ವಿಷಯಕ್ಕೆ ಹೋಗು

ಸದಸ್ಯ:Akshy0045/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                   ವಾಣಿಜ್ಯ  ಬ್ಯಾಂಕುಗಳು                
    

ವಾಣಿಜ್ಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು , ವ್ಯಾಪಾರ ಮತ್ತು ಇನ್ನಿತರ ಉದ್ಧೇಶಕ್ಕೈ ಸಾಲ ಕೊಡುವ ಮತ್ತು ಠೇವುಗಳನ್ನು ಸ್ವೀಕರಿಸುವ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ಹುಟ್ಟು ಬೆಳಣೆಗೆಗೆ ಸುಮಾರು ಮೂರು ನೂರು ವರ್ಷಗಳ ಇತಿಹಾಸವಿದೆ. ಬ್ಯಾಂಕ್ ಎಂಬ ಪದವು ಇಟಾಲಿಯನ್ ಪದ `ಬ್ಯಾಂಕೋ' ಎಂಬ ಪದದಿಂದ ಬಂದಿರುತ್ತದೆ. ಬ್ಯಾಂಕೋ ಎಂದರೆ ಹಿಂದಿನ ಕಾಲದ ಸಾಹುಕಾರರ ಉಪಯೋಗಿಸುತ್ತಿದ್ದ ಬೆಂಚು ಅಥವಾ ಬಾಕು ಎಂದಾರ್ಥವಾಗುತ್ತದೆ. ಮಾರುಕಟ್ಟೆಯಲ್ಲಿ ಬೆಂಚು ಹಾಕಿಕೊಂಡು ಅದರ ಮೇಲೆ ಕುಳಿತು ಸಾಹುಕಾರರು ಹಣದ ಲೇವಾ ದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಕೈಗೊಂಡ ಹಣದ ಲೇವಾದೇವಿ ವ್ಯಾವಹಾರಗಳಲ್ಲಿ ಇಂದಿನ ಬ್ಯಾಂಕ್ ವ್ಯವಹಾರ ಪದ್ಧತಿಯ ಉಗಮವನ್ನು ಕಾಣಬಹುದು. ವ್ಯಾಪಾರಸ್ಥರು ತಮ್ಮಲ್ಲಿ ಅಧಿಕ ಇದ್ದ ಹಣವನ್ನು ಸುರಕ್ಶತೆಗಾಗಿ ಅಕ್ಕಸಾಲಿಗರಿಗೆ ಒಪ್ಪಿಸುತ್ತಿದ್ದರು. ಅಕ್ಕಸಾಲಿಗರು ಠೇವಣಿ ಇಟ್ಟ ವ್ಯಾಪಾರಸ್ತರಿಗೆ ಅವರಿಟ್ಟ ಠೇವಣಿಯ ಮೌಲ್ಯದಷ್ತು ರಾಶಿದಿಯನ್ನು ಕೊಡುತ್ತಿದ್ದರು. ರಶೀದಿಗಳಿಗೆ ಅಕ್ಕಸಾಲಿಗರ ಪಾವತಿ ಚೀಟಿ'ಗಳೆಂದು ಕರೆಯುತ್ತಿದ್ದರು. ಈ ಪಾವತಿ ಚೀಟಿಯನ್ನು ಹೊಂದಿದವರಿಗ ಠೇವಣಿಯ ಹಣ ವಾಪಾಸ ಪಡೆಯಲು ಹಕ್ಕು ಇರುತಿತ್ತು. ಬೇಡಿದಾಗ ಹಣವನ್ನು ಹಿಂದಿರುಗಿಸುವ ಹೊಣೆ ಅಕಸಾಲಿಗದಾಗಿತ್ತು. ಅಕ್ಕಸಾಲಿಗರ ಪಾವತಿ ಚೀಟಿಗಳು ಈ ಭರವಸೆಯ ಸಂಕೇತಗಳಾಗಿದ್ದವು. ಈ ಪ್ರಕಾರ ಹಣದ ಲೇವಾದೇವಿ ವ್ಯವಹಾರ ಮಾಡುವಾಗ ಅವರಿಗೆ ಹೊಸ ಅನುಭವದ ಅರಿವಾಯಿತು. ಎಲ್ಲಾ ಠೇವಣಿದಾರರು ಒಂದೇ ವೇಳೆಗೆ ತಾವಿಟ್ಟ ಠೇವಣಿಯ ಹಣವನ್ನು ವಾಪಾಸಕೇಳಲು ಬರುವುದಿಲ್ಲವೆಂಬ ವಿಶ್ವಾಸ ಅವರಗಾಯಿತು. ಅದರಿಂದಅವರ ಠೇವಣಿಯ ಹಣವನ್ನು ತಮ ಬಳಿ ಸೋಮಾರಿಯಾಗಿಡುವುದಕ್ಕೆ ಬದಲು ಅಗತ್ಯವಿದ್ದವರಿಗೆ ಸಾಲ ಕೊಟ್ಟು ಬಡ್ಡಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಈ ರೀತಿ ಕೇವಲ ಭದ್ರತೆಗಾಗಿ ಇಟ್ಟ ಠೇವಣಿಯ ರೂಪದಲ್ಲಿನ ಹಣವು ಸಾಲ ಕೊಡುವ ವ್ಯವಹಾರಕ್ಕಾಗಿ ಬಳಸಲ್ಪಡುವ ಸಾಧನವಾಯಿತು.ಕ್ರಮೇಣ ಸ್ವತಂತ್ರ ಬ್ಯಾಂಕಿಗ್ ಸಂಸ್ಥೆಗಳು ವಾಣಿಜ್ಯ ವ್ಯವಹಾರಗಳಿ ಸಾಲ ನೀಡಲು ಅಸ್ತಿತ್ವದಲ್ಲಿ ಬಂದವು. ವಾಣಿಜ್ಯ ಬ್ಯಾಂಕುಗಳ ಕಾರ್ಯಗಳು

