ಸದಸ್ಯ:Amulya1940549
[[ಚಿತ್ರ:Brpbdvt.jpg|thumb|221x221px|
[[ಚಿತ್ರ:Deity images and aedicules in relief below eves in the Lakshmi Narasimha temple at Bhadravati.JPG|thumb|269x269px|
]]|alt=]]
ನನ್ನ ಹೆಸರು ಅಮೂಲ್ಯ. ಹೆಚ್.ಎಸ್ ತೀರ್ಥರೂಪರಾದ ಸುನಿಲ್ ಮತ್ತು ಸುಮ ನನ್ನ ಪ್ರೀತಿಯ ತಂದೆ ತಾಯಿ. ಮಲೆನಾಡಿನ ಸೆರಗಿನ ಅಂಚಿನಲ್ಲಿರುವ , ಮಲೆನಾಡಿನ ಮದುಮಗಳು ಶಿವನ ಮೊಗ್ಗೆಯಾದ ಶಿವಮೊಗ್ಗ ನನ್ನ ಹುಟ್ಟೂರು. ಚಳಿಯ ಮಂಜಿನ ದಿನವಾದ ಜನವರಿ ೯ ನನ್ನ ಹುಟ್ಟಿದ ದಿನಾಂಕ. ನನ್ನ ಪುಟ್ಟ ತುಂಟ ಬಾಲ್ಯ ಬೆಳೆದಿದ್ದು, ಶೈಕ್ಷಣಿಕ ಶಿಕ್ಷಣವೆಲ್ಲ ಕಳೆದಿದ್ದು, ಕರ್ನಾಟಕದಲ್ಲಿ ಪ್ರಸಿದ್ದಿಯಾದ ಉಕ್ಕಿನ ನಗರಿ ಹಾ ಗೂ ಭದ್ರಾ ನದಿ ದಡದಲ್ಲಿರುವ ಭದ್ರಾವತಿ . ನನ್ನ್ನ ಪುಟ್ಟ ಬಾಲ್ಯ ತುಂಬಾ ಸುಂದರ ಹಾಗೂ ಪ್ರೀತಿಯಿಂದ ಕಳೆದ ನೆನಪು. ದೊಡ್ಡಪ್ಪ , ಅಜ್ಜಿ , ಅಪ್ಪ , ಅಮ್ಮ , ಅಕ್ಕ , ಅಣ್ಣ ಎಲ್ಲಾರ ಪ್ರೀತಿಯ ಅಕ್ಕರೆ. ನಾನು ಸಣ್ಣವಳಿದ್ದಾಗ 'ಸ' ಅಕ್ಷರ ಸರಿಯಾಗಿ ಉಚ್ಚಾರ ಮಾಡಲು ಬರುತ್ತಿರಲಿಲ್ಲ. ಆಗ ನಾನು ಸ ಬದಲು ಚ ಎಂದು ಎಂದು ಹೇಳುತ್ತಿದ್ದೆ. ಅದನ್ನು ಈಗಲೂ ನನ್ನ ಅಪ್ಪ ನೆನೆಸಿಕೊಳ್ಳುತ್ತಾರೆ.
