ವಿಷಯಕ್ಕೆ ಹೋಗು

ಸದಸ್ಯ:Chandana N Raju/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲಿಬಾಬಾ ಗ್ರೂಪ್
ಸಂಸ್ಥೆಯ ಪ್ರಕಾರಖಾಸಗಿ ಕಂಪೆನಿ
ಸಂಸ್ಥಾಪಕ(ರು)ಜಾಕ್ ಮ ೧೯೯೯ರಲ್ಲಿ
ಮುಖ್ಯ ಕಾರ್ಯಾಲಯಚೀನಾ
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಡೇನಿಯಲ್ ಜಹಂಗ್,ಜೊನಾಥನ್ ಲು
ಉದ್ಯಮಇ-ವಾಣಿಜ್ಯ
ಉತ್ಪನ್ನಇಲೆಕ್ರ್ಟಾನಿಕ್ ಪಾವತಿ ಮಾಡುವ ಸೇವೆ, ಶಾಪಿಂಗ್ ಸರ್ಚ್ ಎಂಜಿನ್ ಮತ್ತು ಡೇಟಾ ಸೆಂಟ್ರಿಕ್ ಕ್ಲೌಡ್ ಕಂಪ್ಯೂಟಿಂಗ್ ಸೇವೆ

ಅಲಿಬಾಬಾ ಗ್ರೂಪ್

ಪರಿಚಯ

[ಬದಲಾಯಿಸಿ]

ಅಲಿಬಾಬಾ ಗ್ರೂಪ್ ಹೋಲ್ಡಿಂಗ್ಲಿ ಮಿಟೆಡ್ ಒಂದು ಚೈನೀಸ್ ಇ-ವಾಣಿಜ್ಯ ಕಂಪನಿ.ಈ ಕಂಪನಿಯು ಗ್ರಾಹಕರಿಂದ ಗ್ರಾಹಕರಿಗೆ,ಉದ್ಯಮದಿಂದ ಗ್ರಾಹಕರಿಗೆ ಹಾಗು ಉದ್ಯಮದಿಂದ ಉದ್ಯಮಕ್ಕೆ ವೆಬ್ ಪೋರ್ಟಲಿನ ಮೂಲಕ ಮಾರಾಟ ಸೇವೆಯನ್ನು ನೀಡುತ್ತದೆ. ಇದು ಇಲೆಕ್ರ್ಟಾನಿಕ್ ಪಾವತಿ ಮಾಡುವ ಸೇವೆ, ಶಾಪಿಂಗ್ ಸರ್ಚ್ ಎಂಜಿನ್ ಮತ್ತು ಡೇಟಾ ಸೆಂಟ್ರಿಕ್ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುತ್ತದೆ. ಅಲಿಬಾಬಾ ಗ್ರೂಪನ್ನು ಜಾಕ್ ಮ ೧೯೯೯ರಲ್ಲಿ ಆರಂಭಿಸಿದರು. ಅವರು ಅಲಿಬಾಬಾ.ಕಾಮ್ ಎಂಬ ವೆಬ್ಸೈಟನ್ನು ಚೈನೀಸ್ ಕಾರ್ಖಾನೆಯ ಮಾಲಿಕರ ಸಾಗರೋತ್ತರ ಖರೀದಿದಾರರೊಡನೆ ಸಂಪರ್ಕಿಸಲು ಆರಂಭಿಸಿದರು.

