ಸದಸ್ಯ:Anushashalet1940550/ನನ್ನ ಪ್ರಯೋಗಪುಟ
ನನ್ನ ಹೆಸರು ಅನುಷಾ ಶಾಲೆಟ್ ಡಿ ಸೋಜಾ. ನಾನು ಹುಟ್ಟಿದ್ದು ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನಲ್ಲಿ 31/05/2001. ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಕೊಡಗು ಜಿಲ್ಲೆಯ ಪ್ರವಾಸಿ ಸ್ಥಳಗಳನ್ನುಭೇಟಿ ನೀಡಿದಾಗ ನನ ಗೆ ತು೦ಬಾ ಆನಂದವಾಯಿತು. ನಾನು ಕ್ರೈಸ್ಟ್ ಶಾಲೆಯಲ್ಲಿ 1 ರಿಂದ 10 ನೇ ತರಗತಿಯವರೆಗೆ ಅಧ್ಯಯನ ಮಾಡಿ ,ಜ್ಯೋತಿ ನಿವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿದೆ. ನಾನು 7ನೇ ತರಗತಿಯಲ್ಲಿದ್ದಾಗ ಮೈಸೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ಭೇಟಿ ನೀಡಿದ್ದೆನು . ಮೈಸೊರಿನ ಸುಂದರವಾದ ರಾಜರ ಅರಮನೆ, ಪಕ್ಷಿ ಸಂಕುಲ, ಮೃಗಾಲಯ, ಚಾಮುಂಡಿ ಬೆಟ್ಟ, ಬೃಂದಾವನ್ ಉದ್ಯಾನ, ಕೃಷ್ಣರಾಜ ಅಣೆಕಟ್ಟು, ದರಿಯಾ ಡೌಲಾತ್, ಇತ್ಯಾದಿ ...........ಪ್ರೇಕ್ಷಣಿಯ ಸ್ಥಳಗಳು. ಮೈಸೊರಿನ ಮೃಗಾಲಯದಲ್ಲಿ ವಿಭಿನ್ನ ರೀತಿಯ ಪ್ರಾಣಿಗಳನ್ನು ನೋಡಿದೆನು. ರಂಗನತಿಟ್ಟುವಿನಲ್ಲಿ ವಿವಿಧ ಜಾತಿಯ ಪಕ್ಷಿಗಳ ಬಣ್ಣ, ಗಾತ್ರ, ಆಕಾರ ಮತ್ತು ಚಲನವಲನಗಳನ್ನು ನೋಡಿ ಆನಂದಿಸಿ ಮಾಹಿತಿ ಸಂಗ್ರಹಿಸಿದೆನು.
ಮಡಿಕೇರಿ
ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ. ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ, ಅದೇ ರೀತಿ ರಾಜಾಸೀಟ್, ಅರಮನೆ, ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣ.
ಅಬ್ಬಿಫಾಲ್ಸ್
[ಬದಲಾಯಿಸಿ]ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ 3 ಜಲಪಾತವನ್ನು ನೋಡಬಹುದು ಸೋಮವರಪೇಟ್ ನಲ್ಲಿ ಮಳಲಿ ಜಲಪಾತ ಮಡಿಕೇರಿಯ ಆಬ್ಬಿಫಾಲ್ಸ್
ವಿರಾಜಪೇಟೆ ಯಲ್ಲಿ ಚೇಲವರ ಫಾಲ್ಸ್ .ಈ 3 ಫಾಲ್ಸ್ ತನ್ನದೇ ಆದ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಅಭಿ ಫಾಲ್ಸ್ ಹಾಗೂ ಮಾಡಿಕೇರಿಯನ್ನು ನೋಡಬೇಕಾದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ನೋಡಬೇಕು ತಂಪದ ಗಾಳಿ ಮಂಜಿನ ಹನಿ ವೈವಿಧ್ಯಮಯ ಪ್ರಕೃತಿಯಿಂದ ಕುಡಿರುತಡೆ ಅಭಿ ಫಾಲ್ಸ್ ನೋಡಲು ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದುಹೋಗುತ್ತಾರೆ
- ಸುಮಾರು ಮುನ್ನೂರ ಮೂವತ್ತು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಇದು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. 1681ರಲ್ಲಿ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು[೬].
- ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, "ಜಾಫರಾಬಾದ್" ಎಂಬ ಹೆಸರಿಟ್ಟನು. ಆ ಬಳಿಕ 1734ರಲ್ಲಿ ಇದು ಬ್ರ್ರಿಟಿಷರ ವಶವಾಯಿತು. ಮಡಿಕೇರಿ ಪಟ್ಟಣದ ನಿರ್ಮಾತೃ ಹಾಲೇರಿ ವಂಶದ ಮೂರನೇ ದೊರೆ ಮುದ್ದುರಾಜ. ಈತ ಕ್ರಿ.ಶ ೧೬೮೧ರಲ್ಲಿ ಹಾವೇರಿಯಿಂದ ತನ್ನ ರಾಜಧಾನಿಯನ್ ಇಲ್ಲಿಗೆ ಸ್ಥಳಾಂತರಿಸಿಕೊಂಡು ಕೊಡಗನ್ನು ಆಳತೊಡಗಿದ.
- ಅಬ್ಬಿಫಾಲ್ಸ್,ಓಂಕಾರೇಶ್ವರ ದೇವಸ್ಥಾನ
- ದುಬಾರೆ ಅರಣ್ಯ
- ನಾಗರ ಹೊಳೆ
- ಕಾವೇರಿ ನಿಸರ್ಗಧಾಮ
- ಬ್ರಹ್ಮಗಿರಿ ಬೆಟ್ಟ
ರಾಜಾಸೀಟ್
ಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿರುವ ರಾಜಾಸೀಟ್ ಒಂದು ಪ್ರವಾಸಿ ತಾಣ. ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ತಾಣವಾಗಿದೆ.
ಮೈಸೂರು ಅರಮನೆ
ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ"ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು.
ಚರಿತ್ರೆ
[ಬದಲಾಯಿಸಿ]- 1799ರಲ್ಲಿ ಟಿಪ್ಪು ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತಗೊಳ್ಳುತ್ತಾರೆ. ಆಗಿನ್ನೂ 6 ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ 1897ರಲ್ಲಿ ಹಳೆಯ ಮರದ ಅರಮನೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಕಿ ಬಿದ್ದು, ಇಡೀ ಅರಮನೆ ಸುಟ್ಟು ಹೋಯಿತು. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ.
- ಮೈಸೂರು ಸಂಸ್ಥಾನ ೧೩೯೯ ರಿಂದ ೧೯೪೭ ರಲ್ಲ ಭಾರತದ ಸ್ವಾತಂತ್ರ್ಯದ ವರೆಗೂ 'ಒಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು (ಮಧ್ಯದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತವನ್ನು ಬಿಟ್ಟು). ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು.
- ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು.
- ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿತು.
ವಾಸ್ತುಶಿಲ್ಪ
[ಬದಲಾಯಿಸಿ]ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ. ಬಂಗಾರದ ಗುಡಿಯಂತಿದೆ.
ಸಂತ ಫಿಲೋಮಿನಾ ಚರ್ಚ್
೧೯೬ ವರ್ಷಗಳ ಇತಿಹಾಸವಿರುವ ಸಂತ ಫಿಲೋಮಿನ ಚರ್ಚ್ ನ ಸ್ಥಾಪನೆಗೆ ರೂಪರೇಷೆಗಳನ್ನು ಹಾಕಿಕೊಟ್ಟವರು, ಸ್ವಾಮಿ ಎಫ್. ಜಾರಿಗೆ ಎಂಬ ಫ್ರೆಂಚ್ ಮಿಶನರಿ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ದೇವಾಲಯವು ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಭಾರತದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿರುವ ಈ ದೇವಾಲಯವು ಗೋಥಿಕ್ ಶೈಲಿಯಲ್ಲಿದೆ.
ದೇವಸ್ಥಾನಗಳು
[ಬದಲಾಯಿಸಿ]ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು:
೧.ಸೋಮೇಶ್ವರನ ದೇವಸ್ಥಾನ
- ಲಕ್ಶ್ಮೀರಮಣ ದೇವಸ್ಥಾನ
- ಆಂಜನೇಯಸ್ವಾಮಿ ದೇವಸ್ಥಾನ.
ಕೆ.ಆರ್.ಎಸ್ ಅಣೆಕಟ್ಟು
- ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಮೈಸೂರಿನ ದಿವಾನರಾಗಿದ್ದವಿಶ್ವೇಶ್ವರಯ್ಯ ಈ ಅಣೆಕಟ್ಟನ್ನು ಕಟ್ಟಿಸಿದ ಇಂಜಿನಿಯರರಲ್ಲಿ ಪ್ರಮುಖರು.
- ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ.
- ಅದರಲ್ಲಿ ಮುಖ್ಯವಾಗಿದ್ದು ವಿಶ್ವೇಶ್ವರಯ್ಯ ನಾಲೆ ೪೫ ಕಿ.ಮೀ.ನಷ್ಟಿದೆ. ೩೨ ಕಿ.ಮೀ.ಗಳ ಬಲದಂಡೆ ಮತ್ತು ೨೧ ಕಿ.ಮೀ.ನ ಎಡದಂಡೆ ನಾಲೆ ಇದೆ. ೧೨೪ ಅಡಿ ನೀರು ನಿಲ್ಲಿಸಲು ೧೩೦ ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಇಷ್ಟೊಂದು ಎತ್ತರದ ಅಣೆಕಟ್ಟಿಗಾಗಿ ೧೧೧ ಅಡಿ ಆಳದಲ್ಲಿ ತಳಪಾಯ ಹಾಕಲಾಗಿದೆ. ಅಂದರೆ ಈ ಅಣೆಕಟ್ಟು ೪೧೦೦ ಚದರ ಮೈಲಿಯಷ್ಟು ಜಲಾನಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ.
ಬೃಂದಾವನ ಉದ್ಯಾನವನ
[ಬದಲಾಯಿಸಿ]- ಬೃಂದಾವನ ಉದ್ಯಾನವನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆ. ಇದಲ್ಲದೆ ಅನೇಕ ಜೀವಶಾಸ್ತ ಸಂಶೋಧನಾ ಇಲಾಖೆಗಳು ಇಲ್ಲಿಯೇ ಕೆಲಸ ನಡೆಸುತ್ತವೆ. ಪ್ರವಾಸಿಗಳಿಗೆ ಒಂದು ತಂಗುದಾಣವನ್ನು ಬೃಂದಾವನ ಉದ್ಯಾನದಲ್ಲಿ ಕಟ್ಟಿಸಲಾಗಿದೆ.
- ಹೀಗೆ ಬೃಹದಾಕಾರವಾಗಿ ಬೆಳೆದು ನಿಂತ ಕನ್ನಂಬಾಡಿ ಕಟ್ಟೆ ೧.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಬರಡಾಗಬೇಕಾಗ್ದಿದ ಈ ಪ್ರದೇಶದ್ಲಲಿ ಹಸಿರು ನಳನಳಿಸುವಂತೆ ಮಾಡಿದೆ. ಈ ಅಣೆಕಟ್ಟು ಲಕ್ಷಾಂತರ ರೈತರ ಪಾಲಿಗೆ ದೇವತೆಯಾದರೂ ಪ್ರವಾಸಿಗರು ಮಾತ್ರ ಇಲ್ಲಿಗೆ ಬರತೊಡಗಿದ್ದು ಇಲ್ಲಿ ಬೃಂದಾವನ ಉದ್ಯಾನ ನಿರ್ಮಾಣವಾದ ಮೇಲೆ.
- ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನ್ಲಲಿ ಕಣ್ಮನ ಸೆಲೆಯುತ್ತವೆ. ಮೈಸೂರಿಗೆ ಬಂದವರೆಲ್ಲರು ಕೃಷ್ಣರಾಜ ಸಾಗರಕ್ಕೆ ಹೋಗಲೇ ಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ೭೫ರ ಹರೆಯದ ಕನ್ನಂಬಾಡಿ ಕಟ್ಟೆ ನಮ್ಮ ರಾಜ್ಯದ ಹಾಗೂ ದೇಶದ ಇತರ ಅಣೆಕಟ್ಟುಗಳು ನಾಚುವಂತೆ ಎದೆಯುಬ್ಬಿಸಿ ನಿಂತಿದೆ .
