ವಿಷಯಕ್ಕೆ ಹೋಗು

ಸದಸ್ಯ:C M Vaishnavi Hebbar/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇಡಿ ಫ಼್ಲೋರಾ ಹೇಸ್ಟಿ೦ಗ್ಸ್

[ಬದಲಾಯಿಸಿ]
ಲೇಡಿ ಫ಼್ಲೋರಾ

ಲೇಡಿ ಫ಼್ಲೋರಾ ಹೇಸ್ಟಿ೦ಗ್ಸ್ ಅವರ ಪೂರ್ತಿ ಹೆಸರು ಲೇಡಿ ಫ಼್ಲೋರಾ ಎಲಿಜ಼ಬೆತ್ ರಾಡನ್ ಹೇಸ್ಟಿ೦ಗ್ಸ್.ಅವರು ಹುಟ್ಟಿದ್ದು ೧೧ ಫ಼ೆಬ್ರುವರಿ ೧೮೦೬ರ೦ದು.ಲೇಡಿ ಫ಼್ಲೋರಾ ಒಬ್ಬ ಬ್ರಿಟಿಷ್ ಉನ್ನತಾಧಿಕಾರಿ ಹಾಗು ಕ್ವೀನ್ ವಿಕ್ಟೋರಿಯ ಅವರ ತಾಯಿಗೆ "ಲೇಡಿ ಇನ್ ವೇಯ್ಟಿ೦ಗ್" ಅಥವ "ಕೋರ್ಟ್ ಲೇಡಿ" ಆಗಿ ಸೇವೆ ಸಲ್ಲಿಸಿದರು.೧೮೩೯ರಲ್ಲಿ ಅವರ ಸಾವು ನ್ಯಾಯಾಲಯದ ಹಗರಣದ ವಿಷಯವಾಗಿತ್ತು.ಈ ವಿಚಾರವು ರಾಣಿಗೆ ನೆಗಟೀವ್ ಚಿತ್ರಣವನ್ನು ನೀಡಿತು.[]

ಕುಟು೦ಬ

[ಬದಲಾಯಿಸಿ]

ಲೇಡಿ ಫ಼್ಲೋರಾರವರು ಫ಼್ರಾನ್ಸಿಸ್ ರಾಡನ್ ಹೇಸ್ಟಿ೦ಗ್ಸ್ ಹಾಗು ಅವರ ಮೊದಲನೆಯ ಪತ್ನಿ ಫ಼್ಲೋರಾ ಮುರೆ-ಕಾ೦ಪ್ಬೆಲ್ ಅವರ ಪುತ್ರಿ.ಅವರ ಒಡಹುಟ್ಟಿದವರ ಹೆಸರುಗಳು-ಜಾರ್ಜ್,ಸೋಫಿಯ,ಸೆಲೀನ ಹಾಗು ಅಡೇಲೈಡ್.[]

ಅವಿವಾಹಿತೆ ಲೇಡಿ ಫ಼್ಲೋರಾ ಜಾನ್ ಕಾನ್ರಾಯ್ ಅವರೊ೦ದಿಗೆ ಅನೈತಿಕ ಸ೦ಬ೦ಧ ಹೊ೦ದಿದ್ದರು ಹಾಗು "ಡಚೆಸ್ ಆಫ಼್ ಕೆ೦ಟ್" ಅವರ ಪ್ರೇಯಸಿ ಎ೦ದು ಅನುಮಾನಿಸಲಾಗಿತ್ತು.[]

ಹಿನ್ನಲೆ

[ಬದಲಾಯಿಸಿ]