ಇತಿಹಾಸ

[ಬದಲಾಯಿಸಿ]

ಮೊದಲು ಅಲಿಬಾಬಾ ಕಂಪನಿಯನ್ನು ಮಲೇಷ್ಯಾದಲ್ಲಿ ಸ್ಥಾಪಿಸಲಾಯಿತು. ಅಲಿಬಾಬಾ ಎಂಬ ಹೆಸರು 'ಒನ್ ಥೌಸಂಡ್ ಅಂಡ್ ಒನ್ ನೈಟ್ಸ್',ಒಂದು ಅರೇಬಿಯನ್ ಸಾಹಿತ್ಯದಲ್ಲಿದ ಅಲಿಬಾಬಾ ಎಂಬ ಪಾತ್ರದಿಂದ ಆರಿಸಿಕೊಳ್ಳಲಾಗಿದೆ. ೨೦೧೨ರಲ್ಲಿ ಅಲಿಬಾಬಾದ ಎರಡು ಪೋರ್ಟಲ್ಸ್ ಮಾರಾಟದಲ್ಲಿ ೧೭೦ ಬಿಲಿಯನ್ ಡಾಲರ್ ನಿರ್ವಹಿಸಿದೆ. ಅಲಿಬಾಬಾ ಇತರ ದೇಶಗಳ ಪೂರೈಕೆದಾರರಿಗೂ ಬೆಂಬಲಿತವಾಗಿದೆ ಆದರೆ ಈ ಕಂಪನಿಯೂ ಪ್ರಾಥಮಿಕವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ(ಪಿ.ಆರ್.ಸಿ) ಕಾರ್ಯನಿರ್ವಹಿಸುತ್ತದೆ.

ಈ ಗ್ರೂಪಿನ ವೆಬ್ಸೈಟಿನ ಮೂಲಕ ಕಂಪನಿಯು ಶೇಖಡ ಅರವತ್ತರಷ್ಟು ಕಟ್ಟುಗಳನ್ನು ೨೦೧೩ರಲ್ಲಿ ಚೀನಾದಲ್ಲಿ ವಿತರಣೆ ಮಾಡಿ ನಂತರ ಸೆಪ್ಟೆಂಬರ್ ೨೦೧೪ರಲ್ಲಿ ಶೇಖಡ ಎಂಬತ್ತರಷ್ಟು ದೇಶದ ಆನ್ಲೈನ್ ಮಾರಾಟವನ್ನು ಪಡೆದಿದೆ. ಅಲಿಪೆ, ಆನ್ಲೈನ್ ಪಾವತಿ ಎಸ್ಕರೌ ಸೇವೆಯು,ಚೀನಾದಲ್ಲಿ ಅರ್ಧದಷ್ಟು ಎಲ್ಲಾ ಆನ್ಲೈನ್ ಪಾವತಿ ವ್ಯವಹಾರ ಮಾಡಲು ಸಹಾಯ ಮಾಡುತ್ತದೆ. ಅಲಿಬಾಬಾ ಭಾರತಕ್ಕೆ ಪ್ರವೇಶಿಸಲು ಯೋಜನೆ ಮಾಡುತ್ತಾ ಸೆಪ್ಟೆಂಬರ್ ೨೦೧೪ರಲ್ಲಿ ಸ್ನಾಪ್ ಡೀಲಿನ ಜೊತೆ ಮಾತುಕತೆ ನಡೆಸಿದರು.ಅನಂತರ ಅಲಿಬಾಬಾ ಪೆಟಿಎಂ ಕಂಪನಿಯಲ್ಲಿ ೨೫% ಪಾಲನ್ನು ಪಡೆದು ಇ-ವಾಣಿಜ್ಯ ವೇದಿಕೆಯನ್ನು ಪ್ರವೇಶಿಸಿತು. ಅಲಿಬಾಬಾ ಕಂಪನಿಯನ್ನು ಜ್ಯಾಕ್ ಮ ಎಂಬ ಚೀನೀ ಉದ್ಯಮ ದಿಗ್ಗಜ ಆರಂಭಿಸಿದರು.ಇವರು ಪ್ರಸ್ತುತ ಈ ಕಂಪನಿಯ ಆಧ್ಯಕ್ಷರಾಗಿದ್ದಾರೆ. ನಂತರ ಅವರು ಫೋರ್ಬ್ಸ್ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಚೀನೀ ಉಧ್ಯಮಿ ಆಗಿದ್ದಾರೆ. ೨೦೧೩ರಲ್ಲಿ ಕಂಪನಿಯು ಚೈನೀಸ್ ರಿಯಲ್ ಎಸ್ಟೇಟ್ ಕಂಪನಿ,ದಲಿಯಾನ್ ವಾಂಡ ಗ್ರೂಪಿನ ಸಹಭಾಗಿತ್ವದಲ್ಲಿ ಸಾಂಪ್ರದಾಯಿಕ ಬ್ರಿಕ್ ಅಂಡ್ ಮೋರ್ಟರ್ ಚಿಲ್ಲರೆ ಮಳಿಗೆಗಳನ್ನು ತೆರೆಯಲು ಯೋಜನೆ ಮಾಡುತ್ತಿದ್ದರು ಎಂದು ಅಲಿಬಾಬಾ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ,ಲಿ ಚೌನ್ ಹೇಳಿದರು. ನಂತರ ಅಲಿಬಾಬಾ ಗ್ರೂಪ್ ೨೦೧೪ರಲ್ಲಿ ಹಾಂಗ್ ಕಾಂಗ್ ಮೂಲದ ಇನ್-ಟೈಮ್ ರಿಟೇಲಿನ ೨೫% ಪಾಲನ್ನು ಖರೀದಿಸಿದರು.

