ಸದಸ್ಯ:Deeksha Eshwar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ನಮಸ್ಕಾರ. ನಾನು ದೀಕ್ಷ ಈಶ್ವರ್. ಇದೀಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

kodagu

ಚಿಕ್ಕ ವಯಸ್ಸಿನಿಂದಲೂ ನನಗೆ ಸಾಹಸಮಯವಾದ ಕ್ರೀಡೆ ಎಂದರೆ ಬಹಳ ಇಷ್ಟ. ಮೋಟುದ್ದ ಪೆನ್ಸಿಲ್ ಸಿಕ್ಕರೂ ಚಿತ್ರಕಲೆ ಸೃಷ್ಟಿಸಬಲ್ಲೆ. ಕೊಡಗಿನವಳಾದ ನಾನು ಸಹಜವಾಗಿಯೇ ಪರಿಸರ ಪ್ರೇಮಿ. ಗಾರ್ಡನ್ ಗಿಡಗಳಿಗೂ ನನಗು ಅವಿನಾಭಾವ ಸಂಬಂಧ. ಎರಡೇ ಎರಡು ದಿನ ರಜೆ ಸಿಕ್ಕರೆ ಸಾಕು, ಊರೂರು ಅಲೆಯುತ್ತೇನೆ. ಹಾಗೆ ಹೋದ ಊರುಗಳಲ್ಲಿ ಚಿಕ್ಕಮಗಳೂರು ನನ್ನ ಇಷ್ಟವಾದದ್ದು. ಆರ್.ಕೆ.ನಾರಾಯಣ್ ಎಂದರೆ ಪಂಚಪ್ರಾಣ. ನನ್ನದೇ ಕಲ್ಪನೆಯ ಮಾಲ್ಗುಡಿಯಲ್ಲಿ ಇಂದಿಗೂ ಬದುಕುತ್ತೇನೆ. ಚಿಕ್ಕಂದಿನಿಂದಲೂ ಪಂಚತಂತ್ರ ನನ್ನನ್ನು ಆಕರ್ಷಿಸಿತ್ತು. ಬುದ್ಧಿ ಬೆಳೆದಂತೆ ಪುಸ್ತಕದ ರಾಶಿಯೂ ಬೆಳೆಯುತ್ತಾ ಹೋಯಿತು. ಕಥೆಗಳು ನಮ್ಮ ಮೇಲೆ ಬೀರಬಹುದಾದ ಪರಿಣಾಮ ಅಪಾರವಾದದ್ದು ಎಂದು ನಂಬಿರುವವಳು ನಾನು. ಓದುವ ಹುಚ್ಚು, ಬರೆಯುವ ಹಂಬಲ. ಇಷ್ಟಲ್ಲದೆ ಹಾಡು ಕೇಳುವ ಚಟ. ಸಿನಿಮಾಗೂ ನಂಗೂ ಅಷ್ಟಾಗಿ ಆಗಿಬರುವುದಿಲ್ಲ. ಆಗೊಮ್ಮೆ-ಈಗೊಮ್ಮೆ ಖಾಸಾ ದೋಸ್ತ್ ಗಳು ಪೀಡಿಸಿದಾಗ ಹೋಗಲೇಬಾಕಾಗುತ್ತದೆ.

ಆಸಕ್ತಿಗಳು[ಬದಲಾಯಿಸಿ]

ಜಿಟಿ-ಜಿಟಿ ಮಳೆ, ಕೈಯಲ್ಲೊಂದು ಒಳ್ಳೆ ಪುಸ್ತಕ, ಇನ್ನೊಂದು ಕೈಯಲ್ಲಿ ಒಂದಷ್ಟು ಚಹ, ತಲೆ ಸವರಿಸಿಕೊಳ್ಳುವುದಕ್ಕೆ ಪಕ್ಕದಲ್ಲಿ ಒಂದು ಮುದ್ದಾದ ನಾಯಿ, ಹಿನ್ನಲೆಯಲ್ಲಿ ಕಿವಿಗೊಂದಿಷ್ಟು ಇಂಪಾದ ಘಜ಼ಲ್; ಇದು ನನ್ನ ಸ್ವರ್ಗಕ್ಕೆ ದಾರಿ. ಹಗಲುಗನಸು ಕಾಣುವುದರಲ್ಲಿ ಪಾರಂಗತ. ಕಥೆಗಳನ್ನ, ಕಾದಂಬರಿಗಳನ್ನ ಬರೆದುಕೊಂಡೇ ಜೀವನ ಸಾಗಿಸಬಹುದು ಎಂಬುದನ್ನು ಸಾಧಿಸಿ ತೋರಿಸಬೇಕು ಎಂಬ ಹಠ. ಇನ್ನೊಬ್ಬರಿಗೆ ಸಹಾಯ ಮಾಡಿ ಮನಸ್ಸಿಗೆ ಸಿಗುವ ಸಂತೋಷವನ್ನ ಆನಂದಿಸುವುದೇ ನನ್ನ ಸ್ವಾರ್ಥ. ಋಣಕ್ಕಿಂತ ದುಡ್ಡು ಮುಖ್ಯ, ದುಡ್ಡಿಗಿಂತ ಸಂಬಂಧ ಮುಖ್ಯ ಎನ್ನುವುದೇ ನನ್ನ ಬಲವಾದ ನಂಬಿಕೆ. ತಂದೆ-ತಾಯಿಯರೇ ಕೃಷ್ಣ; ನಾನು ಪಾರ್ಥ. ಈ ಪ್ರಪಂಚವೆಂಬ ಕುರುಕ್ಷೇತ್ರದಲ್ಲಿ ನನ್ನ ರಥ ನಡೆಸಲು ನಾನು ಅವರಿಬ್ಬರ ಮೇಲೇ ಅವಲಂಬಿತೆ. ಅವರ ಮಾತೇ ನನಗೆ ಗೀತೆ.

ಇದೇ ನನ್ನ ಪ್ರಪಂಚ.

ಇದೇ ನಾನು.