ವಿಷಯಕ್ಕೆ ಹೋಗು

ಸದಸ್ಯ:Deekshith Bollur/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆಂಬೈದೂರು-ಚಾಂಬಾಡು ಕಿರುಚಾವಡಿ

[ಬದಲಾಯಿಸಿ]

ಇದು ಕೊಡಗು ಮತ್ತು ದಕ್ಷಿಣ ಕನ್ನಡಗಳ ಗಡಿ ಭಾಗವಾಗಿದೆ, ಚಾಂಬಾಡು ಕಿರು ಚಾವಡಿ ಹೊಸುರು ಗೌಡರ ಮನೆತನದ ಧರ್ಮದೈವ ರುದ್ರಾಂಡಿಯ ಪ್ರಧಾನ ನೆಲೆಯಾಗಿದೆ, ಇದು ತರುವಾಯ ಗ್ರಾಮ ದೈವವಾಗಿದೆ,

ಇತಿಹಾಸ:

[ಬದಲಾಯಿಸಿ]

ಪುರಾಣ ಪ್ರಕಾರ ಉಲ್ಲಾಕುಳು ದೈವಗಳು ತಲಕಾವೇರಿಗೆ ಬಂದು ನೆಲೆಯಾಗುತ್ತಾರೆ, ಗ್ರಾಮದೈವವಾದ ರುದ್ರಾಂಡಿಯ ಆಹ್ವಾನ ಮೇರೆಗೆ ಉಲ್ಲಾಕುಳು ಚೆಂಬು ಐದೂರಿಗೆ ಬರುತ್ತಾರೆ, ಹಾಗೆ ಬಂದ ಉಲ್ಲಾಕುಳು ಮೊದಲು ಚಾಂಬಾಡು ಕಿರುಚಾವಡಿಯ ಹತ್ತಿರದಲ್ಲಿ ತಮ್ಮ ಕುದುರೆಗಳನ್ನು ಕಟ್ಟುತ್ತಾರೆ, ಆಗಿನ ಆ ಅಶ್ವಾಲಯ ಇಂದು ಉದಿಪನ ಚಾವಡಿಯೆಂದು ಕರೆದುಕೊಂಡಿದೆ, ಬಲ್ಲಾಳರ ಕಾಲದಲ್ಲಿ ಈ ಸ್ಥಳದಲ್ಲಿ ಉಲ್ಲಾಕುಳುಗಳ ಆಚರಣೆಯ ಸಂಧರ್ಭದ ಒಲಸರಿಗಾಗಿ ಮರದ ಕುದುರೆಯನ್ನು ರಚಿಸಿ ಇಡಲಾಗಿತ್ತು, ಇದು ರಾತ್ರಿ ಹೊತ್ತು ಜೀವ ತಳೆದು ಭತ್ತವನ್ನು ಮೇಯುತ್ತಿತ್ತೆಂದು ಜನರು ಹೇಳುತ್ತಾರೆ. ರುದ್ರಾಂಡಿಯು ಕರೆದು ತಂದ ಉಲ್ಲಾಕುಳುಗಳನ್ನು ತನ್ನ ನೆಲೆಯಾದ ಕಿರು ಚಾವಡಿಯಲ್ಲಿ ನೆಲೆಗೊಳಿಸಿ ತಾನು ಹೊರಗೆ 'ದೊಂಪದ ಬಲಿ' ನೇಮೋತ್ಸವವನ್ನು ಹೊಂದುವ ದೈವವಾಗುತ್ತಾಳೆ, ಉಲ್ಲಾಕುಳುಗಳಿಗೆ ಉಪ್ಪಂಗಳ ಮಾಡ ಪ್ರತ್ಯೇಕವಾಗಿದೆ.

ಭಂಡಾರ:

[ಬದಲಾಯಿಸಿ]