ಕಂಪನಿಯ ಗುರಿ

[ಬದಲಾಯಿಸಿ]

ವಾಣಿಜ್ಯ ಭವಿಷ್ಯದ ಮೂಲಭೂತ ನಿರ್ಮಿಸಲು ಹಾಗು ಅಲಿಬಾಬಾ ಗ್ರೂಪ್ ೧೦೨ ವರ್ಷಗಳಷ್ಟು ಕಾಲ ಜೀವಿಸಬೇಕೆಂದು ಕಂಪನಿಯ ಗುರಿಯಾಗಿದೆ.

ಐ.ಪಿ.ಓ

[ಬದಲಾಯಿಸಿ]

ಸೆಪ್ಟೆಂಬರ್ ೨೦೧೩ರಲ್ಲಿ, ಅಲಿಬಾಬಾ ಕಂಪನಿ ಯುನೈಟೆಡ್ ಸ್ಟೆಟ್ಸ್ ದಿಂದ ಐಪಿಒ ಪಡೆದರು. ಐಪಿಒ ಬೆಲೆ ಆರಂಭರಲ್ಲಿ ೨೧.೮ ಯು.ಎಸ್ ಬಿಲಿಯನ್ ಡಾಲರ್ ಆಗಿತ್ತು. ನಂತರ ೨೮ ಯು.ಎಸ್ ಬಿಲಿಯನ್ ಡಾಲರಿಗೆ ಏರಿತು.ಇದು ಇತಿಹಾಸದಲ್ಲೇ ದೊಡ್ದ ಯು.ಎಸ್ ಐಪಿಒ ಆಯಿತು.[]

ಸಂಯೋಜಿತ ಘಟಕಗಳು

[ಬದಲಾಯಿಸಿ]

