ಸದಸ್ಯ:Chethan bakilana/sandbox
ಜೀವನ ಚಿತ್ರಣ
[ಬದಲಾಯಿಸಿ]೧೮೦೯ರಲ್ಲಿ ಫ್ರಾನ್ಸ್ ನ ಬೆಸಾಂಕನ್ ಎಂಬಲ್ಲಿ ಒಬ್ಬ ಸಣ್ಣ ಪ್ರಮಾಣದ ಮದ್ಯ ತಯಾರಕನ ಮಗನಾಗಿ ಜನಿಸಿದರು.ಇವರು ಕ್ರಷಿಕ ಕುಟುಂಬಕ್ಕೆ ಸೇರಿದವರಾಗಿದ್ದರು.ಬಾಲ್ಯದಲ್ಲಿ ಅತೀವ ಬಡತನವನ್ನು ಅನುಭವಿಸಿದ ಈತ ಅದನ್ನು ಕಡೆಯವರೆಗೂ ಮರೆಯಲಿಲ್ಲ.ತನ್ನ ಬಡತನದ ಕರಣದಿಂದಾಗಿ ಆತನಿಗೆ ಕಾಲೇಜು ಶಿಕ್ಷಣ ಪಡೆಯಲಾಗಲಿಲ್ಲಿ.ಆದರೆ ಆತ ತನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಮುದ್ರಣ ಶಾಲೆಯೊಂದರಲ್ಲಿ ಅಕ್ಷರ ಜೋಡಣೆಗಾರನಾಗಿ ಹಾಗು ನಂತರ ಕರಡು ಪ್ರತಿ ಪರಿಶೀಲಕನಾಗಿ ಕಾರ್ಯನಿರ್ವಹಿಸಿ ಓದುವ ವಿಪುಲ ಅವಕಾಶ ಪಡೆದರು.ಈ ವೇಳೆಯಲ್ಲಿ ಅವರು ರಾಜಕೀಯ ಅರ್ಥಶಾಸ್ತ್ರದತ್ತ ಸೆಳೆಯಲ್ಪಟ್ಟರು.ಇದನ್ನು ಗಮನಿಸಿದ ಬೆಸಾಂಕನ್ ಅಕಾಡೆಮಿಯು ಅವರಿಗೆ ಕ್ರಮಬದ್ದ ಅಧ್ಯಯನಕ್ಕಾಗಿ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಿದರು.ಆತ ೧೮೫೬ರಲ್ಲಿ ತನ್ನ ೫೬ನೇ ವಯಸ್ಸಿನಲ್ಲಿ ಮ್ರತನಾದರು.
ಪರಿಚಯ
[ಬದಲಾಯಿಸಿ]ಪಿಯರೆ ಜೋಸಫ್ ಪ್ರೌಧಾನ್ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನ್ಯಾಯದ ಮಹಾನ್ ಪ್ರತಿಪಾದಕರು.ಫ್ರ್ಂಚ್ ಆರ್ಥಿಕ ಚಿಂತಕರ ಪೈಕಿ ಪ್ರೌಧಾನ್ರವರಿಗೆ ಪ್ರಮುಖ ಹೆಸರು.ಅರಾಜಕತ್ವದ ಬಲವಾದ ಪ್ರತಿಪಾದಕನಾಗಿದ್ದ ಈತ ಖಾಸಗಿ ಆಸ್ತಿಯ ಹಕ್ಕನ್ನು ತೀವ್ರವಾಗಿ ವಿರೋಧಿಸಿದರು.ಆಸ್ತಿಯ ಹಕ್ಕು ಇಲ್ಲದ ಸಮಾಜ,ಸರ್ಕಾರದ ಅಸ್ತಿತ್ವವೇ ಇಲ್ಲದ ಆರಾಜಕ ವ್ಯವಸ್ಥೆ ಮತ್ತು ಬಡ್ಡಿಯೇ ಇಲ್ಲದ ಬಂಡವಾಳಶಾಹಿ ವ್ಯವಸ್ಥೆಯ ಆರಾಧಕನಾಗಿದ್ದ ಪ್ರೌಧಾನ್ ಒಬ್ಬ ಆದರ್ಶವಾದಿಯೂ ಹೌದು.ಪ್ರೌಧಾನ್ ರವರ ಮೊದಲ ಕ್ರತಿ ೧೮೪೦ರಲ್ಲಿ ಪ್ರಕಟವಾಯಿತು.ನಂತರ ಅವರ ನಾಲ್ಕು ಸಂಪುಟಗಳ ಕ್ರತಿಯು ಆರ್ಥಿಕ,ಸಾಮಾಜಿಕ ಮತ್ತು ಸಾಮಾನ್ಯ ಮಾಹಿತಗಳ ಜ್ಞಾನಕೋಶವಾಗಿದೆ.ಇದಲ್ಲದೆ ಆತ ಅನೇಕ ಸಂಪುಟಗಳು ಮತ್ತು ಕಿರುಪುಸ್ತಕಗಳನ್ನು ರಚಿಸಿದರು.