ವಾಣಜ್ಯ ಬ್ಯಾಂಕುಗಳು ನಿವ‍ಹಿಸುವ ಕಾಯ‍ಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಪ್ರಧಾನ ಅಥವಾ ಪ್ರಾಥಮಿಕ ಕಾರ್ಯಗಳು

ವಾಣಿಜ್ಯ ಬ್ಯಾಂಕುಗಳ ಕೆಳಗಿನ ಎರಡು ಪ್ರಧಾನ ಕಾರ್ಯಗಳನ್ನು ನಿರ್ವಹಿಸುತ್ತವೆ. ಠೇವಣಿಗಳನ್ನು ಸ್ವೀಕರಿಸುವುದು

ವಾಣಿಜ್ಯ ಬ್ಯಾಂಕುಗಳು ಸ್ವೀಕರಿಸುವ ಠೇವಣಿಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು.

   ಬೇಡಿಕೆ ಠೇವಣಿಗಳನ್ನು : ಠೇವಣಿದಾರರು ಬೇಡಿದ ತಕ್ಷಣ ಹಿಂದಿರುಗಿಸಬೇಕಾದ ಠೇವಣಿಗಳಾಗಿವೆ. ಇವುಗಳು ಕಳಗಿನಂತಿವೆ.

ಚಾಲ್ತಿ ಠೇವಣಿ: :ಠೇವಣಿದಾರನು ಈ ಖಾತೆಗೆ ಜಮಾ ಮಾಡುವುದಕ್ಕಾಗಲಿ ಅಥವಾ ಠೇವಣಿಯ ಹಣವನ್ನು ಹಿಂತೆಗದುಕೊಳ್ಳುವದಕ್ಕಾಗಲಿ ನಿರ್ಭ‍ಂಧವಿರುವುದಿಲ್ಲ. ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ. ವ್ಯಾಪಾರಿಗಳು, ಉದ್ದಿಮೆದಾರರಿಗೆ ಈ ಠೇವಣಿ ಅನುಕೂಲವಾಗಿರುತ್ತದೆ. ಉಳಿತಾಯ ಠೇವಣಿ; ಉಳಿತಾಯ ಠೇವಣಿ ಖಾತೆಗ ಹಣ ಜಮಾ ಮಾಡಲು ಯಾವ ನಿರ್ಬಂಧಗಳಿಲ್ಲ. ಆದೆರೆ ಹಣವನ್ನು ಮರಳಿ ಪಡಯುವುದಕ್ಕೆ ನಿರ್ಭಂಧಗಳಿರುತ್ತದೆ.

