ಸದಸ್ಯ:Ananth Ekalavya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಾ ನಗರವು ತುಮಕೂರು ಜಿಲ್ಲೆಯ ಒಂದು ಐತಿಹಾಸಿಕ ನಗರವಾಗಿದ್ದು, ಇದು ತುಮಕೂರು ಜಿಲ್ಲಾ ಕೇಂದ್ರದಿಂದ ೬೦ ಕಿ.ಮೀ. ಮತ್ತು ರಾಜಧಾನಿ ಬೆಂಗಳೂರಿನಿಂದ ೧೨೦ ಕಿ.ಮೀ. ದೂರದಲ್ಲಿದೆ. ಅನೇಕ ಜನಪದ ಕಲೆಗಳನ್ನು ಈಗಲೂ ಸಹ ಜೀವಂತವಾಗಿ ಉಳಿಸಿಕೊಂಡು ಸಾಗುತ್ತಿರುವ ಇದು ಒಂದು ರೀತಿಯಲ್ಲಿ ಜಾನಪದ ಲೋಕವೂ ಆಗಿದೆ. ಸಿರಾ ಕಸ್ತೂರಿ ರಂಗಪ್ಪನಾಯಕನ ಕೋಟೆಯನ್ನು, ರೆಹಾನ್ ದರ್ಗಾ, ಇತಿಹಾಸ ಪ್ರಸಿದ್ಧ ಶ್ರೀ ದುರ್ಗಮ್ಮದೇವಿ ದೇವಸ್ಥಾನಗಳಲ್ಲದೇ ಸಾಂಸ್ಕೃತಿಕ ವೀರ ಜುಂಜಪ್ಪನ ಸನ್ನಿಧಿ, ಶ್ರೀ ಮರಡಿ ರಂಗನಾಥಸ್ವಾಮಿ ದೇವಸ್ಥಾನ, ಶ್ರೀ ಮಣ್ಣಮ್ಮದೇವಿ ದೇವಸ್ಥಾನಗಳಂತಹ ಪ್ರಸಿದ್ಧ ದೇಔಆಲಯಗಳನ್ನೂ ಸಹ ಸಿರಾ ತಾಲ್ಲೂಕಿನಲ್ಲಿ ಕಾಣಬಹುದಾಗಿದೆ.

ಜಾಮಿಯ ಮಸೀದಿ,ಸಿರಾ.

ಪರಿಚಯ[ಬದಲಾಯಿಸಿ]

ಇಲ್ಲಿನ ಬಲಾಢ್ಯವಾದ ಕಲ್ಲಿನ ಕೋಟೆ ಸುತ್ತಲೂ ಕಂದಕವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಇರುವುದರಿಂದ ರಾಜರ ಆಳ್ವಿಕೆಯಲ್ಲಿ ಮಳೆಗಾಲದಲ್ಲಿ ಕಂದಕಗಳಿಗೆ ನೀರನ್ನು ಹರಿದು ಬಿಟ್ಟು, ಅದರಲ್ಲಿ ಮೊಸಳೆಯಂತಹ ಜಲಚರಗಳನ್ನು ಸಾಕಿ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತಿದ್ದರು. ಶಿರಾ ಕೋಟೆಯಲ್ಲಿ ಮುಘಲ್ ಅಧಿಕಾರಿ ದಿಲಾವರ್ ಖಾನ್ ಬೆಳೆಸಿದ ಸುಂದರ ಉದ್ಯಾನವನವೇ ಹೈದರಾಲಿ ಲಾಲ್ ಬಾಗ್ ನಿರ್ಮಿಸಲು ಸ್ಪೂರ್ತಿ ನೀಡಿತ್ತು. ಇದು ಜಿಲ್ಲಾ ಕೇಂದ್ರದಿಂದ ೫೦ ಕಿ.ಮೀ ದೂರವಿದೆ ಹಾಗು ರಾಜಧಾನಿ ಬೆಂಗಳೂರಿನಿಂದ ಸುಮಾರು ೧೨೫ ಕಿಮಿ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ೪ (ಪುಣೆ-ಬೆಂಗಳೂರು ರಸ್ತೆ) ಕ್ಕೆ ಹೊಂದಿಕೊಂಡಿದೆ.

ಸಿರಾ ಕೋಟೆ ಇತಿಹಾಸ[ಬದಲಾಯಿಸಿ]

ಶಿರಾ(ಸಿರಾ) ನಗರವು ಬ್ರಿಟಿಷ್ ಆಡಳಿತಕ್ಕೂ ಮೊದಲು ದಕ್ಷಿಣ ಭಾರತದ ಒಂದು ಬಹುಮುಖ್ಯ ಯುದ್ಧತಾಂತ್ರಿಕ ನಗರವಾಗಿತ್ತು.

