ವಿಷಯಕ್ಕೆ ಹೋಗು

ಸದಸ್ಯ:Chaithra.n269/ನನ್ನ ಪ್ರಯೋಗಪುಟ/karur vyshya bank

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                             ಕರೂರ್ ವೈಶ್ಯ ಬ್ಯಾಂಕ್


ಕರೂರ್ ವೈಶ್ಯ ಬ್ಯಾಂಕ್ ಎಂಬುದು ತಮಿಳುನಾಡಿನ ಕರೂರ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ಖಾಸಗಿ ವಲಯ ಬ್ಯಾಂಕ್ ಆಗಿದೆ. ಕರೂರ್ ವೈಶ್ಯ ಬ್ಯಾಂಕ್ ಅನ್ನು ೧೯೧೬ ರಲ್ಲಿ ಎಮ್ ಏ ವೆಂಕಟರಾಮ ಚೆಟ್ಟಿಯಾರ್ ಮತ್ತು ಅಥಿ ಕೃಷ್ಣ ಚೆಟ್ಟಿಯಾರ್ ಅವರು ಸ್ಥಾಪಿಸಿದರು.ಕರೂರ್ ವೈಶ್ಯ ಬ್ಯಾಂಕ್ ಪ್ರಮುಖವಾಗಿ ಖಜಾನೆ,ಕಾರ್ಪೊರೇಟ್ /ಸಗಟು ಬ್ಯಾಂಕಿಂಗ್ ಮತ್ತು ಚಿಲ್ಲರೆ ಬ್ಯಾಂಕಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ.ಕರೂರ್ ವೈಶ್ಯ ಬ್ಯಾಂಕ್ ಎನ್ ವಿ ಗಳಿಗೆ ಮತ್ತು ಎಮ್ ಸ್ ಎಮ್ ಇ ಗೆ ವೈಯಕ್ತಿಕ,ಕಾರ್ಪೊರೇಟ್,ಕೃಷಿ ಬ್ಯಾಂಕಿಂಗ್ ಮತ್ತು ಇತರೆ ಸೇವೆಗಳನ್ನು ಒದಗಿಸುತ್ತದೆ.[]