ಅಲಿಬಾಬಾದ ಅನೇಕ ಸಂಯೋಜಿತ ಘಟಕಗಳಿವೆ-ಅವು ಅಲಿಬಾಬಾ.ಕಾಮ್,ಆಟೋನವಿ,ತಯೋಬಾವ್,ತಿಮಾಲ್.ಕಾಮ್, ಜುಹೂಅಸೂಯೆನ್,ಇತಯೋ,ಅಲಿಪೆ,ಅಲಿಬಾಬಾ ಕ್ಲೌಡ್(ಅಳಿಯುನ್),ಅಲಿಎಸ್ರ್ಪೆಸ್ಸ್, ಚೀನಾ ಯಾಹೂ!, ಅಲಿವಾಂಗ್ವಾಂಗ್,ಲೈವಾಂಗ್,ಅಲಿಬಾಬಾ ಪಿಚರ್ಸ್,ಯೌಕು ಟುಡಾಉ,೧೧ ಮೇನ್,ಅಲಿಬಾಬಾ ಗ್ರೂಪ್ ಆರ್&ಡಿ ಇನ್ಸ್ಟಿಟ್ಯೂಟ್, ೩೬೫ ಫ್ಯಾನಿ.ಕಾಮ್,ಸೌತ್ ಚೀನಾ ಮಾರ್ನಿಂಗ್ ಪೋಸ್ಟ್,ಅಲಿಹೆಲ್ತ್, ಯುಸಿವೆಬ್,ಲಜದ. ಅಲಿಬಾಬಾ.ಕಮ್ ಅಲಿಬಾಬಾ ಗ್ರೂಪಿನ ಪ್ರಾಥಮಿಕ ಕಂಪನಿ ಹಾಗು ಇದು ಸಣ್ಣ ವ್ಯವಹಾರಗಳಿಗೆ ವಿಶ್ವದ ಅತಿದೊಡ್ಡ ಆನ್ಲೈನ್ ವಾಪಾರ ವ್ಯವಹ್ಹಾರದ ವೇದಿಕೆಯಾಗಿದೆ. ನಂತರ ೨೦೦೭ರಲ್ಲಿ ಅಲಿಬಾಬಾ.ಕಾಮ್ ಹಾಂಗ್-ಕಾಂಗ್ ಷೇರುಪೇಟೆಯಲ್ಲಿ ಸಾರ್ವಜನಿಕರಾದರು. ಆಟೋನವಿಯನ್ನು ೨೦೧೪ರಲ್ಲಿ ಅಲಿಬಾಬಾ ಸ್ವಾಧೀನ ಪಡಿಸಿಕೊಂಡಿತು.ಇದು ಒಂದು ಚೀನೀ ಸರಬರಾಜು. ಅಲಿಬಾಬಾದ ಗ್ರಾಹಕರಿಂದ ಗ್ರಾಹಕ ಪೋರ್ಟಲ್ ತಯೋಬಾವ್, ಇಬೇ.ಕಾಮಿನ ಹಾಗೆ ಸುಮಾರು ಶತಕೋಟಿ ಉತ್ಪನ್ನಗಳನ್ನು ಹೊಂದಿದೆ ಮತ್ತು ಜಾಗತಿಕವಾಗಿ ೨೦ ಹೆಚ್ಚು ವೀಕ್ಷಿಸುವ ಜಾಲತಾಣಗಳಲ್ಲಿ ಒಂದಾಗಿದೆ. ತಿಮಾಲ್.ಕಾಮನ್ನು, ಏಪ್ರಿಲ್ ೨೦೦೮ರಲ್ಲಿ ಆನ್ಲೈನ್ ಚಿಲ್ಲರೆ ವೇದಿಕೆಯಾಗಿ ತಯೋಬಾವ್ ಪೂರಕವಗಿ ಮತ್ತು ಪ್ರತ್ಯೇತ ವ್ಯಾಪಾರಿವಾಗಲು ಪರಿಚಯಿಸಲಾಯಿತು. ಜುಹುಅಸೂಯೆನ್ ಚೀನಾದಲ್ಲಿ ಗುಂಪು ಶಾಪಿಂಗ್ ವೆಬ್ಸೈಟ್.ಇದು ಫ್ಲಾಶ್ ಮಾರಾಟವನ್ನು ನೀಡುತ್ತದೆ. ಅಲಿಬಾಬಾ ಗ್ರೂಪಿನ ಪ್ರಕಾರ ಇತಯೋ ಅಮೆಜಾನ್ ಚೀನಾ,ಗೊಮ್,ನೈಕ್ ಚೀನಾ ಇತ್ಯಾದಿ ಉತ್ಪ್ನನಗಳನ್ನು ಒದಗಿಸುತ್ತದೆ. ಅಲಿಪೆ,ಯಾವುದೇ ವ್ಯವಹಾರ ಶುಲ್ಕವಿಲ್ಲದ ಆನ್ಲೈನ್ ಪಾವತಿ ಮಾಡುವ ವೇದಿಕೆಯಾಗಿದೆ.