ಸದಸ್ಯ:Apoorva18/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮ್ಯಾನುಯೆಲ್ ಆರನ್


ಜನನ[ಬದಲಾಯಿಸಿ]

ಮ್ಯಾನ್ವಾಲ್ ಆರನ್ ಡಿಸೆಂಬರ್ 30, 1935 ರಂದು ಬರ್ಮಾದಲ್ಲಿ ಜನಿಸಿದರು ಆರನ್ ಅವರು ಇಪ್ಪತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ ಮೊದಲ ಭಾರತೀಯ ಚೆಸ್ ಮಾಸ್ಟರ್ ಆಗಿದ್ದರು. ಇವರು ಹುಟ್ಟಿದ್ದು ಟೌಂಗೂ ದಲ್ಲಿ(ಬರ್ಮಾ) ಆದರೆ ಇವರ ತ೦ದೆಯ ಮತ್ತು ತಾಯಿ ಇಬ್ಬರು ಕೂಡ ಭಾರತೀಯರಾಗಿದ್ದರು. ಇವರು "ಚೆಸ್ ಚಾಂಪಿಯನ್ನಾಗಿ " ಹನ್ನೊಂದು ಬಾರಿ (೧೯೫೭-೧೯೮೨) ಗೆದ್ದರು, ಇವರ ನಂತರ, ತಮಿಳುನಾಡು ಭಾರತದ "ಚೆಸ್ ಪವರ್ ಹೌಸ ' ಎ೦ದು ಹೆಸರುವಾಸಿಯಾಯಿತು.

ವಿದ್ಯಾಭ್ಯಾಸ[ಬದಲಾಯಿಸಿ]

ಆರಾನ್ ಅವರು ತಮಿಳುನಾಡಿನ ವಿದ್ಯಾಭ್ಯಾಸ ಮಾಡಿದರು,ಮತ್ತು ಉನ್ನತ ಶಿಕ್ಷಣವನ್ನು ಪ್ರತಿಷ್ಠಿತ ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ "ಬ್ಯಾಚುಲರ್ ಆಫ್ ಸೈನ್ಸ್" ಪೂರ್ಣಗೊಳಿಸಲಾಯಿತು.ಇವರು ಅಲಹಾಬಾದ್ ಕಾಲೇಜಿನ ದಿನಗಳಲ್ಲಿ ಇಂಡಿಯನ್ ಚೆಸ್ ನಿಯಮಗಳು ಅನುಸಾರದಲ್ಲಿ , ತನ್ನ ಮೊದಲ ಚೆಸ್ ಪಂದ್ಯಾವಳಿಯನ್ನು ಆಡಿದರು.ನಂತರ, ಅವರು ಎಂಜಿನಿಯರಿಂಗ್ ಅಧ್ಯಯನ ಮಾಡಲು ಮದ್ರಾಸ್ಗೆ ಸ್ಥಳಾಂತರಗೊಂಡರು ಆದರೆ ಶೀಘ್ರದಲ್ಲೇ ಅವರ ಅಧ್ಯಯನವನ್ನು ಕೈಬಿಟ್ಟು "ಇಂಡಿಯನ್ ಬ್ಯಾಂಕ್" ನಲ್ಲಿ ಅಧಿಕಾರಿಯಾಗಿ ಉದ್ಯೋಗವನ್ನು ಪಡೆದರ, ಮತ್ತು ನಿವೃತ್ತಿಯವರೆಗೂ ಆಟವನ್ನು ಆಡುವ ಎಲ್ಲಾ ಸೌಲಭ್ಯಗಳನ್ನು ಬ್ಯಾಂಕ್ ಒದಗಿಸಿತು.