ಸ್ವಾತಂತ್ರ್ಯ ಮತ್ತು ಸಮಾನತೆ
[ಬದಲಾಯಿಸಿ]ಪೂರ್ತಿ ಅನ್ಯಾಯದಿಂದ ಕೂಡಿದ್ದ ಸಾಮಾಜಿಕ ವ್ಯವಸ್ತೆಯಿಂದ ರೋಸಿ ಹೋಗಿದ್ದ ಪ್ರೌಧಾನ್ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಆದರ್ಶ ಸಮಾಜದ ಕನಸು ಕಂಡಿದ್ದರು.ಅವರ ಪ್ರಕಾರ ಆದರ್ಶ ಸಾಮಾಜಿಕ ವ್ಯವಸ್ತೆಯಲ್ಲಿ ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತ್ರತ್ವಗಳು ನೆಲೆಸಿರುತ್ತವೆ.ಇಂಥಹ ಸಮಾಜದಲ್ಲಿ ಸರ್ಕಾರದ ಮಧ್ಯಪ್ರವೇಶವಿಲ್ಲದೆ ಸಂಘಟಿತರಾಗುವ ಅವಕಾಶಗಳಿರುತ್ತವೆ.ಇಂಥಹ ಆದರ್ಶ ಸಮಾಜದ ನಿರ್ಮಾಣಕ್ಕೆ ಅಗತ್ಯವಿರುವ ಸನ್ನಿವೇಶವನ್ನು ನಿರ್ಮಾಣ ಮಾಡಿ ಅದರ ಉಗಮಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆತ ಹೇಳುತ್ತಾರೆ.ಆವರು ಸ್ವಾತಂತ್ರ್ಯಕ್ಕೆ ಎಲ್ಲಿಲ್ಲದ ಪ್ರಾಶಸ್ತ್ಯ ನೀಡಿ ಸ್ವಾತಂತ್ರ್ಯವೇ ಸರ್ವಸ್ವ ಎಂಬ ನಿಲುವು ತಾಳಿದರು.ಅವರು ನ್ಯಾಯ ಸಾಧನೆಗೋಸ್ಕರ ನಾಲ್ಕು ಕ್ರಮಗಳನ್ನು ಸೂಚಿಸಿದ್ದಾರೆ.ಅವುಗಳೆಂದರೆ:(೧)ಎಲ್ಲಾ ಆರ್ಥಿಕ ಅನಿಷ್ಟಗಳಿಗೆ ಕಾರಣವಾಗುವ ಬಡ್ಡಿಯನ್ನು ಶೂನ್ಯ ಮಟ್ಟಕ್ಕೆ ಇಳಿಸುವುದು,(೨)ರಾಷ್ಟ್ರೀಯ ವಿನಿಮಯ ಬ್ಯಾಂಕನ್ನು ಸ್ಥಾಪಿಸುವುದು,(೩)ಕಾನೂನು ವ್ಯವಸ್ಥೆಯ ಬದಲಿಗೆ ಒಪ್ಪಂದ ವ್ಯವಸ್ಥೆಯನ್ನು ಜಾರಿಗೊಳಿಸುವುದು ಮತ್ತು,(೪)ವಿಕೇಂದ್ರೀಕರಣ ಸಾಧಿಸುವುದು.