ಕೆ.ಆರ್.ಎಸ್.ಅಣೆಕಟ್ಟೆಯ ವಿವರ
ವಿಷಯ ವಿವರ[೨] ಅಣೆಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು 1910 ,ಕಾಮಗಾರಿ ಪ್ರಾರಂಭ 1911 ,ಕಾಮಗಾರಿ ಪೂರ್ಣಗೊಂಡಿದ್ದು 1932 ,ಜಲಾನಯನ ಪ್ರದೇಶದ ವಿಸ್ತೀರ್ಣ 14100 ಬ್ಮೈಲಿಗಳು .ಅಣೆಕಟ್ಟೆ ಬಳಿನದಿಯ ಅಗಲ 910ಅಡಿಗಳು ,ಅಣೆಕಟ್ಟೆ ಏರಿಯ ಉದ್ದ 8800 ಅಡಿಗಳು, ಅಣೆಕಟ್ಟೆಯ ಪರಮಾವಧಿ ಎತ್ತರ 140 ಅಡಿಗಳು ,ಅಣೆಕಟ್ಟೆಯ ತಳಪಾಯದ ಅಗಲ 111 ಅಡಿಗಳು, ಜಲಾಶಯದ ಆಳ 124 ಅಡಿಗಳು. ಜಲಾಶಯದ ನೀರು ಹರವಿನ ವಿಸ್ತೀರ್ಣ 124 ಅಡಿಗಳು ಗರಿಷ್ಟ ಮಟ್ಟದಲ್ಲಿ ನೀರು ನಿಲ್ಲುವ ಉದ್ದ 25 ಮೈಲಿಗಳು ಜಲಾಶಯದ ನೀರುಸಂಗ್ರಹ ಸಾಮರ್ಥೈ 4,83,350ಲಕ್ಷ ಘನ ಅಡಿಗಳು.
ಶ್ರೀ ಚಾಮರಾಜೇಂದ್ರ ಮೃಗಾಲಯ
ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು. ೧೮೯೨ ರಾಜವಂಶದ ಆಶ್ರಯದಲ್ಲಿ ಸ್ಥಾಪಿತವಾದ ಕಾರಣ, ವಿಶ್ವದ ಪ್ರಾಚೀನ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲೂ ಸಹ ಇದು ಸೇರುತ್ತದೆ. ಕೇವಲ ಪ್ರವೇಶ ಶುಲ್ಕದ ಆಧಾರದ ಮೇಲೆ ನಡೆಯುತ್ತಿದ್ದ ಈ ಮೃಗಾಲಯ ಸಂಸ್ಥೆ ೨೦೦೦ರಲ್ಲಿ ಪ್ರಾಣಿ ಪ್ರಿಯರಿಂದ ದತ್ತು ಸ್ವೀಕಾರವನ್ನು ಪ್ರಾರಂಭಿಸಿದ್ದು, ಅಭಿವೃದ್ದಿಯ ಹಂತ ಹೊಂದಿದೆ. ಮೈಸೂರು ಮೃಗಾಲಯ ಮೊದಲು ೧೦.೯ ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡು ೧೯೦೭ರಲ್ಲಿ ಮಾತ್ತೊಂದು ೬.೨೨ ಎಕರೆ ಪ್ರದೇಶ ಸೇರ್ಪದೆಗೊಂಡಿತು. ಮುಂದೆ ೪೫ ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ಆ ನಂತರ ಡಾ.ಎಂ.ಹೆಚ್.ಮರಿಗೌಡರ ಪ್ರಯತ್ನದಿಂದ ಮುಂದೆ ೮೦.೧೩ ಎಕರೆ ಪ್ರದೇಶ ವ್ಯಾಪಿಸಿತು. ಕರ್ನಾಟಕ ಸರ್ಕರದವು ಕಾರಂಜಿ ಕೆರೆಯ ೭೭.೦೨ ಎಕರೆ ಪ್ರದೇಶವು ೧೯೭೬ರಲ್ಲಿ ಸೇರ್ಪಡೆ ಗೊಳಿಸಿದರು.
