ಸದಸ್ಯ:Arpitha kp/sandbox
ಇದು ಒಂದು ತರಕಾರಿ. ಇದು ಆಸ್ಪರೇಸಿ ಕುಟುಂಬಕ್ಕೆ ಸೇರಿದೆ.ಈ ಹಕ್ಕರಿಕೆ ಸೊಪ್ಪು ಅಧೀಕವಾಗಿ ಪೋಷಕಾಂಶಗಳನ್ನು ಹೊಂದಿದೆ.ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇರುವ ಕಾರಣ ಅಭಿವೃದ್ದಿ ಶೀಲ ರಾಷ್ಟ್ರಗಳ ಜನಪ್ರಿಯ ತರಕಾರಿಯಾಗಿದೆ.
ಔಷಧೀಯ ಗುಣಗಳು
[ಬದಲಾಯಿಸಿ]- ಇದರಲ್ಲಿ ಕಬ್ಬಿಣ ಅಂಶ ಹೆಚ್ಚು ಪ್ರಮಾಣದಲ್ಲಿದೆ ಆದರೆ ಬೇಯಿಸಿದಾಗ ಅದು ಸಾಂದ್ರಗೊಳ್ಳುತ್ತದೆ ಆದ ಕಾರಣ ಇದನ್ನು ಯುರೋಪಿಯನ್ನರು ಇದನ್ನು ಬೇಯಿಸದೇ ಉಪಯೋಗಿಸುತ್ತಾರೆ.
- ಹಸಿಯಾಗಿ ಉಪಯೋಗ ಮಾಡುವುದರಿಂದ ಗರ್ಭೀಣಿ ಮತ್ತು ಹಾಲುಣಿಸುವ ಸ್ರೀಯರಿಗೆ ಹೆಚ್ಚು ಅನುಕೂಲ.
- ಪೋಲಿಕ್ ಆಮ್ಲ ರಕ್ತಹೀನತೆಯನ್ನು ತಡೆಗಟ್ಟುತ್ತದೆ.
- ಎದೆ ಬಡಿತದ ಸಮಸ್ಯೆ ಇರುವವರಿಗೆ ತಾಜಾರಸ ಉಪಯೋಗಕಾರಿ.
- ನಿದ್ರಾಹೀನತೆ,ಅಧೀಕ ಕೆಲಸ ಮತ್ತು ಮಾನಸಿಕ ಒತ್ತಡ,ನರ ದೌರ್ಬಲ್ಯವಿರುವವರಿಗೆ ಬೀಜದ ಕಷಾಯ ಸೇವನೆ ಒಳ್ಳೆಯದು.
- ಲೆಟ್ಯೂಸ್ ಎಲೆಗಳನ್ನು ಅರೆದು ಬಿಸಿಮಾದಿ ಹುಣ್ಣುಗಳಿಗೆ ಹಚ್ಚಿದರೆ ನೋವು ನಿವಾರಣೆ ಆಗುತ್ತದೆ.
- ನಿದ್ರಾಹೀನತೆ ಇರುವಾಗ ಬೀಜವನ್ನು ನೀರಿನಲ್ಲಿ ನೆನಸಿ ೨ ಭಾಗ ಮಾಡಿ ಗಸಗಸೆ ಮತ್ತು ಸಕ್ಕರೆ ಸೇರಿಸಿ ಉಪಯೋಗಿಸಬೇಕು.
- ಮಲಬದ್ದತೆ ನಿವಾರಣೆಗೆ ಈ ಸೊಪ್ಪಿನ ರಸ ಅಥವಾ ೬-೭ ಸೌತೆ ಎಲೆ ಉಪಯೋಗಿಸ ಬೇಕು.
- ಎಲೆಗಳನ್ನು ಅರೆದು ತಿಂದರೆ ಹುಣ್ಣು ನಿವಾರಣೆಯಾಗುತ್ತದೆ.
