ಸದಸ್ಯ:Anusha Dattatreya/sandbox
ದೇವಕಣ ಅಥವಾ ಹಿಗ್ಸ್ ಬೋಸಾನ್
[ಬದಲಾಯಿಸಿ]ದೇವಕಣ ಅಥವಾ ಹಿಗ್ಸ್ ಬೋಸಾನ್ ಭೌತಶಾಸ್ತ್ರದ ಸ್ಟ್ಯಾನಡರ್ಡ್ ಮಾಡೆಲಿನ ಪ್ರಾಥಮಿಕ ಕಣ. ಇದರ ಮುಖ್ಯ ಪ್ರಾಶ್ಯಸ್ತ್ಯೆತೆ ಏನೆಂದರೆ ಇದು ಹಿಗ್ಸ್ ಫೀಲ್ಡ್ನನ್ನು ಅನ್ವೇಷಿಸಲು ಸಹಕಾರಿಯಾಗಿದೆ. ಈ ಫೀಲ್ಡಿನ ಅಸ್ತಿತ್ವವನ್ನು ೧೯೬೦ರಲ್ಲಿ ಶಂಕಿಸಲಾಗಿತ್ತು.ಈ ಫೀಲ್ಡ್ ಹೆಚ್ಚು ಪರಿಚಿತವಾಗಿರುವ ವಿದ್ಯುತ್ ಕಾಂತಿಯ ಫಿಲ್ಡ್ಗಿಂತ ವಿಭಿನ್ನವಾಗಿದೆ. ಇದನ್ನು ಸಂಪೂರ್ಣವಾಗಿ ಬಂದು ಮಾಡಲು ಸಾಧ್ಯವಿಲ್ಲ, ಬದಲಿಗೆ ಇದು ಬಹುತೇಕ ಕಡೆ ಶೂನ್ಯವಲ್ಲದ ಸ್ಥಿರ ಮೌಲ್ಯವನ್ನು ತೆಗೆದುಕೊಳ್ಳುತ್ತದೆ.ಕೆಲವು ಮೂಲಭೂತ ಕಣಗಳ ಪ್ರಕ್ರಿಯೆಗಳ ಪ್ರಕಾರ ಅವು ತೂಕ ರಹಿತವಾಗಿರಬೇಕು. ಆದರೆ ನಿಜವಾದ ಸಂಗತಿ ಏನೆಂದರೆ ಅವುಗಳಿಗೆ ಖಚಿತವಾದ ತೂಕವಿದೆ. ಈ ವಿಚಲವನ್ನು ಹಿಗ್ಸ್ ಫೀಲ್ಡ್ ವಿವರಿಸುತ್ತದೆ.ಭೌತಶಾಸ್ತ್ರದಲ್ಲಿರುವ ಧೀರ್ಘಕಾಲದ ಒಗಟುಗಳಿಗೆ ಸರಿಯಾದ ಉತ್ತರ ಹಿಗ್ಸ್ ಫೀಲ್ಡ್( ಉದಾಹರಣೆಗೆ ದುರ್ಬಲ ಬಲದ ವ್ಯಾಪ್ತಿ ಏಕೆ ವಿದ್ಯುತ್ಕಾಂತಿಯ ಬಲದ ವ್ಯಾಪ್ತಿಗಿಂತ ಕಡಿಮೆ ಎನ್ನುವ ಕಾರಣ).