ಸಾಧಾನೆಗಳು[ಬದಲಾಯಿಸಿ]

  ಇವರು ೧೯೬೦ ರ ದಶಕದಿಂದ ೧೯೮ರ ದಶಕದಲ್ಲಿ ಭಾರತದ ಚತುರ೦ಗದಲ್ಲಿ ಪ್ರಾಬಲ್ಯ ಸಾಧಿಸಿದರು, ೧೯೫೯ ಮತ್ತು ೧೯೮೧ ರ ನಡುವೆ ಒ೦ಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.ಇವರು ಅಂತರರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಆಟಗಾರರಾಗಿದ್ದಾರೆ.ಅಂತರರಾಷ್ಟ್ರೀಯ ವೈವಿಧ್ಯತೆಯನ್ನು ಜನಪ್ರಿಯಗೊಳಿಸುವಲ್ಲಿ ಆರನ್ ಸಹಾಯ ಮಾಡಿದರು ಹೇಗೆ೦ದರೆ ಅನೇಕ ಚೆಸ್ ಗುಂಪುಗಳನ್ನು ರೂಪಿಸುವುದಲ್ಲಿ ಮತ್ತು ಆಟಗಾರರನ್ನು ಇತರ ಔಪಚಾರಿಕ ಚದುರಂಗ ಅಧ್ಯಯನ ಮಾಡಲು ಆಟಗಾರರನ್ನು ಒತ್ತಾಯಿಸಿದರು.
  ಇವರು ಮಂಗೋಲಿಯದ" ಸುಕಿನ್ ಮಾಮೋ "ವಿರುದ್ಧ ಪಶ್ಚಿಮ ಏಷ್ಯಾದ ಝೋನಾಲ್ ಗೆದ್ದರು ನ೦ತರ ಆಸ್ಟ್ರೇಲಿಯಾದ "ಸೆಸಿಲ್ ಪುರ್ಡಿ "ವಿರುದ್ಧದ ಏಷ್ಯನ್-ಆಸ್ಟ್ರೇಲಿಯನ್ ಝೋನಾಲ್ ಫೈನಲ್ ಗೆ ಹೋಗೆದ್ದರು. ೧೯೬೨ ರಲ್ಲಿ ಅರ್ಜುನ ಪ್ರಶಸ್ತಿ ಪಡೆದರು .ಇವರು ಭಾರತದಲ್ಲಿ ಮೊದಲ ಚೆಸ್ ಪ್ರಶಸ್ತಿ ವಿಜೇತರಾಗಿದ್ದರು.ಏಷ್ಯಾದ ಮಟ್ಟದಲ್ಲಿ ಈ ಗೆಲುವುಗಳು ಮೂಲಕ ಇವರು ಇಂಟರ್ಝೋನಾಲ್ಸಗೆ ತಲುಪಿದರು, ಮತ್ತು ೧೯೬೨ ರಲ್ಲಿ ಇವರು ಸ್ಟಾಕ್ಹೋಮ್ ಇಂಟರ್ಝೋನಲ್ನಲ್ಲಿ ಇವರು "ಗ್ರ್ಯಾಂಡ್ ಮಾಸ್ಟರ್ ಲಾಜೊಸ್ ಪೊರ್ಟಿಷ್ ಮತ್ತು ವೂಲ್ಫ್ಗ್ಯಾಂಗ್ ಉಹ್ಲ್ಮನ್" ಅವರ ಮೇಲೆ ಗೆದ್ದರು ಮತ್ತು ಇವರು ಚೆಸ್ ಒಲಿಂಪಿಯಾಡ ನಲ್ಲಿ ಭಾರತೀಯ ತ೦ಡ ಜೋತ್ತೆ ಮೂರು ಬಾರಿ ಆಡಿದರು. ಇವರು "ಲೀಪ್ಜಿಗ್ ೧೯೬೦, ಮತ್ತು ವರ್ನಾ ೧೯೬೨" ನಲ್ಲಿ ಭಾರತೀಯ ತಂಡಕ್ಕೆ ನಾಯಕತ್ವ ವಹಿಸಿದರು.ಇವರು ದುಬೈ ಒಲಿಂಪಿಯಾಡ್ ೧೯೮೬ ರಲ್ಲಿ ಲೇಖಕರಾಗಿದ್ದಾರೆ ಮತ್ತು "ದಿ ಹಿಂದೂ" ಪತ್ರಿಕೆಯ ಪತ್ರಕರ್ತರಾಗಿದ್ದಾರೆ. ಇವರ ಮಗ," ಅರ್ವಿನ್" ಕೂಡ ಒಬ್ಬ ಪ್ರಸಿದ್ಧ ಪತ್ರಕರ್ತ.