- ಬೀಜವು ಕಫವನ್ನು ಹೊರಹಾಕಿ,ಕೆಮ್ಮನ್ನು ಕಡಿಮೆ ಮಾಡಬಲ್ಲದು.
ತಿಂಡಿ ತಿನಿಸುಗಳಲ್ಲಿ
[ಬದಲಾಯಿಸಿ]ಸೌತೆ,ಕೊತ್ತಂಬರಿ,ಟೊಮ್ಯಾಟೋ ಜತೆಗೆ ತೊಳೆದ ಸೊಪ್ಪನ್ನು ಹೆಚ್ಚಿ ಸಲಾಡ್ ರೂಪದಲ್ಲಿ ಉಪಯೋಗಿಸುತ್ತಾರೆ.
ಬೆಳೆಯುವ ಪ್ರದೇಶ
[ಬದಲಾಯಿಸಿ]ಇದನ್ನು ಲ್ಯಾಟಿನ್ ಅಮೇರಿಕಾ,ಆಫ್ರಿಕಾ,ದಕ್ಷಿಣಾ ಮತ್ತು ಪೂರ್ವ ಏಷ್ಯಾ ಹಾಗೂ ಭಾರತದ ಪೂರ್ವ ರಾಜ್ಯಗಲಳಲ್ಲಿ ಬೆಳೆಯುತ್ತಾರೆ.ಇದು ಸಾಮಾನ್ಯವಾಗಿ ತಂಪಾದ ವಾತವರಣದಲ್ಲಿ ಬೆಳೆಯುವುದರಿಂದ ಜೂನ್ ನಿಂದ ಫೇಬ್ರವರಿವರೆಗೆ ಬೆಳೆಯಬೇಕಾಗುತ್ತದೆ ನೀರು ಸುಲಭವಾಗಿ ಇಂಗಿಹೋಗಬಲ್ಲ ಗೋಡುಮಣ್ಣು ಈ ಬೆಳೆಗೆ ಸೂಕ್ತ.ಮಣ್ಣಿನಲ್ಲಿ ಹೆಚ್ಚು ಹುಳಿಯ ಅಂಶವಿದ್ದರೆ ಇದು ಬೆಳೆಯುವುದಿಲ್ಲ.ಸುಕ್ತವಾದ ಮಣ್ನಿನ ರಸಸಾರ ೫.೮ ರಿಂದ ೬.೬
ಬೀಜ ಮತ್ತು ಬಿತ್ತನೆ
[ಬದಲಾಯಿಸಿ]- ಒಂದು ಎಕ್ಕರೆ ಪ್ರದೇಶಕ್ಕೆ ಬೇಕಾದ ಸಸಿಗಳನ್ನು ಪಡೆದುಕೊಳ್ಳಲು ೭೫೦ ಸೆ.ಮೀ ಉದ್ದ ೧೨೦ ಸೆ.ಮೀ ಅಗಲದ ೨ ಮಡಿಗಳನ್ನು ಸಿದ್ದಪಡಿಸಿ ಪ್ರತಿಯೊಂದಕ್ಕೆ ೨೦ ಕಿ.ಗ್ರಾಂಮ್ ಕಾಂಪೋಸ್ಟ್ ಮತ್ತು ೧/೨ ಕಿ.ಗ್ರಾಂ.೧೫:೧೫:೧೫ ಸಾರಜನಕ:ರಂಜಕ:ಪೊಟ್ಯಾಷ್ ಸತ್ವದ ಸಂಯುಕ್ತ ಗೋಬ್ಬರವನ್ನು ವಿಶ್ರಮಾಡಿ ಎಕರೆಗೆ ೧೦೦ ಗ್ರಾಂ.ಬೀಜ ಬೇಕಾಗುತ್ತದೆ.