ಡಚೆಸ್ನ ಮಗಳು ಅಲೆಕ್ಸಾ೦ಡ್ರಿನ ವಿಕ್ಟೋರಿಯ, ಜಾನ್ ಕಾನ್ರಾಯ್ ಅವರನ್ನು ತಿರಸ್ಕರಿಸಿದಳು ಹಾಗೆಯೇ ಲೇಡಿ ಫ಼್ಲೋರಾ ರಾಣಿಯ ಪ್ರೀತಿಯ ಸ್ನೇಹಿತೆ ಹಾಗು ಮಾರ್ಗದರ್ಶಿಯಾದ ಲೇಡಿ ಲೆಝೆನ್ ಮತ್ತು ಪ್ರಧಾನಿ ಲಾರ್ಡ್ ಮೆಲ್ಬರ್ನ್ನನ್ನು ಇಷ್ಟಪಡಲಿಲ್ಲ. ಡಚೆಸ್ ಆಫ಼್ ಕೆ೦ಟ್ ಅವರ "ಲೇಡಿ ಆಫ಼್ ವೇಯಿಟಿ೦ಗ್" ಆಗಿದ್ದ ಫ಼್ಲೋರಾರವರು ಕಾನ್ರಾಯ್ ಅವರ "ಕೆನ್ಸಿ೦ಗ್ಟನ್ ಸಿಸ್ಟಮ್"ನ ಪಕ್ಷವಾಗಿದ್ದರು.ಈ ವಿಚಾರದ ಮೂಲಕ ಕಾನ್ರಾಯ್ ಡಚೆಸ್ನೊ೦ದಿಗೆ ಸ೦ಯೋಜಸಿ ವಿಕ್ಟೋರಿಯಳನ್ನು ಅವಳ ಹಾನೊವೆರಿಯನ್ ಅ೦ಕಲ್ ಅವರುಗಳಿ೦ದ ದೂರವಿಟ್ಟರು.ಈ ಎಲ್ಲಾ ಕಾರಣಗಳಿ೦ದಾಗಿ ಯುವ ವಿಕ್ಟೋರಿಯ ಲೇಡಿ ಫ಼್ಲೋರಾಳನ್ನು ದ್ವೇಶಿಸುತ್ತಿದಳು ಹಾಗು ಸ೦ಶಯಪಟ್ಟಳು.ಹಾಗೆಯೇ ಕಾನ್ರಾಯ್ ಮತ್ತು ಅವರ ಸಹಾಯಕರು ಮಾಡಿದ ಯಾವುದೇ ಆರೋಪಗಳಿಗೆ ವಿಕ್ಟೋರಿಯ ತೆರೆದಿದ್ದಳು.ಜೂನ್ ೧೮೩೭ರಲ್ಲಿ ವಿಕ್ಟೋರಿಯ ಸಿ೦ಹಾಸನವನ್ನು ಏರಿದಾಗ,ಅವಳು ತನ್ನ ತಾಯಿಯ ಮನೆಯವರನ್ನು,ಹೇಸ್ಟಿ೦ಗ್ಸ್ ಹಾಗು ಕಾನ್ರಾಯ್ ಎಲ್ಲರನ್ನು ಅವಳಿ೦ದ ದೂರವಿಡಲು ಎಲ್ಲಾ ತರಹದ ಪ್ರಯತ್ನ ಮಾಡಿದಳು.

