ಸದಸ್ಯ:Amulya amulya/sandbox
ಅರ್ಚನಾ ಭಟ್ಟಾಚಾರ್ಯ
ಅರ್ಚನಾ ಭಟ್ಟಾಚಾರ್ಯ | |
---|---|
ಜನನ | 1948 (ವಯಸ್ಸು 76–77) |
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಸಂಸ್ಥೆಗಳು | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್ |
ಅಭ್ಯಸಿಸಿದ ವಿದ್ಯಾಪೀಠ | ದೆಹಲಿ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಅಯಾನುಗೋಳದ ಭೌತಶಾಸ್ತ್ರ |
ಅರ್ಚನಾ ಭಟ್ಟಾಚಾರ್ಯರವರು ೧೯೪೮ರಲ್ಲಿ ಜನಿಸಿದರು.ಇವರು ಭಾರತೀಯ ಭೌತಶಾಸ್ತ್ರಜ್ಞೆ ಮತ್ತುಅಯಾನುಗೋಳದ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಹವಾಮಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರು. ಇವರು ನವ ಮುಂಬೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌ನಲ್ಲಿ ನಿರ್ದೇಶಕರಾಗಿದ್ದರು.[೧]
ಶಿಕ್ಷಣ
[ಬದಲಾಯಿಸಿ]ಡಾ.ಅರ್ಚನಾ ಭಟ್ಟಾಚಾರ್ಯರವರು ೧೯೬೭ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ(ಆನರ್ಸ್) ಹಾಗು ೧೯೬೯ರಲ್ಲಿ ಎಂ.ಎಸ್ಸಿ ಪದವಿಯನ್ನು ಭೌತಶಾಸ್ತ್ರದಲ್ಲಿ ಪೂರ್ಣಗೊಳಿಸಿದರು ಮತ್ತು ನ್ಯಾಶನಲ್ ಸೈನ್ಸ್ಟ್ ಟ್ಯಾಲೆಂಟಿನಲ್ಲಿ ವಿದ್ಯಾರ್ಥಿವೇತನವನ್ನು(೧೯೬೪-೬೯) ಪಡೆಯುತ್ತಿದ್ದರು. ಅವರಿಗೆ ೧೯೭೫ರಲ್ಲಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ದೊರಕಿತು.
ವೃತ್ತಿಜೀವನ
[ಬದಲಾಯಿಸಿ]೧೯೭೮ರಲ್ಲಿ ಮುಂಬೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌ನಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಇವರು ಇಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆ.ಸಿ.ಯೇ ಗುಂಪಿನೊಂದಿಗೆ ಕಾರ್ಯ ನಿರ್ವಹಿಸಿದರು ಹಾಗು ಮ್ಯಾಸಚೂಸೆಟ್ಸ್‌ನಲ್ಲಿರುವ ವಾಯುಪಡೆಯ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಹಿರಿಯ ಸಹಾಯಕ ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿದರು. ಇವರು ೨೦೦೫-೨೦೧೦ರ ಅವಧಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌ನ ನಿರ್ದೇಶಕರಾಗಿದ್ದರು. ಈಗ ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌ನ ನಿವೃತ್ತ ವಿಜ್ಞಾನಿ.
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ].
- ೨೦೦೮ರಲ್ಲಿ ಪ್ರೊಫೆಸರ್ ಕೆ.ಆರ್.ರಾಮನಾಥನ್ ಸ್ಮಾರಕ ಉಪನ್ಯಾಸ ಮತ್ತು ಪದವಿಯನ್ನು ಇಂಡಿಯನ್ ಜಿಯೋಫಿಸಿಕಲ್ ಯೂನಿಯನ್‌ನಿಂದ ಪಡೆದಿದ್ದಾರೆ.
- ೧೯೬೯ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಡಾ.ಕೆ ಎಸ್ ಕೃಷ್ಣನ್ ಚಿನ್ನದ ಪದವಿಯನ್ನು ಪಡೆದಿದ್ದಾರೆ.
- ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಹಭಾಗಿತ್ವರಾಗಿದ್ದರೆ .[೨]
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- http://iigm.res.in/index.php/using-joomla/extensions/components/content-component/article-categories/144-dr-a-bhattacharya
- http://insaindia.org/detail.php?id=P09-1477
- https://vidwan.inflibnet.ac.in/profile/15655