ಬಾಲ್ಯದ ಪ್ರೈಮರಿ ಪ್ರಾರ್ಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ಮಾಡಿದೆ. ಆ ಶಾಲೆಯಿಂದ ಬಹಳ ಒಳ್ಳೆಯ ವಿಚಾರಗಳನ್ನು ಕಲಿತಿದ್ದೀನಿ. "ಬಾಲ್ಯದಲ್ಲಿ ಕಲಿತದ್ದು ಬಾಳಿನುದ್ದಕ್ಕೂ"ಎಂಬ ಗಾದೆ ಮಾತಿನಂತೆ ತಂದೆ-ತಾಯಿ ಶಿಕ್ಷಕರಿಂದ ಕಲಿತ ವಿಷಯ ನನ್ನ ಬಾಳಿನಲ್ಲಿ ಉಪಯುಕ್ತವಾಗಿದೆ. ನಾನು ಒಂದನೆಯ ತರಗತಿಯಿಂದ ಹನ್ನೆರಡನೆಯ ತರಗತಿಯವರೆಗೂ ಪ್ರಥಮಭಾಷೆ ಕನ್ನಡವನ್ನೇ ಅಮ್ಮ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಏಕೆಂದರೆ ಮುಂದೆ ಬೇರೆ ಬೇರೆಯ ಭಾಷೆಯನ್ನು ಕಲಿಯುತ್ತೀರಿ, ಆದರೆ ಮಾತೃಭಾಷೆ ಮತ್ತು ಕರ್ನಾಟಕದ ಕನ್ನಡ ಭಾಷೆಯನ್ನು ಮೊದಲು ಚೆನ್ನಾಗಿ ಕಲಿಯಬೇಕು ಎಂಬ ಇಚ್ಛೆ ಅವರದ್ದು. ಕನ್ನಡ ಭಾಷೆ ಎಂದರೆ ನನಗೂ ತುಂಬಾ ಇಷ್ಟ. ಯಾವ ಭಾಷೆಯಲ್ಲೂ ಇಲ್ಲ ಇಷ್ಟು ವೈವಿದ್ಯತೆ ವಿಶಾಲತೆ. ನೋಡಲು ಮಾತನಾಡಲು ಕನ್ನಡ ಭಾಷೆ ಮುತ್ತಿನ ಹಾರದಂತೆ ಸ್ಫಟಿಕ ಸಲಾಕೆಯಂತೆ ಇದೆ. ರಸಋಷಿ , ಕುವೆಂಪುರವರು ಮೊದಲು ಆಂಗ್ಲ ಭಾಷೆಯಲ್ಲಿ ಬರೆದರು ,ಆದರೆ ನಂತರ ತಮ್ಮ ಆಡುಭಾಷೆಯಾದ ಕನ್ನಡ ದಲ್ಲೇ ಅನೇಕ ಕವಿತೆ , ಕಾದಂಬರಿ, ಕವನಗಳನ್ನು ಬರೆದು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಪಡೆದ ನಾವೇ ಧನ್ಯರು.
ಶಾಲೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೂ ಪ್ರತಿ ಮಕ್ಕಳಿಗೂ ಶಿಶುಗೀತ ಸ್ಪರ್ಧೆ ಇರುತ್ತಿತ್ತು. ಕನ್ನಡ ಅಥವಾ ಆಂಗ್ಲಭಾಷೆಯ ಹಾಡು ಹೇಳಬೇಕೆಂದು. ಅಮ್ಮ ಪ್ರತಿ ವರ್ಷವೂ ಕನ್ನಡದಲ್ಲಿ ಹೇಳಿಕೊಡುತ್ತಿದ್ದರು. ನನಗೆ ಮತ್ತು ನನ್ನ ಅಕ್ಕನಿಗೆ ಬಹುಮಾನ ಬರುತ್ತಿತ್ತು. ನನಗೆ ಬಹಳ ಖುಷಿ ಇದೆ ಆ ದಿನಗಳ ನೆನೆದು.......... ಐದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಒಂದು ಸಣ್ಣ ವಿಷಯ ಕೊಡುತ್ತಿದ್ದರು. ಐದು ನಿಮಿಷ ದವರೆಗೆ ಆ ವಿಷಯದ ಬಗ್ಗೆ ಮಾತಾಡಬೇಕಿತ್ತು. ಅದು ಸಹ ಕನ್ನಡ ಅಥವಾ ಆಂಗ್ಲ ಭಾಷೆ. ಆಗ ಕೂಡ ಕನ್ನಡ ವಿಷಯವೇ ಆಯ್ಕೆಮಾಡಿಕೊಂಡು ಪ್ರತಿವರ್ಷ ಕನ್ನಡ ವಿಷಯವೇ ತೆಗೆದುಕೊಳ್ಳುತ್ತಿದ್ದೆ. ಇದನ್ನು ನೋಡಿ ನನ್ನ ಸ್ನೇಹಿತರೆಲ್ಲ ಅಮೂಲ್ಯ ಕನ್ನಡವನ್ನೇ ತೆಗೆದುಕೊಳ್ಳುವುದು ಎಂದು ಹೇಳುತ್ತಿದ್ದರು... ನನಗೆ ಚರ್ಚಾಸ್ಪರ್ಧೆಯಲ್ಲಿ ಕೂಡ ಬಹುಮಾನ ದೊರಕಿದೆ. ನನಗೆ ನೆನಪಿರುವ ವಿಷಯಗಳು ಯಾವುವೆಂದರೆ ಆದರ್ಶ ವಿದ್ಯಾರ್ಥಿ, ಬೆಳ್ಳಗಿರುವುದೆಲ್ಲಾ ಹಾಲಲ್ಲ , ಆಧುನಿಕ ಭಾರತದಲ್ಲಿ ಯುವಕರ ಪಾಲು ಹೀಗೆ ಒಳ್ಳೆಯ ವಿಷಯಗಳು ಕೊಡುತ್ತಿದ್ದರು. ಆ ಸ್ಪರ್ಧೆಯ ನೆನಪುಗಳು ಹಸಿರಾಗಿದೆ ಎನ್ನ ಮನದಂಗಳದಲ್ಲಿ.. ಪ್ರೌಢಶಾಲೆಯಲ್ಲಿ ಸುರೇಶ್ ಸರ್ ನಮ್ಮ ಕನ್ನಡ ಮಾಸ್ಟರ್. ನಮಗೆ ಕನ್ನಡದ ವ್ಯಾಕರಣ , ಛಂದಸ್ಸು , ಅಲಂಕಾರ , ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದರು.. ಶಾಲೆಯಲ್ಲಿ ಪಾಠದ ಜೊತೆಗೆ ಆಟವು ಸಹಿತ ಚೆನ್ನಾಗಿ ನಡೆದಿತ್ತು. ನಾನು ಏಳನೆಯ ತರಗತಿಯಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆಗ ನನ್ನ ಸ್ನೇಹಿತರು ಹಾಗೂ ಪಿ ಟಿ ಮಾಸ್ಟರ್ ಖುಷಿ ಪಟ್ಟಿದ್ದರು.
ನಾನು ಮತ್ತು ಅಕ್ಕ ಚಿಕ್ಕವರಿದ್ದಾಗ ನಮ್ಮ ಅಮ್ಮ ನಮಗೆ ಸಂಗೀತಕ್ಕೆ ಕಳಿಸುತ್ತಿದ್ದರು. ಬೆಳಗ್ಗಿನ ಚಳಿಯಲ್ಲಿ ಆರು ಗಂಟೆಗೆ ಸಂಗೀತ ವಿದ್ಯಾಭ್ಯಾಸಕ್ಕೆ ಹೋಗಬೇಕಿತ್ತು. ನಾವು ಇನ್ನೂ ಮಲಗಿದ್ದಾಗ ಅಮ್ಮ ಎಬ್ಬಿಸಿ ಕಳಿಸುತ್ತಿದ್ದರು. ಸಂಗೀತ ಶಿಕ್ಷಕಿ ಕೂಡ ನಮಗೆ ಬಹಳ ಪ್ರೀತಿಯಿಂದ ಕಲಿಸುತ್ತಿದ್ದರು. ಸಂಗೀತ ಪಾಠದ ಜೊತೆಗೆ ಭರತನಾಟ್ಯಂ ಕೂಡ ಅಭ್ಯಾಸ ಪಡೆದಿದ್ದೇನೆ. ಭರತನಾಟ್ಯಂಕಿಂತ ಸಂಗೀತದ ಮೇಲೆ ಬಹಳ ಒಲವು.. ನಮ್ಮ ಅಪ್ಪ ಅಜ್ಜಿ ಅಮ್ಮ ಎಲ್ಲರಿಗೂ ನಾನು ಹಾಡುವ ಸಂಗೀತ ಎಂದರೆ ಇಷ್ಟ.
