ಸದಸ್ಯ:Bindu mani r n 1611279/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ನಮ್ಮೂರ ರಾಮಾಯಣ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ರಾಮಾಯಣ

ಈ ಚಿತ್ರದ ಕಥೆ,ನಿರ್ದೇಶನ ಮತ್ತು ಸಂಭಾಷಣೆಯನ್ನು ವೈ.ಟಿ. ನಾಗರಾಜರವರು ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಕೆ.ಬಾಲು ಮೋಹನ್ ಮತ್ತು ಮನು ಪ್ರಕಾಶರವರು ನಿರ್ವಹಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಭಾಷಣೆಯನ್ನು ನಾಯ್ಡು, ರವಿ, ಸುಂದರ್ ರಾಜ್, ರಾಮ್ ಕುಮಾರ್,ಮೋಹನ್,ರತ್ನದೇವ್,ಆರ್.ಗೀತಾ ಮತ್ತು ಆಟೋ ರಾಜರವರು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ "ಯು" ಪ್ರಮಾಣ ಪತ್ರ ಲಭಿಸಿದೆ. ಈ ಚಿತ್ರದಲ್ಲಿ ಬರುವ ಒಟ್ಟು ಪಾತ್ರಗರು ಮೂವತ್ತೆಂಟು. ಈ ಚಿತ್ರವು ಒಟ್ಟು ಹನ್ನೊಂದು ರೀಲುಗಳನ್ನು ಹೊಂದಿದೆ. ಚಿತ್ರದ ಪ್ರಸಾಧನವನ್ನು ಪಿ.ರಾಜು ಮತ್ತು ಷನ್ಮುಗಂರವರು ಮಾಡಿದ್ದಾರೆ. ನಾಟ್ಯದ ರಚನೆಯನ್ನು ತ್ರಿಭುವನ್ ಮತ್ತು ವಿಜಿಯವರು ಮಾಡಿದ್ದಾರೆ. ಈ ಚಿತ್ರದ ರಂಗೀತ ರಚನೆಯನ್ನು ಶ್ರೀ ಚಂದ್ರು,ಸುಭಾಷ್ ಮುಕ್ಕಾಲ್ ನಿರ್ವಹಿಸಿದ್ದಾರೆ. [೧]

ಚಿತ್ರಕಥೆ[ಬದಲಾಯಿಸಿ]

 ವೈ.ಟಿ.ನಾಗರಾಜರವರು ನಿರ್ದೇಶಿಸುವ ಈ ಚಿತ್ರ, ಜನರ ಮನೆಮಾತಾಗಿದೆ.ಮುಖ್ಯಪ್ರಾತ್ರದಲ್ಲಿರುವ ಜಯರಾಮು ಮತ್ತು ಜಯರಾಣಿ ಒಂದು ಹಳ್ಳಿಯಲ್ಲಿ ವಾಸವಾಗಿರುತ್ತಾರೆ.