ಕರೂರ್ ವೈಶ್ಯ ಬ್ಯಾಂಕ್

ಕರೂರ್ ವೈಶ್ಯ ಬ್ಯಾಂಕ್ ವೈಯಕ್ತಿಕ ಬ್ಯಾಂಕಿಂಗ್ ಅಡಿಯಲ್ಲಿ ವಸತಿ ಸಾಲ,ವೈಯಕ್ತಿಕ ಸಾಲ ,ವಿಮೆ ಮತ್ತು ಸ್ಥಿರ ಠೇವಣಿಯಂತಹ ಸೇವೆಗಳನ್ನು ಒದಗಿಸುತ್ತದೆ. ಸಾಂಸ್ಥಿಕ ಬ್ಯಾಂಕ್ ಅಡಿಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ಕಾರ್ಪೋರೇಟ್ ಸಾಲಗಳಂತಹ ಸೇವೆಗಳನ್ನು ಒದಗಿಸುತ್ತದೆ. ಕೃಷಿ ಬ್ಯಾಂಕಿಂಗ್ ಅಡಿಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ಒದಗಿಸುವ ಸೇವೆಗಳೆಂದರೆ ಗ್ರೀನ್ ಹಾರ್ವೆಸ್ಟರ್, ಗ್ರೀನ್ ಟ್ರಾಕ್ ಮತ್ತು ಕೆವಿಬಿ ಹ್ಯಾಪಿ ಕಿಸಾನ್ ಮೊದಲಾದವು ಸೇರಿವೆ. ಎಮ್ ಸ್ ಎಮ್ ಇ ಅಡಿಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ಎಮ್ ಸ್ ಎಮ್ ಇ ನಗದು,ಕೆವಿಬಿ ಎಮ್ ಸ್ ಎಮ್ ಇ ಟರ್ಮ್ ಸಾಲ ,ಕೆವಿಬಿ ಎಮ್ ಸ್ ಎಮ್ ಇ ಬಿಲ್ ಡಿಸ್ಕೌಂಟಿಂಗ್ ಮತ್ತು ಇತರ ಕೆವಿಬಿ ಎಮ್ ಸ್ ಎಮ್ ಇ ಟರ್ಮ್ ಸಾಲಗಳಂತಹ ಉತ್ಪನ್ನಗಳನ್ನು ಒದಗಿಸಲಾಗುತ್ತದೆ. ಕರೂರ್ ವೈಶ್ಯ ಬ್ಯಾಂಕ್ ಹೆಚ್ಚಿನ ಶಾಖೆಗಳನ್ನು ಮತ್ತು ೧೦ ಎಟಿಎಂಗಳನ್ನು ಒಂದೇ ವರ್ಷದಲ್ಲಿ ಸೇರ್ಪಡೆ ಮಾಡಲಾಗಿದೆ. ಹೀಗೆ ಒಟ್ಟು ೭೫೦ ಶಾಖೆಗಳನ್ನು ಮತ್ತು ೧೭೫೦ ಎಟಿಎಂಗಳನ್ನು ಸೆಪ್ಟೆಂಬರ್ ೩೦,೨೦೧೭ರವರೆಗೆ ತಂದುಕೊಟ್ಟಿದೆ. ಮರುಲೋಡ್ ಮಾಡಬಹುದಾದ ಕಾರ್ಡಗಳು, ಕಿಸಾನ್ ಕ್ರೆಡಿಟ್ ಕಾರ್ಡುಗಳು, ಸ್ವಯಂಚಾಲಿತ ಪಾಸ್ಬುಕ್ ಕಿಯೋಸ್ಕ್, ಇ-ಬುಕ್ ಇತ್ಯಾದಿ ಉಪಕ್ರಮಗಳಂತಹ ಸೇವೆಗಳನ್ನು ಒದಗಿಸುತ್ತಿದೆ.ಇತ್ತೀಚಿನ ದಿನಗಳಲ್ಲಿ ಟ್ಯಾಗ್ ಮತ್ತು ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ನೀಡಲಾಗುತ್ತಿದೆ . ಜೂನ್ ೨೦೧೬ರ ವರೆಗೆ ಒಟ್ಟು ವ್ಯಾಪರದ ಪ್ರಮಾಣ ೯೨೦೦೦ ಕೋಟಿ. ೨೦೧೭ರ ಮಾರ್ಚ್ ೩೧ ರಂತೆ ಒಟ್ಟಾರೆ ವ್ಯಾಪಾರದ ಪ್ರಮಾಣ ೯೫೦೦೦ ಕೋಟಿ. ಕೆ.ವಿ.ಬಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ "ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್" ಅನ್ನು ಶ್ರೀ ಎಮ್.ಏ.ವೆಂಕಟರಾಮ ಚೆಟ್ಟಿಯಾರ್ ಮತ್ತು ಶ್ರೀ ಅಥಿ ಕೃಷ್ಣ ಚೆಟ್ಟಿಯಾರ್ ಅವರು ಜುಲೈ ೨೫, ೧೯೧೬ರಂದು ಸ್ಥಾಪಿಸಿದರು. ತಮಿಳುನಾಡಿನ ಕರೂರ್ ಮತ್ತು ಕರೂರ್ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿರುವ ಮಾರುಕಟ್ಟೆಯ ವ್ಯಾಪಾರಿಗಳು ಮತ್ತು ಕೃಷಿಕರ ಮೇಲೆ ಬಂಡವಾಳ ಹೂಡಲು ಕೆವಿಬಿಯನ್ನು ಸ್ಥಾಪಿಸಿದರು. ಕರೂರ್ ವೈಶ್ಯ ಬ್ಯಾಂಕ್ನನ್ನು ಆ ಬ್ಯಾಂಕಿನ ನಿರ್ದೇಶಕರಿಂದ ನಿರ್ವಹಿಸಲಾಗಿದೆ ಮತ್ತು ಬ್ಯಾಂಕಿನ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ.[] ಹೆಚ್ಚು ಹಣವಿದೆ ಎಂದು ಅರಿತುಕೊಂಡು ಕರೂರ್ನಿಂದ ಕೆವಿ ಬ್ಯಾಂಕ್ನನ್ನು ವಿಸ್ತರಿಸಿತು, ಮತ್ತು ಪ್ಯಾನ್-ಇಂಡಿಯಾ ಉಪಸ್ಥಿತಿಯನ್ನು ಪಡೆಯಲು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು ೬೬೮ ಶಾಖೆಗಳನ್ನು ಸ್ಥಾಪಿಸಿತು. ಶ್ರೀ ಕೆ.