್ನು ಠೇವಣಿ ರೂಪದಲ್ಲಿ ಸ್ವೀಕರಿಸುತ್ತವೆ.ಹೇಗೆ ಸ್ವೀಕರಿಸಿದ ಠೇವಣಿಗಳನ್ನು ಈ ಬ್ಯಾಅಂಕುಗಳು ಸಂರಕ್ಷಿಸುವುದೇ ಅಲ್ಲದೆ ಠೇವಣಿದಾರರು ತಮ್ಮ ಹಣವನ್ನು ಕೇಳಿದಾಗ ವಾಪಸು ನೀಡುತ್ತವೆ.ವಾಸ್ತವವಾಗಿ ಸಾರ್ವಜನಿಕರಿಂದ ಸ್ವೀಕರಿಸಿದ ಠೇವಣಿಗಳು ವಾಣಿಜ್ಯ ಬ್ಯಾಂಕುಗಳು ಸಂಪನ್ಮೂಲದ ಮೂಲವಾಗಿರುತ್ತದೆ.ಆದುದರಿಂದ ಈ ಠೇವಣಿಗಲು ಅವುಗಳ ಪ್ರಾಣವಾಯುವಾಗಿರುತ್ತದೆ.ವಾಣಿಜ್ಯ ಬ್ಯಾಂಕುಗಳು ಮುಖ್ಯವಾಗಿ ಮೂರು ರೀತಿಯ ಠೇವಣಿಗಳನ್ನು ಸ್ವೀಕರಿಸುತ್ತವೆ.ಅವುಗಳೆಂದರೆ,(ಅ)ಉಳಿತಾಯ ಠೇವಣಿ,(ಆ)ಚಾಲ್ತಿ ಖಾತೆಯ ಠೇವಣಿ ಮತ್ತು(ಇ)ವಾಯಿದೆ ಠೇವಣಿ.
(ಅ)ಉಳಿತಾಯ ಠೇವಣಿ ಈ ಖಾತೆಯಲ್ಲಿ ಠೇವಣಿದಾರರು ತಮ್ಮ ಹಣವನ್ನು ಎಷ್ಟು ಬಾರಿಯಾದರೂ ಯಾವ ಪ್ರಮಾಣದಲ್ಲಾದರೂ ಹಾಕಬಹುದು.ಆದರೆ ಹಣವನ್ನು ಖಾತೆಯಿಂದ ವಾಪಸ್ಸು ಪಡೆಯುವುದರ ಮೇಲೆ ಕೆಲವೊಂದು ನಿರ್ಬಂಧಗಳಿರುತ್ತದೆ.ಅಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಈ ಖಾತೆಯಿಂದ ಇಂತಿಷ್ಟೇ ಬಾರಿ ಮಾತ್ರ ಹಣವನ್ನು ವಾಪಸು ಪಡೆಯಬಹುದು ಎಂಬ ನಿರ್ಬಂಧಗಳಿರುತ್ತವೆ.ಉಳಿತಾಯ ಠೇವಣಿಗಳ ಮೇಲೆ ಬ್ಯಂಕುಗಳು ಬಡ್ದಿ ನೀಡುತ್ತವೆ.ಆದರೆ ಬಡ್ಡಿಯ ದರ ಸಾಮಾನ್ಯವಾಗಿ ಕಡಿಮೆಯಿರುತ್ತದೆ.ವೇತನ ಪಡೆಯುವ ಮತ್ತು ಅಲ್ಪ ವರಮಾನ ಹೊಂದಿರುವ ವ್ಯಕ್ತಿಗಳಿಗೆ ಇಂತಹ ಠೇವಣಿ ಖಾತೆಗಳು ಬಹ ಉಪಯುಕ್ತವಾಗಿರುತ್ತವೆ.