ಹಳ್ಳಿಯ ಜನರಂತೆ ಕಥಾನಾಯಕ ರೈತನಾಗಿ ಮತ್ತು ಒಳ್ಳೆಯ ನಾಗರಿಕನಾಗಿ ಜೀವನವನ್ನು ನಡೆಸುತ್ತಿರುತ್ತಾನೆ. ಆ ಊರಿನ ಸಾಹುಕಾರನು, ಊರಿನ ಜನರಿಗೆ ಸಾಲ ನೀಡುವ ರೀತಿಯಲ್ಲಿ ಜನರ ಸುಲಿಗೆ ಮಾಮಾಡುತ್ತಿರುತ್ತಾನೆ.ಅವನ ಮಗಳಾದ ಜಯಮಣಿ ಕಥಾನಾಯಕನ ಪೌರುಷ ಮತ್ತು ಒಳ್ಳೆಯತನಕ್ಕೆ ಸೋತು ಅವನನ್ನು ಪ್ರೇಮಿಸುತ್ತಾಳೆ.ಒಗಟ್ಟಿನ ಕುಟುಂಬದಲ್ಲಿ ಬೆಳೆದ ನಾಯಾಕನಿಗೆ, ಕುಟುಂಬದಲ್ಲಿ ಬೆಳೆದ ನಾಯಕನಿಗೆ,ಕುಟುಂಬದಿಂದ ದೂರವಾಗಿ ಬಾಳಲು ಆಸೆಯಿರಲಿಲ್ಲ.ಬಡಕುಟುಂಬದಲ್ಲಿ ಹುಟ್ಟಿದ ನಾಯಕ ಮತ್ತು ಸಾಹುಕಾರನ ಮಗಳಾದ ನಾಯಕಿಗೆ ತಂದೆಯನ್ನು ಒಪ್ಪಿಸುವುದು ಕಷ್ಟವಾಗಿತ್ತು.ಬಡವರನ್ನು ಕಂಡರೆ ಅಸಮಾಧಾನ ಪಡುತ್ತಿದ್ದ ಸಾಹುಕಾರನಿಗೆ ನಾಯಕನನ್ನು ಕಂಡರೆ ಅಗುತ್ತಿರಲ್ಲ.ನಾಯಕ ಮತ್ತು ಮಗಳ ಪ್ರೀತಿಯ ವಿಚಾರವನ್ನು ತಿಳಿದ ಸಾಹುಕಾರ ತುಂಬ ಕೋಪಗೊಳ್ಳುತ್ತಾನೆ.ನಾಯಕನನ್ನು ಕೊಲ್ಲಲು ಜನರನ್ನು ಕಳುಹಿಸುತ್ತಾನೆ.ಊರಿನ ಜನ ನಾಯಕನಿಗೆ ಸಹಾಯ ಮಾಡಿ ಅವನನ್ನು ಆಪತ್ತಿನಿಂದ ಪಾರುಮಾಡುತ್ತಾರೆ.ಹಳ್ಳಿಯ ಜನರ ಒಗಟ್ಟನ್ನು ನೋಡಿ ಸಹುಕಾರ ಬೆರಗಾದನು.[೨]ಹಣಕ್ಕಿಂತ,ಜನರ ವಿಶ್ವಾಸವನ್ನು ಗಳಿಸಿವುದು ಮುಖ್ಯ ಎಂಬುವುದು ಸಾಹುಕಾರನಿಗೆ ಅರಿವಾಯಿತು.ಚಿತ್ರವು ಮನೋರಂಜನೆಯಿಂದ ಕೂಡಿದ್ದು,ಬದುಕಿನ ಮೌಲ್ಯಗಳ ಬಗ್ಗೆ ಮತ್ತು ಬದುಕಿನ ಬಗ್ಗೆ ಆಶಯವನ್ನು ನೀಡುತ್ತದೆ.ಜನರಿಂದ ಅವನು ಮಾಡುತ್ತಿದ್ದ ಮೋಸ ಮತ್ತು ಲೂಟಿಮಾಡಿದ ಹಣಗಳನ್ನು ಅವನು ಜನರಿಗೆ ಹಿಂದಿರುಗಿಸಿದ.ಪ್ರೀತಿ,ವಿಶ್ವಾಸದಿಂದ ಬಾಳುವುದು ಮುಖ್ಯ ಎಂಬುವುದು ಅವನಿಗೆ ಅರಿವಾಯಿತು.ಅವನ ಮಗಳ ಪ್ರೀತಿಯನ್ನು ಒಪ್ಪಿಕೊಂಡು, ಜಯರಾಮುನೊಂದಿಗೆ ಮದುವೆಮಾಡಿಸಲು ಒಪ್ಪಿಕೊಳ್ಳುತ್ತಾನೆ.ಊರಿಗೆ ಮತ್ತು ಊರಿನ ಜನರಿಗೆ ಒಳ್ಳೆಯದನ್ನು ಮಾಡಲು ಪ್ರಾರಂಭಿಸುತ್ತಾರೆ.[೩]

ಜೀವನದ ಆಟ

ನಿರ್ದೇಶಕರ ಬಗ್ಗೆ[ಬದಲಾಯಿಸಿ]

ವೈ.ಟಿ.ನಾಗರಾಜರವರು ಅತ್ಯುತಮ ಚಿತ್ರಗಳನ್ನು ಮತ್ತು ನಾಟಕಗಳನ್ನು ನಿರ್ದೇಶಿಸಿದ್ದಾರೆ.ಇವರು ಪ್ರಮುಖ ನಾಯಕರಾದ ಡಾ.ರಾಜ್ ಕುಮಾರ್,ವಿಷ್ಣುವರ್ಧನ್,ಅನಂತ್ ನಾಗ್ ಮತ್ತು ನಾಯಕಿಯರಾದ ಆರತಿ,ಮಂಜುಳ ಮುಂತಾದವರೊಂದಿಗೆ ಕೆಲಸ ಮಾಡಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಇವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.ಇವರು ನಿರ್ದೇಶಿಸಿದ ಚಿತ್ರಗಳಿಗೆ ಹಲವಾರು ಬಹುಮಾನಗಳನ್ನು ಪಡೆದಿದೆ.ಇವರು ನೀಡಿದ ಎಲ್ಲಾ ಚಿತ್ರಗಳಿಗೆ ಒಳ್ಳೆ ಅಭಿಪ್ರಾಯದೊರಕಿದೆ.ಜನರ ಮೆಚ್ಚುಗೆ ಪಡೆದ ಇವರನ್ನು ಜನರ ನೆಚ್ಚಿನ ನಿರ್ದೇಶಕರೆಂದರೆ ತಪ್ಪಾಗುವುದಿಲ್ಲ.

