ವಿಷಯಕ್ಕೆ ಹೋಗು

ಸದಸ್ಯ:Chethan.a/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರಕು ವಿಕ್ರಯ ಶಾಸನ

ಸರಕು ವಿಕ್ರಯ ಶಾಸನ

[ಬದಲಾಯಿಸಿ]

ಸರಕು ವಿಕ್ರಯಕ್ಕೆ ಸಂಬಂದಿಸಿದ ನ್ಯಾಯವನ್ನು ೧೯೩೦ನೇ ಭಾರತೀಯ ಸರಕು ವಿಕ್ರಯ ಶಾಸನವು ಒಳಗೊಂಡಿದೆ. ನಮ್ಮ ಶಾಸನವು ಇಂಗ್ಲೆಂಡಿನ ಸರಕು ವಿಕ್ರಯ ಶಾಸನವನ್ನೇ ಬಹುಪಾಲು ಅನುಸರಿಸುತ್ತದೆ. ಸರಕು ಶಬ್ಧದ ಅರ್ಥದ ವಿವರಣೆ:ಸರಕು ಎನ್ನುವ ಶಬ್ಧ ವ್ಯವಹಾರ ಯೋಗ್ಯವಾದ ಅಥವಾ ವ್ಯಾಜ್ಯಯೋಗ್ಯವಾದ ಹಕ್ಕುಗಳು ಮತ್ತು ಹಣಗಳನ್ನು ಬಿಟ್ಟು ಉಳಿದ ಎಲ್ಲಾ ಬಗೆಯ ಚರಸ್ವತ್ತುಗಳು ಮತ್ತು ಸ್ಟಾಕ್ಸ್ ಮತ್ತು ಷೇರುಗಳನ್ನು ಒಳಗೊಂಡಿದೆ. ವ್ಯವಹಾರ ಅಥವಾ ವ್ಯಾಜ್ಯಯೋಗ್ಯ ಹಕ್ಕುಗಳು ಎಂದರೆ ಒಬ್ಬ ಮನುಷ್ಯನು ಇನ್ನೊಬ್ಬನ ವಿರುದ್ದ ಹೊಂದಿರುವ ಮತ್ತು ದಾವ ಮೂಲಕವೇ ಅದನ್ನು ಪಡೆವ ಹಕ್ಕು. ಅಂದರೆ ಯಾವ ಚರ ಅಥವಾ ಸ್ಥಿರ ಆಸ್ತಿಯ ಆದಾರ ಸಹಿತವಲ್ಲದೇ, ಎಂದು ಸಾಲ ಅಥವಾ ಹಣ ಪಡೆಯುವ ಹಕ್ಕು, ಹಣ ಎಂದರೆ ಶಾಸನ ಬದ್ದವಾಗಿ ಸಲ್ಲಿಸಲರ್ಹವಾದ ಹಣ. ಈ ಎರಡು ಬಗೆಯ ಚರ ಸ್ವತ್ತುಗಳು ವಿನಹ, ಸರಕು ಎನ್ನುವ ಶಬ್ಧ ವ್ಯಾಪ್ತಿಯೊಳಗೆ ಉಳಿದೆಲ್ಲಾ ಚರ ಸ್ವತ್ತುಗಳು ಬರುತ್ತವೆ. ತೊಡುವ ಬಟ್ಟೆ, ಮನೆಯಲ್ಲಿರುವ ಮೇಜು, ಕುರ್ಚಿ ಇತ್ಯಾದಿ ಮತ್ತು ಬಂಡವಾಳ ಸಂಸ್ಥೆಯ ಷೇರು, ಸ್ಟಾಕ್ ಮತ್ತು ಡಿಬೆಂಚರ್ ಗಳು ಸಹ ಸರಕುಗಳೇ. ಆದರೆ ನೆಲದಲ್ಲಿ ಶಾಶ್ವತವಾಗಿ ನೆಟ್ಟಿರುವ ವಸ್ತುಗಳು ಸರಕುಗಳಲ್ಲ. ವಿಕ್ರಯ ಒಪ್ಪಂದಕ್ಕೆ ಮುಂಚೆ ಅಥವಾ ಅದರ ಅಧೀನ ಭೂಮಿಯಿಂದ ಬೇರ್ಪಡಿಸಬೇಕೆಂದು ಒಪ್ಪಿರುವ ಪೈರು, ಹುಲ್ಲು ಮತ್ತು ಮರದಿಂದ ಬಿಡಿಸಬೇಕೆಂದಿರುವ ಹಣ್ಣು, ವಗೈರೆ ವಸ್ತುಗಳೆಲ್ಲಾ ಸರಕಗಳೇ. ಸರಕುಗಲನ್ನು ಅಸ್ತಿತ್ವದಲ್ಲಿರುವ ಸರಕುಗಳು, ಭಾವೀ ಸರಕುಗಳು ಮತ್ತು ಸಂಭವನೀಯ ಸರಕುಗಳು ಎಂದು ಮೂರು ಬಗೆಯಾಗಿ ವಿಂಗಡಿಸಬಹುದು.