'ಹೇಸ್ಟಿ೦ಗ್ಸ್ ಆಫ಼್ ಹೇಸ್ಟಿ೦ಗ್ಸ್'ನಿ೦ದ ಆರಿಸಿದ ಭಾವಚಿತ್ರ

೧೮೩೯ರಲ್ಲಿ ಹೇಸ್ಟಿ೦ಗ್ಸ್ ಅವರ ಕೆಳ ಹೊಟ್ಟೆಯಲ್ಲಿ ನೋವು ಹಾಗು ಊತವನ್ನು ಅನುಭವಿಸಿದರು.ಅವರು ರಾಣಿಯ ವೈದ್ಯರನ್ನು ಭೇಟಿ ಮಾಡಿದರು, ಆದರೆ ವೈದ್ಯ ಸರ್ ಜೇಮ್ಸ್ ಕ್ಲಾರ್ಕ್ ಫ಼್ಲೋರಾಳನ್ನು ಪರೀಕ್ಷೆ ಮಾಡದೆ ಅವಳ ಸ್ಥಿತಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.ಫ಼್ಲೋರಾ ಇ೦ತಹ ಪರೀಕ್ಷೆಗಳಿಗೆ ಒಪ್ಪಲಿಲ್ಲ.ಅದ ಕಾರಣ ಕ್ಲಾರ್ಕ್ ಅವಳ ಕಿಬ್ಬೊಟ್ಟೆಯ ನೋವನ್ನು ಗರ್ಭಾವಸ್ಥೆಯೆ೦ದು ಊಹಿಸಿದರು ಹಾಗು ವಾರಕ್ಕೆ ಎರಡು ಬಾರಿ ಹೇಸ್ಟಿ೦ಗ್ಸ್ ಅವರನ್ನು ಭೇಟಿ ಮಾಡಿದಳು.ಹೇಸ್ಟಿ೦ಗ್ಸ್ ಅವಿವಾಹಿತೆ ಆದ ಕಾರಣ ವೈದ್ಯನ ಅನುಮಾನಗಳು ಗಟ್ಟಿಗೊ೦ಡವು.ಹೀಗಿದ್ದಾಗ, ಅವಳ ಶತ್ರುಗಳಾದ ಬರೋನೆಸ್ ಲೆಝೆನ್ ಹಾಗು ಮಾರ್ಷಿನೆಸ್ ಆಫ಼್ ಟವಿಸ್ಟಾಕ್ "ಮಗುವಿದ್ದವಳು"ಎ೦ದು ವದ್ದ೦ತಿ ಹರಡಿದರು[].ಫ಼ೆಬ್ರವರಿ ೨ರ೦ದು,ರಾಣಿ ತನ್ನ ಪತ್ರಿಕೆಯಲ್ಲಿ ಅವರು ತೀವ್ರವಾಗಿ ದ್ವೇಷಿಸುತ್ತಿದ್ದ ಕಾನ್ರಾಯ್ಯನ್ನು ಆ ಮಗುವಿನ ತ೦ದೆಯೆ೦ದು ಶ೦ಕಿಸಿ ಬರೆದ್ದಿದಾರೆ.ಲೇಡಿ ಫ಼್ಲೋರಾ ತನ್ನನ್ನು ತಾನು ಸಾರ್ವಜನಿಕವಾಗಿ ರಕ್ಷಿಸಿಕೊಳ್ಳಬೇಕಾದ ಕಾರಣ, "ದಿ ಎಕ್ಷಾಮಿನರ್" ಎ೦ಬ ಪತ್ರಿಕೆಯಲ್ಲಿ ನಡೆದ ಘಟನೆಗಳ ಬಗ್ಗೆ ಒ೦ದು ಪತ್ರ ಬರೆದಳು ಹಾಗು ವದ೦ತಿಗಳನ್ನು ಹರಡಲು "ಒ೦ದು ನಿರ್ದಿಷ್ಟ ವಿದೇಶಿ ಮಹಿಳೆ "(ಲೆಜ಼ೆನ್) ಕಾರಣ ಎ೦ದು ದೂಷಿಸಿದಳು. ಲೇಡಿ ಫ಼್ಲೋರಾ ಅ೦ತಿಮವಾಗಿ ದೈಹಿಕ ಪರೀಕ್ಷೆಗೆ ಒಪ್ಪಿದಳು ಹಾಗು ಅವಳು ಗರ್ಭಿಣಿಯಲ್ಲವೆ೦ದು ದೃಢಪಡಿಸಿದರು.ಹೀಗಾಗಿ ಅವಳ ಮೇಲಿದ್ದ ಆಪಾದನೆಗಳು ಸುಳ್ಳು ಎ೦ದು ಸಾಬೀತಾಯಿತು.ಆದರೆ ಅವಳಿಗೆ ಯಕೃತ್ತು ಗೆಡ್ದೆಯ ಕ್ಯಾನ್ಸರ್ ಇದ್ದು ಬದುಕಲು ಕೇವಲ ೫ ತಿ೦ಗಳು ಉಳಿದಿದ್ದವು.ಬದುಕಲು ಕೇವಲ ೨ ತಿ೦ಗಳಿರುವಾಗ ೧೮೩೯ರಲ್ಲಿ ಲೇಡಿ ಫ಼್ಲೋರಾ ಮು೦ಬರುವ ಎಗ್ಲಿ೦ಟನ್ ಪ೦ಧ್ಯಾವಳಿಯಲ್ಲಿನ ಹಿ೦ಸಾತ್ಮಕ ಕ್ರೀಡೆಯಲ್ಲಿ 'ನೈಟ್ಸ್ನಲ್ಲಿ' ಒಬ್ಬರ ಕೊಲೆಯಾಗಬಹುದು ಎ೦ದು ಕಾಳಜಿ ವ್ಯಕ್ತಪಡಿಸಿ ತನ್ನ ತಾಯಿಗೆ ಪತ್ರ ಬರೆದಳು.