ದೇವಕಣದೆಡೆಗೆ
[ಬದಲಾಯಿಸಿ]ಪ್ರಾಚೀನರ ವಿವೇಕ
[ಬದಲಾಯಿಸಿ]ಈ ಜಗತ್ತು ಏತರಿಂದ ಆಗಿದೆ ಎಂಬ ನಿಗೂಢ ರಹಸ್ಯಕ್ಕೆ ಉತ್ತರ ಹುಡುಕಲು ಮೊದಲು ಪ್ರಾರಂಭಿಸಿದ್ದು ಗ್ರೀಕರು(೨೫೦೦ ವರ್ಷಗಳ ಹಿಂದೆ).ಇದು ಥೇಲ್ಸ್ ಇಂದ ಪ್ರಾರಂಭವಾಗಿ ಅರಿಸ್ಟಾಟಲ್ನಲ್ಲಿ ಕೊನೆಗೊಳ್ಳುತ್ತದೆ.ವಿಜ್ಞಾನದ ದ್ರುಷ್ಟಿಯಿಂದ ಥೇಲ್ಸ್(ಹುಟ್ಟಿದ್ದು:ಕ್ರಿ.ಪೂ.೬೨೪) ನಮಗೆ ಎರಡು ಕಾರಣಗಳಿಗಾಗಿ ಮುಖ್ಯನಾಗುತ್ತಾನೆ. ಒಂದು ಅಲೌಕಿಕ ವಿವರಣೆಗಳಿಂದ ದೂರ ಸರಿದು ನಿಸರ್ಗವನ್ನು ಅರ್ಥಮಾಡಿಕೊಳುವ ಯತ್ನಕ್ಕೆ ಕೈ ಹಾಕಿದ ಮೊದಲಿಗನು ಆತ. ಎರಡು,'ಈ ಜಗತ್ತು ಆಗಿರುವುದು ಏತರಿಂದ?'ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿದ ಮೊದಲಿಗನೂ ಅವನೆ.ಅವನ ಪ್ರಕಾರ ಈ ಜಗತ್ತಿನ ಎಲ್ಲಾ ವಸ್ತುಗಳು ನೀರಿನ ಬೇರೆ ಬೇರೆ ರೂಪಗಳು. ಆತನ ಈ ವಿಚಾರ ತಪ್ಪೆಂದು ಈಗ ಸಾಬೀತಾಗಿದೆ.ಮುಂದೆ ಅವನ ಶಿಷ್ಯರಲ್ಲೊಬ್ಬನಾದ, ಸುಮಾರು ಕ್ರಿ.ಪೂ.೬೧೦ರಲ್ಲಿ ಜನಿಸಿದ್ದ, ಅನಾಗ್ಸಿಮಾಂಡರ್ ಎಲ್ಲವು ನೀರೊನಿಂದ ಆಗಿದೆ ಎಂಬ ತನ್ನ ಗುರುವಿನ ವಿಚಾರವನ್ನು ಒಪ್ಪದೆ ರೂಪವಿಲ್ಲದ, ಗಮನಿಸಲಾಗದ ಅಪೈರಾನ್ಎಂಬ ವಸ್ತುವೇ ಎಲ್ಲಾ ಪದಾರ್ಥಗಳಿಗೆ ಮೂಲ ಎಂಬ ಹೊಸ ವದವನ್ನು ಮುಂದಿಟ್ಟ.ಅನಾಗ್ಸಿಮಾಂಡರ್ನ ಶಿಷ್ಯನಾಗಿರಬಹುದುದೆಂದು ಊಹಿಸಲಾಗಿರುವ ಅನಾಗ್ಸಿಮೆನೆಸ್ ಜಗತ್ತು ನೀರಿನಿಂದಲೂ ಆಗಿಲ್ಲ,ಅಪೈರಾನಿನಿಂದಲು ಆಗಿಲ್ಲ; ಗಾಳಿಯೆ ವಿಶ್ವದ ಮೂಲಧಾತು; ಗಾಳಿಯನ್ನು ಸಂಪೀಡಿಸಿದಾಗ ಅದು ನೀರು ಮತ್ತು ಮಣ್ಣು ಆಗುತ್ತದೆ ಮತ್ತು ವಿರಳಗೊಳಿಸಿದಾಗ ಬಿಸಿಗೊಂಡು ಬೆಂಕಿಯಾಗುತ್ತದೆ ಎಂದು ನುಡಿದ. ಮುಂದೆ ಕ್ರಿ.