ಅಸ್ತಿತ್ವದಲಿರುವ ಸರಕುಗಳು

[ಬದಲಾಯಿಸಿ]

ಒಪ್ಪಂದ ಬೇರ್ಪಡುವ ವೇಳೆಗೆ ಮಾರುವವನ ಮಾಲೀಕತ್ವದಲ್ಲಿರುವ ಅಥವಾ ಅವನ ಸ್ವಾಧೀನದಲ್ಲಿರುವ ಸರಕುಗಳೇ ಅಸ್ತಿತ್ವದಲ್ಲಿರುವ ಸರಕುಗಳು. ಅಸ್ತಿತ್ವದಲ್ಲಿರುವ ಸರಕುಗಳು ಸಹ ಮೂರು ಬಗೆಗಳಾಗಿರಬಹುದು. ೧:ನಿರ್ದಿಷ್ಟ ಸರಕುಗಳು ೨:ನಿಶ್ಚಹಿಸಿದ ಸರಕುಗಳು ಮತ್ತು ೩:ಅನಿರ್ದಿಷ್ಟ ಸರಕುಗಳು

ಭಾವೀ ಸರಕುಗಳು

[ಬದಲಾಯಿಸಿ]

ವಿಕ್ರಯ ಒಪ್ಪಂದದ ಕಾಲಕ್ಕೆ, ಮಾರುವವನ ಮಾಲೀಕತ್ವ ಅಥವಾ ಸ್ವಾಧೀನದಲ್ಲಿರದ ಆದರೆ ಒಪ್ಪಂದ ಏರ್ಪಟ್ಟ ನಂತರ ಅವನಿಂದ ನಿರ್ಮಿಸಲಾದ ಅಥವಾ ಉತ್ಪತ್ತಿಯಾದ ಅಥವಾ ಗಳಿಸಲಾದ ಸರಕುಗಳೇ ಭಾವೀ ಸರಕುಗಳು. ಸಂಭವನೀಯ ಸರಕುಗಳು ಮಾರುವವನ ಸರಕು ಸಂಪಾದನೆಯು ಸಂಭವಿಸುವ ಅಥವಾ ಸಂಭವಸಿದ ಒಂದು ಘಟನೆಯನ್ನವಲಂಬಿಸಿರುವಂತೆ, ಸರಕು ವಿಕ್ರಯದ ಒಂದು ಒಪ್ಪಂದವಾಗಬಹುದು. ಇಂಥ ವ್ಯವಹಾರದ ಸರಕುಗಳನ್ನು ಸಂಭವನೀಯ ಸರಕುಗಳೆಂದು ಕರೆಯಲಾಗುತ್ತದೆ. ಸರಕು ವಿಕ್ರಯ ಒಪ್ಪಂದ ಮತ್ತು ಕ್ರಯ ಮತ್ತು ಕ್ರಯಕಾರರು: ಮಾರುವವನ ಸರಕುಗಳಲ್ಲಿರುವ ಸ್ವಾಮಿತ್ವ ಅಥವಾ ಮಾಲೀಕತ್ವವನ್ನು ಬೆಲೆಗೆ ಪ್ರತಿಯಾಗಿ ಕೊಳ್ಳುವವನಿಗೆ ಒಂದು ಒಪ್ಪಂದದ ಮೂಲಕ ವರ್ಗಾಹಿಸುವುದೇ ಅಥವಾ ವರ್ಗಾಯಿಸಲು ಕರಾರು ಮಾಡಿಕೊಳ್ಳುವುದೇ ಸರಕು ವಿಕ್ರಯ ಒಪ್ಪಂದ.