ಬೆಂಗಳೂರಿನಲ್ಲಿರುವ ಪ್ರಖ್ಯಾತ ಸ್ಥಳಗಳಾದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಹೈದರ್ ಅಲಿ ನಿರ್ಮಿಸಿದ ಲಾಲ್‌ಬಾಗ್ ಉದ್ಯಾನವನ,ಕಬ್ಬನ್ ಉದ್ಯಾನವನ ,ವಿಶ್ವೇಶ್ವರಯ್ಯ ಮ್ಯೂಸಿಯಂ, ವೆಂಕಟಪ್ಪ ಚಿತ್ರಕಲಾ ಗ್ಯಾಲರಿ, ಜವಾಹರಲಾಲ್ ನೆಹರು ಪ್ಲಾನಟೋರಿಯಂ ಇತ್ಯಾದಿ ........ವೀಕ್ಷಿಸಿದೆನು. ಹೈದರ್ ಅಲಿ ನಿರ್ಮಿಸಿದ ಲಾಲ್‌ಬಾಗ್ ಉದ್ಯಾನವನದಲ್ಲಿ ವಿವಿಧ ಜಾತಿಯ ಅಪರೂಪದ ಮರಗಳನ್ನು ನೊಡಿ ಅದರ ಬಗ್ಗೆ ಮಹಿತಿಯನ್ನು ಸಂಗ್ರಹಿಸಿದೆನು . ಪ್ರತಿ ವರ್ಷ ಜನವರಿ 26 ಮತ್ತು ಆಗಸ್ಟ್ 15 ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವನ್ನು ನೋಡಲು ಎಲ್ಲೆಡೆಯಿಂದ ಜನರು ಬರುತ್ತಾರೆ.ಇದು ಬೆಂಗಳೂರಿನಲ್ಲಿ ನಡೆಯುವ ಅತಿದೊಡ್ಡ ಫಲಪುಷ್ಪ ಪ್ರದರ್ಶನವಾಗಿದೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
[ಬದಲಾಯಿಸಿ]ಬನ್ನೇರುಘಟ್ಟ. ರಾಷ್ಟ್ರೀಯ ಉದ್ಯಾನವನ ಭಾರತದ ಕರ್ನಾಟಕ ದಲ್ಲಿರುವ ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. 25,000 acre (104.27 km²)ಗಳ ಝೂವಲಾಜಿಕಲ್ ಪಾರ್ಕ್ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾ'ಗೆ ಸೇರಿದೆ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ಕಟ್ಟಡವು ನಿಂತಿದೆ. ಕಬ್ಬನ್ ಉದ್ಯಾನವನ್ನು ಸೇರಿದಂತಯೇ ಇದೆ.ವಿಶ್ವೇಶ್ವರಯ್ಯ ರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ೧೯೬೨ ಇಸವಿಯಲ್ಲಿ ಸ್ಥಾಪಿಸಲಾಗಿದೆ. ಅಂದಿನಿಂದ ಇಲ್ಲಿಯ ವರಗೆ ಈ ಸಂಗ್ರಹಾಲಯವು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರುಷ ಈ ಸಂಗ್ರಹಾಲಯಕ್ಕೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಹೇಳಲಾಗಿದೆ.
ಈ ಕಟ್ಟಡವು, ಕಬ್ಬನ್ ಪಾರ್ಕ್ ನ ೪೦೦೦ ಮೀ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಯಿತು. ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್ಗಳನ್ನು, ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ರವರು ೧೪ನೇ ಜುಲೈ ೧೯೬೨ ರಲ್ಲಿ ಪ್ರಾರಂಭಿಸಲಾಯಿತು. ಸಂಗ್ರಹಾಲಯದ ಮೊದಲ ಗ್ಯಾಲರಿ 'ಎಲೆಕ್ಟ್ರಿಸಿಟಿ' ವಿಷಯದ ಮೇಲೆ ಸಾರ್ವಜನಿಕರಿಗೆ ೨೭ ಜುಲೈ ೧೯೬೫ ರಂದು ತೆರೆಯಲಾಯಿತು.