(ಆ)ಚಾಲ್ತಿಖಾತೆ ಠೇವಣಿಗಳು [೨]ಚಾಲ್ತಿಖಾತೆ ಠೇವಣಿಗಳನ್ನು 'ಬೇಡಿಕೆ ಠೇವಣಿ'ಎಂದೂ ಕರಯಲಾಗುತ್ತದೆ.ಈ ಖಾತೆಯು ಸದಾ ಕ್ರಿಯಾತ್ಮಕವಾಗಿರುವ ಅಥವಾ ಸದಾ ವ್ಯವಹರಿಸಲ್ಪಡುವ ಖಾತೆಯಾಗಿರುತ್ತದೆ.ಆದ್ದರಿಂದ ಇದು ನಿರಂತರವಾಗಿ ಚಾಲ್ತಿಯಲ್ಲಿರುವ ಖಾತೆಯಾಗಿದೆ.ಚಾಲ್ತಿಖಾತೆಯಲ್ಲಿ ಠೇವಣಿದಾರರು ಎಷ್ಟು ಹಣವನ್ನಾದರೂ ಎಶ್ತು ಬಾರಿ ಬೇಕಾದರೂ ತುಂಬಬಹುದು ಹಾಗು ಎಷ್ಟು ಬಾರಿ ಬೇಕಾದರೂ ವಾಪಸು ಪಡೆಯಬಹುದು.ಅಂದರೆ ಚಾಲ್ತಿಖಾತೆ ಠೇವಣಿಗಳು ಬೇಡಿಕೆಯಾದಗ ಮರುಪಾವತಿ ಮಾಡುವಂತಿರುತ್ತದೆ.ಈ ಠೇವಣಿಗಳು ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಬಹು ಉಪಯುಕ್ತವಾಗಿರುತ್ತವೆ.ಚಾಲ್ತಿ ಖಾತೆಯ ಠೇವಣಿಗಳ ಮೇಲೆ ಬ್ಯಾಂಕುಗಳು ಸಾಮಾನ್ಯವಾಗಿ ಬಡ್ಡಿ ನೀಡುವುದಿಲ್ಲ. (ಇ)ಅವಧಿ ಅಥವಾ ವಾಯಿದ ಠೇವಣಿಗಳುವಾಯಿದೆ ಠೇವಣಿಗಳಲ್ಲಿ ಗ್ರಾಹಕರು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಒಂದು ನಿರ್ದಿಷ್ಟ ಅವದಿಗೆ ಒಂದು ನಿರ್ದಿಷ್ಟ ಬಡ್ಡಿ ದರದಲ್ಲಿ ಠೇವಣಿ ಇದುತ್ತಾರೆ.ಹಾಗೆ ಇಡಲಾದ ಠೇವಣಿಯ ಹಣವನ್ನು ಆ ನಿರ್ದಿಶ್ಟ ಅವಧಿಯ ನಂತರ ಮಾತ್ರ ವಾಪಸು ಪಡೆಯಬಹುದಾಗಿರುತ್ತದೆ.ಆದ್ದರಿಂದ ಇಂದು ನಿರ್ದಿಷ್ಟ ಅವಧಿಯ ನಂತರ ಮಾತ್ರ ಮರಳಿ ಪಡೆಯಬಹುದಾದ ಠೇವಣಿಗಳನ್ನು ವಾಯಿದೆ ಠೇವಣಿ ಅಥವಾ ಮುದ್ದತಿ ಠೇವಣಿ ಎನ್ನಲಾಗುತ್ತದೆ.ಇಂತಹ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿಯ ದರವು ಬೆರೆಲ್ಲಾ ಠೇವಣಿಗಳ ಮೇಲೆ ನೀಡುವ ಬಡ್ಡಿ ದರಕ್ಕಿಂತ ಅಧಿಕವಿರುತ್ತದೆ.ಸಾಮಾನ್ಯವಾಗಿ ಬಡ್ಡಿಯ ದರವು ಅವಧಿಗೆ ತಕ್ಕಂತೆ ಭಿನ್ನವಾಗಿರುತ್ತದೆ.ಅಂದರೆ ದೀರ್ಘಾವಧಿಗೆ ಅಧಿಕ ದರದ ಬಡ್ಡಿ ಹಾಗು ಅಲ್ಪಾವಧಿಗೆ ಕಡಿಮೆ ದರದ ಬಡ್ಡಿಯನ್ನು ನೀಡಲಾಗುತ್ತದೆ.ಇಂತಹ ಠೇವಣಿಗಳು ಬಡ್ಡಿಯ ರೂಪದ ಆದಾಯ ಪಡೆಯುವ ಗುರಿ ಹೊಂದಿರುವವರಿಗೆ ಸೂಕ್ತವಾಗಿರುತ್ತವೆ.