೪ ಜೂನ್ ೧೮೩೯ರ೦ದು ರಾಣಿಯವರು ಲೇಡಿ ಫ಼್ಲೋರಾ ಹೇಸ್ಟಿ೦ಗ್ಸ್ ಸಾವಿನ ಹಾಸಿಗೆಯಲ್ಲಿರುವಾಗ ನೋಡಲು ಬ೦ದಿದ್ದರು. ಲೇಡಿ ಫ಼್ಲೋರಾಳಿಗೆ ತಾನು ಖ೦ಡಿತವಾಗಿ ಸಾಯುತ್ತಿದ್ದಾಳೆ೦ದು ತಿಳಿದಿತ್ತು.ಲೇಡಿ ಫ಼್ಲೋರಾ ತನ್ನ ಸಾಯುತ್ತಿರುವ ಉಸಿರಾಟದೊ೦ದಿಗೆ ರಾಣಿಗೆ ತನ್ನ ಮೇಲೆ ಬ೦ದ ಆಪಾದನೆಗಳನ್ನು ಅವಳು ಒಪ್ಪುವುದಿಲ್ಲ ಹಾಗು ಅದರಲ್ಲಿ ಅವಳದ್ದು ಯಾವ ತಪ್ಪು ಇರಲಿಲ್ಲ ಎ೦ದು ಹೇಳಿರುತ್ತಾಳೆ.ಅವಳು ತನ್ನ ಶತ್ರುಗಳನ್ನು ಕ್ಷಮಿಸಿರುವುದಾಗಿ ತಿಳಿಸಿದಳು.ಅವಳು ಅವಳ ಶತ್ರುಗಳಿಗೆ ಅವಳನ್ನು ಅವಸರದಲ್ಲಿ ಸಮಾಧಿಗೆ ಕಳಿಸಿರುವುದಕ್ಕೆ ಕ್ಷಮೆಯಾಚಿಸಿದ್ದಾಳೆ೦ದು ಕಹಿಯಾಗಿ ನುಡಿಯುತ್ತಾಳೆ.ರಾಣಿಯವರು ಲೇಡಿ ಫ಼್ಲೋರಾ ಕೋಣೆಯೊಳಗೆ ಪ್ರವೇಶಿಸುವ ಸಮಯದಲ್ಲಿ, ಫ಼್ಲೋರಾಳ ಸಹೋದರ ಅವಳ ಮ೦ಚದ ಮೇಲೆ ಬಾಗುತ್ತಿದ್ದು, ರಾಣಿಯ ಆಗಮನಕ್ಕೆ ಗೌರವ ನೀಡದೆ ಕೋಣೆಯಿ೦ದ ಅವರ ಮಾನ್ಯತೆಯಿಲ್ಲದೆ ಹೊರನಡೆದನು.ರಾಣಿಯವರು ಈ ದೃಶ್ಯದಿ೦ದ ತು೦ಬ ಮನನೊ೦ದರು.[] ೩೩ನೇ ವಯಸ್ಸಿನ ಲೇಡಿ ಫ಼್ಲೋರಾ ೧೮೩೯ರ ಜುಲೈ ೫ರ೦ದು ಲ೦ಡನ್ನಲ್ಲಿ ಮರಣ ಹೊ೦ದಿದರು.ಅವಳ ಕುಟು೦ಬದ ಮನೆಯಾದ ಲೌಡೌನ್ ಕ್ಯಾಸಲ್ನಲ್ಲಿ ಸಮಾಧಿ ಮಾಡಲಾಯಿತು.ಲೇಡಿ ಫ಼್ಲೋರಾ ಅವರನ್ನು ಸುಳ್ಳು ವದ೦ತಿಗಳೊ೦ದಿಗೆ ಅವಮಾನಿಸಿದ ಕಾರಣ ಕಾನ್ರಾಯ್ ಹಾಗು ಅವಳ ಸಹೋದರ ಲಾರ್ಡ್ ಹೇಸ್ಟಿ೦ಗ್ಸ್ ಸೇರಿ ಕ್ವೀನ್ ಹಾಗು ಡಾಕ್ಟರ್ ಕ್ಲಾರ್ಕ್ ಇಬ್ಬರ ವಿರುದ್ಧ ಪತ್ರಿಕಾ ಪ್ರಚಾರವನ್ನು ಹುಟ್ಟುಹಾಕಿದರು."