ಪೂ. ೫೪೦ರಲ್ಲಿ ಬಂದ ಹೆರಾಕ್ಲಿಟಸ್ ದೃಷ್ಟಿಯಲ್ಲಿ ಎಲ್ಲ ವಸ್ತುಗಳಿಗೂ ಮೂಲಧಾತು ಬೆಂಕಿ.ಬೆಂಕಿಯೂ ಸತತವಾಗಿ ಬದಲಾಗುತ್ತಿರುತ್ತದೆ.ಇತರೆ ವಸ್ತುಗಳಲ್ಲು ಸತತ ಬದಲಾವಣೆಯನ್ನು ಉಂಟುಮಾಡುತ್ತದೆ.ಕ್ರಿ.ಪೂ.೩೮೪ರಲ್ಲಿ ಜನಿಸಿದ ಅರಿಸ್ಟಾಟಲ್ ಥೇಲ್ಸ್ನ ನೀರು, ಅನಾಗ್ಸಿಮೆನೆಸ್ನ ಗಾಳಿ, ಹೆರಾಕ್ಲಿಟಿಸ್ನ ಬೆಂಕಿಯ ಜೊತೆಗೆ ಮಣ್ಣನ್ನು ಸೃಷ್ಟಿಯ ಮೂಲಧಾತುಗಳಲ್ಲಿ ಸೇರಿಸಿಕೊಂಡ. 'ಕಂಡದೆಲ್ಲಾ ನಂಬಿಕೆಗೆ ಅರ್ಹವಲ್ಲ; ಕೇವಲ ಇಂದ್ರಿಯಾನುಭವಗಳೆ ಸತ್ಯವಲ್ಲ. ನಿಜವಾದ ಸತ್ಯ ವಿವಿಧ ವಸ್ತು ವಿಚಾರಗಳ ನಡುವೆ ಸುಸಂಬಂಧವನ್ನು ಸ್ಥಾಪಿಸುವ ಗಣಿತದಲ್ಲಿರುತ್ತದೆ'ಎಂಬುದು ಅವನ ಗುರು ಪ್ಲೇಟೋ ಅಭಿಪ್ರಾಯವಾಗಿತ್ತು. ತದ್ವಿರುದ್ಧವಾಗಿ ಅರಿಸ್ಟಾಟಲ್ಗೆ ಗಣಿತದ ಅಮೂರ್ತಗಳು ಮುಖ್ಯವಾಗಿರಲಿಲ್ಲ. ವೀಕ್ಷಣೆ-ಅವಲೋಕನೆಗಳೇ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಇರುವ ಅತ್ಯುತ್ತಮ ಸಾಧನಗಳು ಎಂಬುದು ಆತನ ವಾದವಾಗಿತ್ತು. ಮುಂದೆ ಗುರು ಶಿಷ್ಯರಿಬ್ಬರೂ ಭಾಗಶಃ ಸರಿ ಎಂಬುದಾಗಿ ಸಿದ್ಧವಾಯಿತು. ಗಣಿತ ಮತ್ತು ಅವಲೋಕನಗಳೆರಡೂ ವಿಜ್ಞಾನದ ಬೆಳವಣಿಗೆಗೆ ಬಹುಮುಖ್ಯ ಸಾಧನಗಳು ವ್ಂಬ ಸಂಶ್ಲೇಷಿತ ನೋಟವೇ ಸರಿ ಎಂಬುದು ಈಗ ನಿಶ್ಚಿತವಾಗಿದೆ. ಯಾವುದೇ ವಸ್ತುವನ್ನು ಒಡೆದೊಡೆದು, ಮುಂದೆ ಇನ್ನೂ ಒಡೆಯಲಾಗದ, ಪರಮಾಣು ಎಂದು ಕರೆಯಬಹುದಾದ ಸ್ಥಿತಿಗೆ ಇಳಿಸಬಹುದು ಎಂದು ಲುಸಿಪಸ್ ಊಹಿಸಿದ್ದ. ಲುಸಿಪಸ್ನ ಈ ವಿಚಾರವನ್ನು ಆತನ ಶಿಷ್ಯ ಡೆಮಾಕ್ರಿಟಸ್ ಮುಂದುವರಿಸಿ ಆಶ್ಚರ್ಯಕರ ರೀತಿಯಲ್ಲಿ 'ಆಧುನಿಕ'ವಾಗಿದ್ದ ವಾದವನ್ನು ಮುಂದಿಟ್ಟ. ಅವನ ಪ್ರಕಾರ ಈ ಜಗತಿನಲ್ಲಿರುವ ಸಮಸ್ತವೂ ಪರಮಾಣುಗಳ ಸಂಗ್ರಹದಿಂದ ಆಗಿದೆ.
