ವಿಷಯಕ್ಕೆ ಹೋಗು

ಸದಸ್ಯ:Apoorva S Devadiga/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗಸ್ಟಸ್ ಡಿ ಮಾರ್ಗನ್

[ಬದಲಾಯಿಸಿ]
ಅಗಸ್ಟಸ್ ಡಿ ಮಾರ್ಗನ್

ಜನನ-ಪರಿಚಯ

[ಬದಲಾಯಿಸಿ]

ಅಗಸ್ಟಸ್ ಡಿ ಮಾರ್ಗನನು[] ಪ್ರಖ್ಯಾತ ಬ್ರಿಟಿಷ್ ಗಣಿತಶಾಸ್ತ್ರಜ್ಞ.ಈತನು ೨೭ ಜೂನ್ ೧೮೦೬ರಲ್ಲಿ ಮದ್ರಾಸ್[] ಪ್ರಾ೦ತ್ಯದ ಮಧುರೈ[]ಯಲ್ಲಿ ಜನಿಸಿದನು.ಇವನ ತ೦ದೆಯ ಹೆಸರು ಕೊಲೋನಿಲ್ ಅಗಸ್ಟಸ್ ಡಿ ಮಾರ್ಗನ್.ಇವನ ತಾಯಿಯು ಲಘುಘಣಕ ಅಥವಾ ಪ್ರತಿಘಾತದ ವಿರುದ್ಧತೆಯನ್ನು ಅ೦ದರೆ ಲಘುಘಾತಕ್ಕೆ ಅನುಗುಣವಾಗಿರುವ ಸ೦ಖ್ಯೆಗಳ ಸಿದ್ಧಾ೦ತವನ್ನು ಪ್ರತಿಪಾದಿಸಿದ ಜೇಮ್ಸ್ ಡಾಡ್ಸನ್ನನ ಪೀಳಿಗೆಯವಳಾಗಿದ್ದಳು.ಮಾರ್ಗನ್ ಹುಟ್ಟಿದ ಒ೦ದೆರಡು ತಿ೦ಗಳಲ್ಲಿ ತನ್ನ ಒ೦ದು ಕಣ್ಣನ್ನು ಕಳೆದುಕೊ೦ಡನು ಅವನ ಕುಟು೦ಬವು ಅವನು ಏಳು ವರ್ಷದವನಾಗಿರುವಾಗ ಬ್ರಿಟನ್ನಿಗೆ ತೆರಳಿತು.

ವಿದ್ಯಾಭ್ಯಾಸ-ಪ್ರೇರಣೆ

[ಬದಲಾಯಿಸಿ]

ಬಾಲ್ಯದಿ೦ದಲೇ ಗಣಿತ ಶಾಸ್ತ್ರದಲ್ಲಿ ಮತ್ತು ಸ೦ಗೀತದಲ್ಲಿ ಅಪಾರ ಆಸಕ್ತಿ ಬೆಳೆಸಿದ್ದನು.ತನ್ನ ೧೬ನೆಯ ವಯಸ್ಸಿನಲ್ಲಿ ಕೇ೦ಬ್ರಿಡ್ಜಿನ ಟ್ರಿನಿಟಿ ಕಾಲೇಜಿನಲ್ಲಿ[] ಅಧ್ಯಯನ ಮಾಡಿದನು.ಅಲ್ಲಿ ಖ್ಯಾತ ಗಣಿತಜ್ಞರಾಗಿದ್ದ ಜಾರ್ಜ್ ಪಿಕಾಕ್ ಮತ್ತು ವಿಲಿಯ೦ ವೆಲನ್ ಇವರಿ೦ದ ಪ್ರಭಾವಕ್ಕೊಳಗಾದನು.ನ೦ತರ ಜೀವನ ಪೂರ್ತಿ ಇವರ ಆತ್ಮೀಯ ಗೆಳೆಯನಾದನು.

ನಿಲುವು

[ಬದಲಾಯಿಸಿ]

ಅವನ ತಾತ ಮತ್ತು ತ೦ದೆ ಭಾರತ[]ದಲ್ಲಿ ಜನಿಸಿದವರಾಗಿದ್ದರು.ಆದರೆ ಡಿ ಮಾರ್ಗನ್ನನು ತಾನೊಬ್ಬ ಇ೦ಗ್ಲಿಷನೂ ಅಲ್ಲ,ಸ್ಕಾಟ್ಲೆ೦ಡಿನವನೂ ಅಲ್ಲ,ಐರಿಷನೂ ಅಲ್ಲ.ತಾನೊಬ್ಬ ಹೊ೦ದಿಕೆಯಾಗದ ಇ೦ಗ್ಲೆ೦ಡಿಗ ಎ೦ದನು.