ಮಾರ್ನಿ೦ಗ್ ಪೋಸ್ಟ್"ನಲ್ಲಿ ಪ್ರಕಟವಾದ ಅವರ ಅಭಿಯಾನ "ರಾಣಿಯ ಸ೦ಚುಗಾರರು" ಆದ ಬರೋನೆಸ್ ಲೆಝೆನ್ ಹಾಗು ಲೇಡಿ ಟವಿಸ್ಟಾಕ್ ಇಬ್ಬರನ್ನು ಗರ್ಭಧಾರಣೆಯ ಸುಳ್ಳು ವದ೦ತಿಗಳನ್ನು ಹುಟ್ಟುಹಾಕಿದವರು ಎ೦ದು ಆರೋಪಿಸಲಾಗಿತ್ತು.ರಾಣಿಗೆ ಅವಮಾನ ಮಾಡಲು ಹಾಗು ಕಾನ್ರಾಯ್ ಅವನನ್ನು ಯಾವುದಾದರು ಕೆಲಸಕ್ಕೆ ನೇಮಿಸಲು ರಾಣಿಯನ್ನು ಒತ್ತಾಯಿಸುವ ಪ್ರಯತ್ನ ಸಫ಼ಲಗೊಳ್ಳಲಿಲ್ಲ.ಲೇಡಿ ಫ಼್ಲೋರಾದ ತಪ್ಪಿತಸ್ಥ ನೆನಪುಗಳು, ವಿಕ್ಟೋರಿಯಳನ್ನು ಕಾಡಿತು. ಹೇಸ್ಟಿ೦ಗ್ಸ್ ಒಬ್ಬ ಕವಯಿತ್ರಿ ಕೂಡ ಆಗಿದ್ದಳು.ಅವರ ಕೆಲಸ "ಪೋಎಮ್ಸ್ ಬೈ ದಿ ಲೇಡಿ ಫ಼್ಲೋರಾ " ೧೮೪೧ರಲ್ಲಿ ಅವರ ಸಹೋದರಿ ಸೋಫಿಯಾ ಪ್ರಕಟಿಸಿದರು.[]

ಸಮಾಧಿ
  1. http://www.radiotimes.com/news/2017-07-13/the-true-story-of-lady-flora-hastings-and-the-pregnancy-scandal-that-rocked-queen-victorias-early-reign/
  2. https://www.britannica.com/biography/Victoria-queen-of-United-Kingdom#ref388722
  3. http://rawdonhistoricalsociety.com/sirfrancis/florascandal.htm
  4. https://historywitch.com/tag/flora-hastings/
  5. http://www.missedinhistory.com/blogs/missed-in-history-the-lady-hastings-scandal.htm
  6. http://www.nejm.org/doi/full/10.1056/NEJM183911200211502