ಆಧುನಿಕರ ಬುದ್ಧಿ
[ಬದಲಾಯಿಸಿ]ಕ್ರಿ.ಪೂ.೪೭೦ರಲ್ಲಿ ಹುಟ್ಟಿದ ಗ್ರೀಕ್ ತತ್ವಜ್ಞಾನಿ ಡೆಮಾಕ್ರಿಟಸ್ ಆಶ್ಚರ್ಯಕರ ರೀತಿಯಲ್ಲಿ 'ಆಧುನಿಕ'ವಾಗಿದ್ದ ಪರಮಾಣುವಾದವನ್ನು ಮುಂದಿಟ್ಟ. ಆದರೆ ಅದು ಸದ್ದಿಲ್ಲದೆ ಸುಮಾರು ೧೯ ಶತಮಾನಗಳಷ್ಟು ದೀರ್ಘಕಾಲ ನೇಪಥ್ಯಕ್ಕೆ ಸರಿದುಬಿಟ್ಟಿತು. ಮತ್ತೆ ಅದು ಮುನ್ನಲೆಗೆ ಬಂದು ನಿಂತಿದ್ದು ೧೮೦೮ರಲ್ಲಿ - ಡಾಲ್ಟನ್ ಅದಕ್ಕೆ ಪ್ರಾಯೋಗಿಕ ಸಮರ್ಥನೆ ಒದಗಿಸಿದ ಮೇಲೆ. ಜಗತ್ತಿನ ಮೂಲಧಾತು ಪರಮಾಣು ಕೂಡ ಸಮರ್ಪಕ ಉತ್ತರವಲ್ಲ ಎಂಬುದು ವಿಜ್ಞಾನಿಗಳಿಗೆ ಬಹುಬೇಗನೆ ಅರ್ಥವಾಗಿ ಬಿಟ್ಟಿತು. ನಾಲ್ಕೈದು ದಶಕಗಳು ಕಳೆಯುವುದರೊಳಗೆ ಡಾಲ್ಟನ್ನನ್ ಅವಿಭಾಜ್ಯವಾದ ಮತ್ತು ಸೀಳಲಾಗದ ಪರಮಾಣು ಏಕಕಣವಲ್ಲ, ಅದು ಇಲೆಕ್ಟ್ರಾನ್(ಜೆ.ಜೆ.ಥಾಮ್ಸನ್-೧೮೯೭),ಪ್ರೋಟಾನ್(ಅರ್ನೆಸ್ಟ್ ರುಧರ್ಫೋರ್ಡ್-೧೯೧೯) ಮತ್ತು ನ್ಯೂಟ್ರಾನ್(ಜೇಮ್ಸ್ ಚಾಡ್ವಿಕ್-೧೯೩೨) ಎಂಬ ಮೂರು ಉಪಕಣಗಳಿಂದಾಗಿದೆ ಎಂಬುದು ಸಾಬೀತಾಯಿತು. ಮೂಲ ಕಣವೆಂದರೆ 'ಅದು ಅದರಿಂದಲೇ ಆಗಿದೆ, ಬೇರಾವುದರ ಸಂಯೋಜನೆಯಿಂದಲೂ ಅಲ್ಲ' ಎಂಬುದು ಅದರ ಅರ್ಥ. ಈ ಮಧ್ಯೆ ಕಣಕ್ಕೊಂದು ಪ್ರತಿ ಕಣ ಇರುತ್ತದೆ ಎಂದು ಪಾಲ್ ಡಿರಾಕ್ ೧೯೩೦ರಲ್ಲಿ ಹೇಳಿ ಜಗತ್ತನ್ನು ದಿಗ್ಭ್ರಮೆಗೊಳಿಸಿದ. ಪ್ರತಿ ಕಣವು ಎಲ್ಲ ರೀತಿಯಿಂದಲೂ ಕಣವನ್ನೆ ಹೋಲುತ್ತದೆ. ಒಂದೇ ವ್ಯತ್ಯಾಸವೆಂದರೇ ಅದು ವಿರುದ್ಧ ವಿದ್ಯುದಾವೇಶವನ್ನು