ಸಮತಾವಾದದ ಟೀಕೆ
[ಬದಲಾಯಿಸಿ]ಪ್ರೌಧಾನ್ ಸಮತಾವಾದವನ್ನು ಉಗ್ರವಾಗಿ ಖಂಡಿಸುತ್ತಾರೆ.ಅವರ ಪ್ರಕಾರ ಸಮತಾವಾದವು ಸಮಾನತೆ ಮತ್ತು ವಿವೇಚನಾಶಕ್ತಿಯ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತದೆ.ಅವರ ಪ್ರಕಾರ ಒಕ್ಕೂಟವಾದ ಮತ್ತು ಸಮತಾವಾದಗಳು ತಾನು ಪ್ರತಿಪಾದಿಸುತ್ತಿರುವ ಸಾಮಾಜಿಕ ವ್ಯವಸ್ಥೆಯ ಉದ್ದೇಶಗಳನ್ನು ಈಡೇರಿಸುವುದಿಲ್ಲ.ಅವರು ಒಂದು ಕಡೆ ಬರೆದಂತೆ ಆಸ್ತಿಯು ಬಲಿಷ್ಟರು ಬಲಹೀನರನ್ನು ಶೋಷಿಸುವಂತಾದರೆ ಸಮತಾವಾದದಲ್ಲಿ ಬಲಹೀನರೇ ಬಲಿಷ್ಟರನ್ನು ಶೋಷಿಸುತ್ತಾರೆ.ಪ್ರೌಧಾನ್ ತನ್ನ ಸಾಮಾಜಿಕ ವ್ಯವಸ್ಥೆಯಲ್ಲಿ ಅರಾಜಕತ್ವವನ್ನು ಬೆಂಬಲಿಸುತ್ತಾರೆ.ಸ್ವಾತಂತ್ರ್ಯ ಆತನ ವಿಚಾರಧಾರೆಯ ಕೇಂದ್ರ ಬಿಂದು.ಅದಕ್ಕಾಗಿ ಆತನು ಮನಸಾಕ್ಷಿಯ ಸ್ವಾತಂತ್ರ್ಯ,ಪತ್ರಿಕಾ ಸ್ವಾತಂತ್ರ್ಯ,ಶ್ರಮದ ಸ್ವಾತಂತ್ರ್ಯ,ವಾಣಿಜ್ಯ ಸ್ವಾತಂತ್ರ್ಯ,ಬೋಧನಾ ಸ್ವಾತಂತ್ರ್ಯ,ಶ್ರಮ ಮತ್ತು ಕೈಗಾರಿಕೆ ಉತ್ಪನ್ನಗಳ ಮುಕ್ತ ಮಾರಾಟ ಮುಂತಾದ ಸ್ವಾತಂತ್ರ್ಯಗಳ ಪ್ರಬಲ ಪ್ರತಿಪಾದಕನಾಗಿದ್ದರು.
ಸರ್ಕಾರದ ಟೀಕೆ
[ಬದಲಾಯಿಸಿ]ಅವರ ಪ್ರಕಾರ ಆರಂಭದಲ್ಲಿ ಸರ್ಕಾರ ಜನರ ಹಿತದ್ರಷ್ಟಿಯಿಂದ ಅಸ್ತಿತ್ವ ಕಂಡುಕೊಂಡಿತು.ಆದರೆ ಸರ್ಕಾರ ಎಲ್ಲಾ ಕಡೆ ಮತ್ತು ಎಲ್ಲಾ ವೇಳೆಯಲ್ಲಿ ಶ್ರೀಮಂತರ ಮತ್ತು ಸುಶಿಕ್ಷಿತರ ಪರವಿದ್ದುದನ್ನು ಅನುಭವವು ತೋರಿಸಿಕೂಡುತ್ತದೆ.ಅಂದರೆ ಅವರ ಪ್ರಕಾರ ಸರ್ಕಾರ ಬರಬರುತ್ತಾ ತುಂಬಾ ಸಂಕುಚಿತವಾಗಿ ಬಹುಜನರ ಮತ್ತು ಬಡವರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ.ಅದು ಎಲ್ಲರಿಗೂ ಸ್ವಾತಂತ್ರ್ಯ,ಸಮಾನತೆ ಮತ್ತು ನ್ಯಾಯ ಒದಗಿಸುವುದರ ಬದಲು ಕೇವಲ ಉಳ್ಳವರ ಪರವಹಿಸುತ್ತದೆ.ಅದು ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ದಮನ ಮಾಡುತ್ತದೆ.ಆದ್ದರಿಂದ ಅವರ ಪ್ರಕಾರ ಕ್ರಾಂತಿಯ ಸೂತ್ರವು ನೇರ ಶಾಸನವಲ್ಲ ಅಥವಾ ನೇರ ಸರ್ಕಾರವಲ್ಲ ಅಥವ ಸರಳ ಸರ್ಕಾರವಲ್ಲ.ಬದಲಿಗೆ ಅದು ಸರ್ಕಾರವಿಲ್ಲ ಎಂಬುದಾಗಿರುತ್ತದೆ.ಹೀಗೆ ಪ್ರೌಧಾನ್ ಅರಾಜಕತ್ವದ ಪರವಿರುವುದನ್ನು ಕಾಣಬಹುದು.