ಸಾಲಗಳನ್ನು ನೀಡುವುದು
[ಬದಲಾಯಿಸಿ]ಸಾಲ ಮತ್ತು ಮುಂಗದಗಳನ್ನು ನೀಡುವುದು ವಾಣಿಜ್ಯ ಬ್ಯಾಂಕುಗಳ ಇನ್ನೊಮ್ದು ಪ್ರಮುಖ ಪ್ರಾಥಮಿಕ ಕಾರ್ಯವಾಗಿದೆ.ಅವು ಠೇವಣಿಗಳ ಮೂಲಕ ಸಂಗ್ರಹಿಸಿದ ಹಣವನ್ನು ಅಗತ್ಯವಿರುವ ಜನರಿಗೆ ಮತ್ತು ಉದ್ಯಮ ವ್ಯವಹಾರ ಸಂಸ್ಥೆಗಳಿಗೆ ಸಾಲ ರೂಪದಲ್ಲಿ ಕೊಡುತ್ತವೆ.ವೈಯಕ್ತಿಕ ವಿಶ್ವಾಸ,ಚಿನ್ನ,ಬೆಳ್ಳಿ,ಸ್ಥಿರಾಸ್ತಿ ಮತ್ತು ಚರಾಸ್ತಿಯ ಭದ್ರತೆಯ ಮೇಲೆ ಸಾಲಗಳು ಮತ್ತು ಮುಂಗದಗಳನ್ನು ನೀಡುವುದು ಅವುಗಳ ಸ್ವೀಕ್ರತ ನೀತಿಯಾಗಿದೆ.ಬ್ಯಾಂಕುಗಳು ಸಾಮಾನ್ಯವಾಗಿ ತಾವು ಸಾರ್ವಜನಿಕರಿಂದ ಸ್ವೀಕರಿಸಿದ ಠೇವಣಿಗಳಿಗೆ ಕಡಿಮೆ ದರದ ಬಡ್ಡಿ ಹಾಗು ಸಾಲದ ಮೇಲೆ ಅಧಿಕ ದರ್ದ ಬಡ್ಡಿಯನ್ನು ವಿಧಿಸಿ ಲಾಭ ಗಳಿಸುತ್ತವೆ.ವಾಣಿಜ್ಯ ಬ್ಯಾಂಕುಗಳ ಕಲ್ಪಿಸುವ ಸಾಲದ ಸೌಲಭ್ಯಗಳು ಹಲವು ರೀತಿಯಾದಾಗಿವೆ.ಅವುಗಳ ವಿವರ ಮುಂದಿನಮ್ತಿದೆ.
(ಅ)ಸಾಲ ಮತ್ತು ಮುಂಗಡಗಳು ವಾಣಿಜ್ಯ ಬ್ಯಾಮ್ಕುಗಳು ಸಾರ್ವಜನಿಕರಿಗೆ ನೀಡುವ ಹಲವು ರೀತಿಯ ಸಾಲಗಳಲ್ಲಿ ಸಾಲಗಳು ಮತ್ತು ಮುಂಗದಗಳು ಪ್ರಮುಖವಾಗಿವೆ.ಸಾಮಾನ್ಯವಾಗಿ ಬ್ಯಾಂಕುಗಳು ದಿರ್ಘಾವಧಿಗೆ ನೀಡುವ ಹಣದ ಸೌಲಭ್ಯಗಳನ್ನು 'ಸಾಲ'ಎಂತಲೂ ಹಾಗು ಅಲ್ಪಾವಧಿಗೆ ನೀದುವ ಸಾಲವನ್ನು 'ಮುಂಗಡ'ಎಂತಲೂ ಕರೆಯಲಾಗುತ್ತದೆ.ಬ್ಯಾಂಕುಗಳು ಇಂತಹ ರೀತಿಯ ಸಾಲಗಳನ್ನು ಸಾಲಗಾರನ ಆಸ್ತಿಯ ಭದ್ರತೆ ಮತ್ತು ಇತರ ಜಾಮೀನಿನ ಆಧಾರದ ಮೇಲೆ 'ಸಾಲದ ಖಾತೆ'ಎಮ್ಬ ಬೇರೆಯೇ ಆದ ಖಾತೆಯ ಮೂಲಕ ಮಂಜೂರು ಮಾಡುತ್ತವೆ.