ನಾವು ಚಿಕ್ಕವರಿದ್ದಾಗ ಬಸವ ಜಯಂತಿ ಬಂತೆಂದರೆ ಸಾಕು ಬಹಳ ಖುಷಿಯಿಂದ ಇರುತ್ತಿದ್ದರು ಏಕೆಂದರೆ ಬಸವಜಯಂತಿಯ ಅಂಗವಾಗಿ ನಮಗೆ ವಚನ ಸ್ಪರ್ಧೆ ಏರ್ಪಡಿಸುತ್ತಿದ್ದರು. ಆಗ ನಾವು ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ವಚನಗಳನ್ನು ಕಲಿಯುತ್ತಿದ್ದೆವು. ಈಗಲೂ ಕೆಲವು ನೆನಪಿದೆ.
ಕನ್ನಡ ಸಿರಿಮುಡಿಗೆ ವಚನ ಸಾಹಿತ್ಯ ಹೊನ್ನ ಕಳಸದಂತೆ ಎಂದು ಎಲ್ಲ ಕವಿಗಳು ಸಾಹಿತಿಗಳು ಹೇಳುತ್ತಾರೆ.ಆದರೆ ಕನ್ನಡ ಮಾತೆಗೆ ಎಲ್ಲ ಕವಿಗಳು ಸಾಹಿತಿಗಳು ಶ್ರೇಷ್ಠರೆ. "ಸೂರ್ಯೋದಯ ಚಂದ್ರೋದಯ ದೇವರ ದಯ ಕಣಿರೋ" -- ಕುವೆಂಪು. ಇದು ನನಗೆ ತುಂಬಾ ಇಷ್ಟವಾದ ಸಾಲುಗಳು. "ಕಳಬೇಡ ,ಕೊಲಬೇಡ ,ಹುಸಿಯ ನುಡಿಯಬೇಡ" -- ಬಸವೇಶ್ವರ. ಸಪ್ತ ಸೂತ್ರಗಳಿರುವ ವಚನ ಎಷ್ಟು ಸುಂದರವಾಗಿದೆ ಸಹಜವಾಗಿದೆ .ಕನ್ನಡ ಭಾಷೆಯಲ್ಲಿ ಓದುತ್ತಿದ್ದರೆ ಆತ್ಮವನ್ನು ಅರಳಿಸುವ ಜ್ಞಾನದ ಬೆಳಕಿನ ಕಿಡಿಗಳಾಗಿವೆ. ಪ್ರತಿಯೊಂದು ಪದವೂ ಸರಳವಾಗಿದೆ, ಸೂಕ್ಷ್ಮವಾಗಿದೆ.
"ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು "ಎನ್ನುವಂತೆ ನನ್ನ ಅಪ್ಪ-ಅಮ್ಮ ಅಕ್ಕ ಮೊದಲ ಗುರು. ಚಿಕ್ಕವಯಸ್ಸಿನಲ್ಲಿ ಕಲಿತ ಆದರ್ಶ ಸಾಯುವವರೆಗೂ ಅದು ಹಾಗೆ ಪಾಲಿಸುತ್ತೇನೆ.ಒಳ್ಳೆಯ ಆದರ್ಶ ಮತ್ತು ಸಂಸ್ಕಾರವನ್ನು ಕಲಿಸಿದವರು ನನ್ನ ಅಪ್ಪ ಅಮ್ಮ. ನನ್ನ ತಂದೆ-ತಾಯಿ ಕಲಿಸಿದ ಪಾಠವನ್ನು ಎಂದೂ ಮರೆಯುವುದಿಲ್ಲ . ಅವರುರು ಹಾಕಿದ ದಾರಿಯಲ್ಲಿ ನಡೆಯುತ್ತೇನೆ. ಅವರಿಗೆ ಹೆಮ್ಮೆ ಪಡಿಸುತ್ತೇನೆ.
ಧನ್ಯವಾದ