ಸರಕು ವಿಕ್ರಯದಲ್ಲಿರುವ ಮುಖ್ಯ ಅಂಶಗಳು

[ಬದಲಾಯಿಸಿ]

ಸರಕು ವಿಕ್ರಯದಲ್ಲಿರುವ ಮುಖ್ಯ ಅಂಶಗಳೆಂದರೆ೧:ಒಂದು ಒಪ್ಪಂದ, ೨;ಇಬ್ಬರು ಕಕ್ಷಿಗಳು ಮಾರುವವನು ಮತ್ತು ಕೊಳ್ಳುವವನು, ೩:ಮಾರುವವನಿಂದ ಕೊಳ್ಳುವವನಿಗೆ ಸ್ವಾಮಿತ್ವ ಅಥವಾ ಮಾಲೀಕತ್ವ ವರ್ಗಾಯಿಸುವ ಕರಾರು, ೪:ಸರಕುಗಳು, ೫:ಬೆಲೆ. ವಿಕ್ರಯ ಒಪ್ಪಂದಯೆಂಬ ಪದವು ಒಂದು ಸಮಗ್ರ ಶಬ್ದ. ಅದು ಒಂದು ವಾಸ್ತವಿಕ ಕ್ರಯ. ಮತ್ತು ಒಂದು ಕ್ರಯ ಕರಾರು ಎರಡನ್ನು ಒಳಗೊಂಡಿದೆ. ಒಂದು ಸರಕು ವಿಕ್ರಯ ಒಪ್ಪಂದದ ಅಧೀನವಾಗಿ, ಸರಕುಗಳಲ್ಲಿನ ಸ್ವಮಿತ್ವ ಅಥವಾ ಮಾಲೀಕತ್ವವು ಮಾರುವವನಿಂದ ಕೊಳ್ಳುವವನಿಗೆ ವರ್ಗವಾಗಿದ್ದರೇ ಆ ಒಪ್ಪಂದವನ್ನು "ಕ್ರಯ" ಎಂದು ಕರೆಯುವರು. ಆದರೆ, ಸರಕುಗಳಲ್ಲಿನ ಸ್ವಾಮಿತ್ವ ಅಥವಾ ಮಾಲೀಕತ್ವವು ವರ್ಗಾವಣೆಯು, ಮುಂದೊಂದು ದಿನ ಅಥವಾ ಅನಂತರ ಪೂರೈಸಬೇಕಾದ ಒಂದು ಷರತ್ತಿಗೆ ಒಳಪಟ್ಟು ಸಂಭವಸಬೇಕಾಗಿದ್ದರೆ ಆ ಒಪ್ಪಂದವನ್ನು ಕ್ರಯ ಕರಾರು ಎಂದು ಕರೆಯುತ್ತಾರೆ. ಷರತ್ತುಗಳು ಮತ್ತು ಭರವಸೆಗಳು: ಸಾಮಾನ್ಯವಾಗಿ ಒಂದು ವಿಕ್ರಯ್ ಒಪ್ಪಂದ ಮಾಡಿ ಕೊಳ್ಳುವ್ ಮುಂಚೆ ಕಕ್ಷಿಗಳು ಕೆಲವು ನಿರ್ದಿಷ್ಟ ಹೇಳಿಕೆಗಳನ್ನು ಒಬ್ಬರಿಗೊಬ್ಬರು ಮಾಡುತ್ತಾರೆ. ಸರಕುಗಳ ಸಂಬಂಧವಾಗಿ ಮಾಪಿಸಿದೆಡುವ ಯಾವೊಂದು ಹೇಳಿಕೆಯು, ಒಪ್ಪಂದದ ಭಾಗವಾಗಿರುವ ವಚನವಾಗಿದೆಯೋ ಆಥವಾ ಒಪ್ಪಂದದ ಭಾಗವಾಗಿರದ ಕೇವಲ ಅಭಿಪ್ರಾಯದ ಮಾತೋ ಎನ್ನುವುದು ಒಪ್ಪಂದದ ಅರ್ಥ ಕಲ್ಲನೆಯನ್ನು ಅವಲಂಬಿಸಿರುತ್ತದೆ. ಮಾರುವವನು, ಕೊಳ್ಳುವವನಿಗೆ ಗೊತ್ತಿರದ ಒಂದು