(ಆ)ಓವರ್ ಡ್ರಾಫ್ಟ್ ಓವರ್ ಡ್ರಾಫ್ಟ್ ಎಂಬುದು ವಾಣಿಜ್ಯ ಬ್ಯಾಂಕುಗಳು ತನ್ನ ಗ್ರಾಹಕರಿಗೆ ನೀಡುವ ಒಂದು ತಾತ್ಕಾಲಿಕ ಸಾಲ ಸೌಲಭ್ಯವಾಗಿದೆ.ಈ ಪದ್ಧತಿಯಲ್ಲಿ ಚಾಲ್ತಿ ಖಾತೆ ಹೊಂದಿರುವವರು ತಮ್ಮ ಖಾತೆಯಲ್ಲಿರುವ ಠೇವಣಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಬಡ್ಡಿಯೊಂದಿಗೆ ಶೀಘ್ರ ಮರುಪಾವತಿ ಮಾಡಬೇಕಾಗುತ್ತದೆ.ಸಾಮಾನ್ಯವಾಗಿ ಈ ಸೌಲಭ್ಯವನ್ನು ಆರ್ಥಿಕ ಸುಭದ್ರತೆ ಹೊಂದಿರುವ ಮತ್ತು ವ್ಯವಹಾರದಲ್ಲಿ ಪ್ರಾಮಾಣಿಕರೆಂದು ಗುರುತಿಸಲಾಗಿರುವ ಗ್ರಾಹಕರಿಗೆ ಕೊಡಲಾಗುತ್ತದೆ.
(ಇ)ಹುಂಡಿಗಳನ್ನು ವಟ್ಟಾಯಿಸುವುದು ಬ್ಯಾಂಕುಗಳು ಹುಂಡಿಗಳನ್ನು ವಟ್ಟಾಯಿಸುವುದರ ಮೂಲಕವೂ ತಮ್ಮ ಗ್ರಾಹಕರಿಗೆ ಸಾಲ ನೀಡುತ್ತವೆ.ಹುಂಡಿಯೆಂದರೆ 'ವ್ಯಾಪಾರದ ರಶೀದಿ'ಅಥವಾ 'ವಿನಿಮಯ ಪತ್ರ'ವಾಗಿರುತ್ತದೆ.ಇವುಗಳ ಅವಧಿ ಗರಿಷ್ಟ ೯೦ ದಿನಗಳಾಗಿರುತ್ತದೆ.ವ್ಯಾಪಾರಿಯೊಬ್ಬ ಇನೊಬ್ಬ ವ್ಯಾಪಾರಿಯಿಂದ ಸರಕುಗಳನ್ನು ಕೊಂಡುಕೊಂಡಾಗ ಹಣವನ್ನು ಕೂಡಲೇ ಪಾವತಿ ಮಾಡುವ ವಾಗ್ದಾನ ಮಾಡಿ ವಾಗ್ದಾನ ಪತ್ರ ಬರೆದುಕೊಡುತ್ತಾನೆ.ಇದನ್ನು ಹುಂಡಿ ಎನ್ನಲಾಗುತ್ತದೆ.ಸರಕುಗಳನ್ನು ಮಾರಿದ ವ್ಯಕ್ತಿಗೆ ಹುಂಡಿಯ ಅವಧಿಯಾದ ೯೦ ದಿನಗಳ ಒಳಗೇ ಹಣದ ಅವಶ್ಯಕತೆ ಬಂದಾಗ ಅವನು ಈ ಹುಂಡಿಯನ್ನು ಬ್ಯಾಂಕಿನಲ್ಲಿಟ್ಟು ಸಾಲ ಪಡೆಯಬಹುದು.ಹೀಗೆ ವಾಣಿಜ್ಯ ಬ್ಯಾಂಕು ವ್ಯಾಪಾರದ ಹುಂಡಿಯ ಆಧಾರದ ಮೇಲೆ ಸಾಲ ಸೌಲಭ್ಯ ಒದಗಿಸುವುದನ್ನು ಹುಂಡಿಯನ್ನು ವಟ್ಟಾಯಿಸುವುದು ಎನ್ನಲಾಗುತ್ತದೆ.