ಕೊಡುಗೆಗಳು[ಬದಲಾಯಿಸಿ]

  ಕನಿಷ್ಠ ಚೆಸ್ ಸಂಸ್ಕೃತಿಯ ಪರಿಸರದಲ್ಲಿ ಹೊರಹೊಮ್ಮಿದರು , ಆರನ್ ಭಾರತದ ಚೆಸ್ ಜಾಗೃತಿ ಬೆಳವಣಿಗೆಗೆ ಬಹಳ ಸಂವೇದನಾಶೀಲನಾಗಿರುತ್ತಾನೆ. "ತಮಿಳುನಾಡು ಚೆಸ್ ಅಸೋಸಿಯೇಷನ್ " ಕಾರ್ಯದರ್ಶಿಯಾಗಿ ಚೆಸ್ ಅನ್ನು ಮತ್ತಷ್ಟು ಮುಂದುವರೆಸಿದರು ಮತ್ತು ಅಖಿಲ" ಭಾರತ ಚೆಸ್ ಫೆಡರೇಶನ್ನ" ಅಧ್ಯಕ್ಷರಾಗಿದ್ದರು. ೧೯೭೮ ರಲ್ಲಿ ಭಾರತಕ್ಕೆ ಎರಡನೆಯ ಅಂತರಾಷ್ಟ್ರೀಯ ಮಾಸ್ಟರ್, ವಿ. ರವಿ ಮತ್ತು ೧೯೮೮ ರಲ್ಲಿ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಪಡೆದು ಕೊಳ್ಳಲು ಇದು ೧೭ ವರ್ಷಗಳನ್ನು ತೆಗೆದುಕೊಂಡಿತು.
  ಭಾರತದಲ್ಲಿ ಚದರ೦ಗ ಬೆಳವಣಿಗೆಗೆ ಅವರು ಅಗಾಧ ಕೊಡುಗೆ ನೀಡಿದರು; ಇವರ ಪ್ರಮುಖ ಪಾತ್ರಗಳು - ಆಟಗಾರ, ತೀರ್ಪುಗಾರ, ಪತ್ರಕರ್ತ, ಸಂಘಟಕ ಮತ್ತು ನಿರ್ವಾಹಕರು.ಅವರು 1983 ರಲ್ಲಿ ಸ್ಥಾಪಿಸಿದ ಮಾಸಿಕ ಚೆಸ್ ಪತ್ರಿಕೆಯ "ಚೆಸ್ ಮೇಟ್" ಅನ್ನು ಸಂಪಾದಿಸುತ್ತಾರೆ ಮತ್ತು "ಎ.ಐ.ಅಫ್.ಸಿ" ಕ್ರಾನಿಕಲ್ಗಾಗಿ ಕೊಡುಗೆ ನೀಡುತ್ತಾರೆ. ಇವರು ಭಾರತದ ಅನೇಕ ಪತ್ರಿಕೆಗಳಿಗಾಗಿ ಚೆಸ್ ವಿಶಯದ ಮೇಲೆ ಅನೇಕ ಪತ್ರಿಕೆಗಳಲ್ಲಿ ಬರೆದ್ದಿದ್ದರು .ಅವರು 82 ವರ್ಷ ವಯಸ್ಸಿನವರಾಗಿದ್ದರೂ ಕೂಡ ಚದರಂಗ ಅವರ ಉತ್ಸಾಹ ಇನ್ನೂ ಹಾಗೇ ಉಳಿದಿದೆ, ಇಂದಿಗೂ ಸಹ ಭಾರತೀಯ ಚೆಸ್ ವಲಯಗಳಲ್ಲಿ ಅವರು ಸಕ್ರಿಯರಾಗಿದ್ದಾರೆ

ಉಲ್ಲೇಖಗಳು[ಬದಲಾಯಿಸಿ]

[೧]

[೨] [೩] [೪] [೫]

 1. https://en.wikipedia.org/wiki/Manuel_Aaron
 2. www.thechesspedia.com/aaron-manual/
 3. www.iloveindia.com › ... › Chess › Players
 4. https://www.thehindu.com › Sport › Other Sports
 5. https://www.linkedin.com/in/manuelaaronmiller