ಸದಸ್ಯ:Deeksha Shetty123/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                    ಬ್ಯಾಂಕೋದ್ಯಮ
                           

             ಬ್ಯಾಂಕುಗಳು ಉದ್ದಿಮೆ,ವ್ಯಾಪಾರ ಹಾಗೂ ವ್ಯವಹಾರ ವಹಿವಾಟುಗಳ ನರನಾಡಿಗಳೆಂದು ಹೇಳಲಾಗುತ್ತಿದೆ.
       ಬ್ಯಾಂಕು ಹಣದ ವ್ಯವಹಾರ ನಡೆಸುವ ಒಂದು ಸಂಸ್ಥೆ.ಜನರಿಂದ ಠೇವಣಿಯನ್ನು ಪಡೆದು ಅದನ್ನು ಅಗತ್ಯ ಉಳ್ಳವರಿಗೆ 
       ಸಾಲವನ್ನಾಗಿ ನೀಡಿ ಅಥವಾ ಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಉದ್ಯಮವೇ'ಬ್ಯಾಂಕಿಂಗ್'
       ಆಗಿದೆ. ಬ್ಯಾಂಕಿಂಗ್ ನಲ್ಲಿರಿಸಿರುವ ಠೇವಣಿಗಳನ್ನು ಜನರು ತಮಗೆ ಬೇಕಾದಾಗ ಅಥವಾ ಅವಧಿ ಮುಗಿದಾಗ ಚೆಕ್ 
       ಅಥವಾ ಇತರ ಸಾಧನಗಳ ಮೂಲಕ ಹಿಂದಕ್ಕೆ ಪಡೆಯಬಹುದು. ಬ್ಯಾಂಕಿಂಗ್ ಸಂಸ್ಥೆಯು ಸಾರ್ವಜನಿಕರ ಹಣವನ್ನು
       ಬೇರೆ ಬೇರೆ ವಿಧದ ಠೇವಣಿ ಖಾತೆಗಳಲ್ಲಿ ಸಂಗ್ರಹಿಸುತ್ತದೆ. ಈ ರೀತಿಯಾಗಿ ಸಂಗ್ರಹಿಸಲ್ಪಟ್ಟ ಹಣವನ್ನು ಗ್ರಾಹಕನ
       ಅವಶ್ಯಕತೆಗಳಿಗನುಗುಣವಾಗಿ ಮರುಪಾವತಿಸಲು ಬದ್ದನಿದ್ದು ಬೇರೆಯವರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡಿ 
       ಲಾಭಗಳಿಸುತ್ತದೆ. ಇನ್ನೂ ಸರಳ ರೀತಿಯಲ್ಲಿ ಹೇಳುವುದಾದರೆ' ಸಾಲವನ್ನು ಕೊಡುವ ಉದ್ದೇಶಕ್ಕಾಗಿ ಠೇವಣಿ 
       ರೂಪದಲ್ಲಿ ಹಣ ಒಗ್ಗೂಡಿಸುವ ವ್ಯವಹಾರದ ಚಟುವಟಿಕೆಯೇ ಬ್ಯಾಂಕಿಂಗ್ ಆಗಿದೆ.'ನಿಮ್ಮ ಹಣ' 'ನನ್ನ ಬುದ್ಧಿವಂತಿಕೆ'-
       ಈ ತತ್ವದಡಿ ಬ್ಯಾಂಕರ್ ವ್ಯವಹಾರ ಮಾಡಿ ಲಾಭಗಳಿಸುತ್ತಾನೆ.
             ಬ್ಯಾಂಕುಗಳು ದೇಶದ ವ್ಯಾಪಾರ,ವಾಣಿಜ್ಯ,ಕೈಗಾರಿಕೆ ಹಾಗೂ ಕೃಷಿಗೆ ಬೇಕಾದ ಆರ್ಥಿಕ ಸಹಾಯವನ್ನು
       ಮಾಡುವುದರ ಮೂಲಕ ಆ ಕ್ಷೇತ್ರಗಳ ಹಾಗೂ ಅದರಿಂದ ಇಡೀ ದೇಶದ ಅಭಿವೃದ್ಧಿಗೆ ಕಾರಣವಾಗುತ್ತವೆ.
       ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಣ ರವಾನೆ ಮಾಡಲು ಬ್ಯಾಂಕ್ ಡ್ರಾಪ್ಟ್,ಚೆಕ್ಕುಗಳು ಅನುಕೂಲಕರ ಸಾಧನಗಳು.
       ಆ ರೀತಿಯ ಪಾತಿಯು ಅತ್ಯಂತ ಮಿತವ್ಯಯ ಮಾತ್ರವಲ್ಲದೆ ನಾವು ಮಾಡಿದ ಪಾವತಿಗೆ ಬ್ಯಾಂಕುಗಳು ಒಳ್ಳೆಯ
       ಸಾಕ್ಷಿಗಳಾಗುತ್ತವೆ.ನಮ್ಮ ದೇಶದ ಅಭಿವೃದ್ಧಿಗೆ ಉಳಿತಾಯವು ಬಹಳ ಮುಖ್ಯವಾಗಿದೆ.ನಮ್ಮ ದೇಶದ ಸರಕಾರ ಕೃಷಿ,
       ಕೈಗಾರಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಹಾಗೂ ಸಂಪನ್ಮೂಲಗಳನ್ನು ಹೆಚ್ಚಿಸಲು ಈ ಕ್ಷೇತ್ರಗಳಲ್ಲಿ
       ಹೂಡಿಕೆ ಅಗತ್ಯವಾಗಿದೆ.ಹೂಡಿಕೆಯು ಮುಖ್ಯವಾಗಿ ಉಳಿತಾಯವನ್ನು ಅವಲಂಬಿಸಿದೆ.ಬ್ಯಾಂಕುಗಳು ಜನರಲ್ಲಿ ಉಳಿತಾಯದ
       ಮನೋಭಾವವನ್ನು ಹೆಚ್ಚಿಸಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತವೆ.ಅದು ಜನರ ಉಳಿತಾಯದ ಹಣವನ್ನು    
       ಕ್ರೋಢೀಕರಿಸಿ ವ್ಯಾಪಾರಿ ಸಂಸ್ಥೆಗಳಿಗೆ ಬೇಕಾಗುವ ದೀಘಾ೯ವಧಿ (ಸ್ಥಿರ)ಬಂಡವಾಳ ಮತ್ತು ಅಲ್ಪಾವದ್ಧಿ (ದುಡಿಯುವ)
       ಬಂಡವಾಳವನ್ನೊಳಗೊಂಡಂತೆ ಎಲ್ಲಾ ಬಗೆಯ ಹಣಕಾಸಿನ ಪೂರೈಕೆಯಾಗುವಂತೆ ಮಾಡುತ್ತದೆ.