ಶ್ರಮ ಮೌಲ್ಯ ಸಿದ್ದಾಂತ
[ಬದಲಾಯಿಸಿ]ಪ್ರೌಧಾನ್ ಶ್ರಮ ಮೌಲ್ಯ ಸಿದ್ಧಾಂತವನ್ನು ಅಭಿವ್ರಿದ್ಧಿ ಪಡಿಸಿದರು.ಅವರ ಪ್ರಕಾರ,ವಸ್ತುವೂಂದರ ನಿರಪೇಕ್ಷ ಮೌಲ್ಯವು ಸಮಯ ಮತ್ತು ಖರ್ಚುಗಳನ್ನು ಒಳಗೊಂಡ ವೆಚ್ಚವಾಗಿರುತ್ತದೆ.ಅವರ ಅಭಿಪ್ರಾಯದಲ್ಲಿ ಆಸ್ತಿಯು ಶ್ರಮವನ್ನು ಶೋಷಿಸುತ್ತದೆ.ಆಸ್ತಿಯ ಮಾಲಿಕ ಕೆಲಸಗಾರರಿಗೆ ಕೂಲಿಯನ್ನು ನೀಡಿದ ಬಳಿಕ ಶೇಷವನ್ನು ತನ್ನ ಬಳಿ ಉಳಿಸಿಕೊಳ್ಳುತ್ತಾನೆ.ಈ ಶೇಷವು ಅತಿರಿಕ್ತ ಶ್ರಮವಾಗಿದ್ದು ಇದು ಗೇಣಿ,ಬಡ್ಡಿ ಮತ್ತು ಲಾಭದ ರೂಪದಲ್ಲಿರುತ್ತದೆ.ಅಂದರೆ ಇಲ್ಲಿ ಅತಿರಿಕ್ತ ಶ್ರಮದಿಂದ ಅತಿರಿಕ್ತ ಮೌಲ್ಯ ಸ್ರಷ್ಟಿಯಾಗುತ್ತದೆ.ಇದೇ ಶೋಷಣೆ.ಅಂದರೆ ಇಲ್ಲಿ ಶ್ರಮವು ಮೌಲ್ಯವನ್ನು ಸ್ರಷ್ಟಿಸಿದ್ದರೂ ಸಹ ಅದು ಈ ಸ್ರಷ್ಟಿಯಾದ ಪೂರ್ಣ ಮೌಲ್ಯದ ಯಜಮಾನನಾಗುವುದು ಸಾಧ್ಯವಾಗುವುದಿಲ್ಲ.ಇದೇ ಶೋಷಣೆಯಾಗುತ್ತದೆ.ಪ್ರೌಧಾನ್ನ ಈ ಅತಿರಿಕ್ತ ಶ್ರಮ ಮತ್ತು ಅದರಿಂದ ಸ್ರಷ್ಟಿಯಾಗುವ ಅತಿರಿಕ್ತ ಮೌಲ್ಯ ಪರಿಕಲ್ಪನಯು ಮುಂದೆ ಕಾರ್ಲ್ ಮಾರ್ಕ್ಸ್ನ್ ಅತಿರಿಕ್ತ ಮೌಲ್ಯ ಸಿದ್ಧಾಂತಕ್ಕೆ ತಳಹದಿಯಾಯಿತು.
ವಿನಿಮಯ ಬ್ಯಾಂಕು
[ಬದಲಾಯಿಸಿ]ಪ್ರೌಧಾನ್ ಪ್ರಕಾರ ವಿನಿಮಯವು ಎಲ್ಲಾ ಶೋಷಣೆಗಳ ಮೂಲವಾಗಿದೆ.ಆದ್ದರಿಂದ ಈ ವಿನಿಮಯದ ಪ್ರಾಬಲ್ಯವನ್ನು ತಡೆಗಟ್ಟಲು ಪ್ರೌಧಾನ್ ತನ್ನದೇ ಆದ ಯೋಜನೆಗಳನ್ನು ಮುಂದಿರಿಸಿದರು.ವಿನಿಮಯದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಸಾಧಿಸುವ ಸಲುವಾಗಿ ಅವರು ಸುವರ್ಣ ಪ್ರಮಿತಿಯ ರದ್ಧತಿಗೆ ಕರೆಕೊಟ್ಟರು.ಅವರು ಸಾಲವು ವಹಿಸುವ ಪಾತ್ರವನ್ನು ಮನಗಂಡಿದ್ದರು.ಆದರೆ ಆ ಸಾಲದ ವ್ಯವಸ್ಥೆಯ ಆಗಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಏಕಸ್ವಾಮ್ಯಕ್ಕೆ ಒಳಪಟ್ಟಿತ್ತು.