ಸದಸ್ಯ:Chitrap389/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨]ಊಟವು ತಿನ್ನುವ ಕ್ರಿಯೆಯ ಒಂದು ನಿದರ್ಶನ, ವಿಶಿಷ್ಟವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನಡೆಯುವ ಮತ್ತು ನಿರ್ದಿಷ್ಟ, ತಯಾರಿಸಿದ ಆಹಾರವನ್ನು ಒಳಗೊಳ್ಳುವಂಥದ್ದು. ಊಟಗಳು ಮುಖ್ಯವಾಗಿ ಮನೆಗಳಲ್ಲಿ, ಭೋಜನ ಮಂದಿರಗಳಲ್ಲಿ, ಮತ್ತು ಉಪಹಾರ ಮಂದಿರಗಳಲ್ಲಿ ನಡೆಯುತ್ತವಾದರೂ, ಎಲ್ಲಿ ಬೇಕಾದರೂ ನಡೆಯಬಹುದು. ವ್ಯವಸ್ಥಿತ ಊಟಗಳು ದೈನಂದಿನ ಆಧಾರದಲ್ಲಿ ಆಗುತ್ತವೆ, ವಿಶಿಷ್ಟವಾಗಿ ದಿನದಲ್ಲಿ ಹಲವು ಬಾರಿ.

                                                                        ಊಟ 
      

thumb|ಊಟ

ಪೀಠಿಕೆ[ಬದಲಾಯಿಸಿ]

ಊಟ ಎಂದರೆ ಅಡಿಗೆ ಎಂಬ ಅರ್ಥವು ಬರುತ್ತದೆ ಹಾಗೂ ತಿನ್ನುವ ಒಂದು ಕೆಲಸವೆಂದೂ ಸಹ ಬರುತ್ತದೆ.ಸಾಮನ್ಯವಾಗಿ ನಾವು ಮಧ್ಯಾಹ್ನ ಹಾಗು ರಾತ್ರಿ ತಿನ್ನುವುದನ್ನು ನಾವು ಊಟ ಎನ್ನುತ್ತೇವೆ.ಸಾಮನ್ಯವಾಗಿ ನಾವು ದಿನವೂ ಮಾಡುವ ಊಟಕ್ಕೂ ಆಗು ಶುಭ ಕಾರ್ಯಕ್ರಮಗಳಲ್ಲಿ ಮಾಡುವ ಊಟಕ್ಕೂ ತುಂಬಾ ವ್ಯತ್ಯಾಸವಿರುತ್ತದೆ.ನಾವು ದಿನವೂ ಊಟ ಮಾಡಿದರೂ ಶುಭ ಕಾರ್ಯಕ್ರಮಗಳ ಊಟದ ರುಚಿಯೇ ಬೇರೆ.ಆದ್ದರಿಂದ ಜನರು ಶುಭ ಕಾರ್ಯಕ್ರಮಗಳ ಊಟವನ್ನು ಜಾಸ್ತಿ ಇಷ್ಟ ಪಡುತ್ತಾರೆ ಎನ್ನುವುದು ಒಂದು ಹಾಸ್ಯದ ಸಂಗತಿ.

        ಇನ್ನೂ ಊಟದ ಪದ್ಧತಿಗಳ ಬಗ್ಗೆ ನೋಡುವುದಾದರೆ ನಮ್ಮ ದೇಶಾದ್ಯಂತ ವಿವಿಧ ಊಟದ ಪದ್ಧತಿಗಳನ್ನು ಅನುಸರಿಸುತ್ತೇವೆ ಒಂದೊಂದು ಸಂಸ್ಕೃತಿ ಬದಲಾಗುತ್ತಿದಂಗೆಯೇ ಆಹಾರ ಪದ್ಧತಿಗಳು ಸಹ ಬದಲಾಗುತ್ತವೆ.ಇದು ನಮ್ಮ ದೇಶದ ವಿವಿಧತೆಯನ್ನು ತೋರಿಸುತ್ತದೆ.ನಮ್ಮ ದೇಶದ ಕೆಲವೊಂದು ಆಹಾರ ಪದ್ಧತಿಗಳನ್ನು ಕೆಳಗಡೆ ಗಮನಿಸಬಹುದು.

