ಸದಸ್ಯ:Athashree Poojary03/ಗಲ್ಫಾ ಗೋಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಮಿಲನ್ ಕಟ್ಟಡ ಅಥವಾ ಗಾಲ್ಫಾ ಗೋಪುರವು (ಇಟಾಲಿಯನ್ ಭಾಷೆಯಲ್ಲಿ ಟೊರೆ ಗಾಲ್ಫಾ) ಇಟಲಿ ಮಿಲಾನ್ನಲ್ಲಿರುವ ಒಂದು ಗಗನಚುಂಬಿ ಕಟ್ಟಡ, ನಗರ ಕೇಂದ್ರದ ಉತ್ತರದಲ್ಲಿರುವ ಸೆಂಟ್ರೋ ಡೈರೆಜಿಯೊನೆಲ್ ಡಿ ಮಿಲಾನೊ ಜಿಲ್ಲೆಯಲ್ಲಿದೆ. ಇದನ್ನು ೧೯೫೬ರಲ್ಲಿ ವಾಸ್ತುಶಿಲ್ಪಿ ಮೆಲ್ಚಿಯೋರ್ರೆ ಬೇಗಾ ಅವರು ವಿನ್ಯಾಸಗೊಳಿಸಿದರು ಮತ್ತು ೧೯೫೯ರಲ್ಲಿ ಪೂರ್ಣಗೊಳಿಸಿದರು. ಗೋಪುರವು ಅದರ ಮುಂಭಾಗವನ್ನು ಹೊಂದಿರುವ ಎರಡು ಬೀದಿಗಳಾದ ವಯಾ ಗಾಲ್ವಾನಿ ಮತ್ತು ವಯಾ ಫರಾಗಳ ಹೆಸರುಗಳಿಂದ "ಗಾಲ್ಫಾ" ಎಂಬ ಹೆಸರು ಬಂದಿದೆ. ಈ ಕಟ್ಟಡವು ೧೦೯ ಮೀಟರ್ ಮತ್ತು೩೧ಮಹಡಿಗಳನ್ನು ಹೊಂದಿದ್ದು, ಇನ್ನೂ ೨ ಭೂಗತ ಮಹಡಿಗಳನ್ನು ಹೊಂದಿದೆ ಮತ್ತು ಮಿಲನ್ನ ಹನ್ನೊಂದನೇ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿದೆ.

ಗೋಪುರದ ಒಟ್ಟಾರೆ ವಿನ್ಯಾಸವು ಮುಖ್ಯವಾಗಿ ಅಂತಾರಾಷ್ಟ್ರೀಯ ಶೈಲಿ ವಾಸ್ತುಶಿಲ್ಪವನ್ನು ಆಧರಿಸಿದೆ. ಕಟ್ಟಡವು ಆಯತಾಕಾರವಾಗಿದ್ದು, ಎರಡು ಕೆಳ ಮಹಡಿಗಳು ಮುಖ್ಯ ಭಾಗಕ್ಕಿಂತ ದೊಡ್ಡದಾಗಿವೆ. ಬಲವರ್ಧಿತ ಕಾಂಕ್ರೀಟ್ ಮುಖ್ಯ ರಚನೆಯು ಬಹುತೇಕ ಸಂಪೂರ್ಣವಾಗಿ ಗಾಜು ಮತ್ತು ಅಲ್ಯೂಮಿನಿಯಂ ಮಾಡಿದ ಪರದೆ ಗೋಡೆಗಳಿಂದ ಮರೆಮಾಡಲ್ಪಟ್ಟಿದೆ.

ಈ ಗೋಪುರವನ್ನು ಮೂಲತಃ ೧೯೭೦ರ ದಶಕದ ಮಧ್ಯಭಾಗದಲ್ಲಿ ಸರೋಮ್ ಕಂಪನಿಗಾಗಿ ನಿರ್ಮಿಸಲಾಯಿತು. ಇದನ್ನು ಸರೋಮ್ ಅವರು ಪೊಪೊಲೇರ್ ಡಿ ಮಿಲಾನೊ ಬ್ಯಾಂಕ್ ಗೆ ಮಾಡಿದರು ಮತ್ತು ನಂತರ ಬ್ಯಾಂಕಿನ ಸೇವಾ ಕೇಂದ್ರ ಮತ್ತು ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತು. ೨೦೦೬ರಲ್ಲಿ, ಪೊಪೊಲೇರ್ ಈ ಕಟ್ಟಡವನ್ನು ೪೮ ದಶಲಕ್ಷ ಯುರೋಗಳಿಗೆ ಫೊಂಡಿಯಾರಿಯಾ ಸಾಯಿ ಗುಂಪಿಗೆ ಮಾರಾಟ ಮಾಡಲಾಯಿತು.

[೧] ಮೇ ೨೦೧೨ ರಂದು, ಕಲಾವಿದರಿಗೆ ಸ್ಥಳಾವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ಜನರ ಗುಂಪೊಂದು ಕಟ್ಟಡವನ್ನು ಆಕ್ರಮಿಸಿಕೊಂಡಿತು-ಯೋಜನೆಯ ಹೆಸರು ಮಕಾವೊ ಆಗಿತ್ತು. [೨] ದಿನಗಳ ನಂತರ ಅಧಿಕಾರಿಗಳು ಕಟ್ಟಡವನ್ನು ತೆರವುಗೊಳಿಸಿದರು, ಮಕಾವೊ ಯೋಜನೆಯು ಹಾಗೆಯೇ ಉಳಿಯಿತು, ಮತ್ತು ಮೇಯರ್ ಗಿಯುಲಿಯಾನೊ ಪಿಸಾಪಿಯಾ ಅದಕ್ಕೆ ಮತ್ತೊಂದು ಸ್ಥಾನವನ್ನು ಒದಗಿಸುವ ಭರವಸೆ ನೀಡಿದರು.

[೩] [೪] ಫೊಂಡಿಯಾರಿಯಾ-ಸಾಯಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಮಾ ಗುಂಪು ಯುನಿಪೋಲ್ ಗ್ರೂಪ್ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಅದರ ನವೀಕರಣದ ಬಗ್ಗೆ ಮಿಲನ್ ನಗರ ಮಂಡಳಿಯೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಿತು. ಸ್ಟುಡಿಯೋ ಬಿಜಿ & ಕೆ ಎಂಬ ವಿನ್ಯಾಸ ಸಂಸ್ಥೆಯ ನೇತೃತ್ವದಲ್ಲಿ ೨೦೧೬ರಲ್ಲಿ ಕಾಮಗಾರಿ ಪ್ರಾರಂಭವಾಯಿತು. ಇಟಾಲಿಯನ್ ಡಿಸೈನ್ ನಿಯತಕಾಲಿಕೆ ಅಬಿಟಾರ್ ನೀಡಿದ ಸಂದರ್ಶನದಲ್ಲಿ, ಯೋಜನೆಯ ಪ್ರಮುಖ ವಾಸ್ತುಶಿಲ್ಪಿ ಮಾರಿಸ್ ಕನಾಹ್, ನವೀಕರಿಸಿದ ಕಟ್ಟಡವು "ವಸತಿ, ಹೋಟೆಲ್ ಮತ್ತು ವಾಣಿಜ್ಯ ಕಾರ್ಯಗಳ ಮಿಶ್ರಣವನ್ನು ಒಳಗೊಂಡಿರುತ್ತದೆ" ಎಂದು ಹೇಳಿದರು.”[೫]

ಉಲ್ಲೇಖಗಳು[ಬದಲಾಯಿಸಿ]

  1. "Torre Galfa come il Teatro Valle a Garibaldi scatta l'occupazione". la Repubblica. 5 May 2012. Retrieved 13 May 2012.
  2. "Torre Galfa, all'alba scatta lo sgomberoPisapia: Pronti a concedere l'ex Ansaldo". 15 May 2012.
  3. Articolo "L'edificio sarà riqualificato: Comune e Unipol lavorano insieme al progetto", del 10 gennaio 2014, sul sito del Comune di Milano.
  4. Torre Galfa, parte il progetto di riqualificazione
  5. Bolognesi, Cecilia (July 4, 2017). "The return of a classic". Abitare.it. RCS Mediagroup S.p.A. Retrieved 28 March 2019.

[[ವರ್ಗ:All articles with dead external links]]