ಸದಸ್ಯ:BHARATH1998kumar/ನನ್ನ ಪ್ರಯೋಗಪುಟ/2
'ಟೈಂಡಾಲ್ ಪರಿಣಾಮ
ನೀರಿನಲ್ಲಿ ನೀಲಂಬನಗೊಂಡಿರುವ ಹಿಟ್ಟು ನೀಲಿಯಾಗಿ ಕಾಣುತ್ತದೆ, ಏಕೆಂದರೆ ಚದುರಿದ ಬೆಳಕು ಮಾತ್ರ ವೀಕ್ಷನಿಗೆ ಕಾಣುತ್ತದೆ. ಹಿಟ್ಟಿನ ಕಣಗಳಿಂದ ಚದುರಿದ ನೀಲಿ ಬೆಳಕು ಕೆಂಪು ಬಣ್ಣಕ್ಕಿಂತ ಹೆಚ್ಚಾಗಿ ಚದುರುತ್ತದೆ. ಟೈಂಡಾಲ್ ಪರಿಣಾಮಕ್ಕೆ ಇನ್ನೊಂದು ಹೆಸರು ವಿಲ್ಲೀಸ್ ಟೈಂಡಾಲ್ ಚದುರುವಿಕೆ. ಕಲೀಲದಲ್ಲಿರುವ ಕಣಗಳಿಂದ ಚದುರಿದ ಬೆಳಕನ್ನು ಟೈಂಡಾಲ್ ಪರಿಣಾಮ ಎಂದು ಕರೆಯುತ್ತಾರೆ. ೧೯ನೇ ಶತಮಾನದ ಭೌತವಿಜ್ಞಾನಿ ಜಾನ್ ಟೈಂಡಾಲ್ ಇದನ್ನು ಕಂಡು ಹಿಡಿದಿದ್ದರಿಂದ ಈ ಪರಿಣಾಮಕ್ಕೆ ಅವನ ಹೆಸರನ್ನು ಇಡಲಾಗಿದೆ. ಇದು ರ್ಯಾಲೆ ಚದರುವಿಕೆಯನ್ನು ಹೋಲುತ್ತದೆ. ಇದರಲ್ಲಿ ಚದುರಿದ ಬೆಳಕಿನ ತ್ರೀವ್ರತೆಯು ಆವೃತಿಯ ನಾಲ್ಕನೇ ಘಾತಸೂಚಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ನೀಲಿ ಬೆಳಕು ಕೆಂಪು ಬೆಳಕಿಗಿಂತ ಹೆಚ್ಚಾಗಿ ಚದುರುತ್ತದೆ. ದ್ವಿಚಕ್ರ ವಾಹನಗಳಿಂದ ಹೊರ ಹೊಮ್ಮಿದ ಹೊಗೆಯು ಕೆಲವೊಮ್ಮೆ ನೀಲಿ ಬಣ್ಣದಲ್ಲಿ ಕಾಣುತ್ತದೆ. ಇದು ನಿತ್ಯ ಜೀವನದಲ್ಲಿ ನಡೆಯುವ ನೀಲಿ ಬಣ್ಣದ ಚದುರುವಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಇಂಜಿನ್ ಎಣ್ಣೆಯಿಂದ ಸುಟ್ಟ ಕಣಗಳಿಂದ ಬೆಳಕು ಚದುರುತ್ತದೆ.ಟೈಂಡಾಲ್ ಪರಿಣಾಮದಲ್ಲಿ ಉದ್ದ ತರಂಗಾಂತರವನ್ನು ಹೊಂದಿರುವ ಬೆಳಕು ಚಿಕ್ಕ ತರಂಗಾಂತರವನ್ನು ಹೊಂದಿರುವ ಬೆಳಕಿಗಿಂತ ಹೆಚ್ಚು ಪ್ರತಿಫಲಿಸುತ್ತದೆ. ಚದುರಿದ ಬೆಳಕಿನ ಕಣಗಳನ್ನು ಅಡ್ಡ ಸೀಳಿದಾಗ ಅವುಗಳ ಉದ್ದವು ಅಂದಾಜು ೪೦-೯೦೦ ನ್ಯಾನೋ ಮೀಟ್ರ್ಗಳಲ್ಲಿರುತ್ತದೆ. ಇದು ವಿಶೇಷವಾಗಿ ಘರ್ಷಣೆಯ ಮಿಶ್ರಣಗಳಿಗೆ ಮತ್ತು ಉತ್ತಮ ಅಮಾನತ್ತಿಗೆ ಅನ್ವಯಿಸುತ್ತದೆ. ಏರೋಸೋಲ್ಸ್ ಮತ್ತು ಇತರ ಕಲೀಲ ಕಣಗಳ ಗಾತ್ರ ಮತ್ತು ಸಾಂದ್ರತೆಯನ್ನು ಅಳತೆ ಮಾಡಲು ನೆಫೇಲೊಮೀಟರ್ಗಳಲ್ಲಿ ಟೈಂಡಾಲ್ ಪರಿಣಾಮವನ್ನು ಬಳಸುತ್ತಾರೆ. ಒಫೆಲೊಸೆಂಟ್ ಗಾಜಿನ್ನು ಒಂದು ಪಕ್ಕದಿಂದ ನೋಡಿದರೆ ನೀಲಿಯಾಗಿ ಕಾಣುತ್ತದೆ. ಇನ್ನೊಂದು ಪಕ್ಕದಲ್ಲಿ ನೋಡಿದಾಗ ಕಿತ್ತಳೆ ಬಣ್ಣದಲ್ಲಿ ಕಾಣುತ್ತದೆ. ಬೆಳಕನ್ನು ಚದುರಿಸುವ ಕಣಗಳು ಬೆಳಕಿನ ತರಂಗಾಂತರಕ್ಕಿಂತ ತುಂಬಾ ಚಿಕ್ಕದಾಗಿರಬೇಕೆಂಬ ಗಣಿತದ ಸೂತ್ರದಿಂದ ರ್ಯಾಲೆ ಚದುರುವಿಕೆಯನ್ನು ವ್ಯಾಖ್ಯಾನಿಸಲಾಗುತ್ತದೆ. ರ್ಯಾಲೆ ಗಣಿತ ಸೂತ್ರದ ಪ್ರಕಾರ ಬೆಳಕಿನ ಕಣಗಳು ಚದುರಬೇಕಾದರೆ ಕಣಗಳ ಗಾತ್ರ ೪೦ ನ್ಯಾನೋಮೀಟರ್ಗಳಿಗಿಂತ ಕಡಿಮೆ ಇರಬೇಕು. ಕಲೀಲಗಳ ಕಣಗಳು ದೊಡ್ಡದಾಗಿದ್ದು ಬೆಳಕಿನ ತರಂಗಾಂತರದ ಸುತ್ತಮುತ್ತಲಿನ ಗಾತ್ರಕ್ಕೆ ಹತ್ತಿರವಾಗಿರುತ್ತದೆ. ಅಂದರೆ ಕಲೀಲಗಳ ಕಣಗಳ ಚದುರುವಿಕೆಯು ರ್ಯಾಲೆ ಚದುರುವಿಕೆಗಿಂತ ಹೆಚ್ಛು ತೀವ್ರವಾಗಿರುತ್ತವೆ. ಏಕೆಂದರೆ ದೊಡ್ಡ ಕಣಗಳು ಇದರಲ್ಲಿ ಭಾಗವಹಿಸುವುದರಿಂದ ಕಣದ ಗಾತ್ರ ಅಂಶದ ತೀವ್ರತೆಯು ಪ್ರಾಮುಖ್ಯತೆಯನ್ನು ರ್ಯಾಲೆ ಚದುರುವಿಕೆಗೆ ತೀವ್ರತೆಯ ಗಣಿತದ ಹೇಳಿಕೆಯಲ್ಲಿ ಕಾಣಬಹುದಾಗಿದೆ. ಕಲೀಲದ ಕಣಗಳ ಗೋಳಾಕಾರವಾಗಿದ್ದರೆ, ವಿಲ್ಲೀಸ್-ಟೈಂಡಲ್ ಚದುರುವಿಕೆಯನ್ನು ಮೀ ತತ್ವದ ಆಧಾರದಲ್ಲಿ ಗಣಿತದ ರೂಪದಲ್ಲಿ ವಿಶ್ಲೇಷಿಸಬಹುದು. ಮೀ ತತ್ವವು ಕಣಗಳ ಗಾತ್ರವು ಬೆಳಕಿನ ತರಂಗಾಂತರದ ಗಾತ್ರಕ್ಕೆ ಹತ್ತಿರವಾಗಿರುತ್ತದೆ. ಸಂಕೀರ್ಣ ಆಕಾರದ ಕಣಗಳಿಂದ ಬೆಳಕಿನ ಚದುರುವಿಕೆಯು ಟಿ-ಮ್ಯಾಟ್ರಿಕ್ಸ್ ವಿಧಾನದಿಂದ ವಿವರಿಸಲ್ಪಟ್ಟಿದೆ.
ನೀಲಿ ಐರಿಸ್
ನೀಲಿ ಐರಿಸ್ ಕಣ್ಣು ಐರಿಸ್ನ್ ಪಾರದರ್ಶಕ ಪದರದಲ್ಲಿ ಉಂಟಾಗುವ ಟೈಂಡಾಲ್ ಪರಿಣಾಮದಿಂದ ನೀಲಿ ಐರಿಸ್-ಕಣ್ಣು ಉಂಟಾಗುತ್ತದೆ. ಕಂದು ಮತ್ತು ಕಪ್ಪು ಐರಿಸ್ಗಳು ಕೂಡ ಇದೇ ಪದರಗಳನ್ನು ಹೊಂದಿರುತ್ತವೆ, ಆದರೆ ಅವುಗಳಲ್ಲಿ ಮೆಲಾನಿನ್ ವಸ್ತು ಹೆಚ್ಚಾಗಿರುತ್ತದೆ. ಅಂದರೆ ಹಾದುಹೋಗುವ ಬೆಳಕು ವಿಪರೀತ ಹರಡಿರುತ್ತದೆ. ಈ ಅರೆಪಾರದರ್ಶಕ ಪದರಕ್ಕೆ ಪ್ರವೇಶಿಸುವ ಬೆಳಕಿನ ಭಾಗವು ಒಂದು ಚದುರಿದ ಮಾರ್ಗದ ಮೂಲಕ ಪುನಃ ಹೊರ ಹೊಮ್ಮುತ್ತದೆ. ಅಂದರೆ ಮರುಚದುರುವಿಕೆ ಇರುತ್ತದೆ. ಅಂದರೆ ಮುಕ್ತ ಗಾಳಿಗೆ ಬೆಳಕಿನ ಅಲೆಗಳು ಪುನಃ ನಿರ್ದೇಶಿಸಲ್ಪಡುತ್ತವೆ. ಚದುರುವಿಕೆಯು ಕಡಿಮೆ ತರಂಗಾಂತರಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತದೆ. ಮುಂದೆ ತರಂಗಾಂತರಗಳು ನೇರವಾಗಿ ಅರೆಪಾರದರ್ಶಕ ಪದರಗಳ ಮೂಲಕ ಬದಲಾಗದೆ ಇರುವ ಹಾದಿಯಲ್ಲಿ ಹಾದುಹೋಗುತ್ತವೆ. ನಂತರ ಮುಂದಿನ ಪದರವನ್ನು ಐರಿಸ್ನಲ್ಲಿ ಹಿಮ್ಮೆಟ್ಟಿಸುತ್ತದೆ. ಹೀಗೆ ದೀರ್ಘ ತರಂಗಾಂತರಗಳು ಕಡಿಮೆ ತರಂಗಾಂತರಗಳಷ್ಟು ಪ್ರತಿಫಲಿಸುವುದಿಲ್ಲ. ಏಕೆಂದರೆ ಕಡಿಮೆ ತರಂಗಾಂತರ ಹೊಂದಿರುವಂತಹು ನೀಲಿ ಬಣ್ಣದ ತರಂಗಾಂತರಗಳು. ಇವು ಕಣ್ಣಿನಿಂದ ಹೊರಹೊಮ್ಮುವ ಬೆಳಕಿಗೆ ನೀಲಿ ಬಣ್ಣವನ್ನು ನೀಡುತ್ತವೆ. ನೀಲಿ ಐರಿಸ್ ಎಂಬುದು ವರ್ಣದ್ರವ್ಯ ಬಣ್ಣಕ್ಕೆ ವಿರುದ್ದವಾದ ರಚನಾತ್ಮಕ ಬಣ್ಣಕ್ಕೆ ಉದಾಹರಣೆಯಾಗಿದೆ. ಕಣ್ಣುಗಳಲ್ಲಿ ವರ್ಣದ್ರವ್ಯವು ಸಂಪೂರ್ಣ ಅನುಪಸ್ಥಿತಿ ಇದ್ದಾಗ(ಅಲ್ಭಿನಿಸಂ) ಐರಿಸ್ ಮೂಲಕ ರೆಟಿನಾದ ಕೆಂಪು ಗೋಚರತೆಯಿಂದಾಗಿ ಕಣ್ಣು ಕೆಂಪು ಬಣ್ಣದಲ್ಲಿ ಕಾಣುತ್ತದೆ. ಒಂದು ದಿನದಲ್ಲಿ ಆಕಾಶವು ಅತಿಯಾಗಿ ಮೋಡಗಳಿಂದ ಮುಚ್ಚಲ್ಪಟ್ಟಾಗ ಸೂರ್ಯನ ಬೆಳಕು ಮೋಡಗಳ ಗುಡ್ಡದ ಪದರಗಳ ಮೂಲಕ ಹಾದುಹೋಗುತ್ತದೆ. ಇದರಿಂದ ನೆಲದ ಮೇಲೆ ಬೆಳಕು ಚದುರುತ್ತದೆ. ಇದು ಟೈಂಡಾಲ್ನ ಚದುರುವಿಕೆಯನ್ನು ಪ್ರದರ್ಶಿಸುವುದಿಲ್ಲ. ಏಕೆಂದರೆ ಮೋಡದ ಹನಿಗಳು ಬೆಳಕಿನ ಎಲ್ಲಾ ಬಣ್ಣಗಳನ್ನು ಸಮಾನವಾಗಿ ಚದುರಿಸುತ್ತದೆ. ಆದರೆ ಆಕಾಶವು ಮೋಡಗಳಿಂದ ಮುಕ್ತವಾಗಿದ್ದಾಗ ಆಕಾಶವು ಬೆಳಕಿನ ಚದುರುವಿಕೆಯಿಂದಾಗಿ ನೀಲಿ ಬಣ್ಣದ್ದಾಗಿರುತ್ತದೆ. ಆದರೆ ಇದನ್ನು ಟೈಂಡಾಲ್ ಪರಿಣಾಮ ಎಂದು ಕರೆಯುವುದಿಲ್ಲ. ಬದಲಾಗಿ ರೇಲಾಘ್ ಚದುರುವಿಕೆಯಾಗಿರುತ್ತದೆ. ಚದುರುವಿಕೆಯ ಕಣಗಳು ಗಾಳಿಯ ಕಣಗಳಾಗಿದ್ದು ಬೆಳಕಿನ ಕಣಗಳಿಗಿಂತ ಚಿಕ್ಕ ತರಂಗಾಂತರಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ತಪ್ಪಾಗಿ ಗಾಳಿಯ ಧೂಳಿನ ಕಣಗಳಿಂದ ಉಂಟಾಗುವ ಬೆಳಕಿನ ಚದುರುವಿಕೆಗೆ ತಪ್ಪಾಗಿ ಅರ್ಥೈಸುತ್ತಾರೆ.
ಉಲ್ಲೇಖಗಳು
- ↑ https://en.wikipedia.org/wiki/Tyndall_effect
- ↑ https://www.thoughtco.com/definition-of-tyndall-effect-605756
- ↑ https://chem.libretexts.org/Core/Physical_and_Theoretical_Chemistry/Physical_Properties_of_Matter/Solutions_and_Mixtures/Colloid/Tyndall_Effect
- ↑ https://www.quora.com/What-is-the-Tyndall-effect
- ↑ https://socratic.org/questions/what-is-tyndall-effect