ಇದು ಯು'ಎಬಾವ್ ಎಂಬ ಆರ್ಥಿಕ ಉತ್ಪನ್ನದ ವೇದಿಕೆಯನ್ನು ಬಿಡುಗಡೆ ಮಾಡಿದೆ. ಅಲಿಬಾಬಾ ಕ್ಲೌಡನ್ನು ಸೆಪ್ಟೆಂಬರ್ ೨೦೦೯ರಲ್ಲಿ,ಅಲಿಬಾಬಾ ಗ್ರೂಪಿನ ಹತ್ತನೇ ವಾರ್ಷಿಕೋತ್ಸವದ ದಿನ ಸ್ಥಾಪಿಸಲಾಯಿತು. ೨೦೦೯ರಲ್ಲಿ ಅಲಿಬಾಬಾ ಹಿಚೀನಾ ಎಂಬ ಹೋಸ್ಟಿಂಗ್ ನೋಂದಣಿ ಸೇವೆ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.ಇದನ್ನು ತನ್ನ ಅಲಿಬಾಬಾ ಕ್ಲೌಡಿಗೆ ನಿರ್ಮಿಸಲಾಯಿತು. ಅಲಿಎಕ್ಸ್ಪ್ರೆಸ್.ಕಾಮ್ ಒಂದು ಆನ್ಲೈನ್ ರಿಟೇಲ್ ಸೇವೆ ನೇಡುವಾ ವೆಬ್ಸೈಟ್.ಇದು ಚಿಕ್ಕ ಚೀನೀ ಮಾರಟಗಾರರಿಗೆ ಆನ್ಲೈನ್ ಮೂಲಕ ತಮ್ಮ ಉತ್ಪನ್ನಗಳನ್ನು ಅಂತರಾಷ್ಟ್ರೀಯ ವ್ಯಾಪಾರಿಗಳಿಗೆ ಮಾರಲು ಸಹಾಯ ನೀಡುತ್ತದೆ. ಅಲಿಎಕ್ಸ್ಪ್ರೆಸ್ ರಶಿಯದಲ್ಲಿ ಅತ್ಯಂತ ಹೆಚ್ಚು ಬಳಿಸುವ ಇ-ವಾಣಿಜ್ಯ ವೇದಿಕೆ. ಚೀನಾ ಯಾಹೂವನ್ನು ೧೯೯೯ರಲ್ಲಿ ಸೆಪ್ಟೆಂಬರ್ ೨೪ರಂದು ಪ್ರಾರಂಭಿಸಲಾಯಿತು.ಅಲಿಬಾಬಾ ಗ್ರೂಪ್ ಯಾಹೂವಿನ ಜೊತೆ ವ್ಯಹಾತ್ಮಕ ಸಹಯೋಗವನ್ನು ರೂಪಿಸಿಕೊಂಡು,ಚೀನಾಯಾಹುವನ್ನು ಸ್ವಾಧೀನಪಡಿಸಿಕೊಡಿತು.ಯಾಹೂ ಚೀನಾಗೆ ಕಳುಹಿಸಲಾಗಿದ ಇಮೇಲ್ಲುಗಳನ್ನು ನಿಲ್ಲಿಸಿ ೩೧ ಡಿಸೆಂಬರ್ ೨೦೧೪ರವರೆಗೆ ಅಲಿಮೇಲ್ ಬಾಕ್ಸಿಗೆ ಕಳುಹಿಸಲಾಗುತ್ತಿತ್ತು.[] ೨೦೦೪ರಲ್ಲಿ, ಕಂಪನಿಯು ಗ್ರಾಹಕ ಮತ್ತು ಆನ್ಲೈನ್ ಮಾರಾಟಗಾರರ ನಡುವಿನ ಪರಸ್ಪರ ಹೆಚ್ಚಿಸಲು ಅಲಿವಾಂಗ್ವಾಂಗನ್ನು,ಅಂದರೆ ತನ್ನದೇ ಆದ ಇನ್ಸ್ಟೆಂಟ್ ಮೆಸೇಜಿಂಗ್ ಸಾಫ್ಟ್ವೇರ್ ಸೇವೆಯನ್ನು ಬಿಡುಗಡೆ ಮಾಡಿತು.