ಹುಂಡಿಯನ್ನು ವಟ್ಟಾಯಿಸಿ ಸಾಲವನ್ನು ನೀಡುವಾಗ ಬ್ಯಾಂಕುಗಳು ಎಷ್ಟು ದಿನಗಳ ಕಲಕ್ಕೆ ಹುಂಡಿಯ ಆಧಾರದಲ್ಲಿ ಸಾಲ್ ನೀಡುತ್ತವೆಯೋ ಆ ಅವಧಿಗೆ ಬರಬೇಕಾಗಿರುವ ಬಡ್ಡಿಯನ್ನು ಮುಂದಾಗಿಯೇ ತೆಗೆದುಕೊಂದು ಉಳಿದ ಹಣವನ್ನು ಹುಂಡಿ ಮಾರಿದ ವ್ಯಕ್ತಿಯ ಖಾತೆಗೆ ಜಮಾ ಮಾಡುತ್ತವೆ.ಹೀಗೆ ನೀಡಲಾದ ಸಾಲವನ್ನು ಹುಂಡಿಯ ಅವಧಿಯ ಮುಗಿದ ಸಂತರ ಬರುವ ಹಣದಿಂದ ವಸೂಲು ಮಾಡಿಕೊಳ್ಳುತ್ತವೆ.
(ಈ)ನಗದು ಸಾಲ ನಗದು ಸಾಲವು ವಾಣಿಜ್ಯ ಬ್ಯಾಂಕುಗಳು ತನ್ನ ಗ್ರಾಹಕರಿಗೆ ನೀಡುವ ಇನೊಂದು ರೀತಿಯ ಸಾಲವಾಗಿದೆ.ಈ ವಿಧಾನದಲ್ಲಿ ಸಾಲ ಪಡೆಯುವವನ ಹೆಸರಿನಲ್ಲಿ ನಗದು ಸಾಲ ಖಾತೆ ಎಂಬ ಬೇರೆಯೇ ಆದ ಖಾತೆಯನ್ನು ತೆರೆಯಲಾಗುತ್ತದೆ.ಆ ನಂತರ ಗೊತ್ತುಪಡಿಸಲಾದ ಸಾಲದ ಗರಿಷ್ಟ ಮಿತಿಯವರಿಗೆ ಗ್ರಾಹಕನು ತನ್ನ ನಗದು ಸಾಲ ಖಾತೆಯಿಂದ ಹಣವನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಪಡೆಯಲು ಅನುಮತಿ ನೀಡಲಾಗುತ್ತದೆ. ಈ ರೀತಿಯ ಸಾಲಗಳನ್ನು ವ್ಯಾಪಾರಿಗಳು,ಕೈಗಾರಿಕೋದ್ಯಮಿಗಳು,ಲೇವಾದೇವಿಗಾರರಿಗೆ ಅವರ ಭದ್ರತೆಗಳನ್ನು ನೋಡಿಕೊಂದು ನೀದಲಾಗುತ್ತದೆ.
ಹೀಗೆ ವಾಣಿಜ್ಯ ಬ್ಯಾಂಕುಗಳು ಆಧುನಿಕ ಯುಗದಲ್ಲಿ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತಿವೆ.ಇಂದು ಬ್ಯಾಂಕಿಂಗ್ ಕ್ಷೇತ್ರ ತುಂಬಾ ಪೈಪೋತಿಯುಕ್ತವಾದುದಾಗಿದೆ.ಇದರಿಂದಾಗಿ ಬ್ಯಾಂಕುಗಳು ಹೊಸ ಕ್ಷೇತ್ರಗಳನ್ನು ಪ್ರವೇಶಿಸುವುದರ ಮೂಲಕ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿವೆ.