ಸದಸ್ಯ:Chaithra464/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಜುನ ಪ್ರಶಸ್ತಿ:[ಬದಲಾಯಿಸಿ]

thumb|ಅರ್ಜುನ ಪ್ರಶಸ್ತಿ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಅರ್ಜುನ ಪ್ರಶಸ್ತಿಗಳನ್ನು ನೀಡಿದೆ. ೧೯೬೧ ರಲ್ಲಿ ಪ್ರಾರಂಭವಾದ ಈ ಪ್ರಶಸ್ತಿಯು ಅರ್ಜುನದ ಕಂಚಿನ ಪ್ರತಿಮೆ ಮತ್ತು ೫,೦೦,೦೦೦ ನಗದು ಬಹುಮಾನವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಹಿಂದಿನ ವರ್ಷಗಳಲ್ಲಿ ಇದಕ್ಕೆ ಅರ್ಹರಾದವರು ಆದರೆ ಪ್ರಶಸ್ತಿಯನ್ನು ಪಡೆಯದವರ ಹೆಸರನ್ನು ಈ ಅರ್ಜುನ ಪ್ರಶಸ್ತಿತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಲ್ಲದೇ, ಸ್ಥಳೀಯ ಆಟಗಳು ಮತ್ತು ಭೌತಿಕವಾಗಿ ಅಂಗವಿಕಲ ವರ್ಗವನ್ನು ಸೇರಿಸಲು ಪ್ರಶಸ್ತಿಯನ್ನು ನೀಡಬೇಕಾದ ವಿಭಾಗಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸರ್ಕಾರವು ಹಲವು ವರ್ಷಗಳಿಂದ ಅರ್ಜುನ ಪ್ರಶಸ್ತಿಗೆ ಮಾನದಂಡಗಳನ್ನು ಪರಿಷ್ಕರಿಸುತ್ತದೆ. ಪರಿಷ್ಕೃತ ಮಾರ್ಗಸೂಚಿತಗಳ ಪ್ರಕಾರ, ಪ್ರಶಸ್ತಿಗೆ ಅರ್ಹತೆ ಪಡೆಯಲು, ಕ್ರೀಡಾಪಟುವು ಕಳೆದ ನಾಲ್ಕು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಶಿಫಾರಸು ಮಾಡಿದ ವರ್ಷಕ್ಕೆ ಶ್ರೇಷ್ಟತೆಯೊಂದಿಗೆ ಉತ್ತಮ ಗುಣಗಳಾದ ನಾಯಕತ್ವ, ಕ್ರೀಡಾಪಟು, ಮತ್ತು ಶಿಸ್ತು ಹೊಂದಿರಬೇಕು. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್, ಬಿಲಿಯರ್ಡ್ಸ್ & ಸ್ನೂಕರ್,ಬಾಕ್ಸಿಂಗ್, ಕೇರಮ್, ಚೆಸ್, ಕ್ರಿಕೆಟ್, ಸೈಕ್ಲಿಂಗ್, ಇತ್ಯಾದಿ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಇತಿಹಾಸ[ಬದಲಾಯಿಸಿ]

2001 ರಿಂದ ಈ ಕೆಳಗಿನ ವಿಭಾಗಗಳಲ್ಲಿ ಬರುವ ವಿಭಾಗಗಳಲ್ಲಿ ಮಾತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ:

  * ಒಲಂಪಿಕ್ ಗೇಮ್ಸ್ / ಏಷ್ಯನ್ ಗೇಮ್ಸ್ / ಕಾಮನ್ವೆಲ್ತ್ ಗೇಮ್ಸ್ / ವಿಶ್ವಕಪ್ .
  * ಇಂಡೀಜಿನಸ್ ಗೇಮ್ಸ್.
  * ಅಂಗವಿಕಲರಿಗಳ ಕ್ರೀಡೆಗಳು.

೨೦೧೧ ರ ಆಗಸ್ಟ್ ಮಧ್ಯದಲ್ಲಿ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸುವವರಲ್ಲಿ ೧೯ ಕ್ರೀಡಾಪಟುಗಳನ್ನು ಘೋಷಿಸಲಾಯಿತು;. 2012 ರಲ್ಲಿ 25 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. 2017 ರ ವರ್ಷದಲ್ಲಿ, ಕ್ರೀಡಾ ಕ್ರೀಡಾಪಟುಗಳು ಸೇರಿದಂತೆ 17 ಕ್ರೀಡಾ ವ್ಯಕ್ತಿಗಳಿಗೆ ಯೂತ್ ಅಫೇರ್ಸ್ ಮತ್ತು ಸ್ಪೋರ್ಟ್ಸ್ ಸಚಿವಾಲಯದವರು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಅರ್ಜುನ ಪ್ರಶಸ್ತಿಯ ಪುರಸ್ಕ್ರುತರು:[ಬದಲಾಯಿಸಿ]

ವರ್ಷ ಹೆಸರು

1961 ಎಲ್. ಬಡ್ಡಿ ಡಿ 'ಸೋಜಾ

1962 ಹ್ಯಾವ್. ಪಿ. ಬದಾದುರ್ ಮಾಲ್

1966 ಹವಾ ಸಿಂಗ್

1968 ಹ್ಯಾವ್. ಡೆನ್ನಿಸ್ ಸ್ವಾಮಿ

1971 ಹ್ಯಾವ್. ಮುನಿಸ್ವಾಮಿ ವೇಣು

1972 ಹ್ಯಾವ್. ಚಂದ್ರನಾರಾಯಣನ್

1973 ಹ್ಯಾವ್. ಮೆಹತಬ್ ಸಿಂಗ್

1977-78 ಬಿಎಸ್ ಥಾಪಾ

1978-79 ಸಿಸಿ ಮಚಯ್ಯ

1979-80 ಬಿ. ಸಿಂಗ್

1980-81 ಐಸಾಕ್ ಅಮಾಲ್ಡಾಸ್

1981 ಹ್ಯಾವ್. ಜಿ. ಮನೋಹರನ್

1982 ಹ್ಯಾವ್. ಕೌರ್ ಸಿಂಗ್

1983 ಜಾಸ್ ಲಾಲ್ ಪ್ರಧಾನ್

1986 ಜೈ ಪಾಲ್ ಸಿಂಗ್

1987 ಸೀವಾ ಜಯರಾಮ್

1989 ಗೋಪಾಲ್ ದೆವಾಂಗ್

1991 ಡಿಎಸ್ ಯಾದವ್

1992 ರಾಜೇಂದರ್ ಪ್ರಸಾದ್

1993 ಮನೋಜ್ ಪಿಂಗಲೆ

1993 ಮುಕುಂದ್ ಕಿಲ್ಲೆಕರ್

1995 ವಿ. ದೇವರಾಜನ್

1996 ರಾಜ್ ಕುಮಾರ್ ಸಂಗ್ವಾನ್

1998 ಎನ್ ಜಿ ಡಿಂಗೊ ಸಿಂಗ್

1999 ಗುರ್ರಾನ್ ಸಿಂಗ್

1999 ಜಿತೇಂದರ್ ಕುಮಾರ್

2002 ಮೊಹಮ್ಮದ್ ಅಲಿ ಕಮರ್

2003 ಎಂ.ಸಿ ಮೇರಿಕೊಮ್

2005 ಅಖಿಲ್ ಕುಮಾರ್

2006 ವಿಜೇಂದರ್ ಕುಮಾರ್

2008 ವರ್ಗೀಸ್ ಜಾನ್ಸನ್

2009 ಎಲ್. ಸರಿತಾ ದೇವಿ

2010 ದಿನೇಶ್ ಕುಮಾರ್

2011 ಸುರಂಜಾಯ್ ಸಿಂಗ್

2012 ವಿಕಾಸ್ ಕೃಷ್ಣ

ರಾಜೇಂದ್ರ ಪ್ರಸಾದ್[ಬದಲಾಯಿಸಿ]

thumb|ರಾಜೇಂದ್ರ ಪ್ರಸಾದ್


ಮೇಲ್ಭಾಗದಲ್ಲಿ ಪಟ್ಟಿ ಮಾಡಿರುವ ಅರ್ಜುನ ಪ್ರಶಸ್ತಿಯ ಪುರಸ್ಕ್ರುತರಾದವರಲ್ಲಿ ರಾಜೇಂದ್ರ ಪ್ರಸಾದ್ ಪ್ರಮುಖರು. ಇವರು ಜನಿಸಿದ್ದು ಜನವರಿ ೧೭,೧೯೬೮ ರಂದು. ಇವರ ಹುಟ್ಟೂರು ಛತ್ತೀಸ್ಗಢ, ಭಿಲಾಯಿ,ಭಾರತ. ಇವರು ಭಾರತದ ನಿವೃತ್ತ ಬಾಕ್ಸರ್. ಇವರು ಲೈಟ್ ಫ್ಲೈವೈಟ್ (೪೮ ಕೆ.ಜಿ) ವಿಭಾಗದಲ್ಲಿ ೧೯೮೦ ರ ಉತ್ತರಭಾರತದಲ್ಲಿ ಮತ್ತು ೧೯೯೦ ರ ದಶಕದ ಆರಂಭದಲ್ಲಿ ಸ್ಪರ್ಧಿಸಿದರು ಮತ್ತು ೭ ನೇ ಸ್ಥಾನ ಪಡೆದರು.