ಊಟದ ಪದ್ಧತಿಗಳು[ಬದಲಾಯಿಸಿ]

೧) ಆಂಧ್ರ ಪ್ರದೇಶ -ಗೊಂಗುರ ಪಚಡಿ. ೨)ಅರುನಾಚಲ ಪ್ರದೇಶ -ಸೆಂಗಮೊರ. ೩)ಅಸ್ಸಾಮ್-ಮಸೊರ್ ತೆಂಗ. ೪)ಛತ್ತೀಸ್ ಗರ್ಹ್-ದೆಹ್ರೊರಿ. ೫)ಗೋವ-ಬೆಬ್ನಿಕ. ೬)ಗುಜರಾತ್-ಖಂಡ್ವಿ. ೭)ಹರ್ಯಾಣ-ಬಾಜ್ರ ಖಿಚ್ದಿ ೮)ತಮಿಳ್ ನಾಡು-ಮಾಂಸಹಾರಿ ಅಡುಗೆ ೯)ಕರ್ನಾಟಕ -ನಮ್ಮ ಕರ್ನಾಟಕದ ಅಡುಗೆ ರಾಗಿ ಮುದ್ದೆ ಆದರು ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ,ಪಲ್ಯ ಹಾಗು ಅನ್ನ ಸಾರು ಪ್ರಸಿದ್ಧ ವಾಗಿದೆ.

ಊಟದ ಮಹತ್ವ[ಬದಲಾಯಿಸಿ]

ಭೂಮಿ ಮೇಲೆ ಇರುವ ಪ್ರತಿ ಒಂದು ಜೀವಿಗು ಊಟ ಅತ್ಯವಶ್ಯಕ . ಬದುಕುವುದಕ್ಕೆ ಊಟ ಬೇಕೇ ಬೇಕು.ನಾವು ಊಟ ಮಾಡದೆ ೩ ದಿನಗಳು ಮಾತ್ರ ಬದುಕಬಹುದು.

ಮತ್ತು ನಾವು ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಹೋದರೆ ನಮ್ಮ ಆರೋಗ್ಯವು ಸಹ ಕೆಡುತ್ತದೆ.ಊಟ ನಮ್ಮ ಮೂಲಭೂತ ಹಕ್ಕು ಸಹ ಹೌದು.

ಇನ್ನು ನಾವು ಹೋಟೆಲ್ ಗಳಿಗೆ ಹೋದರೆ ನಮಗೆ ಬಗೆಬಗೆಯಾದ ಊಟದ ತಿನಿಸುಗಳು ದೊರೆಯುತ್ತವೆ.ಕೆಲವೊಂದು ಹೋಟೆಲ್ ಗಳಲ್ಲಿ ನಾವು ಬೇರೆ ಬೇರೆ ದೇಶದ ತಿನಿಸುಗಳನ್ನು ಸಹ ಸವಿಯಬಹುದು.

ಉಪವಾಸದಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳು[ಬದಲಾಯಿಸಿ]

ಮನುಷ್ಯನಿಗೆ ಪ್ರೋಟಿನ್ ಯುಕ್ತ ಆಹಾರ ಅತ್ಯವಶ್ಯಕ . ಪ್ರೋಟಿನ್ ಯುಕ್ತ ಆಹಾರ ತಿನ್ನದಿದ್ದರೆ ಊಟ ಮಾಡಿದ್ದು ಸಹ ವ್ಯರ್ಥ ವಾಗುತ್ತದೆ. ಇನ್ನೊಂದು ಅರ್ಥದಲ್ಲಿ ಮನುಷ್ಯನಿಗೆ ಶಕ್ತಿಯ ಕೇಂದ್ರವೇ ಊಟ.ಕೆಲವೊಬ್ಬರು ತಾವು ಸಣ್ಣ ಆಗಲು ಊಟ ಬಿಡುತ್ತಾರೆ.ಆದರೆ ಅದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ,ಊಟ ಬಿಟ್ಟು ಅವರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಅಷ್ಟೆ.ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಊಟ ಬಿಡಬಾರದು.ಊಟ ಬಿಟ್ಟರೆ ನಮಗೆ ಅಜೀರ್ಣ ಸಮಸ್ಯೆಯಾಗುತ್ತದೆ. ಆದ್ದರಿಂದ ಸಮಯ ಸಮಯಕ್ಕೆ ಸರಿಯಾಗಿ ಊಟ ಮಾಡಿಕೊಂಡು ನಾವು ಆರೋಗ್ಯವಾಗಿರಬೇಕು,ಏಕೆಂದರೆ 'ಆರೋಗ್ಯವೇ ಭಾಗ್ಯ'