- ಬೀಜೋಪಚಾರ ಮಾಡಿದ ಬೀಜವನ್ನು ೭.೫ ಸೆಂ.ಮೀ ಅಂತರದ ಸಾಲುಗಳಲ್ಲಿ ಬಿತ್ತಿ,ನೀರು ಹಾಯಿಸಿ ೫-೬ ವಾರಗಳ ತರುವಾಯ ಸಸಿಗಳನ್ನು ನಾಟಿಗೆ ಬಳಸಬಹುದು.
ತಳಿಗಳು
[ಬದಲಾಯಿಸಿ]- ಎಲೆ ಲೆಟ್ಯುಸ್:ಚೈನೀಸ್ ಯೆಲ್ಲೋ ಮತ್ತು ಸ್ನೋಬೋಲ್ಟ್ ಎಂಬ ವಿಧಗಳಲ್ಲಿ ಬಿಡಿಬಿಡಿಯಾಗಿ ರಸಭರಿತವಾಗಿರುತ್ತದೆ.
- ಗೆಡ್ಡೆಯಾಕಾರದ ಲೆಟ್ಯೂಸ್:ಹಸಿರು ಸಸ್ಯಗಳ ಎಲೆಗಳು ಮಂದ ಮತ್ತು ರಸಪೂರಿತ.
ಇಳುವರಿ ಮತ್ತು ಕೊಯ್ಲು
[ಬದಲಾಯಿಸಿ]ಎಳೆಯಾದ,ಮೃದು ಹಾಗೂ ಗಟ್ಟಿಯಾದ ಲೆಟ್ಯುಸ್ ಎಲೆ ತರಕಾರಿಯಾಗಿ ಪ್ರಯೋಜನಕಾರಿ.ಸಾಮಾನ್ಯವಾಗಿ ಗೆಡ್ದೆ ದಪ್ಪವಾದಾಗ ಕೊಯ್ಲು ಮಾದಬೇಕು.ಪ್ರತಿ ಎಕರೆಗೆ ಸುಮಾರು ೫-೬ ಟನ್ ಸೊಪ್ಪಿನ ಇಳುವರಿ ಸಿಗುತ್ತದೆ. ಇದು ಹಕ್ಕರಿಕೆ,ಸಲಾದಿ ಸೊಪ್ಪು ಮತ್ತು ಸಲಾಟ್ ಎಂದೂ ಕರೆಯುತ್ತಾರೆ.
ಪೋಷಕಾಂಶಗಳು (೧೦೦ ಗ್ರಾಂ ಹಕ್ಕರಿಕೆ ಸೊಪ್ಪಿನಲ್ಲಿ)
[ಬದಲಾಯಿಸಿ]ಪೋಷಕಾಂಶಗಳು | ಪ್ರಮಾಣ |
---|---|
ಪಿಷ್ಠ | ೩ಗ್ರಾಂ |
ಸಸಾರಜನಕ | ೧.೮ಗ್ರಾಂ |
ಕೊಬ್ಬು | ೦.೩ಗ್ರಾಂ |
ಸುಣ್ಣ | ೪೯ ಮಿ.ಗ್ರಾಂ |
ತಾಮ್ರ | ಅಲ್ಪ ಪ್ರಮಾಣ |
ಪೊಟ್ಯಾಷಿಯಂ | ೩೨೯ ಮಿ.ಗ್ರಾಂ |
'ಎ'ಜೀವಸತ್ವ | ೧೧೧೨ ಐ.ಯು. |
'ಬಿ' ಜೀವಸತ್ವ | ೩೮ಮಿ.ಗ್ರಾಂ |
ಫೋಲಿಕ್ ಆಮ್ಲ | ೧೬ ಎಂ.ಸಿ.ಜಿ |
ಆಕ್ಸಾಲಿಕ್ ಆಮ್ಲ | ೧೩.೬ ಎಂ.ಸಿ.ಜಿ |
ಸೋಡಿಯಂ | ೯ ಮಿ.ಗ್ರಾಂ |