ಹೊಂದಿರುತ್ತದೆ. ಕಣವೊಂದು ಅದರ ಪ್ರತಿ ಕಣವನ್ನು ಸಂಧಿಸಿದಾಗ ಎರಡೂ ಕಣಗಳೂ ನಾಶವಾಗಿ ಅಲ್ಲಿ ಶುದ್ಧ ಶಕ್ತಿ ಕಾಣಿಸಿಕೊಳುತ್ತದೆ. ಅಲ್ಲಿಂದಾಚೆ 'ಮೂಲಕಣಗಳ' ಸುರಿಮಳೆಯೇ ಆಗಿ ಅತಿ ಶೀಗ್ರದಲ್ಲೇ ಕಣಗಳ ಸಂಖ್ಯೆ ನೂರರಗಡಿಯನ್ನು ದಾಟಿತು. ಇವುಗಳನ್ನು ಸ್ಥೂಲವಾಗಿ ಲೆಪ್ಟಾನ್ಸ್(ಹಗುರ ಕಣಗಳು) ಮತ್ತು ಹೆಡ್ರಾನ್(ಭಾರ್ ಕಣಗಳು) ಎಂದು ಎರಡು ಗುಂಪುಗಳಾಗಿ ವಿ೦ಗಡಿಸಲಾಯಿತು. ಅಮೆರಿಕಾದ ಕಾಲ್ಟೆಕ್ ಯುನಿವರ್ಸಿಟಿಯ ಪ್ರಾಧ್ಯಾಪಕ ಮುರ್ರೆ ಗೆಲ್ಮನ್ ೧೯೬೪ರಲ್ಲಿ ಆಂಶಿಕ ವಿದ್ಯುದಂಶ ಹೊಂದಿದ ಕ್ವಾರ್ಕ್ಗಳ ಪ್ರಸ್ತಾವನೆಯನ್ನು ಮುಂದಿಟ್ಟ. ಆರು ಕ್ವಾರ್ಕ್ಗಳ ವಿವಿಧ ಸಂಯೋಜನೆಯಿಂದ ಸೈದ್ಧಾಂತಿಕವಾಗಿ ಅನೇಕ ಹ್ಯಾಡ್ರಾನ್ ಗಳನ್ನು ವಿವರಿಸುವುದು ಸಾಧ್ಯವಾಯಿತು.ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅಸಂಖ್ಯಾತ ವಿದ್ಯಮಾನಗಳನ್ನು ವಿವರಿಸಬಲ್ಲಂತ ಕೆಲವೇ ಕೆಲವು ಪರಿಕಲ್ಪನೆಗಳು ಮತ್ತು ನಿಯಮಗಳಿಗಾಗಿ ತಡಕಾಡುವುದು ಮತ್ತು ಎಲ್ಲಾ ಸಂಕೀರ್ಣ ವಿದ್ಯಮಾನಗಳನ್ನು ಅದರ ಮೂಲ ಘಟಕಗಳ ಮೂಲಕ ವಿವರಿಸಲು ಯತ್ನಿಸುವುದು ವಿಜ್ಞಾನದ ಹೃದಯದಲ್ಲಿರುವ ದೊಡ ತುಡಿತ. ಈ ತುಡಿತಕ್ಕೆ ಪೆಟ್ಟು ಕೊಡುವಂತೆ ಕಣಗಳ ವ್ಯವಹಾರ ನಡೆಯುತಿತ್ತು. ಆಗ ೧೯೬೪ರಲ್ಲಿ, ಇಂಗ್ಲೆಂಡಿನ ಎಡ್ನ್ಬರೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಪೀಟರ್ ಹಿಗ್ಸ್ ಎಲ್ಲಾ ಕಣಗಳಿಗೆ ಮೂಲವಾದ ಮತ್ತು ಅವೆಲ್ಲಕ್ಕೂ ದ್ರವ್ಯರಾಶಿ ಮುಂತಾದ ಭಿನ್ನತೆಯನ್ನು ದಕ್ಕಿಸಿಕ್ಕೊಟ್ಟಿದ್ದೇನು ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಮುಂದಿಟ್ಟಿದ್ದು ಹಿಗ್ಸ್ ಕಣಗಳ ಪರಿಕಲ್ಪನೆ. ಭಾರತದ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಮತ್ತು ಆಲ್ಬರ್ಟ್ ಐನ್ ಸ್ಟೆನರು ಕ್ವಾಂಟಮ್ ಸಿದ್ಧಾಂತದ ಆಧಾರದ ಮೇಲೆ ಜಂಟಿಯಾಗಿ ಬೋಸ್-ಐನ್ ಸ್ಟೆನ್ ಸಂಖ್ಯಾಶಾಸ್ತ್ರವನ್ನು ರೂಪಿಸಿದ್ದರು. ಈ ಸಂಖ್ಯಾಶಾಸ್ತ್ರಕ್ಕೆ ವಿದೇಯವಗಿ ನಡೆದುಕೊಳ್ಳುವ ಕಣಗಳ ಒಂದು ಗುಂಪಿಗೆ ಬೋಸಾನ್ ಗಳೆಂದು ಹೆಸರು. ಉದಾಹರಣೆಗೆ ಕಣದಂತೆ ವರ್ತಿಸುವ ಬೆಳಕಿನ ಶಕ್ತಿ ಕಟ್ಟು ಫೋಟಾನ್. ಈ ಕಣಗಳು ಒಂದು ಜಾಗದಲ್ಲಿ ಎಷ್ಟು ಕಣಗಳಾದರೂ ಇರುವುದು ಸಾಧ್ಯ. ಇವುಗಳಿಗೆ ಸೊನ್ನೆ ಅಥವಾ ಪೂರ್ಣಾಂಕ ಸ್ಪಿನ್ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಫರ್ಮಿಯಾನ್ ಗಳೆಂಬ ಮತ್ತೋಂದು ಗುಂಪಿನ ಕಣಗಳಿವೆ. ಇವು ಒಂದು ಜಾಗದಲ್ಲಿ ಒಂದು ಮಾತ್ರ ಇರಲಿಕ್ಕೆ ಸಾಧ್ಯ. ಇವುಗಳಿಗೆ ಅರ್ಧ ಸ್ಪಿನ್ ಇರುತ್ತದೆ. ಹಿಗ್ಸ್ ಕಣಗಳು ಬೋಸಾನ್ ಗಳನ್ನೇ ಹೋಲುತ್ತಿದ್ದುದರಿಂದ ಅವುಗಳು ಹಿಗ್ಸ್ ಬೋಸಾನ್ ಗಳಾದವು. ಹಿಗ್ಸ್ ಬೋಸಾನ್ ಅನು ಕಣವನ್ನು ಭೌತವಿಜ್ಞಾನಿ ಲಿಯಾನ್ ಲೆಡೆರ್ಮನ್ 'ದೇವ ಕಣವೆಂದು ಕರಿದ.