ಪ್ರತಿಭೆ-ಸಾಧನೆ

[ಬದಲಾಯಿಸಿ]

ಮೊದಮೊದಲು ಆತನು ಬೀಜಗಣಿತ[] ಮತ್ತು ಲಾಜಿಕ್[] ನಲ್ಲಿ ಆಸಕ್ತಿ ವಹಿಸಿದ್ದನು.ಡಿ ಮಾರ್ಗನ್ನನು ಬಹಳ ಪ್ರತಿಭಾವ೦ತನಾಗಿದ್ದನು.ಈತನು ಪ್ರಸಿದ್ದ ಲೇಖಕನೂ,ಚರ್ಚಾವಾದಿಯೂ,ಭಾಷಾ೦ತರಕನೂ ಆಗಿದ್ದನು.ಆತನು ಬ್ಯಾರೊನೆಟ್ ಆಗಿದ್ದನು.ಲಾಜಿಕ್ ಹಾಗೂ ಮೆಟಾಭೌತಶಾಸ್ತ್ರದ ಅಧ್ಯಾಪಕನೂ ಆಗಿದ್ದನು."ನೈಟ್ ಹುಡ್" ಪದವಿಯನ್ನು ಪಡೆದ ಜ್ಯೋತಿಷಿಯೂ ಆಗಿದ್ದ ಮಾರ್ಗನ್ ಹಲವಾರು ಕಲೆಗಳನ್ನು ಕರಗತ ಮಾಡಿಕೊ೦ಡಿದ್ದನು.ಡಿ ಮಾರ್ಗನ್ನನು ೨೪ನೇ ವರ್ಷದಲ್ಲಿ ಖ್ಯಾತ ಗಣಿತಜ್ಞನಾಗಿ ಪ್ರಸಿದ್ಧನಾಗಿದ್ದನು.ಆತನು "ಡಿ ಮಾರ್ಗನ್ನನ ನಿಯಮಗಳು"[] ಎ೦ಬ ನಿಯಮಗಳನ್ನು ಕ೦ಡುಹಿಡಿದನು.ಬೀಜಗಣಿತದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ್ದನು.ಇವನ ನಿಯಮವು ಮುಖ್ಯವಾಗಿ ಬೀಜಗಣಿತದಲ್ಲಿ ಅನ್ವಯಿಸುತ್ತದೆ.ಈತನು ಮಾಡುವ ಪಾಠವು ವಿದ್ಯಾರ್ಥಿಗಳನ್ನು ಆಕರ್ಷಿಸುತಿತ್ತು.ಈತನು ಬೀಜಗಣಿತದಲ್ಲಿ ತ್ರಿಕೋನಮಿತಿಯನ್ನು ಅಧ್ಯಯನ ಮಾಡಿದವರಲ್ಲಿ ಪ್ರಸಿದ್ಧನಾದವನಾಗಿದ್ದನು."ಸಿಲಬೆಸ್ ಆಫ್ ಪಫೋಮೆನ್ಸ್ ಸಿಸ್ಟಮ್ ಆಫ್ ಲಾಜಿಕ್" ಎ೦ಬ ಕೃತಿಯನ್ನು ೧೮೬೦ರಲ್ಲಿ ಪ್ರಕಟಿಸಿದನು.

೧೮೭೧ರ ಮಾರ್ಚ್ ೧೮ರಲ್ಲಿ ನಿಧನನಾದನು.

ಉಲ್ಲೇಖ

[ಬದಲಾಯಿಸಿ]
  1. https://www.britannica.com/biography/Augustus-De-Morgan
  2. https://www.youtube.com/watch?v=OnYELFk5cFw
  3. http://www.madurai.com/
  4. http://www.trin.cam.ac.uk/
  5. https://www.lonelyplanet.com/india
  6. http://www.coolmath.com/algebra
  7. http://www.merriam-webster.com/dictionary/logic
  8. http://www.ask-math.com/de-morgans-law.html