ಆಶಯ[ಬದಲಾಯಿಸಿ]

ಸಾಹುಕಾರ ಮತ್ತು ಬಡವನ ನಡುವೆ ಇರುವ ಅಂತರ ಸುಳ್ಳು ಎಂದು ಈ ಚಲನಚಿತ್ರ ನಿರೂಪಿಸಿದೆ.ಶ್ರೀಮಂತರ ಧಬಾಳಿಕೆ ಮತ್ತು ಊರಿನ ಜನ ಅದಕ್ಕೆ ಹೇಗೆ ಪ್ರತಿಪಾದಿಸುತ್ತಾರೆ ಎಂದು ಈ ಚಿತ್ರ ತೋರಿಸುತ್ತದೆ. ಜೀವನದಲ್ಲಿ ಕಷ್ಟಗಳು ಸಹಜ. ಅದನ್ನು ದಾಟಿ ಮುನ್ನಡೆಯುವುದು ಹೀಗೆ ಎಂಬುವುದನ್ನು ಈ ಚಿತ್ರ ತೋರಿಸುತ್ತದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಜಯರಾಮು,ಜಯರಾಣಿ,ಕೆ.ಶಿವಣ್ಣ,ಶಾರದ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಚಿತ್ರವು ಹಳ್ಳಿಯಲ್ಲಿ ನಡೆಯುವುದರಿಂದ,ಕಥೆ ರೋಮಾಂಚನವಾಗಿದೆ.

ಹುಟ್ಟು

ಜನರ ಸಹಜ ಜೀವನದ ಘಟನೆಗಳನ್ನು ತುಂಬಾ ಸರಳವಾಗಿ ಅರ್ಥವಗುವ ರೀತಿಯಲ್ಲಿ ತೋರಿಸಿದ್ದಾರೆ. ಒಂದು ಸಣ್ಣ ಘಟನೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆನ್ನು ತರಬಹುದು ಎನ್ನಲು ಈ ಚಿತ್ರ ಉದಾಹರಣೆಯಾಗಿದೆ. ಒಗಟಾಗಿ ಬಾಳಬೇಕು ಮತ್ತು ಅದರ ಪ್ರಾಮುಖ್ಯತೆಯನ್ನು ಚಿತ್ರವು ತಿಳಿಸುತ್ತದೆ. ಹಣದಿಂದ ಜೀವನ ನಡೆಸಲು ಸಾಧವಿಲ್ಲ,ಹಣಕ್ಕಿಂತ ಸಂಬಂಧ ಮುಖ್ಯ-ಈ ಚಿತ್ರದ ಮೂಲ ಆಶಯವಾಗಿದೆ. ಅಂದಿನ ರಾಮಾಯಣನಕ್ಕು ಮತ್ತು ಈ ಊರಿನಲ್ಲಿ ನಡೆಯುವ ಎಲ್ಲಾ ಘಟನೆಗೂ ಸಹ ಇತಿಹಾಸವಾಗ ಬಹುದು ಎಂದು ಈ ಕಥೆ ನಿರೂಪಿಸುತ್ತದೆ.

ಉಲ್ಲೇಖನಗಳು[ಬದಲಾಯಿಸಿ]

  1. http://videos.cinevedika.net/Namoora+Ramayana-%E0%B2%A8%E0%B2%AE%E0%B3%8D%E0%B2%AE%E0%B3%82%E0%B2%B0+%E0%B2%B0%E0%B2%BE%E0%B2%AE%E0%B2%BE%E0%B2%AF%E0%B2%A3++%7CKannada+Full+HD+Movie%7CFEAT.Jayaramu,+Jayarani_movie_Online_sQtyYwbC2Dg.html#.WJSSp9d97IU
  2. https://kannadamoviesinfo.wordpress.com/2014/08/09/nammoora-ramayana-1991/
  3. http://infoos.in/search.php?q=Namoora+Ramayana-%E0%B2%A8%E0%B2%AE%E0%B3%8D%E0%B2%AE%E0%B3%82%E0%B2%B0+%E0%B2%B0%E0%B2%BE%E0%B2%AE%E0%B2%BE%E0%B2%AF%E0%B2%A3++%7CKannada+Full+HD+Movie%7CFEAT.Jayaramu%2C+Jayarani