ಪ್ರಾಯೋಗಿಕ ಹುಡುಕಾಟ
[ಬದಲಾಯಿಸಿ]ಹಿಗ್ಸ್ ಬೋಸಾನ್ನನ್ನು[೧] ಉತ್ಪಾದಿಸಲು, ಎರಡು ವೇಗವರ್ಧಿತ ಕಿರಣಗಳನ್ನು ಕಣಗಳ ಡಿಟೆಕ್ಟರ್ನಲ್ಲಿ ಸಂಘರ್ಷಣೆಗೆ ಒಳಗಾಗಿಸಬೇಕು.ಕೆಲವೊಮ್ಮೆ,ವಿರಳವಾಗಿ ಆದರು, ಸಂಘರ್ಷಣೆಯ ಉತ್ಪನ್ನಗಳ ಭಾಗವಾಗಿ ಹಿಗ್ಸ್ ಬೋಸಾನ್ ಕ್ಷಣಿಕವಾಗಿ ನಿರ್ಮಿಸಲಾಗುತ್ತದೆ. ಈ ಕಣ ಬಹಳ ಅಸ್ಥಿರವಾದ ಕಾರಣ ಕಣಗಳ ಡಿಟೆಕ್ಟರ್ಗೆ ಇದನ್ನು ನೇರವಾಗಿ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ.ಬದಲಿಗೆ ಸವೆತ ಅಥವಾ ಅಪಕರ್ಷಣದ ಉತ್ಪನ್ನಗಳನ್ನು ನೋಂದಣಿ ಮಾಡುತ್ತದೆ. ದೊರೆತ ಮಾಹಿತಿಯಿಂದ ಅಪಕರ್ಷಣದ ಪ್ರಕ್ರಿಯೆಯನ್ನು ಪುನರ್ ರಚಿಸಬಹುದು.ಕಾಣಿಸಿಕೊಳ್ಳುವ ಕ್ಷಯಿಸುವಿಕೆಯ ಉತ್ಪನ್ನಗಳು ಹಿಗ್ಸ್ ಬೋಸಾನಿನ ಯವುದಾದರು ಅಪಕರ್ಷಣೆಯ ಪ್ರಕ್ರಿಯೆಯೊಂದಿಗೆ ಹೊಂದಾಣಿಕೆಯಾದರೆ,ಹಿಗ್ಸ್ ಬೋಸಾನ್ ಸೃಷ್ಟಿಯಾಗಿದೆಯೆಂದು ಖಚಿತವಾಗುತ್ತದೆ.ಸ್ಟ್ಯಾನ್ಡರ್ಡ್ ಮಾಡೆಲ್ ನಿಖರವಾಗಿ ದೇವಕಣ ಒಳಗೊಳ್ಳುವ ಹಲವಾರು ರೀತಿಯ ಅಪಕರ್ಷಣೆಯ ಪ್ರಕ್ರಿಯೆಯ ಪ್ರತಿಯೊಂದು ಸಾಧ್ಯೆತೆಯ ಮುನ್ಸೂಚನೆ ನೀಡುತ್ತದೆ.ದೇವಕಣವನ್ನು ಕಂಡುಹಿಡಿಯಲು ಒಂದು ಪ್ರಬಲ ಕಣಗಳ ವೇಗವರ್ಧಕದ ಅವಶ್ಯಕತೆ ಇತ್ತು, ಏಕೆಂದರೆ ಅದು ಕಡಿಮೆ ಶಕ್ತಿಯ ಪ್ರಯೋಗಗಳಲ್ಲಿ ಕಾಣದೆಹೋಗಬಹುದು. ಕೊಲೈಢರ್ನಲ್ಲಿ ಹೆಚ್ಚು ಪ್ರಕಾಶಮಾನತೆ ಇರಬೇಕು. ಆಗ ಮಾತ್ರ ಸಾಕಷ್ಟು ಸಂಘರ್ಷಣೆಗಳನ್ನು ಕಂಡು ಖಾತ್ರಿಯಾದ ತೀರ್ಮಾನಕ್ಕೆ ಬರಬಹುದು.ಅಂತಿಮವಾಗಿ, ಮುಂದುವರೆದ ಕಂಪ್ಯೂಟರ್ ಸೌಲಭ್ಯದಿಂದ ಅಪಾರ ಪ್ರಮಾಣದಲ್ಲಿ ದೊರೆತ ಮಾಹಿತಿಯನ್ನು ಪ್ರಕ್ರಿಯೆಗೊಳಿಸಬೇಕು.