ಆಂಶವನನು ಒತ್ತಿ ಹೇಳಿರುವಂತೆ ಭಾವಿಸಿದರೆ, ಒಂದು ಹೇಳಿಕೆಯು ಒಂದು ವಚನವಾಗುವುದು. ತನಗೆ ವಿಶೇಷ ತಿಳಿವಳಿಕೆ ಇರದ ಮತ್ತು ಕೊಳ್ಳುವವನೂ ಸಹ ಒಂದು ಅಭಿಪ್ರಾಯ ಹೊಂದಿರುವ ನಿರೀಕ್ಷೆತಯಿರುವ ಒಂದು ವಿಷಯವಅಗಿ, ಮಾರುವವನು ಕೇವಲ ಒಂದು ಅಭಿಪ್ರಾಯ ಮಾತ್ರ ಆಗುತ್ತದೆ, ಮಾರುವವನು ಮಾಡುವ, ಸರಕುಗಳ ಕೇವಲ ಶಿಫಾರಸು, ವಚನವಾಗುವುದಿಲ್ಲ ಮಅತ್ತು ಯಾವ ವ್ಯಾಜ್ಯ ಹಕ್ಕನ್ನೂ ಕೊಡುವುದಿಲ್ಲ. ಸರಕು ವಿಕ್ರಯ ಶಾಸನದ ೧೨ನೇ ಪ್ರಕರಣವು ಈ ಕೆಳೆಗೆ ಕಂಡಂತೆ, ಷರತ್ತು ಮತ್ತು ಭರವಸೆಗಳನ್ನು ನಿರೂಪಿಸಿದೆ. ೧: ಒಂದು ಸರಕು ವಿಕ್ರಯ ಒಪ್ಪಂದದಲ್ಲಿ, ಸರಕುಗಳ ಸಂಸಂಧವಾಗಿ ಮಾಡುವ ವಚನವು ಒಂದು ಷರತ್ತು ಅಥವಾ ಒಂದು ಭರವಸೆ ಯಾಗಿರಬಹಹುದು. ೨:ಷರತ್ತು: ಒಪ್ಪಂದದ ಮುಖ್ಯ ಉದ್ದೇಶಕ್ಕೆ ಅಗತ್ಯವಾಗಿರುವ ಮತ್ತು ಅದರ ಉಲ್ಲಂಘನೆಯು, ಒಪ್ಪಂದವನ್ನು ನಿರಾಕರಿಸುವ ಹಾಗೆ ವರ್ತಿಸಲು ಒಂದು ಹಕ್ಕು ಸೃಜಿಸುವಂಥ, ಒಂದು ವಚನವೇ ಒಂದು ಷರತ್ತು ಆಗಿದೆ. ೩: ಭರವಸೆ: ಒಪ್ಪಂದದ ಮುಖ್ಯ ಉದ್ದೇಶಕ್ಕೆ ಸಹಾಯಕ ಅಥವಾ ಅನುಷಂಗಿಕವಾಗಿರುವ ಮತ್ತು ಅದರ ಉಲ್ಲಂಘನೆಯು, ಒಪ್ಪಂದವನ್ನು ನಿರಾಕರಿಸುವ ಹಾಗೆ ವರ್ತಿಸಲು ಒಂದು ಹಕ್ಕು ಸೃಜಿಸದೆ, ಕೇವಲ ದ್ರವ್ಯ ಪರಿಹಾರ ಪೆಡೆಯುವ ಹಕ್ಕನ್ನು ಸೃಜಿಸುವಂಥ, ಒಂದು ವಚನವೇ ಒಂದು ಭರವಸೆ ಆಗಿದೆ. ೪: ಸರಕುವಿಕ್ರಯದಲ್ಲಿನ ವಚನವು ಒಂದು ಷರತ್ತೋ ಅಥವಾ ಒಂದು ಭರವಸೆಯೋ ಎನ್ನುವುದು, ಒಪ್ಪಂದದ ಅರ್ಧಕಲ್ಲನೆಯನ್ನು ಅವಲಂಬಿಸಿರುತ್ತದೆ.[],[],

ಉಲ್ಲೇಖನಗಳು

[ಬದಲಾಯಿಸಿ]