ಉಲ್ಲಾಕುಳುಗಳ ಭಂಡಾರ ಭಗಂಡೇಶ್ವರ ದೇವಸ್ಥಾನದ ಪ್ರಕಾರ ಜಗಲಿಯ ಮೇಲೆ ಒಮದು ಪುಟ್ಟ ಗುಡಿಯಲ್ಲಿದೆ, ಅಶ್ವಾರೋಹಿಗಳಾಗಿರುವ ಎರಡು ಮೂರ್ತಿಗಳನ್ನು ಹಾಗೆಯೇ ಬಿಲ್ಲು, ಸೂರ‍್ಯ ಎನ್ನುವ ಉಲ್ಲಾಕುಳುಗಳ ಆಯುಧಗಳನ್ನು ಕಾಣುತ್ತೇವೆ, ಇಲ್ಲಿಂದ ವರ್ಷಾವರ್ತಿ ಎರಡು ಬಾರಿ ಉಲ್ಲಾಕುಳು ನೇಮೋತ್ಸವಕ್ಕೆ ಭಂಡಾರವನ್ನು ಚೆಂಬೈದೂರಿಗೆ ಕೊಂಡೊಯ‍್ಯುವುದು ಸಂಪ್ರದಾಯ, ಪೂಜಾರಿಗಳ ಮತ್ತು ಇತರ ಪ್ರಮುಖರು ಹೋಗಿ ರಕ್ಷಕ ಸಮಿತಿಯವರ ಅಪ್ಪಣೆ ಮೇರೆಗೆ ಭಂಡಾರವನ್ನು ತರುವುದು ಸಂಪ್ರದಾಯ, ಭಂಡಾರದ ರಕ್ಷಣೆಗೆ ರಕ್ಷಕರು ಒಟ್ಟಿಗೆ ಇರುತ್ತಾರೆ.

ದೈವ ವಿಧಾನ:

[ಬದಲಾಯಿಸಿ]

ಚೆಂಬುವಿನಿಂದ ೧೫ಕಿ, ಮೀ, ದೂರದ ಭಾಗಮಂಡಲದಿಂದ ಭಂಡಾರ ತರುವ ಕಾಡು ದಾರಿಯಲ್ಲಿ ಬರುವಾಗ ನಿರ್ದಿಷ್ಟ ಸ್ಥಳಗಳಲ್ಲಿ 'ಕಟ್ಟೆಪೂಜೆ' ನೆರವೇರಿಸಲಾಗುತ್ತದೆ, ಭಂಡಾರ ತರುವಾಗ ಕಟ್ಟೆಪೂಜೆ ನಡೆಯುವ ಸ್ಥಳಗಳು ಪೂರ್ವದಲ್ಲಿ ಉಲ್ಲಾಕುಳು ರಾಕ್ಷಸ ಸಂಹಾರಕ್ಕೆ ರುದ್ರಚಾಮುಂಡಿಯ ಬೇಡಿಕೆ ಪ್ರಕಾರ ಬರುವಾಗ ವಿಶ್ರಾಂತಿ ಪಡೆದ ಸ್ಥಳಗಳೆಂದು ಪ್ರತೀತಿ. ಕುದುಪಾಜೆ ಕುಟುಂಬಸ್ಥರ ಸನ್ನಿಧಿ ಮಂಟಮೆಯಲ್ಲಿ ಪೊಲ್ಮಾರ್, ಪನೇಡ್ಕ ಮುಂತಾದೆಡೆ ಈ ಕಟ್ಟೆಪೂಜೆ ವಿಧಿಗಳು ನಡೆಯುತ್ತವೆ, ಹೀಗೆ ಬರುವ ಭಂಡಾರವನ್ನು ಮೂಲರುದ್ರಾಂಡಿ ದೈವದ ಕಿರು ಚಾಂಬಾಡು ಚಾವಡಿಯಲ್ಲಿ "ಕೆರಿಸಿ"ಉಲ್ಲಾಕುಳಿಗೆ ವರ್ಷಾವರ್ತಿ ಜಾರ್ದೆ ಮತ್ತು ಕಾಲಾವಧಿ ನೇಮೋತ್ಸವಗಳು ನಡೆಯುತ್ತವೆ. ಒಟ್ಟಾರೆ ಈ ಸ್ಥಳ ಪುರಾಣ ಉಲ್ಲಾಕುಳು ಚೆಂಬೈದೂರಿಗೆ ಭಾಗಮಡಂಲದಿಂದ ಬಂದು ರಕ್ಷಕ ದೈವಗಳಾಗುವುದನ್ನು ಮತ್ತು ನೆಲಮೂಲದ ಅಧೀನ ದೈವವಾಗುವ ಸಮಕಥನವನ್ನು ನಮ್ಮ ಮುಂದಿಡುತ್ತದೆ. [] []

ಉಲ್ಲೇಖಗಳು

[ಬದಲಾಯಿಸಿ]
  1. ಸ್ಥಳ ನಾಮಗಳು ಮತ್ತು ಐತಿಹಗಳು:(೨೦೧೬)ಸಂ.ಪೂವಪ್ಪ ಕಣಿಯೂರು.ಪ್ರ,ಕನ್ನಡ ಸಂಘ ನೆಹರು ಮೆಮೋರಿಯಲ್ ಕಾಲೇಜು,ಸುಳ್ಯ.
  2. https://www5.prosongs.net/mp3/chembu-kinumani-daivasthana-nema.html