ನಾನು 8 ನೇ ತರಗತಿಯಲ್ಲಿದ್ದಾಗ ಚಿತ್ರಕಲೆಯಲ್ಲಿ ನಾನು ಪ್ರಶಸ್ತಿಯನ್ನು ಪಡೆದೆ ಆ ಗೆಲುವು ಕಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನಗೆ ಪ್ರೇರಣೆ ನೀಡಿತು. ನಾನು10 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವಾಗ ಶಾಲಾ ಸಂಚಿಕೆಯಲ್ಲಿ ನಾನು ಪ್ರಕಟಿಸಿದ ಲೇಖನ ಕ್ಕೆ ನನಗೆ ಅತ್ಯುತ್ತಮ ಲೇಖನ ಪ್ರಶಸ್ತಿ ನೀಡಲಾಗಿದೆ . ನಾವು 10 ನೇ ತರಗತಿಯಲ್ಲಿದ್ದಾಗ ನಾವು ಪ್ರವಾಸಕ್ಕೆ ಹೋಗಿದ್ದೆವು, ಶಾಲೆಯಿಂದ ಕೋಲ್ಕತಾ , ಡರ್ಜಲೀಂಗ್, ಸಿಕ್ಕಿಂ, ನಾಥುಲಾ ಪಾಸ್ [ಇಂಡೋ ಚೀನಾ ಗಡಿ] .ಇಂಡೋ ಚೀನಾ ಗಡಿಯಲ್ಲಿ ನಮ್ಮ ದೇಶವನ್ನು ಸುರಕ್ಷಿತವಾಗಿರಿಸಲು ಸೈನಿಕರು ಎಷ್ಟು ಶ್ರಮಿಸುತ್ತಿದ್ದಾರೆ ಎ೦ದು ನಾವು ತಿಳಿದುಕೊಂಡೆವು.ಈ ಪ್ರವಾಸವು ಸ್ಪೂರ್ತಿದಾಯಕ ಪ್ರವಾಸವಾಗಿತ್ತು ಏಕೆಂದರೆ ದೂರದ ಹಳ್ಳಿಯ ಜನರ ಜೀವನವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು, ಜನರು ಹಣ ಸಂಪಾದಿಸಿ ಜೀವನವನ್ನು ನಡೆಸಲು, ಮಕ್ಕಳಿಗೆ ಶಿಕ್ಷಣ ನೀಡಲು ತುಂಬಾ ಕಷ್ಟಎ೦ದು ನಾವು ತಿಳಿದುಕೊಂಡೆವು, ಸಂಸ್ಕೃತಿ, ಆಹಾರ ಕ್ಯುಸಿನ್ ಇತ್ಯಾದಿ ... ನನಗೆ ಈ ಪ್ರವಾಸವು ಸರಳ ಜೀವನವನ್ನು ನಡೆಸಲು ನನಗೆ ಸ್ಫೂರ್ತಿಯಾಗಿದೆ.ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಮೊದಲನೇ ವರ್ಷದ[ ಬಿ. ಎ .ಸಿ ] , ಸಿ. ಬಿ.ಜೆಡ್ ಅಧ್ಯಯನ ಮಾಡುತ್ತಿದ್ದೇನೆ .
ವಿಕ್ಟೋರಿಯಾ ಸ್ಮಾರಕ
ನಂತರ ನಾನು ಪ್ರೋಫೆಸರ್ ಆಗಿ ಕೆಲಸ ಮಾಡಲು ಬಯಸುತ್ತೇನೆ. ನನ್ನ ಹವ್ಯಾಸಗಳು ಬ್ಯಾಟ್ಮಿಂಟನ್ ಆಡುವುದು, ಸಂಗೀತ
ಕೇಳುವುದು, ಕನ್ನಡದಲ್ಲಿ ಕವಿತೆಗಳನ್ನು ಬರೆಯುವುದು, ನಂತರ ಮಡಕೆ ಚಿತ್ರಕಲೆ ಇತ್ಯಾದಿ.....ನನ್ನ ಲೈಕ್ ಸಬ್ಜೆಕ್ಟ್ ಸಸ್ಯಶಾಸ್ತ್ರವಾಗಿದ್ದು ಇದರಲ್ಲಿ ನನ್ನ ಪಿಎಚ್‌ಡಿ ಮುಂದುವರಿಸಲು ಬಯಸುತ್ತೇನೆ.ನಂತರ ನಾನು ಪ್ರೋಫೆಸರ್ ಆಗಿ ಕೆಲಸ ಮಾಡಲು ಬಯಸುತ್ತೇನೆ. ನಾನು ವಿದೇಶಿ ಭಾಷೆಯನ್ನು ಕಲಿಯಲು ಇಷ್ಟಪಡುತ್ತೇನೆ. ನಾನು ಫ್ರೆಂಚ್ ಭಾಷೆ ಕೂಡ ಈಗ ಕಲಿಯುತ್ತಿದ್ದೇನೆ .ಈ ಜಗತ್ತಿನಲ್ಲಿ ಜೀವನವು ತುಂಬಾ ಚಿಕ್ಕದಾಗಿದೆ, ನಾವು ಬಡವರಿಗೆ ಸಹಾಯ ಮಾಡುವ ಒಳ್ಳೆಯ ಕೆಲಸದ ಮೂಲಕ ಅದನ್ನು ಸಿಹಿಗೊಳಿಸಬೇಕು ಎ೦ದು ನನ್ನ ಅಭಿಪ್ರಾಯ.ಎಲ್ಲಾ ದಾನಗಳಿಗಿ೦ತ ವಿದ್ಯಾದಾನ ಮುಖ್ಯ. ನಾನು ಅಶಕ್ತರಿಗೆ ಶಿಕ್ಷಣ ನೀಡಲು ಪ್ರಯತ್ನ ಮಾಡುತ್ತೇನೆ .