ಕೆ. ಭಾನು ಬ್ಯಾಂಕಿನ ಹೆಚ್ಚುವರಿ ನಿರ್ದೇಶಕರಾಗಿ ೨೭ ಜನವರಿ ೨೦೧೨ ರಂದು ನೇಮಕಗೊಂಡರು. ಕರೂರ್ ವೈಶ್ಯ ಬ್ಯಾಂಕ್ ವ್ಯವಹಾರದಲ್ಲಿ ೭೩೫ ಶಾಖೆಗಳು ಮತ್ತು ೧೭೪೮ ಎಟಿಎಂಗಳು ಮತ್ತು ೪೪೬ ನಗದು ಠೇವಣಿ ಯಂತ್ರಗಳನ್ನು ಹೊಂದಿದೆ. ತಮಿಳುನಾಡಿನ ಜವಳಿ ಪಟ್ಟಣವಾದ ಕರೂರ್ ಮತ್ತು ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಮತ್ತು ಸಣ್ಣ ಕೃಷಿಕರಿಗೆ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ. ಕರೂರ್ ವೈಶ್ಯ ಬ್ಯಾಂಕ್ ಒಂದು ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ಆರಂಭವಾಯಿತು. ಕಳೆದ ಕೆಲವು ದಶಕಗಳಲ್ಲಿ ಇದು ಅಸಂಖ್ಯಾತ ಬದಲಾವಣೆಗಳನ್ನು ಮತ್ತು ಸವಾಲುಗಳನ್ನು ಎದುರಿಸಿದೆ ಮತ್ತು ಭಾರತದ ಮೂಲಭೂತ ಬ್ಯಾಂಕಿನಲ್ಲಿ ಲಾಭದಾಯಕವಾಗಿ ಹೊರಹೊಮ್ಮಿದೆ. ವೆಂಕಟರಾಮ ಚೆಟ್ಟಿಯಾರ್ ಮತ್ತು ಅಥಿ ಕೃಷ್ಣ ಚೆಟ್ಟಿಯಾರ್ ರವರ ಅನುಭವ, ಜ್ಞಾನ ಮತ್ತು ವ್ಯವಹಾರದ ಅನುಭವದಿಂದ ಬ್ಯಾಂಕ್ ಅನ್ನು ವೃತ್ತಿಪರವಾಗಿ ನಿರ್ವಹಿಸಲಾಗುತ್ತಿದೆ ಮತ್ತು ನಿರ್ದೇಶಿಸಲಾಗುತ್ತಿದೆ. ಬ್ಯಾಂಕ್ ಈಗ ತನ್ನ ಶಾಖೆಗನ್ನು ೨೦ ರಾಜ್ಯಗಳಲ್ಲಿ ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ೬೭೫ಕ್ಕೂ ಹೆಚ್ಚಿನ ಶಾಖೆಗಳೊಂದಿಗೆ ವಿಸ್ತರಿಸಿದೆ. ಎಲ್ಲಾ ವಿವೇಕದ ಮಾನದಂಡಗಳಿಗೆ ಅನುಗುಣವಾಗಿ ಮತ್ತು ಶಾಸನಬದ್ಧ ನಿಯಮಗಳನ್ನು ನಿರ್ಬಂಧಿಸಲು ಬ್ಯಾಂಕು ತನ್ನ ವ್ಯವಹಾರಗಳನ್ನು ನಿಖರವಾಗಿ ನಡೆಸುತ್ತಿದೆ. ಕೆ.ವಿ.ಬಿ ಕೂಡ ಲಾಭಗಳನ್ನು ಸೃಷ್ಟಿಸುತ್ತಿದೆ ಮತ್ತು ಆರಂಭದಿಂದಲೂ ಅದರ ಪಾಲುದಾರರಿಗೆ ಉತ್ತಮವಾದ ಲಾಭಾಂಶದೊಂದಿಗೆ ಲಾಭದಾಯಕವಾಗಿದೆ. ನಿಯಂತ್ರಕ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಹಣವನ್ನು ಪರಿಣಾಮಕಾರಿಯಾಗಿ ನಿಯೋಜಿಸುವುದರ ಮೂಲಕ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಹಣಕಾಸಿನ ಶಿಸ್ತುಗಳನ್ನು ಖಾತರಿಪಡಿಸುತ್ತಿದೆ. ಗುಣಮಟ್ಟದ ಗ್ರಾಹಕ ಬೆಂಬಲವನ್ನು ಒದಗಿಸಲು ಮಾನವ ಬಂಡವಾಳದ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸುತ್ತಿದೆ.ನವೀನ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪರಿಚಹಿಸಲು ಹಲವಾರು ತಂತ್ರಜ್ಞಾನವನ್ನು ಅಳವಡಿಸುತ್ತಿದೆ ಜೊತೆಗೆ ಉತ್ಪನ್ನಗಳ ಮೌಲ್ಯಗಳನ್ನು ಹೆಚ್ಚಿಸಿ ಅವುಗಳನ್ನು ಸೂಕ್ತ ದರದಲ್ಲಿ ಒದಗಿಸುತ್ತಿದೆ.ದೇಶದ ಪ್ರಮುಖ ಬ್ಯಾಂಕ್ ಕೇಂದ್ರಗಳನ್ನು ತಲುಪಲು ಶಾಖಾ ಜಾಲವನ್ನು ವಿಸ್ತರಿಸುತ್ತಿದೆ.ಗುಣಮಟ್ಟದ ಗ್ರಾಹಕ ಬೆಂಬಲವನ್ನು ಒದಗಿಸಲು ಮಾನವ ಬಂಡವಾಳದ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸುತ್ತಿದೆ.

  1. https://en.wikipedia.org/wiki/Karur_Vysya_Bank
  2. http://www.moneycontrol.com/india/stockpricequote/banks-private-sector/karurvysyabank/KVB