ಈ ನಗರದ ಹಾಗು ಕೋಟೆಯ ಸ್ಥಾಪನೆಯ ಹಿರಿಮೆ ರತ್ನಗಿರಿಯ ನಾಯಕ, ರಾಜಾಕಸ್ತೂರಿರಂಗಪ್ಪನಾಯಕರಿಗೆ ಸಲ್ಲುತ್ತದೆ. ಆದುದರಿಂದಲೇ ಈ ಅದ್ಭುತವಾದ ಕೋಟೆಯು ರಾಜಾಕಸ್ತೂರಿರಂಗಪ್ಪ ನಾಯಕನ ಕೋಟೆ ಎಂದೇ ಕರೆಯಲ್ಪಡುತ್ತದೆ. ಇದು ಒಂದು ಕಾಲದಲ್ಲಿ ಈ ಪ್ರಾಂತ್ಯದ ಮೇಲೆ ನಾಯಕ ಸಮುದಾಯದ ರಾಜರಾಗಿದ್ದನಾಯಕ ಸಮೂಧಾಯಕ್ಕೆ ನಿರೂಪಿಸುತ್ತದೆ. ರಾಜಾಕಸ್ತೂರಿರಂಗಪ್ಪನಾಯಕರ ಕೋಟೆಯು ಅದ್ಭುತವಾದ ಕಲ್ಲುಗಳ ರಚನೆಯೊಂದಿಗೆ ಸುತ್ತಲು ಕಂದಕಗಳನ್ನು ಒಳಗೊಂಡಿದೆ. ಈ ಐತಿಹಾಸಿಕ ಕೋಟೆಯು ಸಿರಾ ದೊಡ್ಡ ಕೆರೆಯ ಪಕ್ಕದಲ್ಲೇ ಸ್ಥಾಪಿತವಾಗಿರುವುದು ಮತ್ತೊಂದು ವಿಶೇಷ.

ಈ ಪ್ರಾಂತ್ಯವು ೧೬೩೮ ರಿಂದ ೧೬೮೭ ವರೆಗೆ ಬಿಜಾಪುರದ ರಾಜರ ಆಳ್ವಿಕೆಗೆ ಒಳಪಟ್ಟಿತು. ೧೬೮೭ ರಿಂದ ೧೭೫೭ ರ ವರೆಗೆ ಮೊಗಲರ ಸಿರಾ ಪ್ರಾಂತ್ಯದ ರಾಜಧಾನಿಯಾಗಿತ್ತು. ನಂತರದ ದಿನಗಳಲ್ಲಿ ಮರಾಠಿಗರು ಮೊಗಲರಿಂದ ಈ ಪ್ರಾಂತ್ಯವನ್ನು ವಶಪಡಿಸಿಕೊಂಡು ೧೭೫೭ ರಿಂದ ೧೭೫೯ ರವರೆಗೆ ಆಳ್ವಿಕೆ ನಡೆಸಿದರು. ೧೭೫೯ ರಲ್ಲಿ ಮೊಗಲರು ಈ ಪ್ರಾಂತ್ಯವನ್ನು ಮತ್ತೆ ತಮ್ಮ ವಶಕ್ಕೆ ಪಡೆದಾಗ ಹೈದರ್ ಅಲಿ ಯು ೧೭೬೧ ರಲ್ಲಿ ತನ್ನನ್ನು ಈ ಪ್ರಾಂತ್ಯದ ನವಾಬನೆಂದು ಘೋಷಿಸಿಕೊಂಡನ್ನು. ಆದರೆ ೧೭೬೬ ರಲ್ಲಿ ಮರಾಠಿಗರು ಮತ್ತೊಮ್ಮೆ ಈ ಪ್ರಾಂತ್ಯವನ್ನು ಗೆದ್ದು ತಮ್ಮ ವಶಕ್ಕೆ ಪಡೆದರು. ೧೭೭೪ ರಲ್ಲಿ ಟಿಪ್ಪು ಸುಲ್ತಾನನು ತನ್ನ ತಂದೆ ಹೈದರ್ ಅಲಿ ಗಾಗಿ ಮತ್ತೆ ಈ ಪ್ರಾಂತ್ಯವನ್ನು ತನ್ನ ವಶಕ್ಕೆ ಪಡೆದುಕೊಂಡನು.

ಇಂತಹ ಐತಿಹಾಸಿಕ ಹಿನ್ನಲೆ ಇರುವ ಕೋಟೆಯು ಶಿಥಿಲಾವಸ್ಥೆ ತಲುಪಿದ್ದು ವಿಪರ್ಯಾಸ. ಯಾವುದೆ ವಸ್ತುವಾಗಲಿ ಕಟ್ಟಡ, ಕೋಟೆಗಳಾಗಲಿ ಅದರ ಮೂಲ ರೂಪದೊಂದಿಗಿದ್ದರೆ ಚೆನ್ನ. ಇದೆಲ್ಲದರ ನಡುವೆ ತಡವಾಗಿಯಾದರು, ಕೋಟೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ಶುರುವಾಗಿರುವುದು ಸಂತಸದ ವಿಚಾರ.

ಸಿರಾ ತಾಲ್ಲೂಕಿನ ಹೋಬಳಿಗಳು[ಬದಲಾಯಿಸಿ]

  1. ಕಸಬಾ
  2. ಹುಲಿಕುಂಟೆ
  3. ಬುಕ್ಕಾಪಟ್ಟಣ
  4. ಗೌಡಗೆರೆ
  5. ಕಳ್ಳಂಬೆಳ್ಳ


ಸಿರಾ ತಾಲ್ಲೂಕಿನ ಗ್ರಾ.ಪಂ.ಗಳು[ಬದಲಾಯಿಸಿ]

ಸಿರಾ ತಾಲ್ಲೂಕಿನ ಗಡಿಗ್ರಾಮಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]