ನಾವು ಊಟವನ್ನು ದಿನಕ್ಕೆ ಮೂರು ಬಾರಿ ಮಾಡಬೇಕು. ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ.ಬೆಳಗ್ಗೆ ರಾಜನ ಥರ ತಿನ್ನಬೇಕು ಮಧ್ಯಾಹ್ನ ಮಂತ್ರಿಯ ತರಹ ಹಾಗೂ ರಾತ್ರಿ ಸೇವಕನ ಥರ ತಿನ್ನಬೇಕು.ಅಂದರೆ ಬೆಳಗ್ಗೆ ಜಾಸ್ತಿ ಮಧ್ಯಾಹ್ನ ಅದಕ್ಕು ಸ್ವಲ್ಪ ಕಮ್ಮಿ ಹಾಗು ರಾತ್ರಿ ತುಂಬ ಕಮ್ಮಿ.ಏಕೆಂದರೆ ನಾವು ದಿನ ಪೂರ್ತಿ ಕೆಲಸ ಮಾಡುವುದರಿಂದ ಬೆಳಗ್ಗೆ ಜಾಸ್ತಿ ತಿನ್ನಬೇಕು ಅದು ಬೇಗ ಜೀರ್ಣವಾಗುತ್ತದೆ.ರಾತ್ರಿಯು ನಾವು ಸುಮ್ಮನೆ ಮಲಗುವುದರಿಂದ ನಾವು ಸ್ವಲ್ಪ ಕಮ್ಮಿ ತಿನ್ನಬೇಕು.ನಮ್ಮ ದೇಹವು ನಿದ್ರಾವಸ್ತೆ ಯಲ್ಲಿ ಇರುತ್ತದೆ. ಆದರೆ ಈ ಶತಮಾನದಲ್ಲಿ ಊಟದ ಪದ್ದತಿಯಲ್ಲಿ ತುಂಬಾ ಬದಲಾವಣೆ ಗಳು ಆಗಿದೆ ಎಲ್ಲರೂ ಅಂದರೆ ನಗರದವರು ಸಾಂಪ್ರದಾಯಕ ಊಟದ ಶೈಲಿಯನ್ನು ಬಿಟ್ಟು ಪಾಸ್ಚಿಮಾತ್ಯ ಊಟಗಳಿಗೆ ಮಾರಿಹೋಗಿರುವುದು ದುರಂತವೇ ಸರಿ.ಈ ಊಟದ ಪದ್ಧತಿಯಿಂದ ಈಗಿನ ತಲೆಮಾರಿನ ಜನಗಳಿಗೆ ಚಿಕ್ಕವಯಸ್ಸಿಗೆ ಹೃದಯದ ಸಮಸ್ಯೆ, ರಕ್ತದೊತ್ತಡ,ಮಧುಮೇಹ ಸಮಸ್ಯೆ ಎಲ್ಲವೂ ಹೆಚ್ಚಾಗುತ್ತಿದೆ .ಅದು ಸಹ ಚಿಕ್ಕವಯಸ್ಸಿಗೆ ಬರುತ್ತಿವೆ.ಆಗಲೆ ಈಗಿನ ತಲೆಮಾರಿನ ಅಂದಾಜು ಬದುಕುವ ಕಾಲ ಎಂದರೆ ಆಯಸ್ಸು ೧೦೦ ವರ್ಷದಿಂದ ೬೦ ಕ್ಕೆ ಇಳದಿದೆ ಎಂಬುದು ವಿಷಾದಕರ.