೧೯೯೨ ರಲ್ಲಿ, ಭಾರತೀಯ ಸರ್ಕಾರವು ಅಂತರರಾಷ್ಟ್ರೀಯ ಬಾಕ್ಸಿಂಗ್ ನಲ್ಲಿ ಇವರ ಸಾಧನೆಗಳಿಗಾಗಿ ಅರ್ಜುನ ಪ್ರಶಸ್ತಿಯನ್ನು ನೀಡಿತು.

ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ೧೯೯೨ ಬೇಸಿಗೆ ಒಲಂಪಿಕ್ಸ್ ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಪೋಲೆಂಡ್ನ ಆಂಡ್ರೆಜ್ ರಜನಿ ಅವರನ್ನು ಮೊದಲು ಸುತ್ತಿನಲ್ಲಿ ೧೨-೬ ಅಂಕಗಳಿಂದ ಸೋಲಿಸಿದರು.

ಎರಡನೇ ಸುತ್ತಿನಲ್ಲಿ ಫಿಲಿಪೈನ್ಸ್ನ ಕಂಚಿನ ಪದಕ ವಿಜೇತ ರೊಯಲ್ ವೆಲಾಸ್ಕೊಗೆ ಸೋತರು.

ಇವರು ೧೯೯೩ ರ ವರ್ಲ್ಡ್ ಅಮೇಚರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡರು.

ಇವರು ಪ್ರಸ್ತುತ ಛತ್ತೀಸ್ಗಢ ಪ್ರದೇಶದ ಅಮೇಚೂರ್ ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷರಾಗಿದ್ದಾರೆ ಮತ್ತು ಛತ್ತೀಸ್ಗಡಒಲಿಂಪಿಕ್ಸ್ ಅಸೋಸಿಯೇಷನ್ ನಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಇವರು ಮಾಲಿನಿ ಪ್ರಸಾದ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಇವರ ದಂಪತಿಗಳಿಗೆ ರಾಹುಲ್ ಪ್ರಸಾದ್ ಮತ್ತು ರೋಹಿತ್ ಪ್ರಸಾದ್ ಎಂಬ ಇಬ್ಬರು ಪುತ್ರರು ಇದ್ದಾರೆ.

ರಾಜೇಂದ್ರ ಪ್ರಸಾದ್ ರವರ ಪ್ರಶಸ್ತಿಗಳು ಮತ್ತು ಮನ್ಯತೆಗಳು:[ಬದಲಾಯಿಸಿ]

  • ೧೯೯೨ ರಲ್ಲಿ , ಇವರು ಅರ್ಜುನ ಪ್ರಶಸ್ತಿಯನ್ನು ಪಡೆದರು, ಭಾರತದಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ಭಾರತ ಸರ್ಕಾರ ಪ್ರತೀವರ್ಷವೂ ಇದನ್ನು ನೀಡುತ್ತಾರೆ.
  • ೧೯೯೨ ರಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಬಿಬಿಎ) ಯಲ್ಲ್ಲಿ ೭ ನೇ ಸ್ಥಾನ ಪಡೆದಿದ್ದಾರೆ.
  • ಫಿನ್ಲೆಂಡ್ನ ಟ್ಯಾಂಪೇರ್ನಲ್ಲಿ ಪುರುಷರ ೧೯೯೩ ರ ಅಮೇಚರ್ ಬಾಕ್ಸಿಂಗ್ ಚಾಂಪಿಯನ್ಶಿಪ್ಸ್ನಲ್ಲಿ ೫ ನೇ ಸ್ಥಾನ ಪಡೆದಿದ್ದಾರೆ.

ಒಲಂಪಿಕ್ ಫಲಿತಾಂಶಗಳು:[ಬದಲಾಯಿಸಿ]

  • ಆಂಡ್ರೆಜೆಜ್ ರಜನಿ ಅವರನ್ನು (ಪೋಲಂಡ್) ೧೨-೬ ಅಂಕಗಳಿಂದ ಸೋಲಿಸಿದರು.
  • ರೊವೆಲ್ ವೆಲಾಸ್ಕೊ ಅವರನ್ನು (ಫಿಲಿಪೈನ್ಸ್) ಗೆ ೬-೧೫ ಅಂಕಗಳಿಂದ ಸೋತರು.

[೧] [೨]

  1. https://en.wikipedia.org/wiki/Arjuna_Award. Retrieved 31 ಆಗಸ್ಟ್ 2018. {{cite web}}: Missing or empty |title= (help)
  2. https://en.wikipedia.org/wiki/Rajendra_Prasad_(boxer). Retrieved 31 ಆಗಸ್ಟ್ 2018. {{cite web}}: Missing or empty |title= (help)