ಈ ಎಲ್ಲ ಅವಶ್ಯಕತೆಗಳನ್ನು ಪೂರೈಸುವಂತಹ 'ಲಾರ್ಜ್ ಹ್ಯಾಡ್ರಾನ್ ಕೊಲೈಢರ್'ಅನ್ನು ಯುರೋಪಿನ ಅಣು ಸಂಶೋಧನೆ ಸಂಸ್ಥೆ CERN ನಲ್ಲಿ ನಿರ್ಮಿಸಲಾಯಿತು.ಈ ಕೊಲೈಢರ್ ಮುಂಚೆ ಇದ್ದ ಕೊಲೈಢರ್ಗಳಿಗಿಂತ ಏಳು ಪಟ್ಟು ಹೆಚ್ಚು ಸಂಘರ್ಷಣೆಯ ಶಕ್ತಿಯನ್ನು ಹೊಂದಿದೆ. ಪ್ರೋಟಾನ್-ಪ್ರೋಟಾನ್ ಸಂಘರ್ಷಣೆಗಳನ್ನು ವಿಶ್ಲೇಷಿಸಲು ವಿಶ್ವದಲ್ಲೆ ಅತಿದೊಡ್ಡದಾದ ಕಂಪ್ಯೂಟಿಂಗ್ ಗ್ರಿಡನ್ನು ಹೊಂದಿದೆ.ಈ ಕಂಪ್ಯೂಟಿಂಗ್ ಗ್ರಿಡ್ ೩೬ದೇಶಗಳಲ್ಲಿ ಹರಡಿರುವ ನೆಟ್ವರ್ಕ್ ಮುಖಾಂತರ ೧೭೦ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಬಳಸುತ್ತದೆ. ಜುಲೈ ನಾಲ್ಕು,೨೦೧೨ರಂದು CERN ಪ್ರಯೋಗಾಲಯ ಒಂದು ಅಜ್ಞಾತ ಬೋಸಾನಿನ 125.3 ± 0.6 GeV/c2 ಸಮೂಹವನ್ನು ಅನ್ವೇಷಿಸಲಗಿದೆ ಎಂದು ಘೊಷಿಸಿದರು.ಈ ಅವಿಷ್ಕಾರದ ನಂತರವು 125.3 ± 0.6 GeV/c2 ಕಣ ಹಿಗ್ಸ್ ಬೋಸಾನ್ ಎಂದು ಖಚಿತವಾಗಿ ಹೆಳಲಾಗುತ್ತಿರಲಿಲ್ಲ.ಒಂದೆಡೆ,ಕಾಣಿಸಿಕೊಂಡ ಕಣ ಸ್ಟ್ಯಾನಡರ್ಡ್ ಮಾಡೆಲ್ ಹಿಗ್ಸ್ ಬೋಸಾನ್ನಿಗೆ ಹೋಲುತಿತ್ತು ಮತ್ತು ಅದರ ಸವೆತದ ಪ್ರಕ್ರಿಯೆ ಊಹಿಸಲಾದ ಕೆಲವು ಮಾರ್ಗಗಳಲ್ಲೆ ನಡೆಯುತಿತ್ತು.ಇನ್ನೊಂದೆಡೆ,ಕಣದ ಸ್ಪಿನ್ ಸೊನ್ನೆ ಎಂದು ಸಾಬೀತು ಮಾಡಬೇಕಿತ್ತು. ಆಗ ಮಾತ್ರ ಆ ಕಣ ಒಂದು ತರಹದ ಹಿಗ್ಸ್ ಬೋಸಾನ್ ಎಂದು ದೃಢಪಡಿಸಬಹುದಾಗಿತ್ತು.ಹಲವಾರು ಪ್ರಯೋಗಗಳ ನಂತರ ವಿಜ್ಞಾನಿಗಳು ಆ ಕಣದ ಸ್ಪಿನ್ ಸೊನ್ನೆ ಮತ್ತು ಅದು ಧನಾತ್ಮಕವಾಗಿ ಸಮಾನವಗಿದೆ ಎಂದು ಕಂಡುಹಿಡಿದರು. ಅಷ್ಟಲ್ಲದೆ, ಅದು ಬೇರೆ ಕಣಗಳೊಂದಿಗೆ ಹೇಗೆ ಪ್ರತಿಕ್ರಯಿಸುತ್ತದೆ ಎಂದು ಅವಲೋಕಿಸಿ ಮಾರ್ಚ್ ೧೪,೨೦೧೪ ರಂದು ಆ ಕಣ ಹಿಗ್ಸ್ ಬೋಸಾನೇ ಎಂದು ಖಚಿತಪಡಿಸಿದರು.