ಈ ಕಾರಣದಿಂದಾಗಿ ಎಲ್ಲಾ ಕಾರ್ಮಿಕರಿಗೆ ಬಡ್ಡಿರಹಿತ ಸಾಲ ನೀಡುವ ಸಲುವಾಗಿ ಪ್ರೌಧಾನ್ ವಿನಿಮಯ ಬ್ಯಾಂಕನ್ನು ಸ್ಥಾಪಿಸುವಂತೆ ಕರೆಕೊಟ್ಟರು.ಈ ಬ್ಯಾಂಕು ನೋಟುಗಳನ್ನು ಚಲಾವಣೆಗೆ ತರುವ ಏಕಸ್ವಾಮ್ಯಾಧಿಕಾರ ಹೊಂದಿರುತ್ತದೆ.ಈ ನೋಟುಗಳನ್ನು ಸಾಲ ಪಡೆಯುವವರಿಗೆ ಅವರ ಸರಕುಗಳ ವಣಿ ಅಥವಾ ಪ್ರಾಮಿಸರಿ ನೋಟಿನ ಆಧಾರದಲ್ಲಿ ನೀಡಲಾಗುತ್ತದೆ.ಬ್ಯಾಂಕು ನೀಡುವ ಈ ಎಲ್ಲಾ ನೀಟುಗಳು ರಾಷ್ಟ್ರಾದ್ಯಂತ ವಿನಿಮಯಗೊಳ್ಳುವಂತಿರುತ್ತದೆ.ಈ ವ್ಯವಸ್ಥೆಯಲ್ಲಿ ಸರಕುಗಳ ಮೌಲ್ಯದಷ್ಟೇ ಪ್ರಮಾಣದಲ್ಲಿ ನೋಟುಗಳನ್ನು ವಿತರಿಸಲಾಗುವುದರಿಂದ ಹಣದುಬ್ಬರದ ಸನ್ನಿವೇಶಕ್ಕೆ ಅವಕಾಶವಿರುವುದಿಲ್ಲ.ಇಂತಹ ಒಂದು ವ್ಯವಸ್ಥೆ ಜಗತ್ತಿನ ಎಲ್ಲೆಡೆ ಜಾರಿಗೆ ಬರಬೇಕು.ಆಗ ಕಾರ್ಮಿಕರ ಶೋಷಣೆ ತಪ್ಪುತ್ತದೆ ಎಂಬುದು ಪ್ರೌಧಾನ್ ಆಶಯವಾಗಿದ್ದಿತು.ಹೀಗೆ ಪ್ರೌಧಾನ್ ಒಬ್ಬ ಪ್ರಾಯೋಗಿಕ ಸುಧಾರಕನಾಗಿದ್ದರು.ಬ್ರಿಟೀಷ್ ಸಮಾಜವಾದದ ಪಿತಾಮಹ ಎಂದು ಆತನನ್ನು ಕರೆಯಲಾಗುವುದು.ಅವರ ವಿಚಾರಧಾರೆಗಳು ವಿಲಕ್ಷಣ ಸ್ವರೂಪದವು.ಅರಾಜಕತ್ವದ ಪರವಗಿ ವಾದಿಸಿದ ಆತ ಬಂಡವಾಳಶಾಹಿ ಮತ್ತು ಸಮಾತಾವಾದಗಳೆರಡನ್ನೂ ಟೀಕಿಸಿದರು.ಒಕ್ಕೂಟವಾದ ಮತ್ತು ಸರ್ಕಾರಗಳ ಮೇಲೆ ಉಗ್ರ ದಾಳಿ ನಡೆಸಿದ ಆತ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಪರವಿದ್ದರು.ಒಬ್ಬ ಆದರ್ಶವಾದಿಯಾಗಿದ್ದ ಪ್ರೌಧಾನ್ ಸಮಾಜದ ಸುಧಾರಣೆಗೆ ಹಲವಾರು ಮಾರ್ಗಗಳನ್ನು ಸೂಚಿಸಿದರು.
ಉಲೇಖಗಳು
[ಬದಲಾಯಿಸಿ]- ↑ https://www.britannica.com/biography/Pierre-Joseph-Proudhon. Retrieved 4 ಸೆಪ್ಟೆಂಬರ್ 2016.
{{cite web}}
: Missing or empty|title=
(help) - ↑ http://www.newworldencyclopedia.org/entry/Pierre-Joseph_Proudhon. Retrieved 4 ಸೆಪ್ಟೆಂಬರ್ 2016.
{{cite web}}
: Missing or empty|title=
(help)