ಅಕ್ಟೋಬರ್ ೨೦೧೪ರಲ್ಲಿ ಮುಂದೆ ಈ ಕಂಪನಿಯು ವೀಚಾಟನ್ನು ಬಳಸಿ ತನ್ನದೇ ಆದ ಸಂದೇಶ ಅಪ್ಲಿಕೇಶನ್,ಲೈವಾಂಗನ್ನು ಪ್ರಚಾರ ಮಾಡಬೇಕೆಂದು ಅಲಿಬಾಬಾ ಕಂಪನಿಯ ಅಧ್ಯಕ್ಷರಾಗಿದ್ದ ಜಾಕ್ ಮಾ ಅವರು ಘೋಷಿಸಿದರು. ಅಲಿಬಾಬಾ ಚೀನಾವಿಷನ ಮಾಧ್ಯಮ ಗ್ರೂಪಿನ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿತು.ಆ ಸಂದರ್ಭದಲ್ಲಿ ಅಲಿಬಾಬಾ ಪಿರ್ಚಸ್ ಗ್ರೂಪ್ ಎಂದು ಕಂಪನಿಯ ಮರುನಾಮಕರಣ ಮಾಡಲಾಯಿತು. ಅಲಿಬಾಬಾದ ಯೌಕು ಟುಡಾಉ,ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ೧೧ಜೂನ್೨೦೧೪ರಲ್ಲಿ,ಅಲಿಬಾಬಾ ತನ್ನದೆ ಶಾಪಿಂಗ್ ಸೈಟಾದ ೧೧ಮೇಯನ್ನು ಬಿಡುಗಡೆ ಮಾಡಿದರು. ಅಲಿಬಾಬಾ ಡಿಸೆಂಬರ್ ೨೦೧೫ರಲ್ಲಿ,ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಜೊತೆ ವ್ಯಾಪಾರ ಮಾಡಲು ಒಪ್ಪಿಗೆ ಮಾಡಿದರು. ಅಲಿಹೆಲ್ತ್,ಅಲಿಬಾಬಾದ ಪ್ರಮುಖ ಆರೋಗ್ಯ ಆರೈಕೆ ಘಟಕ.ಯುಸಿವೆಬ್,ಮೊಬೈಲ್ ಇಂಟರ್ನೆಟ್ ಸಾಘ್ಟ್ವೇರ್ ತಂತ್ರಜ಼್ಞಾನ ಮತ್ತು ಇತ್ಯಾದಿ ಸೇವೆಗಳನ್ನು ನೀಡುವ ಒಂದು ಚೀನಿ ಅಗ್ರಗಣ್ಯವಾಗಿದೆ. ಲಜದ ಗ್ರೂಪ್ ೨೦೧೧ರಲ್ಲಿ ರಾಕೆಟ್ ಇಂಟನೇಟವರು ಸ್ಥಾಪಿಸಿದ್ದ ಸಿಂಗಪುರದ ಇ-ವಾಣಿಜ್ಯ ಕಂಪನಿ. ಅಲಿಬಾಬಾ ಗ್ರೂಪ್ ಲಜದ ಗ್ರೂಪನ್ನು ೫೦೦ ದಶಲಕ್ಷ ಡಾಲರ್ ಕೊಟ್ಟು ಸ್ವಾಧೀನಪಡಿಸಿಕೊಂಡಿತು. ಮೇ ೧೦ರಂದು ೨೦೧೫ರಲ್ಲಿ ಡೇನಿಯಲ್ ಜಹಂಗ್,ಜೊನಾಥನ್ ಲು ನಂತರ ಅಲಿಬಾಬಾ ಗ್ರೂಪಿನ (ಸಿಎಒ)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರಾಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]