ವಾರಕ್ಕೆ ಎರಡು ಬಾರಿ
ಈ ಖಾತೆಯಿಂದ ಠೇವಣದಾರನು ತನ್ನ ಹಣವನು ವಾಪಸ್ ಪಡೆಯಬಹುದಾಗಿದೆ. ಬಡ ಮತ್ತು ಮಧ್ಯಮವರ್ಗದ ಜನರಿಗೆ ಇದು ಅನೂಕೂಲವಾಗಿರುತ್ತದೆ 

ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಅಲ್ಪ ಬಡ್ತಿಯನ್ನು ನೀಡುತ್ತವೆ.

   ಅವಧಿ ಠೇವಣಗಳು: ನಿರ್ದಿ‍ಷ್ಠ ಅವಧಿಗಾಗಿ ಸ್ವೀಕರಿಸಿದ ಠೇವಣಿಗಳಿಗೆ ಅವಧಿ ಠೇವಣಿ ಎಂದು ಕರೆಯುತ್ತಾರೆ. ಅವುಗಳೆಂದರೆ :
   ಮುದ್ಧತಿ ಠೇವಣಿಗಳನ್ನು: ಮುದ್ದತಿಯ ಅವಧಿ ಮುಗಿಯುವವರೆಗೆ ಠೇವಣಿಯ ಹಣವನ್ನು ವಾಪಾಸ ಪಡೆಯಲು ಬರುವುದಿಲ್ಲ. ಈ ಠೇವಣಿಯ ಮೇಲೆ
ವಾಣಿಜ್ಯ ಬ್ಯಾಂಕುಗಳು ಅಧಿಕ ಬಡ್ಡಿಯನ್ನು ಕೊಡುತವೆ. ಠೇವಣಿಯ ಮೊತ್ತ ಮತ್ತು ಅವಧಿ ಹೆಚ್ಚಿದ್ದರ ಬಡ್ಡಿಯು ಹೆಚ್ಚಿರುತ್ತದೆ. ಕಡಿಮೆಯಿದ್ದರೆ ಬಡ್ಡಿಯೂ 

ಕಡಿಮೆಯಿರುತ್ತದೆ.

   ಸಂಚಿತ(ಆವತ‍) ಠೇವಣಿಗಳು: ಈ ಠೇವಣಿಯನ್ನು ಸಹ ನಿರ್ದಿ‍ಷ್ಟ ಅವಧಿಗೆ ಇಡಲಾಗುತ್ತದೆ. ನಿರ್ದಿ‍ಷ್ಟ ಅವಧಿ ಮುಗಿಯುವವರೆಗೆ ಪ್ರತಿ ತಿಂಗಳು
ಒಂದು ನಿಶ್ಚಿತ ಮೊತ್ತದ ಹಣವನ್ನು ಆವತ‍ ಠೇವಣಿ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಒಟ್ಟು ಮೊತ್ತವನ್ನು ಬಡ್ಡಿಯೊಂದಿಗೆ ಅವಧಿ ಮುಗಿದ 

ನಂತರ ಹಿಂದಕ್ಕೆ ಪಡೆಯಬಹುದಾಗಿದೆ. ಉದ್ಯೋಗಿಗಳಿಗೆ ಮತ್ತು ನಿಗದಿತ ಆದಾಯದಾರರಿಗೆ ಈ ಠೇವಣಿ ಉಪಯುಕ್ತವಾಗಿದೆ.