   ಇನ್ನು ನಾವು ಸರಿಯಾದ ಆಹಾರ ಪದ್ಧತಿಯನ್ನು ಪಾಲಿಸುವುದರಿಂದ ನಾವು ಆರೋಗ್ಯವಾಗಿ ಇರಲು ಸಾಧ್ಯ.ನಾವು ರಾಗಿಯನ್ನು ಊಟದಲ್ಲಿ ಹೆಚ್ಚಾಗಿ ಬಳಸುವುದರಿಂದ ನಮ್ಮ ಸಕ್ಕರೆ ಕಾಯಿಲೆಯನ್ನು ಸಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನಮ್ಮ ಆರೋಗ್ಯ ವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ನಮ್ಮ ಊಟದ ಪದ್ಧತಿಯು ಸಹ ಅತ್ಯವಶ್ಯಕ.

ನಾವು ನಮ್ಮ ಊಟದಲ್ಲಿ ಹೆಚ್ಚು ಹೆಚ್ಚು ತರಕಾರಿಗಳನ್ನು ಉಪಯೋಗಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚು ವಿಟಮಿನ್ ಹಾಗು ಪ್ರೋಟೀನ್ ಸಿಗುತ್ತದೆ.ಅದಕ್ಕಾಗಿಯೇ ನಮ್ಮ ತಾತ ಅಜ್ಜಿಯಂದಿರು ಬರೀ ಗೆಡ್ಡೆ ಗೆಣಸು ತರಕಾರಿ ತಿನ್ನುತ್ತಿದ್ದರೂ ಅವರು ಆರೋಗ್ಯವಾಗಿ ಹಾಗು ಗಟ್ಟಿಮುಟ್ಟಾಗಿ ಇರುತ್ತಿದ್ದರು ಆದರೆ ಈಗಿನ ಕಾಲದವರಾದ ನಮಗೆ ಸಣ್ಣಪುಟ್ಟ ಕೆಲಸ ಮಾಡಲು ಸಹ ಶಕ್ತಿ ಇಲ್ಲದಂತೆ ಆಗಿದೆ. ಇನ್ನು ಈಗಿನ ಪೀಳಿಗೆಯ ಮಕ್ಕಳೋ ಬರೀ ನೂಡಲ್ಸ್ ಅಂತೆ ಚೊಕೊಸ್ ಹಾಗು ಬರೀ ಚಿಪ್ಸ್ ಇತ್ಯಾದಿ ಅಂತಹ ಊಟವನ್ನೆ ಇಷ್ಟ ಪಡುತ್ತಾರೆ.ಹಾಗು ಇದರ ಪರಿಣಾಮವಾಗಿ ಮುಂದೊಂದಿನ ದುರ್ಬಲರು ಆಗುತ್ತಾರೆ.ಹಾಗು ಇನ್ನು ಸ್ವಲ್ಪ ವರುಷಗಳು ಉರುಳಿದಂತೆ ಮನುಷ್ಯನ ಅಂದಾಜು ಬದುಕುವ ಸಮಯ ೪೦ ವರ್ಷಗಳಿಗೆ ಇಳಿಯುವದರಲ್ಲಿ ಅಚ್ಚರಿಯೇನಿಲ್ಲ. ==ಉಪಸಂಹಾರ

ಆದ್ದರಿಂದ ನಾವು ಒಳ್ಳೆಯ ಊಟವನ್ನು ಮಾಡಿ ಆರೋಗ್ಯವಾಗಿ ಇರೋಣ.ಇನ್ನು ಊಟದ ಬಗ್ಗೆ ಹೇಳುತ್ತ ಹೊರಟರೆ ಎಷ್ಟು ಹೇಳಿದರು ಸಾಲದು.ನಮಗೆ ಬದುಕಲು ಊಟ ಬಹಳ ಮುಖ್ಯ ಎಂದು ಹೇಳುತ್ತಾ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ......
  1. http://www.localmoxie.com/web.php?keyword=different+food+items+of+different&uid=cce3I%2FsNww%2Bkzoj0rYaR4Mq1T%2FU7%2Bepbvx2Hs7XpY4MNEVWDvqmtt1NdgztPpgEcrVYkfNpRaq9xwCqV7cV19iZsq1SzY5BzN4BjlQcYVpjlvLb1Aaw1qJbBM18Xumlt8JPe7VazccfcfTFBlK0OmYdyWGLwh6GtLP8TOwqgtdbuhDkE%2BkE8ugdtXEUPG5xRXSrqmK4H%2F7qxpk72I1sw
  2. http://www.health.com/food